ಮೈಗ್ರೇನ್ ಸಣ್ಣ ಸಮಸ್ಯೆಯಲ್ಲ..! ಎಚ್ಚರ

Published : May 18, 2022, 11:19 AM ISTUpdated : May 18, 2022, 11:20 AM IST
ಮೈಗ್ರೇನ್ ಸಣ್ಣ ಸಮಸ್ಯೆಯಲ್ಲ..! ಎಚ್ಚರ

ಸಾರಾಂಶ

ಮೈಗ್ರೇನ್ ಅನುಭವಿಸುವವರಿಗೆ ಗೊತ್ತು ಅದರ ನೋವು ಏನು ಅನ್ನೋದು. ಕುಳಿತುಕೊಳ್ಳಲೋ ಸಾಧ್ಯವಿಲ್ಲ, ಮಲಗಲೂ ಸಾಧ್ಯವಿಲ್ಲ. ಯಮಯಾತನೆ ನೀಡುವ ಈ ನೋವು ಮಹಿಳೆಯನ್ನು ಹೆಚ್ಚು ಕಾಡುತ್ತೆ   

ತಲೆನೋವು (Headache ) ಸಾಮಾನ್ಯ ಸಮಸ್ಯೆ (Problem)ಯಾದರೂ, ಕೆಲವೊಮ್ಮೆ ಈ ನೋವನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಇಡೀ ತಲೆ ನೋವು ಸಾಮಾನ್ಯವಾದ್ರೂ ಅರ್ಧ ತಲೆ ನೋವು ಅಸಹನೀಯ ನೋವನ್ನುಂಟು ಮಾಡುತ್ತದೆ.  ಇದನ್ನು ಮೈಗ್ರೇನ್‌ (Migraine) ಎಂದು ಕರೆಯಲಾಗುತ್ತದೆ. ಮೈಗ್ರೇನ್ ತಲೆ ನೋವಿಗೆ ಅನೇಕ ಕಾರಣವಿದೆ. ಒತ್ತಡ  (Stress), ವಾತಾವರಣದಲ್ಲಿನ ಬದಲಾವಣೆ, ಆತಂಕ, ಆಘಾತ, ಉದ್ವೇಗ, ನಿದ್ರೆಯ ಕೊರತೆಯಿಂದ ಮೈಗ್ರೇನ್ ಕಾಡುತ್ತದೆ. ಇಂದಿನ ದಿನಗಳಲ್ಲಿ ಮೈಗ್ರೇನ್ ಸಮಸ್ಯೆ ಹೆಚ್ಚಾಗಿದೆ. ಅದರಲ್ಲೂ ಮಹಿಳೆಯರು ಹೆಚ್ಚಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ.

ಮೈಗ್ರೇನ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸೋದಿಲ್ಲ ಮಹಿಳೆಯರು : ಮೈಗ್ರೇನ್ ಸುಮಾರು 20 ಪ್ರತಿಶತ ಮಹಿಳೆಯರನ್ನು ಬಲಿಪಶುಗಳನ್ನಾಗಿ ಮಾಡಿದೆ ಎಂದು ವೈದ್ಯರು ಒಪ್ಪಿಕೊಂಡಿದ್ದಾರೆ. 2015 ರ ಡೇಟಾದಲ್ಲಿ 19 ಪ್ರತಿಶತದಷ್ಟು ಮಹಿಳೆಯರು ಮತ್ತು 9 ಪ್ರತಿಶತ ಪುರುಷರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದು ಕಂಡುಬಂದಿದೆ.  ಸಮಸ್ಯೆ ಹೆಚ್ಚಾದ್ರೂ ಮಹಿಳೆಯರು ಮೈಗ್ರೇನ್ ಅನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಾಗೆ ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆಯುತ್ತಿಲ್ಲ. ಅನೇಕ ಮಹಿಳೆಯರು ಮೈಗ್ರೇನ್ ಸಮಸ್ಯೆಯನ್ನು ನಿರ್ಲಕ್ಷ್ಯಿಸುತ್ತಿದ್ದಾರೆ. 

ಮಾವಿನ ಹಣ್ಣಿನ ಸಿಪ್ಪೆ ಎಸಿತೀರಾ? ಅದನ್ನ ಹೀಗೆ ಬಳಸಿ ನೋಡಿ..

ಮೈಗ್ರೇನ್ ಕಾಯಿಲೆಗೆ ಕಾರಣವೇನು ? : ತಪ್ಪಾದ ಆಹಾರ, ದಿನಚರಿ, ಒತ್ತಡ, ಪರಿಸರದಲ್ಲಿನ ಬದಲಾವಣೆ, ಹಾರ್ಮೋನುಗಳ ಬದಲಾವಣೆ ಅಥವಾ ಅತಿಯಾಗಿ ನಿದ್ದೆ ಮಾಡುವುದು ಮತ್ತು ಕಡಿಮೆ ನಿದ್ರೆ ಮೈಗ್ರೇನ್‌ಗೆ ಮುಖ್ಯ ಕಾರಣಗಳಾಗಿವೆ. ಮಾನಸಿಕ ಕಾಯಿಲೆಗಳಾದ ಖಿನ್ನತೆ, ಆತಂಕ, ಒತ್ತಡ ಇವು ಮೈಗ್ರೇನ್‌  ಗೆ ಕಾರಣವಾಗಿದೆ. ಭಾರತದ  ಮಹಿಳೆಯರಲ್ಲಿ ಮೈಗ್ರೇನ್ ರೋಗಿಗಳ ಸಂಖ್ಯೆ ಪುರುಷರಿಗಿಂತ ಮೂರು ಪಟ್ಟು ಹೆಚ್ಚು ಎಂಬುದು ಅಂಕಿ ಅಂಶಗಳಿಂದ ಬಹಿರಂಗವಾಗಿದೆ. 

ಮೈಗ್ರೇನ್‌ನಲ್ಲಿ ಕಂಡುಬರುವ ಲಕ್ಷಣಗಳು : 

  • ಮೈಗ್ರೇನ್ ಸಮಸ್ಯೆಯಿಂದ ಬಳಲುವವರು ನಿರಂತರವಾಗಿ ತಲೆ ನೋವನ್ನು ಅನುಭವಿಸುತ್ತಾರೆ. ತಲೆ ಸಿಡಿದ ಅನುಭವವಾಗುತ್ತದೆ.
  • ಬೆಳಗ್ಗೆ ಎದ್ದ ತಕ್ಷಣ ತಲೆಯಲ್ಲಿ ಭಾರದ ಅನುಭವವಾಗುತ್ತದೆ ಮತ್ತು ತೀವ್ರ ನೋವು ಕಾಡುತ್ತದೆ.
  • ತಲೆಯ ಒಂದು ಭಾಗದಲ್ಲಿ ನಿರಂತರ ನೋವು ಕಾಣಿಸಿಕೊಳ್ಳುತ್ತದೆ.
  • ಮೈಗ್ರೇನ್ ಸಮಸ್ಯೆಯಿರುವ ಅನೇಕರಿಗೆ ವಾಂತಿ ಕಾಣಿಸಿಕೊಳ್ಳುತ್ತದೆ. 
  • ಕಣ್ಣುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕಣ್ಣು ಭಾರವಾದ ಅನುಭವವಾಗುತ್ತದೆ. ಕಣ್ಣು ಬಿಡಲು ಸಾಧ್ಯವಾಗುವುದಿಲ್ಲ. 
  • ಪ್ರಕಾಶಮಾನವಾದ ಬೆಳಕನ್ನು ನೋಡಲು ಸಾಧ್ಯವಾಗುವುದಿಲ್ಲ. ಹಾಗೆಯೇ ದೊಡ್ಡ ಧ್ವನಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. 
  • ಇಡೀ ದಿನ ವಾಕರಿಕೆ ಬಂದಂತ ಅನುಭವವಾಗುತ್ತದೆ. 
  • ಇದ್ದಕ್ಕಿದ್ದಂತೆ ಸಂತೋಷ ಮತ್ತು ಕೆಲವೊಮ್ಮೆ ದುಃಖ ಉಂಟಾಗುತ್ತದೆ.
  • ಎಷ್ಟೇ ಪ್ರಯತ್ನಪಟ್ಟರೂ ಸರಿಯಾಗಿ ನಿದ್ರೆ ಬರುವುದಿಲ್ಲ. 
  • ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕೆಂಬ ಅನುಭವವಾಗುತ್ತದೆ. ಹಾಗೆ ಮಲ ವಿಸರ್ಜನೆ ಮಾಡಬೇಕೆನ್ನಿಸುತ್ತದೆ.

ಮಹಿಳೆಯರನ್ನೇ ಏಕೆ ಕಾಡ್ತಿದೆ ತಲೆನೋವು?: ಆರೋಗ್ಯ ತಜ್ಞರ ಪ್ರಕಾರ, ಮಹಿಳೆಯರಲ್ಲಿ ಋತುಚಕ್ರದ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಯಿಂದ ಮೈಗ್ರೇನ್ ಅಪಾಯವೂ ಹೆಚ್ಚಾಗುತ್ತದೆ. ಇದಲ್ಲದೆ, ಒತ್ತಡ, ಖಿನ್ನತೆ, ಆತಂಕ  ಪರಿಸ್ಥಿತಿಗಳು ಮೈಗ್ರೇನ್ ಅನ್ನು ಉತ್ತೇಜಿಸುತ್ತವೆ. ಮೈಗ್ರೇನನ್ನು ಸಾಮಾನ್ಯ ಕಾಯಿಲೆ ಎಂದು ಮಹಿಳೆಯರು ಪರಿಗಣಿಸುತ್ತಾರೆ. ಇದೇ ಕಾರಣಕ್ಕೆ ನೋವಿನ ಮಾತ್ರೆಗಳನ್ನು ಸೇವನೆ ಮಾಡ್ತಾರೆ. ನೋವಿನ ಮಾತ್ರೆ ತಾತ್ಕಾಲಿಕವಾಗಿ ನೋವನ್ನು ಕಡಿಮೆ ಮಾಡುತ್ತದೆ. ಆದ್ರೆ ದೀರ್ಘಕಾಲದವರೆಗೆ ಇದ್ರಿಂದ ಮುಕ್ತಿ ಸಿಗುವುದಿಲ್ಲ. ನಿರ್ಲಕ್ಷ್ಯ ಮಾಡಿದಷ್ಟೂ ಸಮಸ್ಯೆ ಹೆಚ್ಚಾಗುತ್ತದೆ. 

Woman in Plane: ವಿಮಾನದಲ್ಲಿ ಜಿಮ್ನಾಸ್ಟ್ ಆದ ಮಹಿಳೆ-ವಿಡಿಯೋ ವೈರಲ್

ಮೈಗ್ರೇನ್ ನೋವಿಗೆ ಚಿಕಿತ್ಸೆ : 

  • ಯೋಗ, ಆಕ್ಯುಪ್ರೆಶರ್ ಮತ್ತು ನಿಯಮಿತ ವ್ಯಾಯಾಮವು ಮೈಗ್ರೇನ್ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಪ್ರಕಾಶಮಾನವಾದ ಬೆಳಕು ಹಾಗೂ ದ್ವನಿವರ್ಧಕಗಳ ಬಳಕೆಯಿಂದ ದೂರವಿರಬೇಕು.  
  • ಸಮತೋಲಿತ ದಿನಚರಿಯನ್ನು ಅನುಸರಿಸಬೇಕು.
  • ಸಮಯಕ್ಕೆ ಸರಿಯಾಗಿ ಮಲಗಬೇಕು ಮತ್ತು ಏಳಬೇಕು.
  • ಹೆಚ್ಚು ಹೊತ್ತು ಹಸಿವಿನಿಂದ ಇರಬಾರದು. 
  • ಮೈಗ್ರೇನ್ ನೋವು ಕಾಡ್ತಿದೆ ಎನ್ನುವ ಸಂದರ್ಭದಲ್ಲಿ ಫೋನ್ ಅಥವಾ ಲ್ಯಾಪ್‌ಟಾಪ್ ಬಳಸಬೇಡಿ. ಇದ್ರಿಂದ ಸಮಸ್ಯೆ ಹೆಚ್ಚಾಗುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!