
ಪ್ರಪಂಚದಾದ್ಯಂತ ಕೋವಿಡ್ ದಿನದಿಂದ ದಿನಕ್ಕೆ ತನ್ನ ಹೊಸ ಹೊಸ ಮುಖಗಳನ್ನು ಪರಿಚಯ ಮಾಡಿಕೊಡುತ್ತಿದೆ. ದಿನಕ್ಕೊಂದು ರೀತಿಯ ಹೊಸ ತಳಿಗಳು ಉತ್ಪತ್ತಿಯಾಗುತ್ತಿವೆ ಎಂಬ ಆತಂಕ ಒಂದೆಡೆಯಾದರೆ ಇದೀಗ WHO(World Health Organization) ಒಂದು ಆತಂಕಕಾರಿ ಮಾಹಿತಿಯನ್ನು ಹೊರ ಹಾಕಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ತಮ್ಮ ಇತ್ತೀಚಿನ ಸಂಶೋಧನೆಯ ಪ್ರಕಾರ ದೀರ್ಘಕಾಲೀನ ಕೋವಿಡ್ (Covid) ಸೋಂಕಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಕೋವಿಡ್ ಬಂದಾಗ ಉಸಿರಾಟದ ಸಮಸ್ಯೆ ಎದುರಾಗುತ್ತದೆ ಎಂಬುದು ಸಾಮಾನ್ಯ ವಿಚಾರ. ಎಲ್ಲರಿಗೂ ತಿಳಿದಿರುವುದೇ. ಆದರೆ, ಇದು ಇನ್ನೂ ಮುಂದುವರೆದು ಹೃದಯಕ್ಕೆ ಸಂಬಂಧಪಟ್ಟಂಥ ಬೇರೆ ಬೇರೆ ತೊಂದರೆಗಳನ್ನು ಸೋಂಕಿತರು ಅನುಭವಿಸಬಹುದು. ಕೋವಿಡ್ ದೇಹದ ಇತರೆ ಅಂಗಗಳಿಗೆ ತೊಂದರೆಗಳನ್ನು ಕೊಡಬಹುದು ಎಂಬ ಆತಂಕಕಾರಿ ಮಾಹಿತಿಯನ್ನು ವೈಧ್ಯಾಧಿಕಾರಿಗಳು ಹೊರಹಾಕಿದ್ದಾರೆ.
ಲಾಂಗ್ ಕೋವಿಡ್ (Long COVID)
ಕೋವಿಡ್ 19 ಸೋಂಕು ತಗುಲಿ ಹೋದ ನಂತರ ಕೆಲವು ದಿನಗಳ ಬಳಿಕ ಸೋಂಕಿತರು ಮಾಮೂಲಿಯಂತೆ ಆಗಿ ಬಿಡುತ್ತಾರೆ. ಆದರೆ, ಕೆಲವರಲ್ಲಿ 90 ದಿನಗಳಿಗಿಂತಲೂ ಹೆಚ್ಚು ದಿನಗಳ ಕಾಲ ಕೋವಿಡ್ ರೋಗಲಕ್ಷಣಗಳು (Symptoms) ಉಳಿದುಬಿಡುತ್ತವೆ. ಇದಕ್ಕೇ ಲಾಂಗ್ ಕೋವಿಡ್ ಎನ್ನುವುದು. ಸಂಶೋಧನೆಯ ಪ್ರಕಾರ ಕೋವಿಡ್ ನಿಂದ ಗುಣಮುಖರಾಗಲು ಕೆಲವು ವಾರಗಳು, ಕೆಲವು ತಿಂಗಳು, ಅಥವಾ ಇನ್ನೂ ಮುಂದುವರೆದು ಕೆಲವು ವರ್ಷಗಳೇ ಬೇಕಾಗಬಹುದು ಎಂಬುದು WHO ನೀಡುತ್ತಿರುವ ಮಾಹಿತಿ.
Brain Deathಗೂ ಸಾವಿಗೂ ಇದೆಯೇ ವ್ಯತ್ಯಾಸ?
ಹಾಗಾದರೆ ಒಮಿಕ್ರೋನ್ (Omicron) ತಗುಲಿರುವ ವ್ಯಕ್ತಿ ಕೂಡ ಈ ದೀರ್ಘಕಾಲದ ಕೊರೋನಾದಿಂದ ಬಳಲಬೇಕಾಗಬಹುದೇ? ಎಂದು ಕೇಳಿದರೆ ಇದರ ಬಗ್ಗೆ ವೈದ್ಯಾಧಿಕಾರಿಗಳಿಗೆ ಯಾವುದೇ ಸಂಪೂರ್ಣ ಮಾಹಿತಿ ದೊರೆತಿಲ್ಲ. ದೀರ್ಘ ಕೋವಿಡ್ ನಿಂದ ಬಳಲುತ್ತಿರುವ ಜನರು ಎಷ್ಟು ಶೇಕಡದಷ್ಟು (Percentage) ಇದ್ದಾರೆ ಎಂಬ ನಿರ್ದಿಷ್ಟ ಅಂಕಿ ಅಂಶಗಳು ಸಂಶೋಧಕರಿಗೆ ಇನ್ನೂ ದೊರೆತಿಲ್ಲ. ಇದರ ಕುರಿತಾಗಿ ಸಂಶೋಧನೆಗಳು ನಡೆಯುತ್ತಲೇ ಇವೆ.
ದೀರ್ಘ ಕೋವಿಡ್ ಲಕ್ಷಣಗಳು
ಓಮಿಕ್ರಾನ್ ಹಾಗೂ ಕೋವಿಡ್ 19 ಬಗ್ಗೆ ಐಸಿಎಂಆರ್‌ನ ಹೊಸ ಅಧ್ಯಯನ ಏನು ಹೇಳುತ್ತೆ..?
ಲಾಂಗ್ ಕೋವಿಡ್ ಆತಂಕಕಾರಿ (Dangerous) ಲಕ್ಷಣಗಳು
ಮೇಲ್ನೋಟಕ್ಕೆ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಯಂತೆ ಇದು ಕಾಣಿಸಿಕೊಂಡರೂ ಹೃದಯನಾಳದ ಪ್ರತಿ ಭಾಗವನ್ನು ವ್ಯವಸ್ಥಿತವಾಗಿ ಈ ವೈರಾಣು ನಾಶ ಮಾಡುವ ಶಕ್ತಿ ಹೊಂದಿದೆ. ಇದು ಹೃದಯದಲ್ಲಿ ಸೇರಿಕೊಳ್ಳುವುದರಿಂದ ದೇಹದ ಪ್ರತಿಯೊಂದು ಭಾಗದ ಮೇಲೆ ಕೂಡ ಈ ವೈರಾಣುವಿನ ಪರಿಣಾಮ ಕಾಣಿಸಿಕೊಳ್ಳುತ್ತದೆ.
ಈ ಎಲ್ಲ ಮಾಹಿತಿಗಳನ್ನು WHO ಗೆ ಸಂಬಂಧಪಟ್ಟ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಲಾಂಗ್ ಕೋವಿಡ್ ಕುರಿತಾಗಿ ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂಬುದು ಸಂಶೋಧಕರು ಹೇಳುವ ಮಾತು. ಯಾವುದಕ್ಕೂ ಆರೋಗ್ಯದ ವಿಷಯದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಹಾಗೂ ದೇಹದ ಬದಲಾವಣೆಗಳ ಬಗ್ಗೆ ಗಮನಿಸುತ್ತಿರುವುದು ಉತ್ತಮ ಎನ್ನುತ್ತಾರೆ ಸಂಶೋಧಕರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.