ಬೆಳಗಾವಿ: ಮಹಿಳೆ ಹೊಟ್ಟೆಯಲ್ಲಿದ್ದ 3 ಕೆಜಿ ಗಡ್ಡೆ ತೆಗೆದ ವೈದ್ಯರು!

By Kannadaprabha News  |  First Published Jul 16, 2023, 12:05 PM IST

  ಸತತ 4 ವರ್ಷಗಳಿಂದ ಕಿಬ್ಬೊಟ್ಟೆಯ ನೋವಿನಿಂದ ಬಳಲುತ್ತಿದ್ದ 60 ವರ್ಷದ ಮಹಿಳೆಗೆ ಯಶಸ್ವಿಯಾಗಿ ಅಂಡಾಶಯದ ಗಂಟಿನ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಕೆಎಲ…ಇ ಶತಮಾನೋತ್ಸವ ಚಾರಿಟಬಲ… ಆಸ್ಪತ್ರೆಯ ಸ್ತ್ರೀರೋಗ, ಪ್ರಸೂತಿ ತಜ್ಞ ಡಾ.ದರ್ಶಿತ ಶೆಟ್ಟಿನೇತೃತ್ವದ ತಂಡ ಯಶಸ್ವಿಯಾಗಿದೆ.


ಬೆಳಗಾವಿ (ಜು.16) :  ಸತತ 4 ವರ್ಷಗಳಿಂದ ಕಿಬ್ಬೊಟ್ಟೆಯ ನೋವಿನಿಂದ ಬಳಲುತ್ತಿದ್ದ 60 ವರ್ಷದ ಮಹಿಳೆಗೆ ಯಶಸ್ವಿಯಾಗಿ ಅಂಡಾಶಯದ ಗಂಟಿನ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಕೆಎಲ…ಇ ಶತಮಾನೋತ್ಸವ ಚಾರಿಟಬಲ… ಆಸ್ಪತ್ರೆಯ ಸ್ತ್ರೀರೋಗ, ಪ್ರಸೂತಿ ತಜ್ಞ ಡಾ.ದರ್ಶಿತ ಶೆಟ್ಟಿನೇತೃತ್ವದ ತಂಡ ಯಶಸ್ವಿಯಾಗಿದೆ.

ಈ ಶಸ್ತ್ರಚಿಕಿತ್ಸೆ ಮೂಲಕ ಸುಮಾರು 65 ಸೆಂಮೀ ಸುತ್ತಳತೆಯ, 3ಕೆಜಿ ಗಿಂತಲೂ ಅಧಿಕ ತೂಕದ ಗಂಟನ್ನು 1ಗಂಟೆಯವರೆಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಹೊರತೆಗೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಡಾ.ದರ್ಶಿತ ಶೆಟ್ಟಿ, ಗರ್ಭಾಶಯ, ಅಂಡಾಶಯ ಹಾಗೂ ಅದರ ಆಂತರಿಕ ಪರಿಸರದಲ್ಲಾಗುವ ರಾಸಾಯನಿಕ ಬದಲಾವಣೆಗಳು, ಅನುವಂಶೀಯತೆ, ಹಾರ್ಮೋನುಗಳಲ್ಲಾಗುವ ಬದಲಾವಣೆ, ಆಹಾರ ಕ್ರಮದಲ್ಲಾಗುವ ಏರಿಳಿತಗಳು, ಆರೋಗ್ಯದ ಅಲಕ್ಷ್ಯತೆ ಹೀಗೆ ಮುಂತಾದ ಕಾರಣಗಳಿಂದ ಈ ತೆರನಾದ ಗಂಟುಗಳಿಂದ ಮಹಿಳೆಯರು ಸಮಸ್ಯೆಗೆ ಗುರಿಯಾಗುತ್ತಾರೆ. ಕಾಲಕಾಲಕ್ಕೆ ಸಮಸ್ಯೆಗಳು ಉಲ್ಭಣಗೊಳ್ಳುವದಕ್ಕಿಂತ ಮುಂಚೆಯೇ ವೈದ್ಯಕೀಯ ತಪಾಸಣೆಗೆ ಒಳಪಟ್ಟು ತಕ್ಕ ಚಿಕಿತ್ಸೆಯನ್ನು ಹೊಂದಿದರೆ ಆರೊಗ್ಯಯುತ ಜೀವನ ನಡೆಸಬಹುದಾಗಿದೆ ಎಂದು ಹೇಳಿದರು.

Latest Videos

undefined

World Brain Tumor Day: ವಿಪರೀತ ಮೊಬೈಲ್‌ ಬಳಕೆಯಿಂದ ಬ್ರೈನ್‌ ಟ್ಯೂಮರ್‌ ಬರಬಹುದು ಎಚ್ಚರ!

ವೈದ್ಯರ ತಂಡ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೆಎಲ…ಇ ಶತಮಾನೋತ್ಸವ ಚಾರಿಟಬಲ… ಆಸ್ಪತ್ರೆಯ ನಿರ್ದೇಶಕ ಡಾ.ಎಸ್‌.ಸಿ. ಧಾರವಾಡ, ಪ್ರತಿ 1000 ಮಹಿಳೆಯರಲ್ಲಿ 20 ರಿಂದ 30 ಜನ ಮಹಿಳೆಯರಲ್ಲಿ ಇಂತಹ ಸಮಸ್ಯೆಗಳನ್ನು ಕಾಣಬಹುದಾಗಿದೆ. ಆದರೆ ಇಷ್ಟುದೊಡ್ಡ ಗಂಟು ಇರುವುದು ಅಪರೂಪವಾಗಿದೆ. ಆದರೆ ಸಕಾಲಕ್ಕೆ ವೈದ್ಯರನ್ನು ಕಂಡು ತಪಾಸಣೆಗೆ ಒಳಪಟ್ಟಲ್ಲಿ ಇಂತಹ ಸಮಸ್ಯೆಗಳಿಂದ ದೂರವಿರಬಹುದಾಗಿದೆ ಎಂದರು.

ಶಸ್ತಚಿಕಿತ್ಸೆಯನ್ನು ಡಾ.ದರ್ಶಿತ ಶೆಟ್ಟಿ(Dr. Darshitha Shetty) ನೇತೃತ್ವದಲ್ಲಿ, ಡಾ.ಕೆ.ಎನ್‌. ಹೋಳಿಕಟ್ಟಿಹಾಗೂ ಡಾ.ಅಮೃತಾ ಸಾಲ್ಕರ ಅರವಳಿಕೆ ವಿಭಾಗದ ಮುಖ್ಯಸ್ಥ ಡಾ.ಆರ್‌.ಜಿ.ನೆಲವಿಗಿ ಅವರ ತಂಡ ಕಾರ್ಯದಲ್ಲಿ, ಸ್ತ್ರೀರೋಗ ಹಾಗೂ ಪ್ರಸೂತಿ ವಿಬಾಗದ ಮುಖ್ಯಸ್ಥೆ ಡಾ.ರಾಜೇಶ್ವರಿ ಕಡಕೋಳ ಹಾಗೂ ಹಿರಿಯ ಶಸ್ತ್ರಚಿಕಿತ್ಸಕ ಡಾ.ಅಶೋಕ ಪಾಂಗಿ ಇವರ ಮೇಲ್ವಿಚಾರಣೆಯಲ್ಲಿ ಮಾಡಲಾಯಿತು. ಕ್ಲಿಷ್ಟಕರವಾದ ಇಂತಹ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ ವೈದ್ಯರ ತಂಡವನ್ನು ಯುಎಸ್‌ಎಮ… ಕೆಎಲ…ಇಯ ನಿರ್ದೇಶಕ ಡಾ.ಎಚ್‌.ಬಿ.ರಾಜಶೇಖರ ಹಾಗೂ ಕೆಎಲ…ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅಭಿನಂದಿಸಿದ್ದಾರೆ.

ಬೆಳಗಾವಿ: ಗರ್ಭಕೋಶದಲ್ಲಿ 2.5 ಕೆಜಿ ಗಡ್ಡೆ ಪತ್ತೆ; ಶಸ್ತ್ರ ಚಿಕಿತ್ಸೆ ಯಶಸ್ವಿ

click me!