Reuse Cooking Oil: ಅಡುಗೆ ಎಣ್ಣೆ ಮರುಬಳಕೆ ಮಾಡಿದ್ರೆ ಏನಾಗುತ್ತೆ ಗೊತ್ತಾ?

By Suvarna News  |  First Published May 17, 2022, 5:35 PM IST

ಇದಂತೂ ಎಲ್ಲವೂ ತುಟ್ಟಿಕಾಲ. ಅಡುಗೆ ಮನೆ (Kitchen)ಯಲ್ಲಿ ಯಾವುದನ್ನೂ ವೇಸ್ಟ್‌ ಮಾಡಬಾರದು ಎಂದು ಒಮ್ಮೆ ಬಳಸಿದ ಎಣ್ಣೆ (Oil) ಯನ್ನು ಮರುಬಳಕೆ ಮಾಡುತ್ತೀರಾ? ಸ್ವಲ್ಪ ನಿಲ್ಲಿ. ಇದರಿಂದ ನೀವು ಉಳಿತಾಯ (Savings) ಮಾಡುವುದಕ್ಕಿಂತ ಹೆಚ್ಚಾಗಿ ಅಪಾಯ (Danger)ವನ್ನು ಆಹ್ವಾನಿಸುತ್ತೀರಿ. 
 


ನಾವು ಭಾರತೀಯರು ಅಡುಗೆ ಮನೆಯಲ್ಲಿ ಧಾರಾಳವಾಗಿ ಎಣ್ಣೆ (Cooking Oil) ಬಳಸುತ್ತೇವೆ. ಅರ್ಥಾತ್‌, ಅಡುಗೆಗೆ ಸಾಕಷ್ಟು ಎಣ್ಣೆ ಬಳಸಿ ಸವಿಯುತ್ತೇವೆ. ವಾರಕ್ಕೊಮ್ಮೆಯಾದರೂ ಪೂರಿ (Poori), ಪಕೋಡಾ, ಬಜ್ಜಿ, ಬೋಂಡಾ, ಏನನ್ನಾದರೂ ಮಾಡುವುದು ಸಾಮಾನ್ಯ. ಅಷ್ಟಲ್ಲದೆ, ಚಪಾತಿಗೆ ಅಡುಗೆ ಎಣ್ಣೆಯನ್ನೇ ಹಾಕಿ ಬೇಯಿಸುತ್ತೇವೆ. ಒಮ್ಮೆ ಬಳಸಿದ ಎಣ್ಣೆಯನ್ನೇ ಮಗದೊಮ್ಮೆ ಬಳಕೆ ಮಾಡುವುದೂ (Reuse) ಸಹ ನಮ್ಮಲ್ಲಿ ಸಾಮಾನ್ಯ. ಯಾವುದೇ ಕಾರಣಕ್ಕೂ ಎಣ್ಣೆಯನ್ನು ವೇಸ್ಟ್‌ (Waste) ಮಾಡಬಾರದು ಎನ್ನುವುದು ಅನೇಕ ಮಹಿಳೆಯರ (Women) ಧ್ಯೇಯ. ಹೀಗಾಗಿ, ಬಳಸಿದ ಎಣ್ಣೆಯನ್ನೇ ಮತ್ತೆ ಮತ್ತೆ ಕರಿಯಲು (Fry) ಬಳಸುತ್ತಿರುತ್ತಾರೆ. ಆದರೆ, ಹೀಗೆ ಮಾಡುವುದು ಆರೋಗ್ಯಕ್ಕೆ ಅದೆಷ್ಟು ಹಾನಿಕರ ಗೊತ್ತೇ?

ಬಳಸಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಕೆ ಮಾಡಿದರೆ ಹಲವಾರು ವಿಧದಲ್ಲಿ ಆರೋಗ್ಯಕ್ಕೆ ಹಾನಿಯಾಗುತ್ತದೆ. ಎಣ್ಣೆಯಲ್ಲಿ ಕೆಟ್ಟ ಅಂಶ ಉತ್ಪಾದನೆಯಾಗಿ ಪ್ರಮುಖ ಅಂಗಗಳು ಹಾಗೂ ರಕ್ತನಾಳಗಳ ಪರಿಚಲನೆಗೆ ಧಕ್ಕೆಯಾಗುತ್ತದೆ. 

Tap to resize

Latest Videos

Kitchen Hacks: ಕಲೆಯ ಟೆನ್ಷನ್ ಬಿಟ್ಬಿಡಿ.. ನಿಂಬೆಯಲ್ಲಿದೆ ಮ್ಯಾಜಿಕ್ ಗುಣ

•    ಹೃದ್ರೋಗ (Heart Disease) ಮತ್ತು ಮಿದುಳಿಗೆ ಹಾನಿ (Damage to Brain)
ಒಮ್ಮೆ ಬಳಕೆ ಮಾಡಿದ ಎಣ್ಣೆಯನ್ನು ಮತ್ತೆ ಬಿಸಿ ಮಾಡಿದಾಗ ಅನೇಕ ವಿಷಕಾರಿ (Toxic) ಅಂಶಗಳು ಉತ್ಪಾದನೆಯಾಗುತ್ತವೆ. ಆರೋಗ್ಯಕ್ಕೆ ಭಾರೀ ಸಮಸ್ಯೆ ತಂದೊಡ್ಡುವ ಅಲ್ಡೆಹೈಡ್ಸ್‌ (Aldehydes) ಎನ್ನುವ ವಿಷಕಾರಿ ರಾಸಾಯನಿಕ ಎಣ್ಣೆಯಲ್ಲಿ ಉತ್ಪಾದನೆಯಾಗುತ್ತದೆ. ಹೃದಯ ಹಾಗೂ ಮಿದುಳಿಗೆ ಇದು ಅಪಾಯಕಾರಿ ಅಂಶ. ಇನ್ನೊಂದು ವಿಷಕಾರಿ ಅಂಶವೆಂದರೆ, ಎನ್‌ ಎನ್‌ ಇ (4 ಹೈಡ್ರಾಕ್ಸಿ ಟ್ರಾನ್ಸ್‌ 2 ನಾಮಿನಲ್). ಇದು ಎಷ್ಟು ಪ್ರಭಾವಶಾಲಿ ಎಂದರೆ ಡಿಎನ್‌ ಎ, ಆರ್‌ಎನ್‌ಎ ಹಾಗೂ ಪ್ರೊಟೀನ್‌ (Protein) ಮೇಲೆ ವರ್ತಿಸಿ ದೇಹದ ಕಾರ್ಯಶೈಲಿಯನ್ನೇ ಅಲ್ಲೋಲಕಲ್ಲೋಲ ಮಾಡಿಬಿಡುತ್ತದೆ. ವಯಸ್ಸಾದಂತೆ ಮಿದುಳಿನ ಕಾರ್ಯಕ್ಷಮತೆ ಕ್ಷೀಣಿಸುವುದು ಸಹಜ. ಈ ಎಣ್ಣೆಯ ಬಳಕೆಯಿಂದ ಮಿದುಳು ಇನ್ನಷ್ಟು ಘಾಸಿಗೆ ಒಳಗಾಗುತ್ತದೆ. ಅಲ್ಝೈಮರ್ಸ್‌, ಪಾರ್ಕಿನ್ಸನ್‌ ಮುಂತಾದ ಸಮಸ್ಯೆಗಳು ತಲೆದೋರಬಹುದು.

•    ಕೆಟ್ಟ ಕೊಬ್ಬಿನ ಉತ್ಪಾದನೆ (Bad Cholesterol) 
ಅಡುಗೆ ಎಣ್ಣೆಯನ್ನು ಸಾಮಾನ್ಯವಾಗಿ ಅಧಿಕ ಉಷ್ಣಾಂಶದಲ್ಲಿ ಕಾಯಿಸಲಾಗುತ್ತದೆ. ಈ ಸಮಯದಲ್ಲಿ ಕೆಲವು ಮಾದರಿಯ ಕೊಬ್ಬು ಟ್ರಾನ್ಸ್‌ ಕೊಬ್ಬಾಗಿ ಬದಲಾಗುತ್ತದೆ. ಇದರಲ್ಲೇ ಮತ್ತೊಮ್ಮೆ ಏನಾದರೂ ತಯಾರಿಸಿದಾಗ ಕೆಟ್ಟ ಕೊಬ್ಬು (Trans Fat) ದೇಹ ಸೇರುತ್ತದೆ. ಮತ್ತೆ ಮತ್ತೆ ಈ ಎಣ್ಣೆಯನ್ನೇ ಬಳಕೆ ಮಾಡಿದರೆ ಸ್ಟ್ರೋಕ್‌, ಬೊಜ್ಜು, ಎದೆನೋವು, ಹೊಟ್ಟೆನೋವು, ಅಜೀರ್ಣ ಹಾಗೂ ಹೃದಯ ರೋಗಗಳು ಉಂಟಾಗುತ್ತವೆ. ಕೆಟ್ಟ ಕೊಬ್ಬು ರಕ್ತನಾಳಗಳಲ್ಲಿ ಸೇರಿಕೊಂಡು ಹೃದಯಕ್ಕೆ ಒತ್ತಡ ನೀಡುತ್ತದೆ.

Peanut Oil Health Benefits: ಹೃದಯದ ಆರೋಗ್ಯಕ್ಕಿದು ಅತ್ಯುತ್ತಮ

•    ಆಸಿಡಿಟಿ ಮತ್ತು ಎದೆಯುರಿ (Acidity and Burning)
ಎಣ್ಣೆಯನ್ನು ಮರುಬಳಕೆ ಮಾಡಿದಾಗ ಉತ್ಪಾದನೆಯಾಗುವ ಮತ್ತೊಂದು ವಿಷಕಾರಿ ಅಂಶವೆಂದರೆ, ರಾಸಿಡಿಟಿ (Rancidity). ತೇವಾಂಶ, ಗಾಳಿ, ಬೆಳಕಿಗೆ ತೆರೆದುಕೊಂಡಾಗ ಆಕ್ಸಿಡೇಷನ್‌ ಪ್ರಕ್ರಿಯೆಗೆ ಒಳಗಾಗುತ್ತದೆ. ಇದೇ ರಾಸಿಡಿಟಿ. ಪ್ರತಿಬಾರಿ ಎಣ್ಣೆಯನ್ನು ಬಿಸಿ (Heat) ಮಾಡಿದಾಗಲೂ ಈ ಅಂಶದಲ್ಲಿ ಬದಲಾಗುತ್ತ ಹೋಗುತ್ತದೆ. ರುಚಿ ಹಾಗೂ ಬಣ್ಣದಲ್ಲಿ ಗಾಢವಾಗುತ್ತದೆ. ಇಂತಹ ಎಣ್ಣೆಯನ್ನು ಬಳಸಿದರೆ ಆಸಿಡಿಟಿ, ಎದೆಯುರಿ, ಗಂಟಲಿನ ಸಮಸ್ಯೆ ಉಂಟಾಗುತ್ತದೆ.

•     ಉರಿಯೂತ (Inflammation) ಮತ್ತು ಕ್ಯಾನ್ಸರ್‌ (Cancer) ಅಪಾಯ
ದೇಹದಲ್ಲಿ ಕಾರ್ಸಿನೋಜೆನ್‌ ಪ್ರಮಾಣ ಹೆಚ್ಚಾದರೆ ಕ್ಯಾನ್ಸರ್‌ ಉಂಟಾಗುತ್ತದೆ. ಎಣ್ಣೆಯನ್ನು ಮರುಬಳಕೆ ಮಾಡಿದರೆ ಅದರಿಂದ ಪಾಲಿಸೈಕ್ಲಿಕ್‌ ಆರೋಮ್ಯಾಟಿಕ್‌ ಹೈಡ್ರೋಕಾರ್ಬನ್ಸ್‌ (ಪಿಎಎಚ್) ಮತ್ತು ಅಲ್ಡೆಹೈಡ್ಸ್‌ ಎನ್ನುವ ಅಂಶಗಳು ಬಿಡುಗಡೆಯಾಗುತ್ತವೆ. ಇವುಗಳಿಂದ ಕ್ಯಾನ್ಸರ್‌ ಮತ್ತು ಉರಿಯೂತದ ಸಾಧ್ಯತೆ ಹೆಚ್ಚಾಗುತ್ತದೆ. ನಿಮಗೆ ದೀರ್ಘಕಾಲದಿಂದ ದೇಹದ ಯಾವುದೇ ಭಾಗದಲ್ಲಿ ನೋವು, ಉರಿಯೂತವಿದ್ದರೆ ಅದಕ್ಕೆ ಮರುಬಳಕೆ ಮಾಡಿದ ಎಣ್ಣೆಯೂ ಕಾರಣವಾಗಿರಬಹುದು. ಇದಕ್ಕೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಹಾಗೂ ಇನ್ನೂ ಹಲವು ರೋಗಗಳು ಹಾಗೂ ಸೋಂಕಿಗೆ ಕಾರಣವಾಗುತ್ತದೆ.

click me!