ನೀವು ಕೂಡ ಚಹಾ ಕುಡಿದ ತಕ್ಷಣ ನೀರು ಕುಡಿಯಲ್ಲ ತಾನೇ? ಸಣ್ಣ ತಪ್ಪಿನಿಂದ ದೊಡ್ಡ ಸಮಸ್ಯೆ

Published : Aug 12, 2026, 01:17 PM IST
Drinking water after tea

ಸಾರಾಂಶ

Health Tips: ಆಫೀಸ್‌ನ ಬ್ರೇಕ್ ಸಮಯದಲ್ಲಿ ಚಹಾ, ಸಂಜೆ ಸ್ನೇಹಿತರ ಜೊತೆ ಅಥವಾ ಕುಟುಂಬದವರೊಂದಿಗೆ ಚಹಾ ಕುಡಿಯುವುದು ಹಲವರ ದಿನಚರಿಯ ಒಂದು ಭಾಗವಾಗಿದೆ. ಚಹಾ ಕುಡಿಯೋದೇನೋ ಸರಿ, ಆದರೆ ಚಹಾ ಕುಡಿದ ತಕ್ಷಣ ನೀರು ಕುಡಿಯುವ ಅಭ್ಯಾಸ ನಿಮಗಿದ್ದರೆ, ಇವತ್ತೆ ಆ ಅಭ್ಯಾಸವನ್ನು ಬದಲಾಯಿಸಿ.

ನೀವು ಕೂಡ ಚಹಾ ಕುಡಿದ ತಕ್ಷಣ ನೀರು ಕುಡಿಯುತ್ತಿಲ್ಲ ತಾನೆ?

ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಸಾಕಷ್ಟು ಬದಲಾಗಿದ್ದು, ಅವರ ಆಹಾರ ಪದ್ಧತಿಯಲ್ಲೂ ಬಹಳಷ್ಟು ಬದಲಾವಣೆಗಳಾಗಿವೆ. ಬಹುತೇಕ ಜನರಿಗೆ ಚಹಾ ಕುಡಿಯುವುದು ತುಂಬಾ ಇಷ್ಟ. ಚಹಾ ಇಲ್ಲದೆ ಅವರ ಬೆಳಗ್ಗೆಯೇ ಆರಂಭವಾಗುವುದಿಲ್ಲ. ಆದರೆ ಕೆಲವರಿಗೆ ಚಹಾ ಕುಡಿದ ತಕ್ಷಣ ನೀರು ಕುಡಿಯುವ ಅಭ್ಯಾಸ ಇರುತ್ತದೆ. ನೀವು ಕೂಡ ಚಹಾ ಕುಡಿದ ತಕ್ಷಣವೇ ನೀರು ಕುಡಿಯುವವರಾಗಿದ್ದರೆ, ಈ ಅಭ್ಯಾಸವನ್ನು ಇವತ್ತೆ ಬಿಟ್ಟು ಬಿಡಿ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹಾಗಾದರೆ ಪ್ರತಿದಿನ ಚಹಾದ ಜೊತೆಗೆ ನೀರು ಕುಡಿಯುವುದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ತಿಳಿಯೋಣ.

ಚಹಾ ಕುಡಿದ ತಕ್ಷಣ ನೀರು ಕುಡಿದರೆ ಏನಾಗುತ್ತದೆ?

ಹೊಟ್ಟೆ ತುಂಬಿದಂತೆ ಅಥವಾ ಅಸ್ವಸ್ಥತೆ

ನೀವು ಚಹಾ ಕುಡಿದ ತಕ್ಷಣ ನೀರು ಕುಡಿದರೆ, ಅದು ನಿಮಗೆ ತೊಂದರೆ ಉಂಟುಮಾಡಬಹುದು. ಇದರಿಂದ ಹೊಟ್ಟೆ ಉಬ್ಬರಿಸಿದಂತೆ ಭಾಸವಾಗಬಹುದು ಮತ್ತು ಅಸ್ವಸ್ಥತೆಯ ಅನುಭವವೂ ಆಗಬಹುದು. ಹಾಗಾಗಿ ಚಹಾ ಕುಡಿದ ತಕ್ಷಣ ನೀರು ಕುಡಿಯಬೇಡಿ.

ಡಿಹೈಡ್ರೇಷನ್

ಚಹಾದ ಜೊತೆಗೆ ನೀರು ಕುಡಿಯುವುದರಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು. ಡಿಹೈಡ್ರೇಷನ್‌ನ ಸಮಸ್ಯೆಯೂ ಎದುರಾಗಬಹುದು ಎಂದು ಹೇಳಲಾಗುತ್ತದೆ. ದಿನವಿಡೀ ಚಹಾ, ಕಾಫಿ ಅಥವಾ ಇತರ ಕ್ಯಾಫೀನ್ ಇರುವ ಪಾನೀಯಗಳನ್ನು ಮಾತ್ರ ಸೇವಿಸುತ್ತಿದ್ದರೆ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಮುಖ್ಯ. ಆದರೆ ಎರಡನ್ನು ಒಟ್ಟಿಗೆ ಸೇವಿಸಬೇಡಿ. ಅರ್ಧ ಗಂಟೆಯ ಅಂತರ ಇರಲಿ.

ಹಲ್ಲುಗಳ ಸಮಸ್ಯೆ

ಚಹಾದ ಜೊತೆಗೆ ನೀರು ಕುಡಿಯುವ ಅಭ್ಯಾಸವಿದ್ದರೆ ಅದನ್ನು ತಪ್ಪಿಸುವುದು ಉತ್ತಮ. ಇದರಿಂದ ಹಲ್ಲುಗಳಲ್ಲಿ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ತಣ್ಣನೆಯ ನೀರು ಕುಡಿದಾಗ ಹಲ್ಲುಗಳಲ್ಲಿ ಜುಂ ಎನ್ನುವುದು ಅಥವಾ ನೋವು ಕಾಣಿಸಿಕೊಳ್ಳಬಹುದು.

ಗ್ಯಾಸ್ ಅಥವಾ ಅಸಿಡಿಟಿ

ಗ್ಯಾಸ್ ಅಥವಾ ಅಸಿಡಿಟಿಯ ಸಮಸ್ಯೆಯೂ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಆದ್ದರಿಂದ ಚಹಾ ಮತ್ತು ನೀರನ್ನು ಒಂದೇ ಸಮಯದಲ್ಲಿ ಸೇವಿಸುವ ಅಭ್ಯಾಸವನ್ನು ತಪ್ಪಿಸುವುದು ಉತ್ತಮ. ಇದು ಆರೋಗ್ಯಕ್ಕೆ ತೊಂದರೆ ಉಂಟುಮಾಡಬಹುದು.

ಶೀತ-ಜ್ವರದ ಸಮಸ್ಯೆ

ನೀವು ಚಹಾದ ಜೊತೆಗೆ ನೀರನ್ನೂ ಕುಡಿಯುತ್ತಿದ್ದರೆ, ಇದರಿಂದ ಶೀತ-ಜ್ವರದ ರೀತಿಯ ಅಸ್ವಸ್ಥತೆ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ಇವುಗಳನ್ನು ಜೊತೆಯಾಗಿ ಸೇವಿಸುವುದು ಅವಾಯ್ಡ್ ಮಾಡಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜಾಗತಿಕ ರೋಗಿಗಳ ನೆಚ್ಚಿನ ತಾಣವಾದ ಇಂಡಿಯಾ: ಬ್ರಿಟನ್ ರೋಗಿಗೆ ಹೊಸ ಜೀವನ ಕೊಟ್ಟ ಭಾರತದ ವೈದ್ಯರು!
ಸಮುದ್ರ Vs ನದಿ? ಆರೋಗ್ಯಕ್ಕೆ ಯಾವುದು ಬೆಸ್ಟ್ ಮೀನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ