ಹಾವು ಕಚ್ಚಿ ವರ್ಷಕ್ಕೆ ನೂರಾರು ಮಂದಿ ಸಾವನ್ನಪ್ಪುತ್ತಾರೆ. ಆದ್ರೆ ಈ ಮನುಷ್ಯನಿಗೆ ಹಾವು ಕಚ್ಚಿದ್ರೆ ಹಾವೇ ಸಾಯುತ್ತೆ. ಸ್ನೇಕ್ ಮ್ಯಾನ್ ಎಂದೇ ಪ್ರಸಿದ್ಧಿಯಾಗಿದ್ದ ಈತನಿಗೆ ಹಾವು, ಆಟಿಕೆಯಾಗಿತ್ತು.
ಅಮೆರಿಕಾದ ಸ್ನೇಕ್ ಮ್ಯಾನ್ (America Snake Man) ಬಗ್ಗೆ ನಾವಿಂದು ಹೇಳ್ತೇವೆ. ಒಂದು ಬಾರಿ ವಿಷಪೂರಿತ ಹಾವು (venomous snake) ಕಚ್ಚಿದ್ರೆ ಉಳಿಯೋದು ಕಷ್ಟ. ಹಾಗಿರುವಾಗ ಹತ್ತು, ಇಪ್ಪತ್ತು ಬಾರಿಯಲ್ಲ ಬರೋಬ್ಬರಿ 172 ಬಾರಿ ಹಾವಿನಿಂದ ಕಚ್ಚಿಸಿಕೊಂಡ್ರೂ 100 ವರ್ಷ ಬದುಕಿದ ಮಹಾನ್ ವ್ಯಕ್ತಿ ಈ ಸ್ನೇಕ್ ಮ್ಯಾನ್. ಅವರ ಹೆಸರು ಬಿಲ್ ಹಾಸ್ಟ್ (Bill Hast). ಹಾವಿನ ವಿಷ ಏರಿದ್ರೆ ಮನುಷ್ಯ ಸಾಯ್ತಾನೆ. ಆದ್ರೆ ಬಿಲ್ ಹಾಸ್ಟ್, ಹಾವಿನಿಂದ ಕಚ್ಚಿಸಿಕೊಂಡೇ ತಮ್ಮ ದೇಹದ ರೋಗ ನಿರೋಧಕ ಶಕ್ತಿ (Immunity) ಯನ್ನು ಹೆಚ್ಚಿಸಿಕೊಳ್ಳುವ ಕೆಲಸ ಮಾಡ್ತಿದ್ದರು. 20 ಬಾರಿ ಬಿಲ್ ಹಾಸ್ಟ್ ಸ್ಥಿತಿ ಗಂಭೀರವಾದ್ರೂ ಅವರು ತಲೆಕೆಡಿಸಿಕೊಂಡಿರಲಿಲ್ಲ.
ಬಾಲ್ಯದಲ್ಲಿಯೇ ಹಾವಿನ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದ ಬಿಲ್ ಹಾಸ್ಟ್, ಮೊದಲು ಶುರು ಮಾಡಿದ್ದು ಹಾವು ಹಿಡಿಯೋದನ್ನು. ಹಾವು ಹಿಡಿಯೋದನ್ನೇ ವೃತ್ತಿ ಮಾಡಿಕೊಂಡ ಬಿಲ್ ಹಾಸ್ಟ್, ಅದ್ರಲ್ಲಿ ಸಾಕಷ್ಟು ಸಂಶೋಧನೆ, ಪ್ರಯೋಗಗಳನ್ನು ಮಾಡಿದ್ರು.
ಊಟದ ಬಳಿಕ ದಿಢೀರ್ ಸ್ನಾನ ಮಾಡಿದ್ರೆ ಏನಾಗುತ್ತೆ? ಆರೋಗ್ಯ ತಜ್ಞರು ಕೊಟ್ಟ ಎಚ್ಚರಿಕೆ ಏನು?
ಬಿಲ್ ಹಾಸ್ಟ್ ಗೆ 172 ಬಾರಿ ಕಚ್ಚಿತ್ತು ಹಾವು : ಬಿಲ್ ಹಾಸ್ಟ್ 172 ಬಾರಿ ಹಾವಿನಿಂದ ಕಚ್ಚಿಸಿಕೊಂಡಿದ್ದರು. ಇದಕ್ಕೆ ಸೂಕ್ತ ಕಾರಣವಿತ್ತು. ಬಿಲ್ ಹಾಸ್ಟ್, ಮಾರಣಾಂತಿಕ ಹಾವುಗಳನ್ನು ಹಿಡಿದು, ಬರಿಗೈನಲ್ಲಿ ದವಡೆ ತೆರೆಯುತ್ತಿದ್ದರು. ನಂತರ ಹಲ್ಲಿಗೆ ರಬ್ಬರ್ ಪೊರೆ ಹಾಕಿ, ಗಾಜಿನ ಬಾಟಲಿಯಲ್ಲಿ ಹಾವಿನ ವಿಷವನ್ನು ಸಂಗ್ರಹಿಸುತ್ತಿದ್ದರು. ಪ್ರತಿವಿಷ (Antivenom)ವನ್ನು ತಯಾರಿಸಲು ವಿಷಕಾರಿ ಹಾವುಗಳನ್ನು ಹಿಡಿದು, ಇದೇ ಕೆಲಸವನ್ನು ಬಿಲ್ ಹಾಸ್ಟ್ ಪದೇ ಪದೇ ಮಾಡ್ಬೇಕಾಗಿತ್ತು. ಹಾಗಾಗಿ ಅವರು ಹಾವುಗಳಿಂದ ಕಚ್ಚಿಸಿಕೊಳ್ತಿದ್ದರು.
ಹಾವಿನ ವಿಷವನ್ನೇ ಇಂಜೆಕ್ಟ್ ಮಾಡಿಕೊಳ್ತಿದ್ದರು ಹಾಸ್ಟ್ : ಹಾವಿನ ವಿಷ ತೆಗೆಯುವ ಪ್ರಕ್ರಿಯೆಯಲ್ಲಿ ಆಗಾಗ ಹಾವಿನ ಕಡಿತಕ್ಕೆ ಒಳಗಾಗ್ತಿದ್ದ ಬಿಲ್ ಹಾಸ್ಟ್ ಜೀವಕ್ಕೆ ಅಪಾಯವಿತ್ತು. ಈ ವಿಷದಿಂದ ರಕ್ಷಣೆಪಡೆಯಲು ಅವರು ತಮ್ಮ ದೇಹಕ್ಕೆ ಹಾವಿನ ವಿಷ ಇಂಜೆಕ್ಟ್ ಮಾಡಲು ಶುರು ಮಾಡಿದ್ದರು. ನಾಗರ ಹಾವಿನ ವಿಷವನ್ನು ಅವರು ಇಂಜೆಕ್ಟ್ ಮಾಡಿಕೊಳ್ಳುತ್ತಿದ್ದರು. ಆರಂಭದಲ್ಲಿ ಡೋಸ್ ಕಡಿಮೆ ಇತ್ತು. ನಿಧಾನವಾಗಿ ಡೋಸ್ ಏರಿಸಿಕೊಂಡಿದ್ದರು. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿತ್ತು. ವಿಷದ ಹಾವು ಕಚ್ಚಿದಾಗ ಬಿಲ್ ಹಾಸ್ಟ್ ಹೆಚ್ಚು ಅಪಾಯಕ್ಕೆ ಒಳಗಾಗ್ತಿರಲಿಲ್ಲ.
ಬಿಲ್ ಹಾಸ್ಟ್, ದೇಹಕ್ಕೆ ವಿಷವನ್ನು ಇಂಜೆಕ್ಟ್ ಮಾಡಿಕೊಳ್ಳೋದು ಅಪಾಯಕಾರಿ ಎಂದು ಅನೇಕ ವೈದ್ಯರು ಹೇಳಿದ್ದರು. ಆದ್ರೆ ಬಿಲ್ ಹಾಸ್ಟ್ ಇದನ್ನು ಬಿಟ್ಟಿರಲಿಲ್ಲ. ಅಷ್ಟಾಗಿಯೂ ಅವರು 100 ವರ್ಷ ಬದುಕಿದ್ರು. ತಮ್ಮ 90ನೇ ವಯಸ್ಸಿನಲ್ಲಿಯೂ ಹಾಸ್ಟ್ ಆಕ್ಟಿವ್ ಆಗಿದ್ದರು. 1954 ರಲ್ಲಿ ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾದ ಬ್ಲೂ ಕ್ರೈಟ್ (Blue Crite)ನಿಂದ ಕಚ್ಚಿಸಿಕೊಂಡಿದ್ದರು. ಈ ಹಾವು ಕಚ್ಚಿದ ಮೇಲೂ ಬದುಕುಳಿದ ಏಕೈಕ ವ್ಯಕ್ತಿ ಅಂದ್ರೆ ಬಿಲ್ ಹಾಸ್ಟ್ ಮಾತ್ರ. ವಿಪರ್ಯಾಸ ಅಂದ್ರೆ ಅವರಿಗೆ ಕಚ್ಚಿದ ಹಾವು ಹತ್ತು ದಿನಗಳ ನಂತ್ರ ಸಾವನ್ನಪ್ಪಿತ್ತು. 20 ಬಾರಿ ಗಂಭೀರ ಸ್ಥಿತಿಗೆ ತಲುಪಿದ್ರೂ, ಅವರ ದೇಹದಲ್ಲಿದ್ದ ವಿಷ, ಹಾವಿನ ವಿಷದ ಜೊತೆ ಹೋರಾಡಿ ಗೆದ್ದಿತ್ತು.
ಯಾರಾದ್ರಾೂ ಒಂದೇ ದಿನ 23 ಹಲ್ಲು ಕೀಳ್ತಾರಾ? ಈ ಡೆಂಟಿಸ್ಟ್ ಕೆಲಸಕ್ಕೆ ಜೀವವೇ ಹೋಯ್ತು!
ಬಿಲ್ ಹಾಸ್ಟ್, ಫ್ಲೋರಿಡಾದಲ್ಲಿ ಮಿಯಾಮಿ ಸರ್ಪೆಂಟೇರಿಯಮ್ ತೆರೆದಿದ್ದರು. ಅಲ್ಲಿ ಎಲ್ಲಾ ರೀತಿಯ ವಿಷಕಾರಿ ಹಾವುಗಳಿದ್ದವು. ಜನರು, ಅಲ್ಲಿಗೆ ಭೇಟಿ ನೀಡಿ ಹಾವಿನ ಬಗ್ಗೆ ಮಾಹಿತಿ ಪಡೆಯಬಹುದಾಗಿತ್ತು. ಹಾವು ಕಡಿತದ ಚಿಕಿತ್ಸೆಗೆ ಬೇಕಾದ ಔಷಧಿ ತಯಾರಿಸಲು ಕಚ್ಚಾ ವಿಷವನ್ನು ಬಿಲ್ ಹಾಸ್ಟ್ ಸರಬರಾಜು ಮಾಡ್ತಿದ್ದರು. 1990 ರವರೆಗೆ ಪ್ರಯೋಗಾಲಯಗಳಿಗೆ ವಾರ್ಷಿಕವಾಗಿ 36,000 ಮಾದರಿಗಳನ್ನು ಅವರು ಒದಗಿಸುತ್ತಿದ್ದರು. ಒಂದೇ ಸಮಯದಲ್ಲಿ 10,000 ಹಾವುಗಳನ್ನು ನೋಡಿಕೊಳ್ಳುವ ಸಾಮರ್ಥ್ಯವನ್ನು ಬಿಲ್ ಹಾಸ್ಟ್ ಹೊಂದಿದ್ದರು.