ಹುಡುಗರು, ಗರ್ಲ್ಸ್‌ ಬ್ಯೂಟಿ ಪ್ರಾಡಕ್ಟ್‌ ಬಳಸ್ಬೋದಾ,ತಜ್ಞರು ಏನಂತಾರೆ?

By Vinutha Perla  |  First Published Jul 16, 2023, 2:08 PM IST

ಯಾವಾಗ್ಲೂ ಚೆನ್ನಾಗ್‌ ಕಾಣ್ಬೇಕು ಅಂತ ಯಾರಿಗೆ ತಾನೇ ಆಸೆ ಇರಲ್ಲ ಹೇಳಿ. ಇದಕ್ಕಾಗಿಯೇ ಮಾರುಕಟ್ಟೆಯಲ್ಲಿ ನಾನಾ ರೀತಿಯ ಬ್ಯೂಟಿ ಪ್ರಾಡಕ್ಟ್ ಲಭ್ಯವಿದೆ. ಆದ್ರೆ ಪುರುಷರು, ಮಹಿಳೆಯರು ಬಳಸೋ ಬ್ಯೂಟಿ ಪ್ರಾಡಕ್ಟ್‌ಗಳನ್ನು ಬಳಸ್ಬೋದಾ?


ಬ್ಯೂಟಿ ಪ್ರಾಡಕ್ಟ್‌ಗಳನ್ನು ಖರೀದಿಸುವಾಗ ನಮ್ಮ ಸ್ಕಿನ್‌ಗೆ ಯಾವುದು ಉತ್ತಮವಾಗಿದೆ ಎಂಬ ಗೊಂದಲ ಪ್ರತಿಬಾರಿಯೂ ಎದುರಾಗುತ್ತದೆ. ಫೇಸ್‌ವಾಶ್ ಮತ್ತು ಮಾಯಿಶ್ಚರೈಸರ್‌ನಂತಹ ಚರ್ಮದ ರಕ್ಷಣೆಯ ಉತ್ಪನ್ನಗಳನ್ನು ನಾನಾ ಬ್ರ್ಯಾಂಡ್‌ಗಳಲ್ಲಿ ಲಭ್ಯವಿದೆ. ಇವುಗಳಲ್ಲಿ ಪ್ರಾಡಕ್ಟ್‌ನಲ್ಲಿ ಬಳಸಿರುವ ಅಂಶ, ಯಾವ ಸ್ಕಿನ್‌ಗೆ ಸೂಟ್ ಆಗುತ್ತದೆ ಎಂಬುದನ್ನು ನಿರ್ಧಿಷ್ಟವಾಗಿ ಬರೆದಿರಲಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಹುಡುಗಿಯರಿಗಾಗಿರುವ ಬ್ಯೂಟಿ ಪ್ರಾಡಕ್ಟ್‌ಗಳ ಸಂಖ್ಯೆ ಹೆಚ್ಚಿದೆ. ಇದರಲ್ಲಿ ಕೆಲವು ಹೆಚ್ಚು ಸಾಫ್ಟ್‌ ಸಹ ಆಗಿರುವ ಪುರುಷರು ಸಹ ಇಂಥಾ ಉತ್ಪನ್ನಗಳನ್ನು ಬಳಸಲು ಇಷ್ಟಪಡುತ್ತಾರೆ. ಆದರೆ ಈ ರೀತಿ ಹುಡುಗರು, ಹುಡುಗಿಯರು ಬಳಸೋ ಸೌಂದರ್ಯ ಉತ್ಪನ್ನಗಳನ್ನು ಬಳಸ್ಬೋದಾ? ಈ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ.

ಪುರುಷರು, ಮಹಿಳಾ ತ್ವಚೆ ಉತ್ಪನ್ನಗಳನ್ನು ಬಳಸುವುದು ಎಷ್ಟು ಸರಿ?
ಪುರುಷರು ತಮ್ಮ ತ್ವಚೆಯ ಅಗತ್ಯಗಳಿಗೆ ಸೂಕ್ತವಾದರೆ ಮಹಿಳಾ (Woman) ತ್ವಚೆ ಉತ್ಪನ್ನಗಳನ್ನು ಖಂಡಿತವಾಗಿ ಬಳಸಬಹುದು ಎಂದು ತಜ್ಞರು ಹೇಳುತ್ತಾರೆ. ಸ್ಕಿನ್‌ಕೇರ್ ಉತ್ಪನ್ನಗಳು (Product) ಲಿಂಗದ ಆಧಾರದಲ್ಲಿ ವರ್ಗೀಕರಣವಾಗಿಲ್ಲ. ಬದಲಿಗೆ ವಿವಿಧ ಚರ್ಮದ ಪ್ರಕಾರಗಳು ಮತ್ತು ಕಾಳಜಿಗಳಿಗೆ ತಕ್ಕಂತೆ ಇವನ್ನು ಸಿದ್ಧಪಡಿಸಲಾಗಿರುತ್ತದೆ. ಆದರೂ, ತ್ವಚೆ ಉತ್ಪನ್ನಗಳನ್ನು ಆಯ್ಕೆಮಾಡುವಾಗ ವೈಯಕ್ತಿಕ ಚರ್ಮದ ಕಾಳಜಿ ಮತ್ತು ಆದ್ಯತೆಗಳನ್ನು ಪರಿಗಣಿಸುವುದು ಮುಖ್ಯವಾಗಿದೆ, ಎಂದು ಫಿಕ್ಸ್‌ಡರ್ಮಾ ಪ್ರೈವೇಟ್ ಲಿಮಿಟೆಡ್‌ನ ಕನ್ಸಲ್ಟಿಂಗ್ ಡರ್ಮಟಾಲಜಿಸ್ಟ್ ಡಾ ಜುಶ್ಯಾ ಭಾಟಿಯಾ ಸರಿನ್ ಹೇಳುತ್ತಾರೆ.

Tap to resize

Latest Videos

Beauty Care : 30ನೇ ವರ್ಷದಲ್ಲಿ ಮುಖ ಹೊಳಿಬೇಕೆಂದ್ರೆ ಈ ತಪ್ಪು ಮಾಡ್ಬೇಡಿ

ಲಿಂಗವನ್ನು ಲೆಕ್ಕಿಸದೆ ಚರ್ಮದ ಆರೋಗ್ಯವನ್ನು (Skin care) ಕಾಪಾಡಿಕೊಳ್ಳುವುದು ಎಲ್ಲರ ಪ್ರಾಥಮಿಕ ಗುರಿಯಾಗಿದೆ. ಪುರುಷರು ಮತ್ತು ಮಹಿಳೆಯರು ಒಂದೇ ರೀತಿಯ ಚರ್ಮದ ರಚನೆಗಳನ್ನು ಹೊಂದಿದ್ದಾರೆ. ಶುಷ್ಕತೆ, ಮೊಡವೆ, ವಯಸ್ಸಾದ ಮತ್ತು ಸೂರ್ಯನ ಹಾನಿಯಂತಹ ಅನೇಕ ಚರ್ಮದ ಸಮಸ್ಯೆಯನ್ನು ಎದುರಿಸುತ್ತಾರೆ. ಪರಿಣಾಮವಾಗಿ, ಅನೇಕ ತ್ವಚೆ ಉತ್ಪನ್ನಗಳು ಈ ಸಾಮಾನ್ಯ ಕಾಳಜಿಗಳನ್ನು ಪರಿಹರಿಸುವ ಅಂಶಗಳನ್ನು ಒಳಗೊಂಡಿರುತ್ತವೆ ಮತ್ತು ಯಾರಾದರೂ ಇದನ್ನು ಬಳಸಬಹುದು ಎಂದು ಕಾಯಾ ಸ್ಕಿನ್ ಕ್ಲಿನಿಕ್‌ನ ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್ ಡಾ.ಆಶ್ನಾ ಪಿಂಟೊ ತಿಳಿಸುತ್ತಾರೆ.

ಉದಾಹರಣೆಗೆ, ಒಬ್ಬ ಪುರುಷನು ಒಣ ಚರ್ಮವನ್ನು (Dry skin) ಹೊಂದಿದ್ದರೆ ಮತ್ತು ನಿರ್ದಿಷ್ಟ ಮಹಿಳಾ ಮಾಯಿಶ್ಚರೈಸರ್ ಚರ್ಮಕ್ಕೆ ಉತ್ತಮವಾಗಿದೆ ಎಂದು ಕಂಡುಕೊಂಡರೆ ಖಂಡಿತವಾಗಿಯೂ ಇದನ್ನು ಬಳಸಬಹುದು. ಚರ್ಮದ ಅಗತ್ಯಕ್ಕೆ ತಕ್ಕಂತೆ ಬ್ಯೂಟಿ ಪ್ರಾಡಕ್ಟ್ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಮಾತ್ರ ಮುಖ್ಯವಾಗುತ್ತದೆ. ಹೀಗಿದ್ದೂ ಉತ್ಪನ್ನಗಳಲ್ಲಿ ಜಂಡರ್‌ ಯಾಕೆ ಹಾಕಿರುತ್ತಾರೆ? ಆ ಬಗ್ಗೆ ಇಲ್ಲಿದೆ ಮಾಹಿತಿ. 

ಟಾಲ್ಕಮ್ ಪೌಡರ್‌ ಬಳಸೋ ಮುನ್ನ ಎಚ್ಚರ, ಕ್ಯಾನ್ಸರ್‌ಗೂ ಕಾರಣವಾಗುತ್ತೆ

ಪುರುಷರು ಮತ್ತು ಮಹಿಳೆಯರು: ಚರ್ಮದ ವ್ಯತ್ಯಾಸ
ಬ್ಯೂಟಿ ಪ್ರಾಡಕ್ಟ್‌ಗಳಲ್ಲಿ ಲೇಬಲಿಂಗ್‌ಗೆ ಕಾರಣವಾಗುವ ಒಂದು ಮುಖ್ಯ ಕಾರಣವೆಂದರೆ ಪುರುಷರು ಮತ್ತು ಮಹಿಳೆಯರ ಚರ್ಮದಲ್ಲಿನ ಸೂಕ್ಷ್ಮ ವ್ಯತ್ಯಾಸ. ಪುರುಷರ ಚರ್ಮವು ಸಾಮಾನ್ಯವಾಗಿ ಮಹಿಳೆಯರ ಚರ್ಮಕ್ಕಿಂತ ದಪ್ಪವಾಗಿರುತ್ತದೆ. ಇದು ಪ್ರಾಥಮಿಕವಾಗಿ ಹೆಚ್ಚಿನ ಕಾಲಜನ್ ಸಾಂದ್ರತೆ ಮತ್ತು ದೊಡ್ಡ ಸೆಬಾಸಿಯಸ್ ಗ್ರಂಥಿಗಳ ಕಾರಣದಿಂದಾಗಿರುತ್ತದೆ. ದಪ್ಪ ಚರ್ಮವು ಬಾಹ್ಯ ಅಂಶಗಳ ವಿರುದ್ಧ ಹೆಚ್ಚು ನೈಸರ್ಗಿಕ ರಕ್ಷಣೆ ನೀಡುತ್ತದೆ ಮತ್ತು ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳಿಗೆ ಕಡಿಮೆ ಒಳಗಾಗುತ್ತದೆ ಎಂದು ಡಾ ಜುಶ್ಯಾ ಬಾಟಿಯಾ ಸರಿನ್ ಹೇಳಿದರು.

'ಪುರುಷರ ಚರ್ಮವು ದಪ್ಪವಾಗಿರುತ್ತದೆ ಮತ್ತು ಹೆಚ್ಚಿನ ಕಾಲಜನ್ ಸಾಂದ್ರತೆಯನ್ನು ಹೊಂದಿರುವಾಗ, ಪುರುಷರ ಕಾಲಜನ್ ಮಟ್ಟಗಳು ಮಹಿಳೆಯರಿಗೆ ಹೋಲಿಸಿದರೆ ವಯಸ್ಸಿನಲ್ಲಿ (Age) ಕ್ರಮೇಣ ಕಡಿಮೆಯಾಗುತ್ತವೆ. ಅದಕ್ಕಾಗಿಯೇ ಪುರುಷರು ಹೆಚ್ಚಾಗಿ ಮಹಿಳೆಯರಿಗಿಂತ ನಂತರ ವಯಸ್ಸಾದ ಲಕ್ಷಣಗಳನ್ನು ತೋರಿಸುತ್ತಾರೆ. ಆದಾಗ್ಯೂ, ವಯಸ್ಸಾದಾಗ, ಪುರುಷರು ಹೆಚ್ಚು ಹಠಾತ್ ಮತ್ತು ಕಾಲಜನ್ ನಷ್ಟವನ್ನು ಅನುಭವಿಸಬಹುದು, ಇದು ಆಳವಾದ ಸುಕ್ಕುಗಳು ಮತ್ತು ಚರ್ಮವನ್ನು ಕುಗ್ಗಿಸಲು ಕಾರಣವಾಗುತ್ತದೆ' ಎಂದು ಅವರು ಹೇಳಿದರು.

click me!