
ಭಾರತದ ಪ್ರತಿಯೊಬ್ಬರ ಮನೆಯಲ್ಲೂ ನಾವು ಪ್ಯಾರಸಿಟಮಾಲ್ ಮಾತ್ರೆಯನ್ನು ನೋಡಬಹುದು. ಜ್ವರ ಬರಲಿ, ನೆಗಡಿಯಾಗ್ಲಿ ಇಲ್ಲ ಮೈ ಕೈ ನೋವಿರಲಿ ಜನ ಒಂದು ಪ್ಯಾರಸಿಟಮಾಲ್ ಮಾತ್ರೆ ತೆಗೆದುಕೊಂಡು ಮಲಗ್ತಾರೆ. ಭಾರತದಲ್ಲಿ ವೈದ್ಯರನ್ನು ಭೇಟಿಯಾಗದೆ ಜ್ವರಕ್ಕೆ ಪ್ಯಾರಸಿಟಮಾಲ್ ಮಾತ್ರೆ ತೆಗೆದುಕೊಳ್ಳುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ರೋಗಿಗೆ ಪ್ಯಾರಸಿಟಮಾಲ್ ಮಾತ್ರೆ ನೀಡುವಾಗ ಅದಕ್ಕೆ ಸಂಬಂಧಿಸಿ ವಿಷ್ಯವನ್ನು ನಾವು ತಿಳಿದುಕೊಂಡಿರಬೇಕು. ದಿನಕ್ಕೆ ಎಷ್ಟು ಪ್ಯಾರಸಿಟಮಾಲ್ ಮಾತ್ರೆ ತೆಗೆದುಕೊಳ್ಳಬೇಕು. ಯಾರು ತೆಗೆದುಕೊಳ್ಳಬಾರದು ಹಾಗೆ ತಪ್ಪಾದ ಮಾತ್ರೆ ಸೇವನೆಯಿಂದಾಗುವ ನಷ್ಟವೇನು ಎಂಬುದನ್ನು ನಾವಿಂದು ಹೇಳ್ತೆವೆ.
ಪ್ಯಾರಸಿಟಮಾಲ್ (Paracetamol), ಪ್ರೋಸ್ಟಗ್ಲಾಂಡಿನ್‌ಗಳ ಮೇಲೆ ಪರಿಣಾಮ ಬೀರುವ ಮೂಲಕ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ದೇಹವು ಜ್ವರ (Fever) ದಲ್ಲಿ ನಾವು ಪ್ಯಾರೆಸಿಟಮಾಲ್ ತೆಗೆದುಕೊಳ್ತೇವೆ. ಪ್ಯಾರೆಸಿಟಮಾಲ್, ದೇಹವನ್ನು ತಂಪು ಮಾಡಲು ಮೆದುಳಿನ ಭಾಗದಲ್ಲಿ ಕೆಲಸ ಮಾಡುತ್ತದೆ. ಆಗ ಇಡೀ ದೇಹದ ಉಷ್ಣತೆ (Warm) ನಿಯಂತ್ರಣಕ್ಕೆ ಬರುತ್ತದೆ.
ಈ ರೋಗ (Disease) ಗಳು ಬಳಸಬಾರದು ಪ್ಯಾರೆಸಿಟಮಾಲ್: ಶೀತ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿರುವವರು ಪ್ಯಾರೆಸಿಟಮಾಲ್ ಬಳಸುತ್ತಾರೆ. ಹಾಗೆಯೇ ಹಲ್ಲು ನೋವು, ಒಸಡುನೋವಿನಿಂದ ಬಳಲುವವರು ಕೂಡ ಇದನ್ನು ತೆಗೆದುಕೊಳ್ತಾರೆ. ಆದ್ರೆ ವಿಶೇಷವಾಗಿ ಯಕೃತ್ತು ಅಥವಾ ಮೂತ್ರಪಿಂಡಕ್ಕೆ ಸಂಬಂಧಿತ ಕಾಯಿಲೆ ಇರುವವರು ಇದನ್ನು ಬಳಸಬಾರದು. ಹಾಗೆಯೇ ಮದ್ಯ ಸೇವನೆ ಮಾಡುವವರು ಕೂಡ ಪ್ಯಾರಸಿಟಮಾಲ್ ಅನ್ನು ಅತ್ಯಂತ ಎಚ್ಚರಿಕೆಯಿಂದ ಅಥವಾ ವೈದ್ಯರ ಸಲಹೆ ಮೇರೆಗೆ ಬಳಸಬೇಕು.
ಮಕ್ಕಳು ಎರಡು ತಿಂಗಳಿಗಿಂತ ಕಡಿಮೆ ವಯಸ್ಸಿನವರಾಗಿದ್ದರೆ ಆ ಮಕ್ಕಳಿಗೆ ಪ್ಯಾರೆಸಿಟಮಾಲ್ ಅನ್ನು ನೀಡಬಾರದು. ಅತ್ಯಂತ ಮುಖ್ಯವಾದ ವಿಷಯವೆಂದರೆ ದಿನದ 24 ಗಂಟೆಗಳ ಒಳಗೆ ನೀವು 4 ಡೋಸ್‌ಗಳಿಗಿಂತ ಹೆಚ್ಚು ಪ್ಯಾರೆಸಿಟಮಾಲ್ ತೆಗೆದುಕೊಳ್ಳಬಾರದು. ಅಗತ್ಯವೆನ್ನಿಸಿದ್ರೆ ನೀವು ವೈದ್ಯರ ಸಲಹೆ ಪಡೆಯದೆ ಮಾತ್ರೆ ಸೀವಿಸಬಾರದು.
ಇದನ್ನೂ ಓದಿ: ಹುಬ್ಬುಗಳಲ್ಲಿ ನೋವು ಇದ್ಯಾ? ಇಲ್ಲಿದೆ ನೋಡಿ ಮನೆಮದ್ದು!
ಪ್ಯಾರೆಸಿಟಮಾಲ್ ತೆಗೆದುಕೊಳ್ಳೋದು ಹೀಗೆ ? : ಖಾಲಿ ಹೊಟ್ಟೆಯಲ್ಲಿ ಮಾತ್ರೆ ಸೇವನೆ ನಿಷಿದ್ಧ. ಗ್ಯಾಸ್ಟ್ರಿಕ್ ಹೊರತುಪಡಿಸಿ ಯಾವುದೇ ಖಾಯಿಲೆಯ ಮಾತ್ರೆಯನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬಾರದು. ಒಂದ್ವೇಳೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡ್ರೆ ಗ್ಯಾಸ್ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಆಮ್ಲೀಯತೆ ಸಮಸ್ಯೆ ಎದುರಾಗುತ್ತದೆ. ವೈದ್ಯರು ಹೇಳಿದಂತೆ ಮಾತ್ರೆ ಸೇವನೆ ಮಾಡ್ಬೇಕು. ಪ್ಯಾರಸಿಟಮಾಲ್ ಅನ್ನು ದಿನದಲ್ಲಿ ಎರಡು ಬಾರಿ ಸೇವನೆ ಮಾಡಬೇಕು. ಬೆಳಿಗ್ಗೆ ಉಪಹಾರದ ನಂತ್ರ ಹಾಗೂ ರಾತ್ರಿ ಊಟದ ನಂತ್ರ ಅದನ್ನು ತಿನ್ನುವಂತೆ ವೈದ್ಯರೇ ಸಲಹೆ ನೀಡ್ತಾರೆ. ಅಗತ್ಯವಿದೆ ಎನ್ನುವವರು ಆಹಾರ ಸೇವನೆ ಮಾಡಿ ನಂತ್ರ ಮಾತ್ರೆ ನುಂಗಬೇಕು. ಹೆಚ್ಚೆಂದ್ರೆ 24 ಗಂಟೆಯಲ್ಲಿ ನಾಲ್ಕು ಮಾತ್ರೆ ಮಾತ್ರ ಸೇವನೆ ಮಾಡಬಹುದು.
ಈ ಕಾಂಬಿನೇಷನ್ ನಲ್ಲಿ ಮಾತ್ರೆ ಸೇವನೆ ಬೇಡ : ಕೆಲವರು ಬಿಡದ ಖಾಯಿಲೆಗೆ ಪ್ರತಿ ದಿನ ಮಾತ್ರೆ ಸೇವನೆ ಮಾಡ್ತಿರುತ್ತಾರೆ. ಅಂಥವರು ಆ ಖಾಯಿಲೆ ಮಾತ್ರೆ ಜೊತೆ ಪ್ಯಾರಸಿಟಮಾಲ್ ನುಂಗ್ತಾರೆ. ಇದು ಎಲ್ಲ ಕಾಂಬಿನೇಷನ್ ನಲ್ಲಿ ಒಳ್ಳೆಯದಲ್ಲ. ಕೆಲ ಸಮಸ್ಯೆ ಇದ್ರಿಂದ ಉದ್ಭವವಾಗುವ ಸಾಧ್ಯತೆಯಿರುತ್ತದೆ.
ಇದನ್ನೂ ಓದಿ: ಧಮ್ ಎಳೆಯದೇ ಹೋದ್ರೂ ಮಹಿಳೆಯರನ್ನು ಹೆಚ್ಚು ಕಾಡ್ತಿದೆ Lung Cancer
ಕ್ಯಾನ್ಸರ್ ರೋಗಕ್ಕೆ ಬಳಸುವಂತಹ ಬುಸಲ್ಫಾನ್ ಜೊತೆ ಪ್ಯಾರಸಿಟಮಾಲ್ ನುಂಗಬೇಡಿ. ವಾಂತಿಯಿಂದ ನೆಮ್ಮದಿ ನೀಡುವ omperidone ಮಾತ್ರೆ ಸೇವನೆ ಮಾಡಿದ ನಂತ್ರವೂ ಪ್ಯಾರಸಿಟಮಾಲ್ ಸೇವನೆ ಮಾಡಬಾರದು. ಅಜೀರ್ಣ ಸೇರಿದಂತೆ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಮೆಟೊಕ್ಲೋಪ್ರಮೈಡ್ (Metoclopramide) ಜೊತೆ ಕೂಡ ಪ್ಯಾರಸಿಟಮಾಲ್ ಮಾತ್ರೆ ಸೇವನೆ ಮಾಡಬೇಡಿ. ಹಾಗೆ ಕೊಲೆಸ್ಟೈರಮೈನ್ ಜೊತೆಯೂ ನೀವು ಪ್ಯಾರಸಿಟಮಾಲ್ ಮಾತ್ರೆಯನ್ನು ಸೇವನೆ ಮಾಡಬಾರದು. ಇದ್ರಿಂದ ಮಾತ್ರೆ ನಿಮ್ಮ ಮೇಲೆ ಅಡ್ಡಪರಿಣಾಮ ಬೀರುತ್ತದೆ.
ವೈದ್ಯರ ಸಲಹೆ: ಪ್ಯಾರಸಿಟಮಲ್ ಎಲ್ಲರೂ ಬಳಸುವ ಮಾತ್ರೆ ನಿಜ. ಹಾಗಂತ ಬೇಕಾಬಿಟ್ಟ ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಅವರು ಹೇಳಿದಂತೆ ಮಾತ್ರೆ ಸೇವನೆ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.