ಹೆಂಡತಿ – ಮಕ್ಕಳನ್ನಾದ್ರೂ ಬಿಟ್ಟೇವು ಮದ್ಯ ಬಿಡೋದಿಲ್ಲ ಅನ್ನೋರು ನಮ್ಮಲ್ಲಿ ಬಹಳ ಮಂದಿ. ಕುಡಿತಕ್ಕೆ ಬಲಿಯಾಗಿ ಪ್ರಾಣ ಬಿಡೋರ ಸಂಖ್ಯೆ ಸಾಕಷ್ಟಿದೆ. ಜೀವ ಉಳಿಬೇಕು, ಆರೋಗ್ಯ ಸುಧಾರಿಸಬೇಕು ಎನ್ನುವವರು ಕುಡಿತ ಬಿಟ್ರೆ ಏನೆಲ್ಲ ಲಾಭವಿದೆ ಅನ್ನೋದನ್ನು ತಿಳಿದ್ಕೊಳ್ಳಿ.
ಗುಂಡು – ತುಂಡು ಇಲ್ಲದೆ ಪಾರ್ಟಿ ಹೇಗೆ ಆಗುತ್ತೆ ಗುರು ಅನ್ನೋರೇ ಹೆಚ್ಚು. ಪಾರ್ಟಿ ಸಣ್ಣದಿರಲಿ ಇಲ್ಲ ದೊಡ್ಡದಿರಲಿ ಅಲ್ಲಿ ಡ್ರಿಂಕ್ಸ್ ಇರ್ಲೇಬೇಕು. ಅನೇಕ ಬಾರಿ ಮಕ್ಕಳ ಬರ್ತ್ ಡೇ ಪಾರ್ಟಿಯಲ್ಲೂ ದೊಡ್ಡವರು ಡ್ರಿಂಕ್ಸ್ ಮಾಡ್ತಾರೆ. ಈ ಮದ್ಯಪಾನ ಎಷ್ಟು ಮಾಮೂಲಿಯಾಗಿದೆ ಎಂದ್ರೆ ಅಪ್ಪನ ಮುಂದೆ ಮಕ್ಕಳು ಕುಡಿಯೋದು ಈಗ ಸಾಮಾನ್ಯ ಎನ್ನುವಂತಾಗಿದೆ. ಸಣ್ಣ ವಯಸ್ಸಿನಲ್ಲಿಯೇ ಮಕ್ಕಳು ಮದ್ಯಪಾನ ಶುರು ಮಾಡಿದ್ದಾರೆ. ಡ್ರಿಂಕ್ಸ್ ಮಾಡ್ದೆ ಪಾರ್ಟಿ ಮಾಡಿದ್ರೆ ಅದು ಪಾರ್ಟಿ ಅನ್ನಿಸಿಕೊಳ್ಳೋದೇ ಇಲ್ಲ. ಡ್ರಿಂಕ್ಸ್ ಮಾಡದ ವ್ಯಕ್ತಿಯನ್ನು ಸ್ನೇಹಿತರ ಗುಂಪಿನಿಂದ ತೆಗೆದುಹಾಕುವ ಜನರಿದ್ದಾರೆ.
ಕೆಲವರು ಅಪರೂಪಕ್ಕೆ ಒಂದೋ ಎರಡೋ ಪೆಗ್ ಹಾಕ್ತಾರೆ. ಮತ್ತೆ ಕೆಲವರು ಒಂದು ದಿನ ಬಿಡದೆ ಮದ್ಯಪಾನ ಮಾಡ್ತಾರೆ. ಒಮ್ಮೆ ಈ ಆಲ್ಕೋಹಾಲ್ (Alcohol) ಚಟ ಶುರುವಾದ್ರೆ ಅದನ್ನು ಬಿಡೋದು ಸುಲಭವಲ್ಲ. ಅದ್ರಲ್ಲೂ ವಾರದಲ್ಲಿ ಎಲ್ಲ ದಿನ ಬೇಕೇಬೇಕು, ವಾರದಲ್ಲಿ ಎರಡು ದಿನವಾದ್ರೂ ಮದ್ಯಪಾನ ಮಾಡ್ಲೇಬೇಕು ಎನ್ನುವವರ ಆರೋಗ್ಯ (Health) ನಿಧಾನವಾಗಿ ಕ್ಷೀಣಿಸುತ್ತ ಬರುತ್ತದೆ. ಮದ್ಯಪಾನದಿಂದ ಏನೆಲ್ಲ ನಷ್ಟವಿದೆ ಎನ್ನುವ ಬಗ್ಗೆ ಅನೇಕ ಸಂಶೋಧನೆ, ಅಧ್ಯಯನ (Study) ಗಳು ನಡೆದಿವೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಅದು ಸಾವು ತರುತ್ತೆ ಎಂದರೂ ಜನ ಅದರ ಸೇವನೆ ಬಿಡೋದಿಲ್ಲ.
ವಾರದಲ್ಲಿ ಎರಡರಿಂದ ಮೂರು ದಿನಗಳ ಅಂತರದಲ್ಲಿ ಮದ್ಯ ಸೇವಿಸುವವರು ಬೊಜ್ಜು, ಅಧಿಕ ರಕ್ತದೊತ್ತಡ, ಮಧುಮೇಹಕ್ಕೆ ಬಲಿಯಾಗುತ್ತಾರೆ. ಪ್ರತಿದಿನ 500 ಮಿಲಿಗಿಂತ ಹೆಚ್ಚು ಮದ್ಯಪಾನ ಮಾಡುವ ಜನರ ಆರೋಗ್ಯ ಸಂಪೂರ್ಣವಾಗಿ ಹದಗೆಡುತ್ತದೆ. ಅವರು ನಾನಾ ಸಮಸ್ಯೆ ಎದುರಿಸುತ್ತಾರೆ. ಅಮೆರಿಕಾ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆನ್ ಆಲ್ಕೋಹಾಲ್ ಅಬ್ಯೂಸ್ ಅಂಡ್ ಆಲ್ಕೋಹಾಲಿಸಂ ಪ್ರಕಾರ, ವಾರದಲ್ಲಿ ಒಂದು ದಿನ ಅಥವಾ ವಾರದಲ್ಲಿ ಐದು ದಿನ ಆಲ್ಕೋಹಾಲ್ ಸೇವನೆ ಮಾಡಿದ್ರಿದ್ದರೆ ನೀವು ಸಾವಿಗೆ ಹತ್ತಿರವಾಗ್ತಿದ್ದೀರಿ ಎಂದೇ ಅರ್ಥ.
MENTAL HEALTH TIPS: ವೃದ್ಧಾಪ್ಯ ಚೆನ್ನಾಗಿರ್ಬೇಕು ಅಂದ್ರೆ ಯವೌನದ ಈ ಗುಣಗಳನ್ನ ಬಿಡ್ಲೇ ಬೇಕು
ಮದ್ಯಪಾನ ಮಾಡುವ ವ್ಯಕ್ತಿ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಮತ್ತು ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಾನೆ. ಇದೇ ಕಾರಣಕ್ಕೆ ಕೆಲವರು ಮದ್ಯಪಾನ ತ್ಯಜಿಸುವ ಪ್ರಯತ್ನವನ್ನೇನೋ ನಡೆಸ್ತಾರೆ. ಒಂದೆರಡು ವಾರ ಅದ್ರಿಂದ ದೂರವಿರ್ತಾರೆ. ಆದ್ರೆ ಮದ್ಯಪಾನದಿಂದ ದೂರವಿರಲಾಗದೆ ಮತ್ತೆ ದಾಸರಾಗ್ತಾರೆ. ನೀವು ಗಟ್ಟಿ ಮನಸ್ಸು ಮಾಡಿ ಮದ್ಯಪಾನ ಬಿಟ್ರೆ ಊಹಿಸಲಾಗದಷ್ಟು ಲಾಭವಿದೆ. ಜೀವನ ಪರ್ಯಂತ ಮದ್ಯಪಾನ ಮಾಡೋದಿಲ್ಲವೆಂದು ಪಣತೊಡುವುದು ಮುಖ್ಯ. ಹಂತ ಹಂತವಾಗಿ ಮದ್ಯಸೇವನೆ ಬಿಡುವಂತೆ ವೈದ್ಯರು ಸಲಹೆ ನೀಡ್ತಾರೆ.
MENTAL HEALTH TIPS: ವೃದ್ಧಾಪ್ಯ ಚೆನ್ನಾಗಿರ್ಬೇಕು ಅಂದ್ರೆ ಯವೌನದ ಈ ಗುಣಗಳನ್ನ ಬಿಡ್ಲೇ ಬೇಕು
ನೀವು ಒಂದು ತಿಂಗಳುಗಳ ಕಾಲ ಮದ್ಯಪಾನ ತ್ಯಜಿಸಿದ್ರೆ ಲಾಭವೇನು? :
• ಯಕೃತ್ತಿ ಕಾರ್ಯದಲ್ಲಿ ನೀವು ಸುಧಾರಣೆ ಕಾಣಬಹುದು. ಯಕೃತ್ತಿನ ಕಾಯಿಲೆಯ ಅಪಾಯ ಕಡಿಮೆ ಆಗುತ್ತದೆ.
• ಒಂದು ತಿಂಗಳು ನೀವು ಮದ್ಯಪಾನ ಬಿಟ್ರೆ ಹೃದಯದ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ. ಹೃದ್ರೋಗದ ಅಪಾಯ ಕಡಿಮೆ ಆಗುತ್ತದೆ.
• ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್ ನಂತಹ ರೋಗಗಳ ಅಪಾಯವು ಕಡಿಮೆ ಇರುತ್ತದೆ.
• ಒಂದು ತಿಂಗಳ ಕಾಲ ಮದ್ಯಪಾನದಿಂದ ದೂರವಿದ್ದರೆ ನಿಮ್ಮ ದೇಹ ಶುದ್ಧವಾಗುತ್ತದೆ. ಅಂದ್ರೆ ನಿಮ್ಮ ದೇಹಕ್ಕೆ ವಿಷದ ಪ್ರವೇಶ ಕಡಿಮೆಯಾಗುತ್ತದೆ.
• ಆಲ್ಕೋಹಾಲ್ ಸೇವನೆಯಿಂದ ಲಿವರ್ ಆರೋಗ್ಯ ಹದಗೆಡುತ್ತದೆ. ನೀವು ಒಂದು ತಿಂಗಳು ಮದ್ಯಪಾನ ಸೇವನೆ ಬಿಟ್ಟಲ್ಲಿ ನಿಮ್ಮ ಲಿವರ್ ಕೂಡ ಆರೋಗ್ಯಕರವಾಗಿರುತ್ತದೆ.
• ದೇಹದ ಊತವನ್ನು ಕಡಿಮೆ ಮಾಡುತ್ತದೆ.
• ಬರೀ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ಇದು ಒಳ್ಳೆಯದು. ಇದು ಜ್ಞಾಪಕಶಕ್ತಿ ಮತ್ತು ಮನಸ್ಸಿನ ಏಕಾಗ್ರತೆಯೂ ಹೆಚ್ಚಿಸುವ ಕೆಲಸ ಮಾಡುತ್ತದೆ.