ಕೂದಲುದುರಲು ನಾನಾ ಕಾರಣಗಳಿವೆ. ಇದಕ್ಕೆ ವಯಸ್ಸಿನ ಮಿತಿ ಕೂಡ ಇಲ್ಲ. ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರುವ ಸಮಸ್ಯೆ ಶುರುವಾಗ್ತಿದೆ. ಇದಕ್ಕೆ ನಮ್ಮ ಆಹಾರದಲ್ಲಿರುವ ಅತಿ ಮುಖ್ಯ ಪದಾರ್ಥವೂ ಒಂದು ಕಾರಣ ಎನ್ನುತ್ತಾರೆ ತಜ್ಞರು.
ಕೂದಲು (Hair) ಉದುರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ (Problem)ಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬರೂ ಕೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕರ ತಲೆ ಬೋಳಾಗಿದ್ದರೆ ಮತ್ತೆ ಕೆಲವರ ತಲೆಯಲ್ಲಿ ಬೆರಳೆಣಿಕೆಯಷ್ಟು ಕೂದಲಿದೆ. ಮಹಿಳೆ ಮತ್ತು ಪುರುಷ ಇಬ್ಬರಲ್ಲೂ ಇದು ಕಾಣಿಸಿಕೊಳ್ತದೆ. ಆಂಡ್ರೊಜೆನೆಟಿಕ್ ಅಲೋಪೆಸಿಯಾ ಕೂದಲುದುರಲು ಒಂದು ಕಾರಣವಾಗಿದೆ. ಸಾಮಾನ್ಯವಾಗಿ 50 ವರ್ಷ ಮೇಲ್ಪಟ್ಟ ಪುರುಷರು ಹಾಗೂ 65 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೂದಲುದುರಲು ವಯಸ್ಸು ಮಾತ್ರ ಕಾರಣವಲ್ಲ. ಇತ್ತೀಚಿನ ದಿನಗಳಲ್ಲಿ ಕಡಿಮೆ ವಯಸ್ಸಿನವರಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಕೂದಲು ಉದುರುತ್ತಿದೆ. ತಜ್ಞರು ಇದಕ್ಕೆ ಕಾರಣವೇನು ಎಂಬುದನ್ನು ಹೇಳಿದ್ದಾರೆ. ನಾವು ಸೇವಿಸುವ ಯಾವ ಆಹಾರದಿಂದ ಈ ಸಮಸ್ಯೆ ಅತಿಯಾಗಿ ನಮ್ಮನ್ನು ಕಾಡುತ್ತದೆ ಎಂಬುದನ್ನೂ ತಜ್ಞರು ಹೇಳಿದ್ದಾರೆ. ಇಂದು ಕೂದಲುದುರಲು ಏನು ಕಾರಣ ಹಾಗೆ ಅದಕ್ಕೆ ಪರಿಹಾರವೇನು ಎಂಬುದನ್ನು ನಾವು ನೋಡೋಣ.
ಏನು ಹೇಳ್ತಾರೆ ತಜ್ಞರು ? : ಯುಕೆ (UK)ಯ ಪ್ರಸಿದ್ಧ ಟ್ರೈಕಾಲಜಿಸ್ಟ್ ಕೆವಿನ್ ಮೂರ್ ಇದಕ್ಕೆ ಕಾರಣವೇನು ಎಂಬುದನ್ನು ಹೇಳಿದ್ದಾರೆ. ಅವರ ಪ್ರಕಾರ, ಆಹಾರದಲ್ಲಿ ಹೆಚ್ಚಿನ ಉಪ್ಪು (Salt) ಖಂಡಿತವಾಗಿಯೂ ನಿಮ್ಮ ಕೂದಲಿನ ಆರೋಗ್ಯಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡುತ್ತದೆ ಮತ್ತು ಕೂದಲು ಉದುರಲು ಶುರುವಾಗುತ್ತೆ.
undefined
HEALTH TIPS: ನಿಮ್ಮ ಕಾಸ್ಮೆಟಿಕ್‌ಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ
ಅತಿಯಾದ ಉಪ್ಪು ಸೇವನೆ ಬಿಟ್ಬಿಡಿ: ಅತಿಯಾದ ಉಪ್ಪನ್ನು ತಿನ್ನುವುದು ಸೋಡಿಯಂ ರಚನೆಗೆ ಕಾರಣವಾಗುತ್ತದೆ. ಇದು ಕೂದಲಿನ ಕಿರುಚೀಲಗಳ ಸುತ್ತಲೂ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಇದು ಕೂದಲಿನ ಕೋಶಕದ ರಕ್ತ ಪರಿಚಲನೆಗೆ ಅಡ್ಡಿಯುಂಟು ಮಾಡುತ್ತದೆ. ಈ ಕಾರಣದಿಂದಾಗಿ ಅಗತ್ಯವಾದ ಪೋಷಕಾಂಶಗಳು ಕೂದಲಿನ ಕಿರುಚೀಲಗಳನ್ನು ತಲುಪುವುದಿಲ್ಲ. ಇದಲ್ಲದೆ ಹೆಚ್ಚಿನ ಪ್ರಮಾಣದ ಸೋಡಿಯಂ ಕೂದಲನ್ನು ನಿರ್ಜೀವಗೊಳಿಸುತ್ತದೆ ಮತ್ತು ದುರ್ಬಲಗೊಳಿಸುತ್ತದೆ. ಇದು ಕೊನೆಯಲ್ಲಿ ಕೂದಲು ಉದುರಲು ಕಾರಣವಾಗುತ್ತದೆ. ಆದಾಗ್ಯೂ, ತುಂಬಾ ಕಡಿಮೆ ಸೋಡಿಯಂ ಕೂಡ ಕೂದಲು ಬೆಳವಣಿಗೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ತುಂಬಾ ಕಡಿಮೆ ಉಪ್ಪನ್ನು ತಿನ್ನುವುದು ದೇಹದಲ್ಲಿ ಅಯೋಡಿನ್ ಕೊರತೆಗೆ ಕಾರಣವಾಗುತ್ತದೆ. ಇದು ಥೈರಾಯ್ಡ್ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಉತ್ತಮ ಥೈರಾಯ್ಡ್ ಕಾರ್ಯಕ್ಕೆ ಉಪ್ಪಿನ ಸೇವನೆಯ ಅವಶ್ಯಕತೆಯಿದೆ. ಇದಲ್ಲದೆ, ಥೈರಾಯ್ಡ್ ಅಸಮತೋಲನವಾಗಿದ್ದರೆ, ನಿಮ್ಮ ಕೂದಲಿನ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಕೂದಲು ನಿರ್ಜೀವ ಮತ್ತು ತೆಳುವಾಗುತ್ತದೆ.
ಕೂದಲು ಗಟ್ಟಿಯಾಗುವುದು ಹೇಗೆ? : ತಜ್ಞರ ಪ್ರಕಾರ, ಕೂದಲಿನ ಬಲವು ನಿಮ್ಮ ಆಹಾರದಲ್ಲಿದೆ. ನೀವು ಜೀವಸತ್ವಗಳು ಮತ್ತು ಖನಿಜಯುಕ್ತ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬೇಕಾಗುತ್ತದೆ. ಕಬ್ಬಿಣ ಮತ್ತು ವಿಟಮಿನ್ ಬಿ5 ಕೂದಲು ತೆಳುವಾಗುವುದನ್ನು ತಡೆಯುತ್ತದೆ ಮತ್ತು ನೆತ್ತಿಯನ್ನು ಆರೋಗ್ಯಕರವಾಗಿಸುತ್ತದೆ. ಆದರೆ ಕೂದಲಿನ ಶಕ್ತಿ ಮತ್ತು ಹೊಳಪಿಗೆ ಪ್ರೋಟೀನ್ ಅತ್ಯಗತ್ಯ.
ದೇಹಕ್ಕೆ ಬೇಕು ಇಷ್ಟು ಉಪ್ಪು : ನರ ಮತ್ತು ಸ್ನಾಯುವಿನ ಉತ್ತಮ ಕಾರ್ಯಕ್ಕೆ ಉಪ್ಪಿನ ಅವಶ್ಯಕತೆಯಿದೆ. ಆದರೆ ಅತಿಯಾದ ಸೇವನೆ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ತಜ್ಞರ ಪ್ರಕಾರ, ವಯಸ್ಕರು ದಿನಕ್ಕೆ 6 ಗ್ರಾಂ ಗಿಂತ ಹೆಚ್ಚು ಉಪ್ಪನ್ನು ಸೇವಿಸಬಾರದು. ಇದು ಸುಮಾರು ಒಂದು ಚಮಚದಷ್ಟಾಗುತ್ತದೆ. ಇದ್ರಲ್ಲಿ 2.4 ಗ್ರಾಂ ಸೋಡಿಯಂ ಇರುತ್ತದೆ. ಆಹಾರ ತಯಾರಿಸುವಾಗ ಹಾಗೂ ಆಹಾರ ಸೇವನೆ ಮಾಡುವಾಗ ನೀವು ಎಷ್ಟು ಉಪ್ಪು ಸೇವನೆ ಮಾಡ್ತಿದ್ದೀರಿ ಎಂಬುದನ್ನು ನೀವು ಟ್ರ್ಯಾಕ್ ಮಾಡಬಹುದು.
Toxic Positivity: ಖುಷಿಯಾಗಿರಬೇಕೆಂಬುದೇ ಒತ್ತಡವಾಗಿ ನಿಮ್ಮನ್ನ ಕಾಡ್ತಾ ಇದ್ಯಾ?
ಯಾವ ಆಹಾರದಲ್ಲಿರುತ್ತೆ ಹೆಚ್ಚು ಉಪ್ಪು ? : ಟೊಮೆಟೊ ಸಾಸ್, ಪ್ಯಾಕ್ ಮಾಡಿದ ಆಹಾರಗಳು, ಬ್ರೆಡ್‌ಗಳು, ರೆಡಿ-ಟು-ಈಟ್ ಆಹಾರಗಳು, ಪಿಜ್ಜಾ, ಸ್ಯಾಂಡ್‌ವಿಚ್‌ಗಳು ಮತ್ತು ಸೂಪ್ ಗಳಲ್ಲಿ ಮೊದಲೇ ಉಪ್ಪಿರುತ್ತದೆ. ಹಾಗಾಗಿ ಇವುಗಳನ್ನು ಖರೀದಿಸುವಾಗ ಅವುಗಳಲ್ಲಿ ಎಷ್ಟು ಪ್ರಮಾಣದ ಉಪ್ಪಿದೆ ಎಂಬುದನ್ನು ಗಮನಿಸಿ.