ಬೆಂಡೆ ಕಾಯಿ (Okra) ಆರೋಗ್ಯಕ್ಕೆ (Health) ಒಳ್ಳೆಯದು. ಇದು ಎಲ್ಲರಿಗೂ ತಿಳಿದಿರುವ ವಿಷ್ಯ. ಕೆಲವರು ಹಸಿ ಬೆಂಡೆಕಾಯಿ ತಿಂದ್ರೆ ಮತ್ತೆ ಕೆಲವರು ಬೇಯಿಸಿ ತಿನ್ನುತ್ತಾರೆ. ಆದ್ರೆ ಅನೇಕರಿಗೆ ಬೆಂಡೆಕಾಯಿ ನೀರಿನ ಪ್ರಯೋಜನ ತಿಳಿದಿಲ್ಲ. ಬೆಂಡೆಕಾಯಿ ನೀರು (Okra water) ಅನೇಕ ರೋಗಕ್ಕೆ ಮದ್ದು.
ಬೆಂಡೆಕಾಯಿ (Lady Finger) ಲೋಳೆ ಎನ್ನುವ ಕಾರಣಕ್ಕೆ ಎಲ್ಲರೂ ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ಆದ್ರೆ ಬೆಂಡೆಕಾಯಿ ಆರೋಗ್ಯ (Health) ದ ಮೂಲ. ದೇಹದಲ್ಲಿ ರಕ್ತ (Blood) ದ ಕೊರತೆ ಕಾಡ್ತಿದ್ದರೆ ಬೆಂಡೆಕಾಯಿ ಮದ್ದಿನಂತೆ ಕೆಲಸ ಮಾಡುತ್ತದೆ. ಇದಲ್ಲದೆ ಬೆಂಡೆಕಾಯಿಯಿಂದ ಅನೇಕ ಪ್ರಯೋಜನವಿದೆ. ಬೆಂಡೆ ಕಾಯಿ ರಕ್ತದ ಕೊರತೆಯನ್ನು ನೀಗಿಸುವುದಲ್ಲದೆ ದೇಹವನ್ನು ಅನೇಕ ರೋಗಗಳಿಂದ ದೂರವಿಡಲು ಸಹಾಯ ಮಾಡುತ್ತದೆ.
ಬೆಂಡೆಕಾಯಿ ತಿನ್ನುವುದು ಕೊಲೆಸ್ಟ್ರಾಲ್ (Cholesterol) ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೆಂಡೆಕಾಯಿಯನ್ನು ಹಾಗೆ ಸೇವನೆ ಮಾಡುವ ಬದಲು ಬೆಂಡೆಕಾಯಿ ನೀರನ್ನು ಸೇವನೆ ಮಾಡುವುದು ಒಳ್ಳೆಯದು. ಬೆಂಡೆಕಾಯಿ ನೀರು ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಬೆಂಡೆಕಾಯಿ ನೀರು ಸೇವನೆಯಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೇವೆ.
ಬೆಂಡೆಕಾಯಿಯಲ್ಲಿ ವಿಟಮಿನ್ ಎ ಹೇರಳವಾಗಿದೆ. ವಿಟಮಿನ್ ಸಿ, ಫೋಲೇಟ್, ವಿಟಮಿನ್ ಬಿ6, ಫೈಬರ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಆಂಟಿಆಕ್ಸಿಡೆಂಟ್‌ಗಳಂತಹ ಗುಣಗಳಿಂದ ಸಮೃದ್ಧವಾಗಿರುವ ಬೆಂಡೆಕಾಯಿ ನಿಮ್ಮ ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಬೆಂಡೆಕಾಯಿ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಅನೇಕ ಪ್ರಯೋಜನವಿದೆ. ನೀವು ನಿಮ್ಮ ದೃಷ್ಟಿಯನ್ನು ಕಾಪಾಡಿಕೊಳ್ಳಬಹುದು.
ಐಸ್‌ಕ್ರೀಂ ತಿಂದಾಗ ತಲೆನೋವಾಗುತ್ತಾ ? ಕಾರಣವೇನು ತಿಳ್ಕೊಳ್ಳಿ
ಬೆಂಡೆಕಾಯಿ ನೀರು ಮಾಡುವ ವಿಧಾನ : ನಾಲ್ಕರಿಂದ ಐದು ಬೆಂಡೆಕಾಯಿ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ನಂತರ ಅದನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ ಜಾರ್ ನಲ್ಲಿ ಹಾಕಿ. ಅದಕ್ಕೆ ನೀರನ್ನು ಹಾಕಿ, ಸುಮಾರು ಎಂಟು ಗಂಟೆಗಳ ಕಾಲ ಬೆಂಡೆಕಾಯಿಯನ್ನು ಹಾಗೆಯೆ ಇಡಿ. ಎಂಟು ಗಂಟೆಗಳ ನಂತ್ರ ಬೆಂಡೆಕಾಯಿಯನ್ನು ಸ್ವಲ್ಪ ಹಿಸುಕಿ. ಅದರ ರಸವನ್ನು ತೆಗೆದು ಅದನ್ನು ಸೇವನೆ ಮಾಡಿ.
ಬೆಂಡೆಕಾಯಿ ನೀರಿನ ಸೇವನೆಯಿಂದ ಪ್ರಯೋಜನ :
ರಕ್ತ ಹೀನತೆ ಸಮಸ್ಯೆಗೆ ಬೆಂಡೆಕಾಯಿ ನೀರು ಒಳ್ಳೆಯದು : ನೀವು ಬೆಂಡೆಕಾಯಿ ನೀರನ್ನು ಸೇವಿಸಿದರೆ ದೇಹದಲ್ಲಿ ರಕ್ತದ ಕೊರತೆಯು ಪೂರ್ಣಗೊಳ್ಳುತ್ತದೆ. ವಾಸ್ತವವಾಗಿ, ಬೆಂಡೆಕಾಯಿಯಲ್ಲಿ ಬಹಳಷ್ಟು ಕಬ್ಬಿಣಾಂಶವಿದೆ. ಇದರಿಂದಾಗಿ ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ. ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುವ ಮೂಲಕ ರಕ್ತಹೀನತೆಯ ಕೊರತೆಯನ್ನು ಸುಲಭವಾಗಿ ನಿವಾರಿಸಬಹುದು.
ತೂಕ ನಿಯಂತ್ರಣಕ್ಕೆ ಬೆಂಡೆಕಾಯಿ ಬೆಸ್ಟ್ : ತೂಕ ಹೆಚ್ಚಳ ಈಗಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ತೂಕವನ್ನು ಇಳಿಸಲು ನೀವು ನಿರಂತರ ಪ್ರಯತ್ನ ಮಾಡ್ತಿದ್ದರೆ ಬೆಂಡೆಕಾಯಿಯನ್ನು ನಿಮ್ಮ ಡಯೆಟ್ ನಲ್ಲಿ ಸೇರಿಸಬಹುದು. ಬೆಂಡೆಕಾಯಿ ನೀರು ತೂಕ ಇಳಿಸಲು ನೆರವಾಗುತ್ತದೆ. ಬೆಂಡೆಕಾಯಿಯಲ್ಲಿ ಸಾಕಷ್ಟು ಫೈಬರ್ ಇದೆ. ನೀವು ಅದರ ನೀರನ್ನು ಸೇವಿಸಿದ ತಕ್ಷಣ, ಚಯಾಪಚಯವು ಉತ್ತಮವಾಗಿರುತ್ತದೆ. ಇದರಿಂದಾಗಿ ತೂಕ ಕಡಿಮೆಯಾಗುತ್ತ ಬರುತ್ತದೆ.
Sleeplessness : ವಯಸ್ಸಾದವರಿಗೆ ನಿದ್ರೆ ಯಾಕೆ ಬರಲ್ಲ?
ಹೊಟ್ಟೆಗೆ ಪ್ರಯೋಜನಕಾರಿ ಬೆಂಡೆಕಾಯಿ ನೀರು : ಮಲಬದ್ಧತೆ ಸಮಸ್ಯೆಗೆ ಬೆಂಡೆಕಾಯಿ ನೀರು ತುಂಬಾ ಸಹಕಾರಿ. ಹೊಟ್ಟೆ ಕೆಟ್ಟಿದೆ ಎನ್ನುವವರು ಬೆಂಡೆಕಾಯಿ ನೀರನ್ನು ಸೇವನೆ ಮಾಡ್ಬೇಕು. ಮಲಬದ್ಧತೆ ಸಮಸ್ಯೆಯಿರುವವರು ಕೂಡ ಬೆಂಡೆಕಾಯಿ ನೀರನ್ನು ಅವಶ್ಯವಾಗಿ ಕುಡಿಯಬೇಕು. ಇದರಲ್ಲಿರುವ ಫೈಬರ್ ಹೊಟ್ಟೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಹೊಟ್ಟೆ ಕ್ಲೀನ್ ಆಗುವುದ್ರಿಂದ ಹೊಟ್ಟೆ ನೋವು, ಹೊಟ್ಟೆ ಉಬ್ಬರ ಸೇರಿದಂತೆ ಅನೇಕ ಸಮಸ್ಯೆ ಶಮನವಾಗುತ್ತದೆ. ಇದರ ಸೇವನೆಯಿಂದ ಗ್ಯಾಸ್, ಅಜೀರ್ಣ, ಅಸಿಡಿಟಿ ಸಮಸ್ಯೆಗಳು ದೂರವಾಗುತ್ತವೆ. ಇದಲ್ಲದೆ, ಇದು ವಾಯು, ಹೊಟ್ಟೆ ನೋವಿನಿಂದಲೂ ಪರಿಹಾರವನ್ನು ನೀಡುತ್ತದೆ.
ದೃಷ್ಟಿ ದೋಷ ನಿವಾರಣೆಗೆ ಬೆಂಡೆ : ದೃಷ್ಟಿಯನ್ನು ಚುರುಕುಗೊಳಿಸುವಲ್ಲಿ ಬೆಂಡೆಕಾಯಿ ನೀರು ತುಂಬಾ ಪ್ರಯೋಜನಕಾರಿಯಾಗಿದೆ. ದೃಷ್ಟಿ ಸಮಸ್ಯೆ ಕಾಡಬಾರದು, ದೃಷ್ಟಿ ಚುರುಕಾಗಬೇಕು ಎನ್ನುವವರು ಅವಶ್ಯವಾಗಿ ಬೆಂಡೆಕಾಯಿ ನೀರನ್ನು ಕುಡಿಯಬೇಕು. ಬೆಂಡೆ ಕಾಯಿಯಲ್ಲಿ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ. ಇದು ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ.