ಹಲ್ಲಿನ ಬಗ್ಗೆ ನಿಮಗೂ ಭಯ ಇದ್ಯಾ? ಕಾಡ್ತಿರಬಹುದು ಡೆಂಟಲ್ ಎಂಕ್ಸೈಟಿ

By Suvarna News  |  First Published Mar 7, 2024, 5:10 PM IST

ಹಲ್ಲಿನಲ್ಲಿ ನಮ್ಮ ಆರೋಗ್ಯ ಅಡಗಿದೆ. ಅನೇಕ ರೋಗಕ್ಕೆ ಹಲ್ಲು ಕಾರಣವಾದ್ರೆ ಮತ್ತೆ ಕೆಲ ರೋಗಗಳ ಲಕ್ಷಣ ಹಲ್ಲಿನಲ್ಲೇ ಪತ್ತೆಯಾಗುತ್ತೆ. ಈ ಹಲ್ಲಿನ ಬಗ್ಗೆ ಅನೇಕರಿಗೆ ವಿಚಿತ್ರ ಭಯ ಇರೋದನ್ನು ನೀವು ನೋಡ್ಬಹುದು. ಅದು ದೈಹಿಕವಲ್ಲ ಮಾನಸಿಕ ಖಾಯಿಲೆ ಅನ್ನೋದು ನಿಮಗೆ ಗೊತ್ತಾ?
 


ಹಲ್ಲು ನಮ್ಮ ದೇಹದ ಕಾರ್ಯಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಲ್ಲಿನ ಆರೋಗ್ಯ ಚೆನ್ನಾಗಿದ್ದಾಗ ಮಾತ್ರ ನಾವು ಆಹಾರವನ್ನು ಚೆನ್ನಾಗಿ ಅಗಿಯಲು ಸಾಧ್ಯ. ಒಮ್ಮೆ ಹಲ್ಲಿನ ಸಮಸ್ಯೆ ಆರಂಭವಾಯಿತೆಂದರೆ ಇದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಅನೇಕ ಮಂದಿ ಹಲ್ಲಿನ ಸಮಸ್ಯೆಗೆ ಹೆದರಿ ಆಹಾರ ಸೇವನೆಯನ್ನೇ ಕಡಿಮೆ ಮಾಡುತ್ತಾರೆ ಅಥವಾ ಕೆಲವು ಆಹಾರದಿಂದ ದೂರವಿರುತ್ತಾರೆ. ಆಹಾರ ಸೇವಿಸುವಾಗಲೂ ಅವರಿಗೆ ಹಲ್ಲು ನೋವಿನ ಬಗ್ಗೆಯೇ ಚಿಂತೆ ಇರುತ್ತದೆ. ಆತಂಕದಲ್ಲಿ ಅನೇಕ ವಿಧಾನಗಳಿವೆ. ಹಲ್ಲಿನ ಎಂಕ್ಸೈಟಿ ಕೂಡ ಇದರಲ್ಲಿ ಒಂದು. ಡೆಂಟಲ್ ಎಂಕ್ಸೈಟಿ ಬಗ್ಗೆ ನಾವಿಂದು ಮಾಹಿತಿ ನೀಡ್ತೇವೆ. 

ಡೆಂಟಲ್ (Dental)  ಎಂಕ್ಸೈಟಿ (Anxiety) ಅಥವಾ ಹಲ್ಲಿನ ಆತಂಕದ ಸಮಸ್ಯೆ ಇರುವ ವ್ಯಕ್ತಿ ಹಲ್ಲಿಗೆ ಸಂಬಂಧಿಸಿದ ತೊಂದರೆಯೊಂದಿಗೆ ಮಾನಸಿಕ (Mental) ಸಮಸ್ಯೆಗಳನ್ನು ಕೂಡ ಎದುರಿಸುತ್ತಾನೆ. ಡೆಂಟಲ್ ಎಂಕ್ಸೈಟಿ ಹಲ್ಲಿನ ರೋಗಿಗಳಲ್ಲಿ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಭಯವನ್ನು ಉಂಟುಮಾಡುತ್ತದೆ. ಇದರಿಂದ ಗಂಭೀರ ಸಮಸ್ಯೆಗಳು ಉಂಟಾಗುತ್ತವೆ. ಒಮ್ಮೆ ಹಲ್ಲಿನ ಬಗ್ಗೆ ಆತಂಕ ಆರಂಭವಾಯಿತೆಂದರೆ,  ಆ ವ್ಯಕ್ತಿ ಆಹಾರ (Food) ಸೇವಿಸಲೂ ಭಯಪಡುತ್ತಾನೆ ಹಾಗೂ ದಂತ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಲೂ ಹೆದರುತ್ತಾನೆ. ಹಲ್ಲಿನ ಕುರಿತು ಆತಂಕ ಹೊಂದಿರುವ ವ್ಯಕ್ತಿಗೆ ವೈದ್ಯಕೀಯ ಪ್ರಕ್ರಿಯೆಗಳ ಬಗ್ಗೆ ಚಿಂತೆ ಹಾಗೂ ಹೆದರಿಕೆ ಕಾಡುತ್ತದೆ. ಇದು ಚಿಕ್ಕ ಮಕ್ಕಳಲ್ಲಿ ಹಾಗೂ ದೊಡ್ಡವರಲ್ಲಿ ಯಾರಲ್ಲಿ ಬೇಕಾದರೂ ಉಂಟಾಗಬಹುದು.

Tap to resize

Latest Videos

SEXUAL HEALTH: ಲೈಂಗಿಕ ಆರೋಗ್ಯದ ಮೇಲೆ ಪ್ರಭಾವ ಬೀರಿದ ಕೊರೊನಾ!

ಹಲ್ಲಿನ ಆತಂಕದ ಲಕ್ಷಣಗಳು ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ತಜ್ಞರು ಹೇಳುತ್ತಾರೆ.  ಇಂತಹ ರೋಗಕ್ಕೆ ಮದ್ದಿದೆ. ಈ ರೋಗ ಲಕ್ಷಣಗಳನ್ನು ಸರಿಯಾದ ಸಮಯದಲ್ಲಿ ಗುರುತಿಸಿ, ರೋಗಿಯಿಂದ ಭಯವನ್ನು ತೆಗೆದುಹಾಕುವ ಮೂಲಕ ಡೆಂಟಲ್ ಎಂಕ್ಸೈಟಿಯನ್ನು ಗುಣಪಡಿಸಬಹುದು.

ಡೆಂಟಲ್ ಎಂಕ್ಸೈಟಿಯ ಲಕ್ಷಣಗಳು :

• ದಂತ ಚಿಕಿತ್ಸೆಯ ಪ್ರಕ್ರಿಯೆಗಳ ಬಗ್ಗೆ ಹೆಚ್ಚು ಚಿಂತೆ ಮತ್ತು ಆತಂಕ
• ಹಲ್ಲಿನ ಆಸ್ಪತ್ರೆಗೆ ಹೋಗುವುದನ್ನು ತಪ್ಪಿಸುವುದು
• ಹಲ್ಲಿನ ಶುಚಿಗೊಳಿಸುವಿಕೆ ಮತ್ತು ತಪಾಸಣೆಯನ್ನು ತಪ್ಪಿಸುವುದು
• ಹಲ್ಲಿನ ಚಿಕಿತ್ಸೆಯ ಆಲೋಚನೆಯಲ್ಲಿ ಆತಂಕ ಹಾಗೂ ಚಿಕಿತ್ಸೆಯ ಸಮಯದಲ್ಲಿ ಅತಿಯಾದ ಒತ್ತಡ
• ನಿದ್ರೆಗೆ ಸಂಬಂಧಿಸಿದ ಸಮಸ್ಯೆ
• ಹಲ್ಲು ನೋವಿನ ಭಯದಿಂದ ಊಟ ಬಿಡುವುದು.

ಥೈರಾಯ್ಡ್‌ ಮಟ್ಟ ದೇಹದಲ್ಲಿ ಸಾಕಷ್ಟಿಲ್ಲವಾದರೆ ಬೆಳಗ್ಗೆ ಎದ್ದಾಕ್ಷಣ ಹೀಗೆಲ್ಲ ಆಗುತ್ತೆ, ಗಮನಿಸಿ

ಡೆಂಟಲ್ ಎಂಕ್ಸೈಟಿಯ ಕಾರಣಗಳು :  ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಸ್ಥಿತಿಗೆ ಅನುಗುಣವಾಗಿ ಹಲ್ಲಿನ ಆತಂಕದ ಕಾರಣಗಳು ಕೂಡ ಬದಲಾಗಬಹುದು. ಹಲ್ಲಿನ ಆತಂಕಕ್ಕೆ ಕೆಲವು ಪ್ರಮುಖ ಕಾರಣಗಳು ಹೀಗಿವೆ.
• ಒಬ್ಬ ವ್ಯಕ್ತಿ ಈಗಾಗಲೇ ಹಲ್ಲಿನ ತೊಂದರೆಗೆ ಒಳಗಾಗಿ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದರೆ, ಆ ಸಮಯದಲ್ಲಿ ಆತನಿಗೆ ಸಮಸ್ಯೆ ಕಾಡಿದ್ದರೆ ಆತ ಹಲ್ಲಿನ ಆತಂಕವನ್ನು ಹೊಂದಬಹುದು.
• ಕೆಲವರಿಗೆ ವೈದ್ಯರ ಭಯ ಅಥವಾ ತಾನು ಸುರಕ್ಷಿತವಾಗಿಲ್ಲ ಎನ್ನುವ ಭಾವನೆ ಬಂದಾಗಲೂ ಅವರು ವೈದ್ಯಕೀಯ ಪ್ರಕ್ರಿಯೆಗಳಿಂದ ದೂರವಿರಲು ಪ್ರಯತ್ನಿಸಬಹುದು.
• ಹಲ್ಲಿನ ಚಿಕಿತ್ಸೆಯ ಸಮಯದಲ್ಲಾದ ನೋವು ಅಥವಾ ಅಹಿತಕರ ಅನುಭವದಿಂದಲೂ ಹಲ್ಲಿನ ಆತಂಕ ಉಂಟಾಗಬಹುದು.
• ಆತ್ಮವಿಶ್ವಾಸದ ಕೊರತೆಯೂ ಡೆಂಟಲ್ ಎಂಕ್ಸೈಟಿಗೆ ಕಾರಣವಾಗಿರಬಹುದು.

ಹಲ್ಲಿನ ಆತಂಕದಿಂದ ಬಚಾವಾಗೋದು ಹೇಗೆ? : ಡೆಂಟಲ್ ಎಂಕ್ಸೈಟಿಯ ಬಗ್ಗೆ ತಜ್ಞರ ಬಳಿ ಸಮಾಲೋಚನೆ ನಡೆಸುವುದು ಮುಖ್ಯವಾಗಿದೆ. ನಿಮ್ಮ ಆತಂಕ ಮತ್ತು ಭಯದ ಬಗ್ಗೆ ವೈದ್ಯರೊಂದಿಗೆ ಮಾತನಾಡುವುದರಿಂದ ನಿಮ್ಮ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಡೆಂಟಲ್ ಎಂಕ್ಸೈಟಿ ಒಂದು ರೀತಿಯ ಮಾನಸಿಕ ಸ್ಥಿತಿಯಾಗಿದ್ದು, ಹಲ್ಲಿನ ಸಮಸ್ಯೆಗೆ ಸಂಬಂಧಿಸಿದ ಭಯವನ್ನು ತೊಡೆದುಹಾಕುವ ಮೂಲಕ ನೀವು ಅದನ್ನು ನಿವಾರಿಸಿಕೊಳ್ಳಬಹುದು.

click me!