
ಸೂರ್ಯನ ಬೆಳಕು ಅಂದಾಗ ನಮ್ಮ ತಲೆಯಲ್ಲಿ ಹೋಗೋದು ವಿಟಮಿನ್ ಡಿ. ದೇಹಕ್ಕೆ ಅತ್ಯಗತ್ಯವಾಗಿರುವ ವಿಟಮಿನ್ ಡಿ ಸೂರ್ಯನ ಕಿರಣದಿಂದ ಸಿಗುತ್ತದೆ. ಭಾರತದಲ್ಲಿ ಸೂರ್ಯನ ಕಿರಣಕ್ಕೆ ಕೊರತೆಯಿಲ್ಲ. ಆದ್ರೆ ವಿಟಮಿನ್ ಡಿಯಿಂದ ಬಳಲುವವರ ಸಂಖ್ಯೆ ಸಾಕಷ್ಟಿದೆ. ಭಾರತದಲ್ಲಿ ಶೇಕಡಾ 70ರಷ್ಟು ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಈಗಿನ ಕಾಲದಲ್ಲಿ ಜನರಿಗೆ ಸಮಯವಿಲ್ಲ. ಕೆಲಸದ ಕಾರಣ ಕಚೇರಿಯಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ. ಕೆಲವರು ಮನೆಯಿಂದ ಹೊರಗೆ ಬರೋದಿಲ್ಲ. ತಿಂಗಳುಗಟ್ಟಲೆ ಸೂರ್ಯನ ಬೆಳಕಿಗೆ ಮೈ ಒಡ್ಡದ ಜನರಿದ್ದಾರೆ. ಸೂರ್ಯನ ಬೆಳಕು ವಿಟಮಿನ್ ಡಿ ಮಾತ್ರ ನೀಡುವುದಲ್ಲದೆ ಇನ್ನೂ ಅನೇಕ ಪ್ರಯೋಜನಗಳನ್ನು ಹೊಂದಿದೆ. ನಾವಿಂದು ಸೂರ್ಯನ ಬೆಳಕಿನಲ್ಲಿ ಎಷ್ಟು ಗಂಟೆ ನಮ್ಮ ಮೈ ಒಡ್ಡಬೇಕು ಹಾಗೆ ಅದ್ರಿಂದ ಆಗುವ ಪ್ರಯೋಜನವೇನು ಎಂಬುದನ್ನು ಹೇಳ್ತೆವೆ.
ಸೂರ್ಯ (Sun) ನ ಕಿರಣ ಎಷ್ಟು ಹೊತ್ತು ಮೈಗೆ ತಾಕಬೇಕು ? : ಸೂರ್ಯೋದಯ (Sunrise) ದ ವೇಳೆ ಸೂರ್ಯನ ಬೆಳಕು ನಮ್ಮ ದೇಹವನ್ನು ಸ್ಪರ್ಶಿಸಿಬೇಕು ಎಂಬುದು ಅನೇಕರಿಗೆ ತಿಳಿದಿದೆ. ಆದ್ರೆ ಈ ಬೆಳಕಿನಲ್ಲಿ ಎಷ್ಟು ಹೊತ್ತು ಇರಬೇಕು ಎಂಬುದರ ಅರಿವಿಲ್ಲ. ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಎದ್ದವರು ಐದು ನಿಮಿಷ ಸೂರ್ಯನ ಕಿರಣ ಸ್ಪರ್ಶಿಸಿ ಹೋಗ್ತಾರೆ. ತಜ್ಞರ ಪ್ರಕಾರ, ಪ್ರತಿ ದಿನ 25 ರಿಂದ 30 ನಿಮಿಷಗಳ ಕಾಲ ಬಿಸಿಲಿನಲ್ಲಿ ಕುಳಿತುಕೊಳ್ಳುವುದು ದೇಹಕ್ಕೆ ಅಗತ್ಯ.
ಸೂರ್ಯೋದಯಕ್ಕೆ ಅರ್ಧ ಗಂಟೆ ಮೊದಲು ಹಾಗೂ ಸೂರ್ಯ ಮುಳುಗುವ ಅರ್ಧ ಗಂಟೆ ಮೊದಲು ನೀವು 20ರಿಂದ 25 ನಿಮಿಷ ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು. ಇದರಿಂದ ದೇಹಕ್ಕೆ ವಿಟಮಿನ್ ಡಿ (Vitamin D ) ಸಿಗುವುದಲ್ಲದೆ, ಮೂಳೆ ಬಲಪಡೆದು, ಆರೋಗ್ಯ ಸುಧಾರಿಸುತ್ತದೆ. ಅನೇಕ ಹಾರ್ಮೋನುಗಳ ಬಿಡುಗಡೆಗೆ ಇದು ನೆರವಾಗುತ್ತದೆ.
ಒಂದು ವರ್ಷದಲ್ಲಿ 40 ದಿನಗಳು 40 ನಿಮಿಷಗಳ ಕಾಲ ಸೂರ್ಯನ ಬೆಳಕಿನಲ್ಲಿರುವುದು ಅಗತ್ಯ. ಇದ್ರಿಂದ ವಿಟಮಿನ್ ಡಿ ಕೊರತೆ ಕಾಡುವುದಿಲ್ಲ. ಸೂರ್ಯನ ಕಿರಣಗಳು ಸರಿಯಾಗಿ ನಿಮ್ಮನ್ನು ಸ್ಪರ್ಶಿಸದೆ ಹೋದಾಗ ಹೃದಯ ರೋಗ, ಮೆಟಾಬಾಲಿಕ್ ಸಿಂಡ್ರೋಮ್, ಸಂತಾನೋತ್ಪತ್ತಿ ಸಮಸ್ಯೆ ಕಾಡುತ್ತದೆ.
20 ನಿಮಿಷ ಬಿಸಿಲಿನಲ್ಲಿ ಕುಳಿತ್ರೆ ಆಗುವ ಪ್ರಯೋಜನವೇನು? :
ಕಡಿಮೆಯಾಗುತ್ತೆ ಒತ್ತಡ: ಮೊದಲೇ ಹೇಳಿದಂತೆ ಸೂರ್ಯನ ಕಿರಣದಲ್ಲಿ ದೊಡ್ಡ ಶಕ್ತಿ ಅಡಗಿದೆ. ನೀವು ದಿನದಲ್ಲಿ 25ರಿಂದ 30 ನಿಮಿಷ ಬಿಸಿಲಿನಲ್ಲಿ ಕುಳಿತ್ರೆ ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ.
ನಿದ್ರೆ ಸಮಸ್ಯೆಗೆ ಪರಿಹಾರ: ದಿನದಲ್ಲಿ ಅದ್ರಲ್ಲೂ ಬೆಳಿಗ್ಗೆ 20 ನಿಮಿಷಗಳ ಕಾಲ ನೀವು ಸೂರ್ಯನ ಬೆಳಕಿನಲ್ಲಿದ್ದರೆ ನಿದ್ರೆ ಸಮಸ್ಯೆ ದೂರವಾಗುತ್ತದೆ. ಉತ್ತಮ ನಿದ್ರೆ ನಿಮಗೆ ಬರುತ್ತದೆ. ಸೂರ್ಯನ ಕಿರಣಗಳು ಸಿರ್ಕಾಡಿಯನ್ ಲಯವನ್ನು ನಿಯಂತ್ರಿಸುವ ಮೂಲಕ ಮೆಲಟೋನಿನ್ ಮಟ್ಟವನ್ನು ಯಾವಾಗ ಹೆಚ್ಚಿಸಬೇಕು, ಯಾವಾಗ ಕಡಿಮೆ ಮಾಡಬೇಕು ಎಂಬುದನ್ನು ತಿಳಿಸುತ್ತದೆ. ಹೆಚ್ಚು ಕಾಲ ಸೂರ್ಯನ ಬೆಳಕಿನಲ್ಲಿರುವ ವ್ಯಕ್ತಿಗೆ ಮಲಗುವ ಸಮಯದಲ್ಲಿ ಮೆಲಟೋನಿನ್ ಮಟ್ಟ ಹೆಚ್ಚಾಗುತ್ತದೆ.
ಕಿತ್ತಳೆ ಸಿಪ್ಪೆ ಬಿಸಾಕ್ಬೇಡಿ… ಚಹಾ ಮಾಡಿ ಕುಡಿದ್ರೆ ಹಲವು ರೋಗಕ್ಕೆ ಮದ್ದು
ರೋಗ ನಿರೋಧಕ ಶಕ್ತಿಯಲ್ಲಿ ಹೆಚ್ಚಳ : ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕೆಂದ್ರೆ ನೀವು ಪ್ರತಿ ದಿನ ಸೂರ್ಯನ ಬೆಳಕಿನಲ್ಲಿ ನಿಲ್ಲಬೇಕು. ಇದ್ರಿಂದ ದೇಹ ಶಕ್ತಿ ಪಡೆಯುತ್ತದೆ. ರೋಗಗಳ ವಿರುದ್ಧ ಹೋರಾಡುತ್ತದೆ. ಅನೇಕ ಸೋಂಕು, ಕ್ಯಾನ್ಸರ್ ಅಪಾಯವನ್ನು ಇದ್ರಿಂದ ಕಡಿಮೆ ಮಾಡಬಹುದು.
ಒಂಟಿತನ ಸಮಸ್ಯೆ ವಯಸ್ಸಾದವರಲ್ಲಿ ಹೆಚ್ಚಂತೆ, ಇದ್ಯಾಕೆ?
ಉತ್ತಮ ರಕ್ತದ ಹರಿವಿಗೆ ಒಳ್ಳೆಯದು : ಪ್ರತಿದಿನ 20 ನಿಮಿಷಗಳ ಕಾಲ ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳುವುದ್ರಿಂದ ದೇಹ ಶಾಖ ಪಡೆಯುತ್ತದೆ. ಚಳಿಯಿಂದ ರಕ್ತದ ನಾಳಗಳು ಕುಗ್ಗಿರುತ್ತದೆ. ಇದ್ರಿಂದ ರಕ್ತದ ಹರಿವು ನಿಧಾನವಾಗಿರುತ್ತದೆ. ಆದ್ರೆ ಮೈಗೆ ಬಿಸಿ ತಾಗುವುದ್ರಿಂದ ರಕ್ತ ಸಂಚಾರ ಸರಾಗವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.