ಟಾಯ್ಲೆಟ್‌ನಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳೋ ಬದಲು, 5ನಿಮಿಷ ‘ಮಲಾಸನ’ ಮಾಡಿ ನೋಡಿ

Published : Sep 30, 2026, 06:26 PM IST
malasana benefits

ಸಾರಾಂಶ

Malasana Benefits: ನೀವು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನ ಜನರು ಮಲಾಸನದಲ್ಲಿ ಕುಳಿತು ನೀರು ಕುಡಿಯೋದನ್ನು ನೋಡಿರುವಿರಿ. ಯಾಕೆ ಹೀಗೆ ಮಾಡುತ್ತಾರೆ? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಎನ್ನುವುದು ನಿಮಗೆ ಗೊತ್ತೇ? ಇಲ್ಲಾ ಅಂದ್ರೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಉತ್ತಮ ಆರೋಗ್ಯಕ್ಕೆ ಮಲಾಸನ

ಬೆಳಗಿನ ಆರಂಭ ಸರಿಯಾದ ರೀತಿಯಲ್ಲಿ ಮಾಡಿದರೆ ಇಡೀ ದಿನ ನೀವು ಹಗುರವಾಗಿ ಮತ್ತು ಉತ್ತಮವಾಗಿ ಅನುಭವಿಸಬಹುದು. ಇದಕ್ಕಾಗಿ ಕೆಲವರು ಬೆಳಗ್ಗೆ ವ್ಯಾಯಾಮ ಮಾಡಿದರೆ, ಇನ್ನು ಕೆಲವರು ಧ್ಯಾನ ಮಾಡುತ್ತಾರೆ. ಆದರೆ ಬೆಳಗ್ಗೆ ಹೆಚ್ಚು ಸಮಯವಿಲ್ಲದಿದ್ದರೆ, ಇವೆಲ್ಲದರಿಂದ ಭಿನ್ನವಾಗಿ ಕೇವಲ 5 ನಿಮಿಷ ತೆಗೆದುಕೊಂಡು ಮಲಾಸನ ಮಾಡಬಹುದು. ಮಲಾಸನ ಬಹಳ ಸರಳವಾದರೂ ಪರಿಣಾಮಕಾರಿ ಯೋಗಾಸನವಾಗಿದೆ. ಇದನ್ನು 'ಗಾರ್ಲ್ಯಾಂಡ್ ಪೋಸ್' ಅಥವಾ 'ಸ್ಕ್ವಾಟ್ ಪೋಸ್' ಎಂದೂ ಕರೆಯುತ್ತಾರೆ. ಇದರಿಂದ ಏನೆಲ್ಲಾ ಪ್ರಯೋಜನವಿದೆ ನೋಡೋಣ.

ಮಲಾಸನದಲ್ಲಿ ಕುಳಿತು ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು

ಮಲ ವಿಸರ್ಜನೆಗೆ ಸಹಾಯ

ಮಲಾಸನದಲ್ಲಿ ಕುಳಿತು ಉಗುರುಬೆಚ್ಚಗಿನ ನೀರು ಕುಡಿಯುವುದು ಮಲ ವಿಸರ್ಜನೆಯ ಸಮಯದಲ್ಲಿ ಸಹಾಯ ಮಾಡಬಹುದು. ಈ ಭಂಗಿಯು ನಮ್ಮ ದೊಡ್ಡ ಕರುಳನ್ನು ಸರಿಯಾದ ಸ್ಥಾನಕ್ಕೆ ತರುತ್ತದೆ. ಇದರಿಂದ ಹೊಟ್ಟೆ ಖಾಲಿ ಮಾಡುವುದು ಸುಲಭವಾಗಬಹುದು. ಬೆಳಗ್ಗೆ ಟಾಯ್ಲೆಟ್‌ನಲ್ಲಿ ಹೆಚ್ಚು ಸಮಯ ಕುಳಿತರೂ ಹೊಟ್ಟೆ ಸರಿಯಾಗಿ ಖಾಲಿಯಾಗದಿದ್ದರೆ ಅಥವಾ ಮಲಬದ್ಧತೆಯ ಸಮಸ್ಯೆ ಇದ್ದರೆ ಪ್ರತಿದಿನ ಬೆಳಗ್ಗೆ ಈ ಸರಳ ವಿಧಾನ ಮಾಡಬಹುದು.

ಜೀರ್ಣಾಂಗ ವ್ಯವಸ್ಥೆ ಬಲವಾಗುತ್ತದೆ

ನಮ್ಮ ಕರುಳುಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಆಹಾರ ಮತ್ತು ಮಲವನ್ನು ಮುಂದೆ ಸಾಗಿಸಲು ಕರುಳಿನಲ್ಲಿ ಚಲನೆ ನಡೆಯುತ್ತದೆ. ಇದನ್ನು ಪೆರಿಸ್ಟಾಲ್ಸಿಸ್ (Peristalsis) ಎಂದು ಕರೆಯಲಾಗುತ್ತದೆ. ಬೆಳಗ್ಗೆ ಮಲಾಸನದಲ್ಲಿ ಕುಳಿತು ನೀರು ಕುಡಿಯುವುದರಿಂದ ಈ ಪ್ರಕ್ರಿಯೆ ಸಕ್ರಿಯಗೊಳ್ಳಲು ಸಹಾಯವಾಗಬಹುದು. ಇದರಿಂದ ಜೀರ್ಣಕ್ರಿಯೆ ಉತ್ತಮವಾಗಬಹುದು ಮತ್ತು ಜೀರ್ಣಾಂಗ ವ್ಯವಸ್ಥೆ ಬಲವಾಗುತ್ತದೆ.

ಸೊಂಟ ಮತ್ತು ಹಿಪ್ಸ್‌ಗೂ ಪ್ರಯೋಜನ

ದೀರ್ಘಕಾಲ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವವರಿಗೆ ಹಿಪ್ಸ್ ಮತ್ತು ಸೊಂಟದಲ್ಲಿ ಬಿಗಿತ ಉಂಟಾಗಬಹುದು. ಮಲಾಸನದಲ್ಲಿ ಕುಳಿತುಕೊಳ್ಳುವುದರಿಂದ ಹಿಪ್ಸ್‌ಗೆ ಸ್ಟ್ರೆಚ್ ಸಿಗುತ್ತದೆ. ಇದರಿಂದ ಸೊಂಟದ ಸುತ್ತ ಹಗುರವಾದ ಅನುಭವವಾಗುತ್ತದೆ. ಜೊತೆಗೆ ದೇಹಕ್ಕೆ ಆರಾಮ ಸಿಗುತ್ತದೆ.

ಕಣಕಾಲು ಮತ್ತು ಕಾಲುಗಳ ಚಲನೆ ಉತ್ತಮ

ಮಲಾಸನ ಮಾಡುವಾಗ ಮೊಣಕಾಲು, ಕಣಕಾಲು ಮತ್ತು ಕಾಲುಗಳನ್ನು ಬಳಸಲಾಗುತ್ತದೆ. ಹೀಗಾಗಿ ಈ ಭಂಗಿಯನ್ನು ಸರಿಯಾದ ರೀತಿಯಲ್ಲಿ ಮಾಡುವುದರಿಂದ ಈ ಭಾಗಗಳ ಚಲನವಲನವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತೆ.

ಬೆಳಗ್ಗೆ ದೇಹ ಬೇಗ ಆ್ಯಕ್ಟಿವ್ ಆಗುತ್ತೆ

ಇವೆಲ್ಲದರ ಜೊತೆಗೆ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುವುದು ಅಥವಾ ಹಾಸಿಗೆಯಲ್ಲೇ ಮಲಗಿರುವ ಬದಲು ಕೆಲವು ನಿಮಿಷ ಮಲಾಸನದಲ್ಲಿ ಕುಳಿತುಕೊಳ್ಳುವುದರಿಂದ ದೇಹವೂ ಬೇಗ ಆ್ಯಕ್ಟಿವ್ ಆಗಬಹುದು. ಜೊತೆಗೆ ಉಗುರುಬೆಚ್ಚಗಿನ ನೀರು ಕುಡಿಯುವುದರಿಂದ ದಿನದ ಆರಂಭ ಹೈಡ್ರೇಷನ್‌ನೊಂದಿಗೆ ಆಗುತ್ತದೆ.

ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ

ಮಲಾಸನ ಮಾಡುವಾಗ ನಿಮ್ಮ ಹಿಮ್ಮಡಿಗಳು ನೆಲಕ್ಕೆ ಸರಿಯಾಗಿ ತಾಗದಿದ್ದರೆ ಅವುಗಳನ್ನು ಬಲವಂತವಾಗಿ ಕೆಳಗೆ ಇಡಬೇಡಿ. ಹಿಮ್ಮಡಿಗಳ ಕೆಳಗೆ ಟವೆಲ್ ಅಥವಾ ಯೋಗಾ ಮ್ಯಾಟ್ ಮಡಚಿ ಇಡಬಹುದು. ಇದರಿಂದ ದೇಹಕ್ಕೆ ಬೆಂಬಲ ಸಿಗುತ್ತದೆ. ಆರಂಭದಲ್ಲಿ ಕೆಳಗೆ ಕುಳಿತುಕೊಳ್ಳಲು ಕಷ್ಟವಾಗಿದ್ದರೆ ನಿಧಾನವಾಗಿ ಪ್ರಯತ್ನಿಸಿ. ಅಗತ್ಯವಿದ್ದರೆ ಗೋಡೆಯ ಸಹಾಯದಿಂದಲೂ ಮಲಾಸನ ಮಾಡಬಹುದು.

ಅದೇ ರೀತಿ, ನಿಮ್ಮ ಮೊಣಕಾಲು, ಕಣಕಾಲು, ಸೊಂಟ ಅಥವಾ ಬೆನ್ನಿನಲ್ಲಿ ನೋವು ಇದ್ದರೆ ಮಲಾಸನ ಮಾಡುವ ಮೊದಲು ತಜ್ಞರ ಸಲಹೆ ಪಡೆಯುವುದು ಉತ್ತಮ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Headache Relief: ವಿಪರೀತ ತಲೆನೋವೇ? ತಕ್ಷಣ ಕಡಿಮೆಯಾಗಲು ಹೀಗೆ ಮಾಡಿ!
ಹಲ್ಲುಗಳ ಉತ್ತಮ ಆರೋಗ್ಯಕ್ಕಾಗಿ ಹೀಗೆ ಮಾಡಿ ಸಾಕು!