ಅನೇಕ ಗಂಡಸರಿಗೆ ನಿಮಿರುವಿಕೆಯ ತೊಂದರೆ, ಅವರ ಲೈಂಗಿಕ ಜೀವನವನ್ನೇ ಹಾನಿ ಮಾಡುವ ಒಂದು ಸಮಸ್ಯೆ. ಇದು ಅವರನ್ನು ಮಾನಸಿಕವಾಗಿ ಜರ್ಝರಿತರನ್ನಾಗಿ ಮಾಡುತ್ತದೆ. ಇದಕ್ಕೆ ಉತ್ತರವೇ ವಯಾಗ್ರ. ಆದರೆ ಏಕಕಾಲಕ್ಕೆ ಎರಡು ಅಥವಾ ಮೂರು ವಯಾಗ್ರ ಸೇವಿಸಿದರೆ ಏನಾಗುತ್ತದೆ?
ಪುರುಷನಿಗೆ ಶಿಶ್ನ ಸರಿಯಾದ ಸಮಯಕ್ಕೆ ನಿಮಿರುವುದು ಹಾಗೂ ಸಾಕಷ್ಟು ಕಾಲ ಹಾಗೆಯೇ ಉಳಿಯುವುದು ಸಂತೃಪ್ತ ಲೈಂಗಿಕ ಜೀವನಕ್ಕೆ ಅತ್ಯಂತ ಅಗತ್ಯ. ಹಾಗೆ ಆಗದಿದ್ದಾಗ ಪುರುಷ ಹಾಗೂ ಸ್ತ್ರೀ ಇಬ್ಬರಿಗೂ ಲೈಂಗಿಕ ಅತೃಪ್ತಿ ಖಚಿತ. ಇದನ್ನು ಸರಿಪಡಿಸಲು ಲೈಂಗಿಕ ತಜ್ಞರು ಹಲವು ಉಪಾಯಗಳನ್ನು ಸೂಚಿಸುತ್ತಾರೆ. ಆಹಾರ ಹಾಗೂ ಲೈಫ್‌ಸ್ಟೈಲ್‌ನಲ್ಲಿ ಬದಲಾವಣೆ, ಲೈಂಗಿಕ ಸಾಹಿತ್ಯದ ಓದು ಅಥವಾ ಪೋರ್ನ್ ವೀಕ್ಷಣೆ, ಕೆಗೆಲ್ ಎಕ್ಸರ್‌ಸೈಸ್ ಇತ್ಯಾದಿ. ಇದ್ಯಾವುದೂ ಸರಿಹೋಗದಿದ್ದಾಗ ವಯಾಗ್ರ ಅಥವಾ ಸಿಲ್ಡೆನಾಫಿಲ್ ಟ್ಯಾಬ್ಲೆಟ್ ಅನ್ನು ಶಿಫಾರಸು ಮಾಡುತ್ತಾರೆ. ಅದನ್ನು ತೆಗೆದುಕೊಳ್ಳಬೇಕಾದ ಡೋಸೇಜ್ ಅನ್ನೂ ನಿಗದಿಪಡಿಸುತ್ತಾರೆ.
ವಯಾಗ್ರದ ಕೆಲಸ ಏನೆಂದರೆ, ಬಲವಾದ ಅಥವಾ ದೀರ್ಘಾವಧಿಯ ನಿಮಿರುವಿಕೆಗೆ ಅನುಕೂವಾಗುವಂತೆ ಶಿಶ್ನದೊಳಗೆ ರಕ್ತನಾಳಗಳನ್ನು ವಿಸ್ತರಿಸಿ ರಕ್ತದ ಹರಿವನ್ನು ನಿಯಂತ್ರಿಸುವುದು. ನಿಮಿರುವಿಕೆಯ ಸಮಸ್ಯೆಗೆ ಚಿಕಿತ್ಸೆ ನೀಡಲು ಈ ಔಷಧಿಯನ್ನು ಮೌಖಿಕವಾಗಿ ತೆಗೆದುಕೊಳ್ಳುತ್ತಾರೆ. ಔಷಧಿಯನ್ನು ಲೈಂಗಿಕ ಚಟುವಟಿಕೆಯ ಕನಿಷ್ಠ ಅರ್ಧ ಘಂಟೆಯ ಮೊದಲು ತೆಗೆದುಕೊಳ್ಳಬೇಕು. ನಾಲ್ಕು ಗಂಟೆ ಮೊದಲು ತೆಗೆದುಕೊಂಡರೆ ಪ್ರಯೋಜನವಿಲ್ಲ. ಸೆಕ್ಸ್‌ಗೆ ಒಂದು ಗಂಟೆ ಮೊದಲು ತೆಗೆದುಕೊಂಡರೆ ಉತ್ತಮ ಫಲಿತಾಂಶಗಳನ್ನು ತೋರಿಸುತ್ತದೆ.
ಹೆಚ್ಚಾಗಿ ಇದಕ್ಕಾಗಿ ಪುರುಷನ ಸ್ಥಿತಿಗತಿ ನೋಡಿಕೊಂಡು ವಯಾಗ್ರವನ್ನು ಮೂರು ಡೋಸ್‌ಗಳಲ್ಲಿ ಒಂದನ್ನು ಸೂಚಿಸಲಾಗುತ್ತದೆ: 25, 50 ಅಥವಾ 100 ಮಿಲಿಗ್ರಾಂ. ನಿಮ್ಮ EDಯ ತೀವ್ರತೆ, ನಿಮ್ಮ ವೈದ್ಯಕೀಯ ಇತಿಹಾಸ ಮತ್ತು ಇತರ ಅಂಶಗಳ ಆಧಾರದ ಮೇಲೆ ಡೋಸ್ ಅನ್ನು ಸೂಚಿಸುತ್ತಾರೆ. ನಿಗದಿತ ಡೋಸೇಜ್ ವಯಾಗ್ರವನ್ನು ದಿನಕ್ಕೆ ಒಮ್ಮೆ ಮಾತ್ರ ತೆಗೆದುಕೊಳ್ಳುವುದು ಮತ್ತು 24 ಗಂಟೆಗಳ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ತೆಗೆದುಕೊಳ್ಳದಿರುವುದು ಮುಖ್ಯ. ಕೆಲವೊಮ್ಮೆ ಕೆಲವರು ಮರೆತುಹೋಗಿ ಎರಡು ಪಿಲ್ ತೆಗೆದುಕೊಳ್ಳಬಹುದು. ಅಥವಾ, ಪ್ರಯೋಗ ಮಾಡಿ ನೋಡೋಣ ಎಂಬ ಅತ್ಯುತ್ಸಾಹದಿಂದ ಎರಡು- ಮೂರು ಗುಳಿಗೆಗಳನ್ನೂ ತೆಗೆದುಕೊಳ್ಳುವವರು ಇರಬಹುದು. ಆಗ ಏನಾಗುತ್ತದೆ?
ಗಂಡು ಸಂತಾನಕ್ಕೆ ಶಾಕಿಂಗ್ ನ್ಯೂಸ್; ಭವಿಷ್ಯದಲ್ಲಿ ಗಂಡುಮಕ್ಕಳೇ ಹುಟ್ಟುವುದಿಲ್ಲ!
ಶಿಫಾರಸು ಮಾಡಲಾದ ಡೋಸೇಜ್ ಅನ್ನು ಮೀರಿದರೆ ಶಿಶ್ನವು ನಾಲ್ಕು ಗಂಟೆಗಳಿಗಿಂತಲೂ ಹೆಚ್ಚು ಕಾಲ ನಿಮಿರಿಕೊಂಡೇ ಇರಬಹುದು! ಈ ಸಂದರ್ಭದಲ್ಲಿ ನೀವು ಏನು ಮಾಡಿದರೂ ಅದು ಇಳಿಯಲಾರದು. ಅದಕ್ಕಿಂತ ಹಿಂಸೆ ಇನ್ನೊಂದಿಲ್ಲ. ಹಾಗೆಂದು ಈ ನಾಲ್ಕು ಗಂಟೆ ಕಾಲ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಸಾಧ್ಯವಿಲ್ಲ! ಇದು ಆನಂದವನ್ನು ಕೊಡುವ ನಿಮಿರುವಿಕೆಯಲ್ಲ. ಬದಲಾಗಿ ಅರ್ಧ ಗಂಟೆಯ ಬಳಿಕ ನಿಮಗೆ ಹಿಂಸೆ ಅನಿಸಲು ಶುರುವಾಗುತ್ತದೆ. ನಿಮಿರುವಿಕೆ ಇಳಿಯದೆ ನೀವು ಕೋಣೆಯಿಂದಾಚೆ ಬರುವಂತಿಲ್ಲ. ತಲೆತಿರುಗುವಿಕೆ, ತಲೆನೋವು ಕಾಣಿಸಿಕೊಳ್ಳುತ್ತದೆ. ತಾತ್ಕಾಲಿಕವಾಗಿ ದೃಷ್ಟಿ ಮಂದವಾಗುತ್ತದೆ. ರಕ್ತದೊತ್ತಡ (Blood Pressure) ಕಡಿಮೆಯಾಗಬಹುದು. ಡೋಸ್‌ಗಿಂತ ಅಧಿಕ ವಯಾಗ್ರವನ್ನು ತೆಗೆದುಕೊಳ್ಳುವುದು ಪ್ರಿಯಾಪಿಸಮ್ ಎಂಬ ಗಂಭೀರ ಸ್ಥಿತಿಗೆ ಕಾರಣವಾಗಬಹುದು. ಹೀಗೆಂದರೆ ನಿಮಿರುವಿಕೆಯೇ. ಆದರೆ ಅದು ಹೆಚ್ಚು ಕಾಲ ಇರುತ್ತದೆ ಮತ್ತು ನಿಮ್ಮ ಶಿಶ್ನಕ್ಕೆ ಶಾಶ್ವತ ಹಾನಿಯನ್ನು ಉಂಟುಮಾಡಬಹುದು. ಇದು ಸಂಭವಿಸಿದಲ್ಲಿ ವೈದ್ಯರ ಬಳಿಗೆ ಕೂಡಲೇ ಹೋಗುವುದು ಸೂಕ್ತ.
ಕೆಲವೊಮ್ಮೆ ವಯಾಗ್ರದ ನಿಗದಿತ ಡೋಸ್ ಕೂಡ ಅಡ್ಡಪರಿಣಾಮ (Side Effect) ಉಂಟುಮಾಡಬಹುದು. ತಲೆನೋವು, ಮುಖದ ಕೆಂಪಾಗುವಿಕೆ, ಹೊಟ್ಟೆ ರಗಳೆ, ದೃಷ್ಟಿ ಮಂದವಾಗುವುದು ಮತ್ತು ಮೂಗು ಉರಿ ಉಂಟಾಗಬಹುದು. ಹೆಚ್ಚು ಗಂಭೀರವಾದ ಅಡ್ಡಪರಿಣಾಮಗಳೆಂದರೆ ದೀರ್ಘಕಾಲದ ಅಥವಾ ನೋವಿನ ನಿಮಿರುವಿಕೆ, ಹಠಾತ್ ಶ್ರವಣ ಅಥವಾ ದೃಷ್ಟಿ ನಷ್ಟ ಮತ್ತು ಅಲರ್ಜಿ. ವಯಾಗ್ರ ಎಲ್ಲರಿಗೂ ಸೂಕ್ತವಲ್ಲ. ವಯಾಗ್ರವನ್ನು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ವಿಶೇಷವಾಗಿ ನೀವು ಹೃದಯ ಮತ್ತಿತರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ ಮತ್ತು ಅದಕ್ಕೆ ಸಂಬಂಧಿಸಿದ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ. ಹೃದಯ ಸಮಸ್ಯೆಗಳು, ಕಡಿಮೆ ರಕ್ತದೊತ್ತಡ, ಯಕೃತ್ತು ಅಥವಾ ಮೂತ್ರಪಿಂಡದ ಕಾಯಿಲೆ, ಪಾರ್ಶ್ವವಾಯು ಅಥವಾ ಹೃದಯಾಘಾತದ ಇತ್ತೀಚಿನ ಹಿಸ್ಟರಿ ಹೊಂದಿರುವ ಜನ ಇದನ್ನು ಎಚ್ಚರಿಕೆಯಿಂದ ಬಳಸಬೇಕು. ವಯಾಗ್ರವನ್ನು ಮಹಿಳೆಯರು ಬಳಸುವಂತಿಲ್ಲ.
ಸದಾ ನಿದ್ರೆ ಮಾಡುವ ಹಳ್ಳಿ: ಏನೀ ಗ್ರಾಮದ ವಿಚಿತ್ರ ಕಾಯಿಲೆ?