ಜಯದೇವ ಆಸ್ಪತ್ರೆ ಮುಂದಿನ ನಿರ್ದೇಶಕ ಯಾರಾಗ್ತಾರೆ? ಇಂದು ಸಿಎಂ ಅಧ್ಯಕ್ಷತೆಯಲ್ಲಿ ಸಭೆ!

By Kannadaprabha News  |  First Published Jul 17, 2023, 8:56 AM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ವಿಧಾನಸೌಧದಲ್ಲಿ ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆಡಳಿತ ಮಂಡಳಿ ಸಭೆ ಮತ್ತು ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ.


ಬೆಂಗಳೂರು (ಜು.17) :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ವಿಧಾನಸೌಧದಲ್ಲಿ ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆಡಳಿತ ಮಂಡಳಿ ಸಭೆ ಮತ್ತು ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ.

ಜಯದೇವ ಸಂಸ್ಥೆಯ ಹಾಲಿ ನಿರ್ದೇಶಕರಾಗಿರುವ ಡಾ.ಸಿ.ಎನ್‌.ಮಂಜುನಾಥ್‌ ಅವರ ಅಧಿಕಾರಾವಧಿ ಜು.19ಕ್ಕೆ ಮುಕ್ತಾಯಗೊಳ್ಳುವುದರಿಂದ ಸಭೆಯಲ್ಲಿ ಈ ವಿಚಾರ ಕೂಡ ಚರ್ಚೆಯಾಗಲಿದ್ದು, ಹೊಸ ಸರ್ಕಾರ ಮತ್ತೆ ಡಾಮಂಜುನಾಥ್‌ ಅವರನ್ನೇ ಮುಂದುವರೆಸಲಿದೆಯಾ ಅಥವಾ ಹೊಸಬರನ್ನು ನೇಮಿಸಲು ನಿರ್ಧಾರಿಸಲಿದೆಯಾ ಎಂಬುದು ಕುತೂಹಲ ಮೂಡಿಸಿದೆ.

Latest Videos

undefined

ಲಕ್ಷಾಂತರ ಹೃದ್ರೋಗಿಗಳಿಗೆ ಜೀವನ ನೀಡಿರುವ ಜಯದೇವ ಹೃದ್ರೋಗ ಸಂಸ್ಥೆಗೆ ಡಾ.ಮಂಜುನಾಥ್‌ ಅವರು ಕಳೆದ 16 ವರ್ಷಗಳಿಂದ ನಿರ್ದೇಶಕರಾಗಿದ್ದಾರೆ. ಅವರು ನಿವೃತ್ತರಾದ ಬಳಿಕವೂ ಹಲವು ವರ್ಷಗಳಿಂದ ಅವನರನ್ನೇ ನಿರ್ದೇಶಕ ಹುದ್ದೆಯಲ್ಲಿ ವಿವಿಧ ಸರ್ಕಾರಗಳು ಮುಂದುವರೆಸುತ್ತಾ ಬಂದಿವೆ. ಹಾಗಾಗಿ ಹೊಸಬರಿಗೆ ಅವಕಾಶ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ ಎನ್ನಲಾಗುತ್ತಿದೆ.

ಪುಣ್ಯಾತ್ಮ, ಕನ್ನಡಿಗರ ಹೆಮ್ಮೆ, ಸೂಪರ್ ಗೆಸ್ಟ್: ವೀಕೆಂಡ್ ಕುರ್ಚಿಯಲ್ಲಿ ಡಾ. ಸಿ ಎನ್ ಮಂಜುನಾಥ್

ಆದರೆ, ಡಾ.ಮಂಜನಾಥ್‌ ಅವರು ಮೈಸೂರಿನಲ್ಲೂ ಜಯದೇವ ಆಸ್ಪತ್ರೆ ನಿರ್ಮಾಣ ಮಾಡಿ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಕಲಬುರಗಿಯಲ್ಲೂ ಅವರ ಉಸ್ತುವಾರಿಯಲ್ಲೇ ಸುಮಾರು ಆರು ಎಕರೆ ಪ್ರದೇಶದಲ್ಲಿ 371 ಹಾಸಿಗೆ ಸಾಮರ್ಥ್ಯದ ಜಯದೇವ ಸಂಸ್ಥೆಯ ಶಾಖೆಯನ್ನು ನಿರ್ಮಿಸಲಾಗುತ್ತಿದ್ದು, ಮುಂದಿನ ಜನವರಿಯಲ್ಲಿ ಉದ್ಘಾಟನೆಯಾಗಲಿದೆ. ಹಾಗಾಗಿ ಹೊಸ ಸರ್ಕಾರ ಕೂಡ ಅವರ ಅಧಿಕಾರಾವಧಿಯನ್ನು ಮತ್ತೆ ವಿಸ್ತರಿಸಲಿದೆಯಾ ಅಥವಾ ಹೊಸಬರನ್ನು ನೇಮಿಸಲಿದೆಯಾ ಎಂಬುದಕ್ಕೆ ಸಭೆಯಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ.

ಹೃದ್ರೋಗಿಗಳಿಗೆ ವರವಾದ ಜಯದೇವ ಘಟಕಗಳು, ಆಸ್ಪತ್ರೆ ಎಲ್ಲೆಲ್ಲಿ ಶಾಖೆ ತೆರೆಯುತ್ತಿದೆ ?

click me!