ಕೆಲವೊಂದು ಫುಡ್ ಕಾಂಬಿನೇಷನ್ ತಿನ್ನೋಕೆ ಮಸ್ತ್ ಆಗಿರುತ್ತೆ. ಇನ್ನಷ್ಟು ತಿನ್ನೋಣ ಎನ್ನಿಸುತ್ತೆ. ಆದ್ರೆ ಈ ರುಚಿ ಆಹಾರ ನಮ್ಮ ಆರೋಗ್ಯ ಹಾಳು ಮಾಡುತ್ತೆ. ಅದ್ರಲ್ಲಿ ಪರಾಠ ಟೀ ಕಾಂಬಿನೇಷನ್ ಕೂಡ ಒಂದು.
ಭಾರತೀಯರ ಬೆಳಿಗಿನ ಬ್ರೆಕ್ ಫಾಸ್ಟ್ ನಲ್ಲಿ ಪರೋಠಾ ಪ್ರಮುಖ ಸ್ಥಾನವನ್ನು ಪಡೆದಿದೆ. ಆಲೂಗಡ್ಡೆ, ಹೂಕೋಸ್, ಪನ್ನೀರ್ ಸೇರಿದಂತೆ ನಾನಾ ತರಕಾರಿಯ, ರುಚಿ ರುಚಿಯಾದ ಸ್ಟಫಿಂಗ್ ತಯಾರಿಸಿ, ಪರೋಠ ಸಿದ್ಧಪಡಿಸಲಾಗುತ್ತದೆ. ಬಿಸಿ ಬಿಸಿ ಪರೋಠ ಬಹುತೇಕ ಎಲ್ಲರ ಫೆವರೆಟ್. ಪರೋಠ ಆರೋಗ್ಯಕ್ಕೆ ಕೂಡ ಒಳ್ಳೆಯದು.
ಪೋಷಕಾಂಶ (Nutrient) ಗಳಿಂದ ತುಂಬಿರುವ ಪರೋಠ (Paratha) ಗಳು ರಕ್ತದಲ್ಲಿನ ಸಕ್ಕರೆ (Sugar) ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ಜೀರ್ಣಿಸಿಕೊಳ್ಳುವುದು ಕೂಡ ಸುಲಭ. ಒಂದು ಕಡೆ ಪರೋಠ ಇದ್ರೆ ಇನ್ನೊಂದು ಕಡೆ ಬಿಸಿ ಬಿಸಿ ಟೀ ಅಥವಾ ಕಾಫಿ ಸೇವನೆ ಮಾಡುವ ಮನಸ್ಸಾಗುತ್ತೆ. ಕಾಫಿ ಅಥವಾ ಟೀ ಸೇವನೆ ಮಾಡ್ತಾ ಅನೇಕರು ಪರೋಠ ತಿನ್ನುತ್ತಾರೆ. ಪರೋಠ ಆರೋಗ್ಯಕ್ಕೆ ಒಳ್ಳೆಯದಾದ್ರೂ ಅದ್ರ ಜೊತೆ ನೀವು ಟೀ/ಕಾಫಿ ಕಾಂಬಿನೇಷನ್ ಮಾಡಿದ್ರೆ ಆರೋಗ್ಯ ಹದಗೆಡುತ್ತದೆ. ನೀವು ಯಾವ ಆಹಾರ ತಿನ್ನುತ್ತೀರಿ ಎನ್ನುವ ಜೊತೆಗೆ ಯಾವ ಕಾಂಬಿನೇಷನ್ ನಲ್ಲಿ ಆಹಾರ ಸೇವನೆ ಮಾಡುತ್ತೀರಿ ಎಂಬುದನ್ನು ಗಮನಿಸಬೇಕಾಗುತ್ತದೆ.
undefined
100 ಗ್ರಾಂ ತುಳಸಿಲಿ ಎಷ್ಟೆಲ್ಲ ನ್ಯೂಟ್ರಿಶನ್ ಇದೆ, ಆದ್ರೆ ಗರ್ಭಿಣಿಯರು ಸೇವಿಸ್ಬೋದಾ?
ಪರಾಠ ಜೊತೆ ಟೀ ಸೇವನೆಯಿಂದಾಗುವ ನಷ್ಟ :
ಗ್ಯಾಸ್ಟ್ರಿಕ್ ಸಮಸ್ಯೆ : ಪರಾಠ ಜೊತೆ ನೀವು ಚಹಾ ಕುಡಿಯುವುದರಿಂದ ಆಮ್ಲೀಯತೆ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಕೆಫೀನ್ ಭರಿತ ಚಹಾ ಅಥವಾ ಕಾಫಿ ನಿಮ್ಮ ಹೊಟ್ಟೆಯಲ್ಲಿ ಆಮ್ಲದ ಸಮತೋಲನವನ್ನು ಹಾನಿಗೊಳಿಸುತ್ತದೆ. ನೀವು ಪರಾಠ ಜೊತೆ ಟೀ ಸೇವನೆ ಮಾಡುವುದರಿಂದ ನಿಮ್ಮ ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಧ್ಯಯನಗಳ ಪ್ರಕಾರ, ಚಹಾ ಸೇವನೆಯು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ ಅಥವಾ ಜಿಇಆರ್‌ಡಿ ಹೆಚ್ಚಳಕ್ಕೆ ಕಾರಣವಾಗುತ್ತದೆ.
ರಕ್ತಹೀನತೆ ಸಮಸ್ಯೆ : ಟೀನಲ್ಲಿರುವ ಫೀನಾಲಿಕ್ ಸಂಯುಕ್ತಗಳು ಹೊಟ್ಟೆಯ ಒಳಪದರದಲ್ಲಿ ಕಬ್ಬಿಣದ ಸಂಕೀರ್ಣಗಳನ್ನು ಅಭಿವೃದ್ಧಿಪಡಿಸುತ್ತವೆ. ಇದು ಕಬ್ಬಿಣವನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಈಗಾಗಲೇ ರಕ್ತಹೀನತೆಯಿಂದ ಬಳಲುತ್ತಿರುವ ಜನರು ಭಾರೀ ಆಹಾರದ ಜೊತೆ ಟೀ ಸೇವಿಸಿದ ನಂತರ ವಾಂತಿ ಮತ್ತು ವಾಕರಿಕೆಗಳಂತಹ ಕೆಟ್ಟ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ.
ಪೋಷಕಾಂಶ ತಡೆಹಿಡಿಯುತ್ತೆ : ಪರಾಠದೊಂದಿಗೆ ಚಹಾವನ್ನು ಸೇವಿಸಿದರೆ ಅದು ನಿಮ್ಮ ದೇಹದಲ್ಲಿ ಪ್ರೋಟೀನ್ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಟ್ಯಾನಿನ್ ಎಂಬ ರಾಸಾಯನಿಕವು ಚಹಾದಲ್ಲಿ ಕಂಡುಬರುತ್ತದೆ. ಇದು ಪ್ರೋಟೀನ್‌ಗಳ ಜೊತೆಗೆ ದೇಹದಲ್ಲಿ ಆಂಟಿನ್ಯೂಟ್ರಿಯೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ದೇಹ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗೋದಿಲ್ಲ. ಟ್ಯಾನಿನ್‌ಗಳು ಪ್ರೋಟೀನ್‌ಗಳ ಜೀರ್ಣಕ್ರಿಯೆಯನ್ನು ಸರಾಸರಿ ಶೇಕಡಾ 38 ರಷ್ಟು ನಿಧಾನಗೊಳಿಸುತ್ತವೆ.
ವಿಶ್ವದ ಬೆಸ್ಟ್ ಫುಡ್ ಸಿಟಿ ಲಿಸ್ಟ್‌ನಲ್ಲಿ ಭಾರತದ ಈ ಐದು ನಗರಗಳಿಗೆ ಸಿಕ್ತು ಸ್ಥಾನ
ಇದ್ರ ಬಗ್ಗೆ ಗಮನ ಹರಿಸಿ : ನೀವು ಟೀ ಮತ್ತು ಪರೋಠ ಎರಡರ ಪ್ರೇಮಿಯಾಗಿದ್ದರೆ ಎರಡನ್ನೂ ಒಟ್ಟಿಗೆ ತೆಗೆದುಕೊಳ್ಳಬೇಡಿ. ಪರೋಠ ತಿಂದ ಕನಿಷ್ಠ 45 ನಿಮಿಷಗಳ ನಂತ್ರ ಟೀ ಕುಡಿಯಿರಿ. ಟೀ ಸೇವನೆ ಮಾಡುವ ವೇಳೆ ನೀವು ಕೆಲ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಬೆಳಗಿನ ಉಪಾಹಾರ ಅಥವಾ ಊಟವಾದ ಒಂದು ಗಂಟೆ ನಂತರ ಟೀ ಸೇವನೆ ಮಾಡಿ. ಸಂಜೆ ತಿಂಡಿಗಳೊಂದಿಗೆ ಚಹಾ ಕುಡಿಯಿರಿ. ಉಪಹಾರದ ಜೊತೆ ಬಿಸಿ ಬಿಸಿ ಪಾನೀಯ ಬೇಕು ಎನ್ನುವವರು ಗ್ರೀನ್ ಟೀ ಅಥವಾ ಶುಂಠಿ ಟೀ ಕುಡಿಯಬಹುದು. ಇವು ಕಡಿಮೆ ಪ್ರಮಾಣದ ಕೆಫೀನ್ ಹೊಂದಿರುತ್ತವೆ. ಕರುಳಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಟೀ ಸೇವನೆ ಮಾಡಿದ ನಂತ್ರ ನಿಮಗೆ ಆಮ್ಲೀಯತೆ ಹೆಚ್ಚಾಗಿದೆ ಎನ್ನಿಸಿದರೆ ಆದಷ್ಟು ನೀರು ಅಥವಾ ದ್ರವ ಆಹಾರ ಸೇವಿಸಿ. ಪೌಷಕಾಂಶದಿಂದ ಕೂಡಿರುವ ಆಹಾರ ತಿನ್ನಿ. ಉಪಹಾರ, ಊಟವಾದ ತಕ್ಷಣ ಮಲಗಬೇಡಿ.