ಡೆನ್ಮಾರ್ಕ್‌ನ ಬವೇರಿಯನ್ ನೋರ್ಡಿಕ್ ಕಂಪನಿಯು ‘ಎಂವಿಎ-ಬಿಎನ್’ ಎಂಪಾಕ್ಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಈ ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ.
ಜಿನೆವಾ: ಆಫ್ರಿಕಾ ಖಂಡ ಸೇರಿದಂತೆ ಜಗತ್ತಿನ ನೂರಾರು ದೇಶಗಳನ್ನು ಕಾಡುತ್ತಿರುವ ಹಾಗೂ ಭಾರತಕ್ಕೂ ಇತ್ತೀಚೆಗೆ ಪುನಃ ಕಾಲಿಟ್ಟಿರುವ ಮಾರಕ ಮಂಕಿಪಾಕ್ಸ್ ರೋಗಕ್ಕೆ ಕೊನೆಗೂ ಲಸಿಕೆ ಬಂದಿದೆ. ಡೆನ್ಮಾರ್ಕ್‌ನ ಬವೇರಿಯನ್ ನೋರ್ಡಿಕ್ ಎಂಬ ಕಂಪನಿ ‘ಎಂವಿಎ-ಬಿಎನ್’ ಹೆಸರಿನ ಎಂಪಾಕ್ಸ್ ಲಸಿಕೆ ಬಿಡುಗಡೆ ಮಾಡಿದ್ದು, ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತುರ್ತು ಅನುಮತಿ ನೀಡಿದೆ.
ಇದು ಮಂಕಿಪಾಕ್ಸ್‌ಗೆ ಲಭ್ಯವಿರುವ ಏಕೈಕ ಲಸಿಕೆಯಾಗಿದೆ. ಪೂರ್ಣ ಪ್ರಮಾಣದಲ್ಲಿ ಇದರ ಪರೀಕ್ಷೆ ನಡೆದಿಲ್ಲ. ಹೀಗಾಗಿ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲು ಡಬ್ಲ್ಯುಎಚ್‌ಒ ಅನುಮತಿ ನೀಡಿದೆ. ಆದರೆ, ಆಫ್ರಿಕನ್ ದೇಶಗಳಲ್ಲಿ ಚಿಕ್ಕ ಮಕ್ಕಳಲ್ಲಿ ಭಾರೀ ಪ್ರಮಾಣದಲ್ಲಿ ಈ ರೋಗ ಕಂಡುಬರುತ್ತಿದ್ದರೆ, ಆಗ ಅವರ ಜೀವ ಉಳಿಸಲು ಲಸಿಕೆಯಲ್ಲಿರುವ ರಿಸ್ಕ್ ಬದಿಗೊತ್ತಿ, ಇದನ್ನು ನೀಡಬಹುದು ಎಂದೂ ಹೇಳಿದೆ.
undefined
ಮಂಕಿಪಾಕ್ಸ್ ವೈರಸ್: ಏರ್‌ಪೋರ್ಟ್ ಮಲ, ಮೂತ್ರ ಮೇಲೆ ನಿಗಾ
2 ಡೋಸ್ ಲಸಿಕೆ
ಮಂಕಿಪಾಕ್ಸ್ ಲಸಿಕೆ ಕೂಡ ಕೊರೋನಾ ಲಸಿಕೆಯಂತೆ ಎರಡು ಡೋಸ್‌ಗಳಲ್ಲಿ ನೀಡಬೇಕಾದ ಲಸಿಕೆಯಾಗಿದೆ. ಆಫ್ರಿಕಾದ ಬಡ ದೇಶಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಮಂಕಿಪಾಕ್ಸ್ ಹರಡುತ್ತಿರುವುದರಿಂದ ಗವಿ, ಯುನಿಸೆಫ್‌ನಂತಹ ಸಂಸ್ಥೆಗಳು ಲಸಿಕೆ ಖರೀದಿಸಿ ನೀಡಬಹುದು ಎಂದು ಡಬ್ಲ್ಯುಎಚ್‌ಒ ಸಲಹೆ ನೀಡಿದೆ.
ಈ ಕುರಿತು ಹೇಳಿಕೆ ನೀಡಿರುವ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೋಸ್ ಅಧನೋಮ್ ಘೇಬ್ರಿಯೇಸಿಸ್, ‘ಕೇವಲ ಒಂದೇ ಕಂಪನಿ ಸದ್ಯಕ್ಕೆ ಮಂಕಿಪಾಕ್ಸ್ ಲಸಿಕೆ ತಯಾರಿಸುತ್ತಿದೆ. ಹೀಗಾಗಿ ಪೂರೈಕೆ ಸೀಮಿತವಾಗಿದೆ. ದಾನಿಗಳು ದೊಡ್ಡ ಪ್ರಮಾಣದಲ್ಲಿ ಇದನ್ನು ಉತ್ಪಾದಿಸಲು ನೆರವಾಗಿ, ಬಡ ದೇಶಗಳ ಸಹಾಯಕ್ಕೆ ಧಾವಿಸಬೇಕು’ ಎಂದು ಕರೆ ನೀಡಿದ್ದಾರೆ. ಮಂಕಿಪಾಕ್ಸ್ ವೈರಸ್ ಕೂಡ ಸ್ಮಾಲ್‌ಪಾಕ್ಸ್ ಮತ್ತು ದಡಾರವನ್ನು ಉಂಟುಮಾಡುವ ವೈರಸ್‌ನ ಕುಟುಂಬಕ್ಕೇ ಸೇರಿದ್ದರೂ, ಈವರೆಗೆ ಲಸಿಕೆ ಲಭ್ಯವಿರಲಿಲ್ಲ.
ಭಾರತಕ್ಕೂ ಮಂಕಿಪಾಕ್ಸ್ ಪ್ರವೇಶ; ಸನ್ನದ್ಧ ಸ್ಥಿತಿಗೆ ರಾಜ್ಯಗಳಿಗೆ ಕೇಂದ್ರ ಸೂಚನೆ