108 ಕೆಜಿ ವೈಟ್‌ ಲಾಸ್ ಮಾಡ್ಕೊಂಡಿದ್ದ ಅನಂತ್ ಅಂಬಾನಿ, ಮತ್ತೆ ತೂಕ ಹೆಚ್ಚಾಗಿದ್ದು ಹೇಗೆ?

Published : Jun 03, 2023, 03:20 PM ISTUpdated : Jun 03, 2023, 03:24 PM IST
108 ಕೆಜಿ ವೈಟ್‌ ಲಾಸ್ ಮಾಡ್ಕೊಂಡಿದ್ದ ಅನಂತ್ ಅಂಬಾನಿ, ಮತ್ತೆ ತೂಕ ಹೆಚ್ಚಾಗಿದ್ದು ಹೇಗೆ?

ಸಾರಾಂಶ

2016ರಲ್ಲಿ 108 ಕೆಜಿ ತೂಕ ಇಳಿಸಿಕೊಂಡ ಅನಂತ್ ಅಂಬಾನಿ ಇದ್ದಕ್ಕಿದ್ದಂತೆ ಮತ್ತೆ ತೂಕವನ್ನು ಏಕೆ ಹೆಚ್ಚಿಸಿಕೊಂಡರು. ಅಸ್ತಮಾಗೆ ಅವರು ಬಳಸುತ್ತಿದ್ದ ಸ್ಟಿರಾಯ್ಡ್‌ ತೂಕ ಹೆಚ್ಚಳಕ್ಕೆ ಕಾರಣವಾಯ್ತಾ? ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕೆಲವು ವರ್ಷಗಳ ಹಿಂದೆ ಮುಕೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ, 18 ತಿಂಗಳಲ್ಲಿ ತಮ್ಮ ತೂಕವನ್ನು 108 ಕೆಜಿಯಷ್ಟು ಕಡಿಮೆ ಮಾಡಿಕೊಂಡು ಸುದ್ದಿಯಲ್ಲಿದ್ದರು. 2016ರಲ್ಲಿ, ಅವರ ವೈಟ್ ಲಾಸ್ ಜರ್ನಿ ಸ್ಥೂಲಕಾಯತೆ ಮತ್ತು ವಿಪರೀತ ತೂಕ ಹೆಚ್ಚಾಗುವಿಕೆಯಿಂದ ಬಳಲುತ್ತಿರುವ ಅನೇಕರಿಗೆ ಪ್ರೇರಣೆಯಾಯಿತು. ಅವರ ಫಿಟ್ನೆಸ್ ರೂಪಾಂತರವು ಎಲ್ಲರಿಗೂ ಆಘಾತಕಾರಿಯಾಗಿತ್ತು. ಸೆಲೆಬ್ರಿಟಿಗಳಿಂದ ಹಿಡಿದು ಫಿಟ್‌ನೆಸ್‌ ಫ್ರೀಕ್‌ಗಳು ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು. ಆದರೆ ಇತ್ತೀಚಿಗೆ ಅಂಬಾನಿ ಮಗ, ಅನಂತ್ ಅಂಬಾನಿ ಮತ್ತೆ ಹೆಚ್ಚಿಸಿಕೊಂಡಿರುವ ಕೆಲವು ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿವೆ. 

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಜೊತೆಗಿನ ತಮ್ಮ ನಿಶ್ಚಿತಾರ್ಥ ಹಾಗೂ ಮದುವೆ (Marriage) ಸಮಾರಂಭದಲ್ಲಿ ತೂಕ ಹೆಚ್ಚಿಸಿಕೊಂಡಿದ್ದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಅವರು ಸ್ಪಲ್ಪ ಮಟ್ಟಿಗೆ ನಡೆದಾಡಲು ಸಹ ಕಷ್ಟಪಡುತ್ತಿದ್ದರು. ಅನಂತ್ ಅಂಬಾನಿ ತೂಕ ಹೆಚ್ಚಿಸಿಕೊಂಡಿರುವ ಬಗ್ಗೆ, ತಾಯಿ ನೀತಾ ಅಂಬಾನಿ ಸಹ ಮಾಹಿತಿ  ನೀಡಿದ್ದರು. ಅನಂತ್ ಅಂಬಾನಿ ವೈಟ್ ಲಾಸ್ ಮಾಡಿಕೊಂಡ ನಂತರವೂ ತೂಕ ಹೆಚ್ಚಿಸಿ (Weight gain)ಕೊಂಡಿರುವ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ. ಅದಕ್ಕಿಂತ ಮೊದಲು 18 ತಿಂಗಳಲ್ಲಿ ತಮ್ಮ ತೂಕವನ್ನು 108 ಕೆಜಿಯಷ್ಟು ಕಡಿಮೆ ಮಾಡಿಕೊಂಡ ಅನಂತ್‌ ಅಂಬಾನಿಯ ವೈಟ್ ಲಾಸ್‌ ಜರ್ನಿಯ ಬಗ್ಗೆ ತಿಳಿದುಕೊಳ್ಳೋಣ.

ತೂಕ ಕಡಿಮೆಯಾಗಬೇಕು ಅಂತ ಹೀಗೆಲ್ಲಾ ಮಾಡೋದು ಸಿಕ್ಕಾಪಟ್ಟೆ ಡೇಂಜರಸ್!

ಅನಂತ್ ಅಂಬಾನಿಯವರ ವೈಟ್‌ ಲಾಸ್ ಜರ್ನಿ
ಅನಂತ್ ಅಂಬಾನಿ, 18 ತಿಂಗಳುಗಳಲ್ಲಿ 108 ಕಿಲೋಗಳನ್ನು ಹೇಗೆ ಕಳೆದುಕೊಂಡರು ಎಂಬುದು ಹೆಚ್ಚು ಆಸಕ್ತಿದಾಯಕವಾದ ವಿಷಯವಾಗಿದೆ. ಅನಂತ್ ಅಂಬಾನಿ ತೂಕ ನಷ್ಟವು ಕಟ್ಟುನಿಟ್ಟಾದ ಆಹಾರ (Food) ಮತ್ತು ವ್ಯಾಯಾಮದ (Exercise) ದಿನಚರಿಯನ್ನು ಒಳಗೊಂಡಿತ್ತು. ದಿನಕ್ಕೆ ಸುಮಾರು ಐದು-ಆರು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದರು, ಇದರಲ್ಲಿ ಯೋಗ, ತೂಕ ಎತ್ತುವಿಕೆ, ಕ್ರಿಯಾತ್ಮಕ ತರಬೇತಿ ಮತ್ತು ಹೆಚ್ಚಿನ ತೀವ್ರತೆಯ ಕಾರ್ಡಿಯೋ ವ್ಯಾಯಾಮದ ನಂತರ 21 ಕಿಲೋಮೀಟರ್ ಓಟವನ್ನು ಒಳಗೊಂಡಿತ್ತು.

ಸಂದರ್ಶನವೊಂದರಲ್ಲಿ, ನೀತಾ ಅಂಬಾನಿ, ಅನಂತ್ ಅಂಬಾನಿ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿಲ್ಲ. ಹೆಚ್ಚುವರಿ ಕಿಲೋಗಳನ್ನು ಹೊರಹಾಕಲು ಕಟ್ಟುನಿಟ್ಟಾದ ಆಹಾರ ಮತ್ತು ವ್ಯಾಯಾಮದ ದಿನಚರಿಯನ್ನು ಅನುಸರಿಸಿದರು ಎಂದು ಹೇಳಿಕೊಂಡಿದ್ದರು. ಮಾತ್ರವಲ್ಲ ಅನಂತ್‌ ಅಸ್ತಮಾದಿಂದ ಬಳಲುತ್ತಿದ್ದಾರೆ. ಇದು ಅವರ ತೂಕ ಇಳಿಸುವ ಪ್ರಯಾಣವನ್ನು ಕಷ್ಟಕರವಾಗಿಸಿದೆ ಎಂಬುದನ್ನು ಬಹಿರಂಗಪಡಿಸಿದ್ದರು. 'ಅನಂತ್ ಹೆಚ್ಚು ಉಬ್ಬಸದಿಂದ ಬಳಲುತ್ತಿದ್ದರು, ಆದ್ದರಿಂದ ನಾವು ಅವರಿಗೆ ಸಾಕಷ್ಟು ಸ್ಟೀರಾಯ್ಡ್‌ಗಳನ್ನು ನೀಡಬೇಕಾಯಿತು. ಅವರು ಸ್ಥೂಲಕಾಯತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ, ಅಸ್ತಮಾ ಚಿಕಿತ್ಸೆಯು (Treatment) ಬಹಳಷ್ಟು ತೂಕವನ್ನು ಹೆಚ್ಚಿಸಿದೆ' ಎಂದು ನೀತಾ ಅಂಬಾನಿ ಮಾಧ್ಯಮಗಳಿಗೆ ತಿಳಿಸಿದ್ದರು.

Health Tips : ತೂಕ ಇಳಿಸ್ಬೇಕಾ? ಹಾಗಾದ್ರೆ ಪ್ಲ್ಯಾಸ್ಟಿಕ್‌ನಿಂದ ದೂರವಿರಿ!

108 ಕೆಜಿ ತೂಕ ಇಳಿಸಿಕೊಂಡ ಅನಂತ್ ಅಂಬಾನಿ, ಮತ್ತೆ ತೂಕ ಹೆಚ್ಚಿದ್ಹೇಗೆ?
ದ್ವಾರಕಾದ ಮಣಿಪಾಲ್ ಆಸ್ಪತ್ರೆಯ, ಮಿನಿಮಲ್ ಆಕ್ಸೆಸ್ & ಬಾರಿಯಾಟ್ರಿಕ್ ಸರ್ಜರಿ ವಿಭಾಗದ ಡಾ.ರಂದೀಪ್ ವಾಧವನ್, ತುಂಬಾ ಕೊಬ್ಬು ಕಳೆದುಕೊಂಡ ನಂತರವೂ ತೂಕ ಹೆಚ್ಚಾಗುವುದು ಏಕೆ ಎಂಬುದನ್ನು ವಿವರಿಸಿದ್ದಾರೆ. ತೂಕವನ್ನು ಕಳೆದುಕೊಳ್ಳುವಂತೆ, ಮತ್ತೆ ತೂಕ ಹೆಚ್ಚಾಗುವುದು ಸಾಮಾನ್ಯ ವಿದ್ಯಮಾನವಾಗಿದೆ ಎಂದಿದ್ದಾರೆ. ಅದರಲ್ಲೂ ತೂಕವನ್ನು ಕಳೆದುಕೊಳ್ಳುವ ಜನರಲ್ಲಿ ವಿಶೇಷವಾಗಿ ಅವರ ಆರಂಭಿಕ BMI 30 ಕ್ಕಿಂತ ಹೆಚ್ಚು ಇದ್ದಾಗ ಹೀಗೆ ಆಗುತ್ತದೆ ಎಂದು ತಿಳಿಸಿದ್ದಾರೆ. ಒಮ್ಮೆ 30 ದಾಟಿದ ನಂತರ ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತೀರಿ ನೀವು ತೂಕವನ್ನು ಕಳೆದುಕೊಳ್ಳಬಹುದು. ಆದರೆ ಮತ್ತೆ ತೂಕ ಹೆಚ್ಚಳವಾಗುತ್ತದೆ. ಇದು ಸುಮಾರು 94% ಜನರಲ್ಲಿ ಸಂಭವಿಸುತ್ತದೆ ಎನ್ನಲಾಗಿದೆ.

ಸ್ಟೀರಾಯ್ಡ್‌ಗಳು ತೂಕ ಹೆಚ್ಚಿಸಬಹುದೇ? 
ಸ್ಟೀರಾಯ್ಡ್‌ಗಳು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ. ಇದು ಹಸಿವನ್ನು ಹೆಚ್ಚಿಸುತ್ತದೆ, ತೂಕ ಹೆಚ್ಚಾಗಲು ಕಾರಣವಾಗುತ್ತದೆ ಮತ್ತು ನಿರ್ದಿಷ್ಟವಾಗಿ ಹೊಟ್ಟೆಯಲ್ಲಿ ಕೊಬ್ಬಿನ ಹೆಚ್ಚುವರಿ ನಿಕ್ಷೇಪಗಳಿಗೆ ಕಾರಣವಾಗುತ್ತದೆ. ನೀತಾ ಅಂಬಾನಿ, ಅನಂತ್‌ ಅಂಬಾನಿ ಅಸ್ತಮಾದಿಂದ ಬಳಲುತ್ತಿದ್ದು,  ನಿರಂತರವಾಗಿ ಸಾಕಷ್ಟು ಸ್ಟೀರಾಯ್ಡ್‌ ತೆಗೆದುಕೊಳ್ಳುತ್ತಿದ್ದರು ಎಂಬುದನ್ನು ವಿವರಿಸಿದ್ದರು. ಹೀಗಾಗಿ ಸಹಜವಾಗಿಯೇ ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಯರ್ ಆಂಡ್ ಬ್ಯಾಕ್ ಟು ಬ್ಯಾಕ್ ಪಾರ್ಟಿ ಮೋಜಿನ ಜೊತೆ ಡಬಲ್ ನೋವು ನೀಡುತ್ತೆ
ದಿನಕ್ಕೆರಡೇ ಸಿಗರೇಟ್ ಸೇದೋದು ಮಗಾ, ಇಷ್ಟು ಧಮ್ಮೆಳೆದ್ರೆನಾಗುತ್ತೆ ಅನ್ನೋರಿಗೆ ಉತ್ತರ ಇಲ್ಲಿದೆ