ಹಲ್ಲು ನೋವು ಅಂತ ಡಾಕ್ಟರ್ ಬಳಿ ಹೋದ್ರೆ ಕೆಲ ಎಚ್ಚರಿಕೆ ತೆಗೆದ್ಕೊಳ್ಳಿ. ಒಂದೇ ದಿನ ಎಲ್ಲ ಹಲ್ಲನ್ನು ವೈದ್ಯರಿಗೆ ಕೊಟ್ಟು ಕೈ ತೊಳೆದ್ಕೊಳ್ಬೇಡಿ. ಹೊಸ ಹಲ್ಲು ಪಡೆಯೋ ಆತುರದಲ್ಲಿ ವ್ಯಕ್ತಿಯೊಬ್ಬ ಯಡವಟ್ಟು ಮಾಡ್ಕೊಂಡಿದ್ದಾನೆ.
ಹಲ್ಲು ನೋವು (toothache), ತಡೆಯಲಾರದ ಯಾತನೆ ನೀಡುತ್ತದೆ. ಕಣ್ಣಿಗೆ ಕಾಣದ, ಅನುಭವಿಸಲಾಗದ ನೋವುಗಳಲ್ಲಿ ಇದೂ ಒಂದು. ಹಲ್ಲಿನಲ್ಲಿ ನೋವು ಕಾಣಿಸಿಕೊಳ್ತಿದ್ದಂತೆ ಜನರು ವೈದ್ಯ (doctor) ರ ಬಳಿ ಓಡ್ತಾರೆ. ಹುಳು ತಿಂದಿರುವ ಹಲ್ಲನ್ನು ವೈದ್ಯರು ಕಿತ್ತು ಕೈಗೆ ಕೊಡ್ತಾರೆ. ನೋವು ಬೇಗ ಕಡಿಮೆ ಆಗ್ಬೇಕು ಎನ್ನವು ಆತುರದಲ್ಲಿ ಕೆಲವರು ಹೊಸ ಚಿಕಿತ್ಸೆಗಳಿಗೆ ಒಪ್ಪಿಕೊಳ್ತಾರೆ. ಇನ್ಮುಂದೆ ಹಲ್ಲಿನ ಆಸ್ಪತ್ರೆಗೆ ಹೋದಾಗ ಸ್ವಲ್ಪ ಎಚ್ಚರದಲ್ಲಿರಿ. ನಿಮಗೆ ಚಿಕಿತ್ಸೆ ನೀಡ್ತಿರುವ ವೈದ್ಯ ಅನುಭವಿಯೇ ಎಂಬುದನ್ನು ತಿಳಿಯೋ ಜೊತೆಗೆ ಒಂದೇ ದಿನ, ನಿಮ್ಮಿಷ್ಟದಂತೆ ಬಾಯಲ್ಲಿರೋ ಎಲ್ಲ ಹಲ್ಲು ಕಿತ್ತು, ಹೊಸ ಹಲ್ಲು ಜೋಡಿಸ್ತೇನೆ ಅಂದ್ರೆ ನೋ ಎನ್ನುವ ಉತ್ತರ ನಿಮ್ಮದಾಗಿರಲಿ. ಯಾಕೆಂದ್ರೆ ಚೀನಾದಲ್ಲಿ ವ್ಯಕ್ತಿಯೊಬ್ಬ 23 ಹಲ್ಲನ್ನು ಒಂದೇ ದಿನ ಕಿತ್ಕೊಂಡು ಈಗ ಇಹಲೋಕ ತ್ಯಜಿಸಿದ್ದಾನೆ. ಆತನ ಹಲ್ಲಿನ ಚಿಕಿತ್ಸೆಯೇ ಸಾವಿಗೆ ಕಾರಣವಾಗಿದೆ ಎನ್ನುವ ಅನುಮಾನ ದಟ್ಟವಾಗಿದೆ.
ಪೂರ್ವ ಚೀನಾ (East China)ದಲ್ಲಿ ಘಟನೆ ನಡೆದಿದೆ. ಹುವಾಂಗ್ ಎಂಬ ಹೆಸರಿನ ವ್ಯಕ್ತಿ, ಆಗಸ್ಟ್ 14 ರಂದು ಝೆಜಿಯಾಂಗ್ ಪ್ರಾಂತ್ಯದ ಜಿನ್ಹುವಾದಲ್ಲಿರುವ ಯೊಂಗ್ಕಾಂಗ್ ಡ್ಯೂ ಡೆಂಟಲ್ ಆಸ್ಪತ್ರೆಯಲ್ಲಿ ಹಲ್ಲಿನ ಚಿಕಿತ್ಸೆಗೆ ಒಳಗಾಗಿದ್ದಾನೆ. ಇಮಿಡಿಯೇಟ್ ರೀ ಸ್ಟೋರೇಷನ್ (Immediate Restoration) ಚಿಕಿತ್ಸೆ ಮಾಡಿಸ್ಕೊಂಡಿದ್ದಾನೆ. ವೈದ್ಯರು ಆತನ 23 ಹಲ್ಲುಗಳನ್ನು ಒಂದೇ ದಿನ ಕಿತ್ತಿದ್ದಾರೆ. ಅಷ್ಟೇ ಅಲ್ಲ 12 ಹಲ್ಲುಗಳನ್ನು ಇಂಪ್ಲಾಂಟ್ ಮಾಡಿದ್ದಾರೆ. ಈ ಚಿಕಿತ್ಸೆ ನಡೆದು ಎರಡು ವಾರಗಳ ನಂತರ ಹುವಾಂಗ್ ಹೃದಯಾಘಾತ (Heart attack) ದಿಂದ ಸಾವನ್ನಪ್ಪಿದ್ದಾನೆ.
undefined
ಸ್ತನ ದೊಡ್ಡದಿದ್ರೆ ಬ್ಯೂಟಿ ಹೆಚ್ಚುತ್ತೆಂದು ಬೀಗಬೇಡಿ, ಕ್ಯಾನ್ಸರ್‌ಗೂ ಮಾಡಿ ಕೊಡುತ್ತೆ ದಾರಿ!
ಹುವಾಂಗ್ ಸಾವಿನ ಸುದ್ದಿಯನ್ನು ಆತನ ಮಗಳು ಶು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ತಂದೆಯ ಹಠಾತ್ ಮರಣ, ಸಾವಿಗೆ ಮುನ್ನ ಹಲ್ಲಿನ ಚಿಕಿತ್ಸೆ ಹಾಗೂ ತಂದೆ ನಂತ್ರ ಅನುಭವಿಸಿದ ನೋವನ್ನು ಶು, ಎಲ್ಲರ ಮುಂದಿಟ್ಟಿದ್ದಾಳೆ. ಹುವಾಂಗ್, ಹಲ್ಲಿನ ಚಿಕಿತ್ಸೆಗೆ ಒಳಗಾಗಿ 13 ದಿನಗಳ ನಂತ್ರ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಹುವಾನ್ ಸಾವಿಗೆ ಹಲ್ಲಿನ ಚಿಕಿತ್ಸೆ ಕಾರಣವಾ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಹಲ್ಲು ಕೀಳುವ ಸಂದರ್ಭದಲ್ಲಿ ರೋಗಿಯ ಬಿಪಿ ಸೇರಿದಂತೆ ಕೆಲ ಪರೀಕ್ಷೆಗಳನ್ನು ವೈದ್ಯರು ಮಾಡ್ತಾರೆ. ಆದ್ರೆ ದಿನಕ್ಕೆ ಇಷ್ಟೇ ಹಲ್ಲು ಕೀಳಬೇಕು ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾರ್ಗಸೂಚಿ ಇಲ್ಲ. ಹೆಚ್ಚು ಅಂದ್ರೆ ಒಂದು ದಿನದಲ್ಲಿ 10 ಹಲ್ಲುಗಳನ್ನು ತೆಗೆಯಬಹುದು. ಅದಕ್ಕೆ ಅರ್ಹ ಹಾಗೂ ಅನುಭವಿ ದಂತ ವೈದ್ಯರ ಅಗತ್ಯವಿರುತ್ತದೆ. ರೋಗಿಯ ದೈಹಿಕ ಸ್ಥಿತಿ ಹೇಗಿದೆ ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ರೋಗಿ ಸ್ಥಿತಿ ನೋಡಿ, ಎಷ್ಟು ಹಲ್ಲನ್ನು ಕೀಳ್ಬೇಕು ಎಂಬ ನಿರ್ಧಾರವನ್ನು ವೈದ್ಯರು ಮಾಡ್ಬೇಕು.
ಶು, ಸೋಶಿಯಲ್ ಮೀಡಿಯಾದಲ್ಲಿ ಈ ವಿಷ್ಯವನ್ನು ಹಂಚಿಕೊಳ್ತಿದ್ದಂತೆ ಬಳಕೆದಾರರು ಶಾಕ್ ಆಗಿದ್ದಾರೆ. ಒಂದು ದಿನದಲ್ಲಿ 23 ಹಲ್ಲುಗಳನ್ನು ಕಿಳೋದು ಸಾಮಾನ್ಯ ವಿಷ್ಯವಲ್ಲ. ಆಸ್ಪತ್ರೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಬಳಕೆದಾರರು ಆಗ್ರಹಿಸಿದ್ದಾರೆ. ಇದನ್ನು ದಂತವೈದ್ಯರೊಬ್ಬರು ತೀವ್ರವಾಗಿ ಖಂಡಿಸಿದ್ದಾರೆ. ಇದನ್ನು ಚಿಕಿತ್ಸೆ ಎನ್ನುವ ಬದಲು ಮಾನವನ ಮೇಲೆ ಪ್ರಯೋಗ ಎನ್ನಬಹುದು ಎಂದಿದ್ದಾರೆ.
67ನೇ ವಯಸ್ಸಿನ ಮುಕೇಶ್ ಅಂಬಾನಿ ಆರೋಗ್ಯದ ಸೀಕ್ರೆಟ್ ಏನು? ಪ್ರತಿದಿನ ಸೇವಿಸುವ ಆಹಾರ ಏನು?
ಹಲ್ಲುಗಳು ದೇಹದ ಪ್ರಮುಖ ಭಾಗವಾಗಿದೆ. ಹಲ್ಲಿನ ಸೋಂಕು, ಪಯೋರಿಯಾ, ವಸಡು ಸಂಬಂಧಿ ಸಮಸ್ಯೆಗಳಂತಹ ಗಂಭೀರ ಸ್ಥಿತಿಯ ಸಂದರ್ಭದಲ್ಲಿ ಹಲ್ಲನ್ನು ಕೀಳುವಂತೆ ವೈದ್ಯರು ಸಲಹೆ ನೀಡುತ್ತಾರೆ. ಹಲ್ಲನ್ನು ತೆಗೆಯುವಾಗ ವೈದ್ಯರು ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಜಟಿಲ ಸಂದರ್ಭದಲ್ಲಿ ದಂತ ಶಸ್ತ್ರಚಿಕಿತ್ಸಕರ ಸಹಾಯವನ್ನು ವೈದ್ಯರು ಪಡೆಯುತ್ತಾರೆ. ಎಕ್ಸ್ ರೆ ಮೂಲಕ ಹಲ್ಲಿನ ಸ್ಥಿತಿಯನ್ನು ಗಮನಿಸಿ ನಂತ್ರ ಹಲ್ಲನ್ನು ಕೀಳಲಾಗುತ್ತದೆ.