
ಯಕೃತ್ತು ದೇಹದ ಅತ್ಯಂತ ಮುಖ್ಯ ಅಂಗವಾಗಿದೆ. ಆಹಾರವನ್ನು ಜೀರ್ಣಗೊಳಿಸುವ ಕೆಲಸವನ್ನು ಈ ಅಂಗ ನಿರ್ವಹಿಸುತ್ತದೆ. ನಾವು ಸೇವಿಸುವ ಕಲುಷಿತ ಆಹಾರ, ಜಂಕ್ ಫುಡ್, ಮದ್ಯಪಾನ ಮುಂತಾದವು ಲಿವರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಂತಹ ಆಹಾರದಿಂದ ಶರೀರದಲ್ಲಿ ಹಾಗೂ ಯಕೃತ್ತಿನಲ್ಲಿ ಕೊಬ್ಬಿನಾಂಶ ಹೆಚ್ಚು ಸಂಗ್ರಹವಾಗುತ್ತದೆ.
ಯಕೃತ್ತಿ (Liver) ನಲ್ಲಿ ಕೊಬ್ಬು ಸಂಗ್ರಹವಾಗುವುದನ್ನೇ ಫ್ಯಾಟಿ ಲಿವರ್ ಎಂದು ಕರೆಯುತ್ತಾರೆ. ಈ ಫ್ಯಾಟಿ ಲಿವರ್ ಸಾಮಾನ್ಯ ಸಂಗತಿಯಲ್ಲ. ಇದು ಲಿವರ್ ಕೆಟ್ಟ ಸೂಚನೆಯಾಗಿದೆ. ಏಪ್ರಿಲ್ 19 ಅನ್ನು ವಿಶ್ವ ಲಿವರ್ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಲಿವರ್ ಹಾಗೂ ಫ್ಯಾಟಿ ಲಿವರ್ ಲಕ್ಷಣಗಳು ಮತ್ತು ಖಾಯಿಲೆ (Disease) ಯ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯಿದೆ. ದೇಹದ ಎರಡನೇ ದೊಡ್ಡ ಭಾಗವಾದ ಯಕೃತ್ತು ಅನೇಕ ದೈಹಿಕ ಕಾರ್ಯಗಳಿಗೆ ಮೂಲವಾಗಿದೆ. ದೇಹದಲ್ಲಿ ಕೊಬ್ಬು ಸರಿಯಾದ ರೀತಿಯಲ್ಲಿ ಚಯಾಪಚಯವಾಗದೇ ಇದ್ದಾಗ ಯಕೃತ್ತಿನಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಸಂಗ್ರಹವಾಗುತ್ತದೆ. ಕೊಬ್ಬಿನಿಂದ ಯಕೃತ್ತಿನ ಕ್ಯಾನ್ಸರ್ (Cancer) , ಸಿರೋಸಿಸ್ ಮುಂತಾದ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ.
ಕೊರೋನಾ ನಂತ್ರ ಮಹಿಳೆಯರನ್ನು ಬೆಂಬಿಡದೇ ಕಾಡ್ತಿದೆ ಈ ಅನಾರೋಗ್ಯ
ಇವು ಫ್ಯಾಟಿ ಲಿವರ್ ನ ಲಕ್ಷಣಗಳು : ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುವುದು ಫ್ಯಾಟಿ ಲಿವರ್ ನ ಪ್ರಮುಖ ಲಕ್ಷಣವಾಗಿದೆ. ಯಕೃತ್ತು ಇರುವ ಸ್ಥಳದಲ್ಲಿಯೇ ನೋವು ಕಾಣಿಸಿಕೊಳ್ಳುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ಹೊಟ್ಟೆ ತುಂಬಿದಂತೆಯೇ ಅನಿಸುತ್ತದೆ. ಹಾಗಾಗಿ ಆಹಾರವನ್ನು ಸೇವಿಸುವ ಇಚ್ಛೆಯೇ ಇರುವುದಿಲ್ಲ. ಕೆಲವೊಮ್ಮೆ ಯಕೃತ್ತಿನ ಭಾಗದಲ್ಲಿ ಊತ, ವಾಕರಿಕೆ, ದೌರ್ಬಲ್ಯ ಮತ್ತು ಆಯಾಸದ ಸಮಸ್ಯೆ ಪ್ರಾರಂಭವಾಗುತ್ತದೆ. ಮಲದಲ್ಲಿ ರಕ್ತ ಬರಲು ಆರಂಭವಾಗುತ್ತದೆ. ಲಿವರ್ ನಲ್ಲಿ ಸಮಸ್ಯೆ ಹೆಚ್ಚಾದಂತೆ ಬೈಲಿರುಬಿನ್ ಲೆವಲ್ ಹೆಚ್ಚುತ್ತದೆ. ಇದರಿಂದ ಕಣ್ಣು ಮತ್ತು ಉಗುರುಗಳು ಹಳದಿ ಬಣ್ಣಕ್ಕೆ ತಿರುಗಲು ಆರಂಭವಾಗುತ್ತದೆ. ಇದರ ಹೊರತಾಗಿ ಫ್ಯಾಟಿ ಲಿವರ್ ಗೆ ಒಳಗಾದವರು ಭ್ರಮೆ ಅಥವಾ ಗೊದಲದ ಸ್ಥಿತಿಯಲ್ಲೇ ಇರುತ್ತಾರೆ. ಅವರಿಗೆ ಚಿಕ್ಕ ಗಾಯವಾದರೂ ರಕ್ತಸ್ರಾವ ಹೆಚ್ಚು ಉಂಟಾಗುತ್ತದೆ.
ಈ ಕಾರಣದಿಂದ ಫ್ಯಾಟಿ ಲಿವರ್ ಉಂಟಾಗುತ್ತದೆ
• ನೀವು ಸೇವಿಸುತ್ತಿರುವ ಔಷಧಿಯಿಂದ ಅಡ್ಡಪರಿಣಾಮವಾಗಬಹುದು.
• ಆನುವಂಶೀಯತೆ.
• ತೂಕದಲ್ಲಿ ಇಳಿಕೆಯಾಗುವುದರಿಂದ ಫ್ಯಾಟಿ ಲಿವರ್ ಸಮಸ್ಯೆ ಉಂಟಾಗುತ್ತದೆ.
• ಟೈಪ್ 2 ಡಯಾಬಿಟೀಸ್ ರೋಗಿಗಳು ಕೂಡ ಫ್ಯಾಟಿ ಲಿವರ್ ಸಮಸ್ಯೆಯಿಂದ ಬಳಲಬಹುದು.
• ಥೈರಾಯ್ಡ್ ರೋಗಿಗಳು
• ಅಪೌಷ್ಟಿಕತೆ
• ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್
• 50 ವರ್ಷ ಮೇಲ್ಪಟ್ಟವರಲ್ಲಿ ಕೂಡ ಫ್ಯಾಟಿ ಲಿವರ್ ಉಂಟಾಗಬಹುದು
Eye Care : ಬೆಳಿಗ್ಗೆ ಎದ್ದಾಗ ಕಣ್ಣು ಬಿಡಲಾರದಷ್ಟು ಮಡ್ಡಿ ಬರ್ತಿದ್ಯಾ?
ಲಿವರ್ ಆರೋಗ್ಯ ಹೀಗೆ ಕಾಯ್ದುಕೊಳ್ಳಿ : ಫ್ಯಾಟಿ ಲಿವರ್ ನಿಂದ ಶರೀರವನ್ನು ಕಾಪಾಡಿಕೊಳ್ಳಲು ಲಿವರ್ ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ. ಕಳಪೆ ಜೀವನಶೈಲಿಯಿಂದ ಲಿವರ್ ಅಪಾಯಕ್ಕೆ ಒಳಗಾಗುತ್ತದೆ. ತೂಕದಲ್ಲಿ ನಿಯಂತ್ರಣ ಇಡುವುದು ಕೂಡ ಬಹಳ ಮುಖ್ಯವಾಗಿದೆ. ಜಂಕ್ ಫುಡ್ ಬಿಡುವುದಲ್ಲದೆ ಸೀಸನ್ ಹಣ್ಣು ಮತ್ತು ತರಕಾರಿಗಳನ್ನು ಡಯಟ್ ನಲ್ಲಿ ಸೇರಿಸಿಕೊಳ್ಳಬೇಕು. ಕೊಬ್ಬು ಮತ್ತು ಕೊಲೆಸ್ಟ್ರಾಲ್ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಬಾರದು. ವ್ಯಾಯಾಮದ ಮೂಲಕ ದೈಹಿಕವಾಗಿಯೂ ಶರೀರವನ್ನು ಕ್ರಿಯಾಶೀಲವಾಗಿಟ್ಟುಕೊಳ್ಳಬೇಕು. ಸಿಗರೇಟು, ಮದ್ಯಪಾನದಂತಹ ದುಶ್ಚಟಗಳಿಂದ ದೂರವಿರಬೇಕು.
ಹಸಿರೆಲೆ, ತರಕಾರಿ, ಈರುಳ್ಳಿ, ಬೆಳ್ಳುಳ್ಳಿಯನ್ನು ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡು ಸಂಸ್ಕರಿಸಿದ ಆಹಾರಗಳನ್ನು ಅವೈಡ್ ಮಾಡಬೇಕು. ನೆಲ್ಲಿಕಾಯಿ ಮತ್ತು ಅಲೊವೆರಾವನ್ನು ಸಮಪ್ರಮಾಣದಲ್ಲಿ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕೊಬ್ಬಿನ ಯಕೃತ್ತಿನಿಂದ ದೂರವಿರಬಹುದು. ಮೊಟ್ಟೆ, ಸೋಯಾಬೀನ್, ಕೆಂಪು ಆಲೂಗಡ್ಡೆ, ರಾಜ್ಮಾ ಕಾಳು, ಬ್ರೊಕೊಲಿ ಮುಂತಾದ ಕೊಲೈನ್ ಹೊಂದಿರುವ ಆಹಾರ ಸೇವಿಸುವುದರಿಂದ ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಲಿವರ್ ನ ಉತ್ತಮ ಆರೋಗ್ಯದಿಂದ ಫ್ಯಾಟಿ ಲಿವರ್ ಸಮಸ್ಯೆಗೆ ಕಡಿವಾಣ ಹಾಕಬಹುದಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.