ಎರಡೂ ಕೈ ಕಳ್ಕೊಂಡಿದ್ದ ಪೇಂಟರ್‌ಗೆ ಮಹಿಳೆ ಕೈ ಜೋಡಣೆ ಯಶಸ್ವಿ!

By Santosh NaikFirst Published Mar 6, 2024, 5:09 PM IST
Highlights

ಎರಡೂ ಕೈಗಳನ್ನು ಕಳೆದುಕೊಂಡಿದ್ದ ದೆಹಲಿಯ 45 ವರ್ಷದ ಪೇಂಟರ್‌ಗೆ ಮಹಿಳೆಯೊಬ್ಬಳು ಎರಡೂ ಕೈಗಳನ್ನು ಜೋಡಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆಯ ಅತ್ಯಂತ ಮೈಲಿಗಲ್ಲಿನ ಸಂಗತಿ ಇದಾಗಿದ್ದು, ಇಂಥಾ ಶಸ್ತ್ರಚಿಕಿತ್ಸೆ ನಡೆದಿದ್ದು ಇದೇ ಮೊದಲಾಗಿದೆ. ನಾಳೆ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲಿದ್ದಾರೆ.
 

ನವದೆಹಲಿ (ಮಾ.6): ದುರ್ಘಟನೆಯೊಂದರಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದ ದೆಹಲಿ ಮೂಲದ ಪೇಂಟರ್‌ಗೆ ಈಗ ಮತ್ತೆ ಬ್ರಶ್‌ ಹಿಡಿಯಲು ಸಾಧ್ಯವಾಗಲಿದೆ. ಅದಕ್ಕೆ ಕಾರಣವಾಗಿದ್ದು ಭಾರತದ ಅತ್ಯಂತ ಮಹತ್ವದ ಶಸ್ತ್ರಚಿಕಿತ್ಸೆ. ಮಹಿಳೆಯೊಬ್ಬಳು ತನ್ನ ಸಾವಿನ ಬಳಿಕ ಅಂಗಾಂಗವನ್ನು ದಾನ ಮಾಡಬೇಕು ಎಂದು ಆಸೆ ಪಟ್ಟಿದ್ದರು. ಅದರಂತೆ ಆಕೆಯ ಸಾವಿನ ಬಳಿಕ ಅಂಗಾಂಗ ದಾನ ಮಾಡಿ ನಾಲ್ಕು ಜೀವವನ್ನು ಉಳಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ದೆಹಲಿಯ ವೈದ್ಯರು ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ಮಹಿಳೆಯ ಎರಡು ಕೈಗಳನ್ನು ಪೇಂಟರ್‌ಗೆ ಜೋಡಿಸುವಮೂಲಕ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇಂಥ ಶಸ್ತ್ರಚಿಕಿತ್ಸೆ ದೇಶದಲ್ಲಿಯೇ ಇದೇ ಮೊದಲು ಎನ್ನಲಾಗಿದೆ. ದೆಹಲಿಯಲ್ಲಿ ನಡೆದ ಮೊಟ್ಟಮೊದಲ ಎರಡೂ ಕೈಗಳ ಯಶಸ್ವಿ ಕಸಿ ಶಸ್ತ್ರಚಿಕಿತ್ಸೆ ಇದಾಗಿದೆ. ಶ್ರೀ ಗಂಗಾ ರಾಮ್‌ ಆಸ್ಪತ್ರೆಯಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ವ್ಯಕ್ತಿ ಗುರುವಾರ ಡಿಸ್ಚಾರ್ಜ್‌ ಆಗಲಿದ್ದಾರೆ. 2020ರಲ್ಲಿ ನಡೆದ ರೈಲು ಅಪಘಾತದಲ್ಲಿ 45 ವರ್ಷದ ವ್ಯಕ್ತಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ತೀರಾ ಬಡ ಕುಟುಂಬವಾಗಿದ್ದ ಕಾರಣದಿಂದಾಗಿ ತಮ್ಮ ಜೀವನ ಮುಗಿದೇ ಹೋಯಿತು ಎನ್ನುವ ಅರ್ಥದಲ್ಲಿ ಅವರು ಬದುಕಲು ಆರಂಭಿಸಿದ್ದರು.

ಆದರೆ, ಅಚ್ಚರಿಗಳು ಹೇಗೆ ಬೇಕಾದರೂ ಸಂಭವಿಸಬಹುದು. ಕೆಲದ ದಿನಗಳ ಹಿಂದೆ ದಕ್ಷಿಣ ದೆಹಲಿಯ ಪ್ರಮುಖ ಶಾಲೆಯೊಂದಿಗೆ ಮಾಜಿ ಆಡಳಿತಾಧಿಕಾರಿಯಾಗಿದ್ದ ಮೀನಾ ಮೆಹ್ತಾ 'ಬ್ರೇನ್‌ ಡೆಡ್‌' ಆಗಿ ಸಾವು ಕಂಡಿದ್ದರು. ಆದರೆ, ದೆಹಲಿಯ ಪೇಂಟರ್‌ ಪಾಲಿಗೆ ಇವರು ಸಾವಿನಲ್ಲೂ ದೊಡ್ಡ ಉಡುಗೊರೆ ನೀಡಿ ಹೋಗಿದ್ದಾರೆ. ತಮ್ಮ ಸಾವಿನ ಬಳಿಕ ದೇಹದಲ್ಲಿ ಬಳಕೆ ಆಗಬಹುದಾದ ಅಂಗಾಂಗಗಳನ್ನು ದಾನ ಮಾಡಬೇಕು ಎಂದು ಬಯಸಿದ್ದರು.  ಆಕೆಯ ಮೂತ್ರಪಿಂಡ, ಯಕೃತ್ತು ಮತ್ತು ಕಾರ್ನಿಯಾಗಳನ್ನು ಇತರ ಮೂವರ ಜೀವ ಉಳಿಸಲು ಕಾರಣವಾಗಿದೆ. ಇನ್ನು ಆಕೆಯ ಎರಡು ಕೈಗಳು ಪೇಂಟರ್‌ ಒಬ್ಬರ ಜೀವನವನ್ನು ಮರಳಿ ನಿರ್ಮಿಸಲು, ಮತ್ತೊಮ್ಮೆ ಬ್ರಶ್‌ ಹಿಡಿಯಲು ಕಾರಣವಾಗಲಿದೆ.

'ಸರ್ಕಾರಿ ಗೌರವದೊಂದಿಗೆ ಅಂಗಾಂಗ ದಾನ ಮಾಡಿದವರ ಅಂತ್ಯಸಂಸ್ಕಾರ..' ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಘೋಷಣೆ!

ಆದರೆ, ಇಂಥ ಮಹತ್ವದ ಟಾಸ್ಕ್‌ಅನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣ ಮಾಡಿದ ದೆಹಲಿಯ ಆಸ್ಪತ್ರಯ ವೈದ್ಯರು ಖಂಡಿತವಾಗಿಗೂ ಅಭಿನಂದನೆಗೆ ಅರ್ಹರಾಗಿದ್ದಾರೆ. ಬರೋಬ್ಬರಿ 12 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ದಾನಿಯ ಕೈಗಳನ್ನು ಪೇಂಟರ್‌ ಅವರ ತೋಳುಗಳ ಪ್ರತಿ ನರಗಳು, ಸ್ನಾಯು, ಸ್ನಾಯುರಜ್ಜುಗಳೊಂದಿಗೆ ಸಂಪರ್ಕಿಸಲಾಗಿದೆ. ಕೊನೆಗೆ ವೈದ್ಯರ ಅತ್ಯಂತ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿತ್ತು.ಕೊನೆಗೆ ಕೈಗಳನ್ನು ಪಡೆದುಕೊಂಡ ವ್ಯಕ್ತಿಯ ಥಂಬ್ಸ್‌ಅಪ್‌ ಪೋಸ್‌ ಜೊತೆ ವೈದ್ಯರು ತೆಗೆಸಿಕೊಂಡ ಫೋಟೋ ಇಡೀ ಶಸ್ತ್ರಚಿಕಿತ್ಸೆಯ ಹೈಲೈಟ್‌ ಕೂಡ ಆಗಿತ್ತು.

ಸಾಯೋನಿಗೆ ಯಾವ ಧರ್ಮವಾದರೇನು, ಹಿಂದು-ಮುಸ್ಲಿಂ ಕಿಡ್ನಿ ಅದಲು ಬದಲು!

 

click me!