Homemade Hair Oil: ಎಳೆನೀರು ಕುಡಿದು ಕಾಯಿ ಎಸಿಬೇಡಿ, ಉದ್ದ ಕೂದಲಿಗೆ ಗಂಜಿ ಮದ್ದು !

Published : Sep 30, 2026, 01:12 PM IST
Hair Care Tips

ಸಾರಾಂಶ

Hair Care Tips : ಎಳೆನೀರು ಕುಡಿದ ಮೇಲೆ ಉಳಿಯುವ ತೆಂಗಿನ ಗಂಜಿಯನ್ನು ಎಸೆಯಬೇಡಿ. ಇದರಿಂದ ಮನೆಯಲ್ಲೇ ಎಣ್ಣೆ ತಯಾರಿಸಬಹುದು. ಕೂದಲಿನ ಆರೈಕೆಗೆ ಈ ಎಣ್ಣೆಯನ್ನು ಬಳಸಬಹುದು.

ಎಳೆನೀರು ಬೇಸಿಗೆಯಲ್ಲಿ ಬಹುತೇಕ ಎಲ್ಲರಿಗೂ ಇಷ್ಟವಾಗುವ ಪಾನೀಯ. ದೇಹಕ್ಕೆ ತಾಜಾತನ ನೀಡುತ್ತದೆ ಎನ್ನುವ ಕಾರಣಕ್ಕೆ ಹಲವರು ಎಳೆನೀರನ್ನು ಕುಡಿಯುತ್ತಾರೆ. ಆದರೆ ಎಳೆನೀರು ತೆಗೆದ ನಂತರ ಉಳಿಯುವ ತೆಂಗಿನ ಬಿಳಿ ಗಂಜಿಯನ್ನು ಮಾತ್ರ ಎಸೆದುಬಿಡುತ್ತಾರೆ. ಆ ಗಂಜಿಯಿಂದಲೇ ಮನೆಯಲ್ಲಿ ತೆಂಗಿನ ಎಣ್ಣೆ ತಯಾರಿಸುವ ಸರಳ ವಿಧಾನ ಇಲ್ಲಿದೆ.

ಎಳೆನೀರಿನ ಗಂಜಿಯನ್ನು ತಲೆಗೆ ಹಚ್ಚೋದು ಹೇಗೆ?

ಎಳೆನೀರು ಕುಡಿದ ಮೇಲೆ ಉಳಿಯುವ ಗಂಜಿಯನ್ನು ಎಸೆಯಬೇಡಿ. ಇದನ್ನು ಗಂಜಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ತೆಂಗಿನ ಗಂಜಿಯನ್ನು ಸ್ವಚ್ಛವಾದ ತೆಳುವಾದ ಬಟ್ಟೆಯಲ್ಲಿ ಹಾಕಿ ಚೆನ್ನಾಗಿ ಹಿಂಡಿಕೊಳ್ಳಿ. ಇದರಿಂದ ಸಿಗುವ ತೆಂಗಿನ ಹಾಲನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿಕೊಳ್ಳಿ.

ತೆಂಗಿನ ಹಾಲನ್ನು ನಿಧಾನವಾಗಿ ಕಾಯಿಸಿ

ಈಗ ತೆಂಗಿನ ಹಾಲನ್ನು ದಪ್ಪ ತಳವಿರುವ ಪಾತ್ರೆಗೆ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ. ಆಗಾಗ್ಗೆ ಕೈಯಾಡಿಸುತ್ತಿರಿ. ಹೀಗೆ ಮಾಡುವುದರಿಂದ ಅದು ಪಾತ್ರೆಯ ತಳಕ್ಕೆ ಅಂಟಿಕೊಳ್ಳುವುದಿಲ್ಲ. ತೆಂಗಿನ ಹಾಲಿನಲ್ಲಿರುವ ನೀರಿನ ಅಂಶ ನಿಧಾನವಾಗಿ ಆವಿಯಾಗುತ್ತಾ ಹೋಗುತ್ತದೆ. ನಂತರ ತೆಂಗಿನ ಗಟ್ಟಿಯಾದ ಭಾಗದಿಂದ ಎಣ್ಣೆ ಬೇರ್ಪಡಲು ಆರಂಭವಾಗುತ್ತದೆ. ಆಗ ಗ್ಯಾಸ್‌ ಬಂದ್‌ ಮಾಡಿ.

ಎಣ್ಣೆಯನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ನಂತರ ಸ್ವಚ್ಛವಾದ ಬಟ್ಟೆ ಅಥವಾ ಸಣ್ಣ ಜಾಲರಿಯ ಮೂಲಕ ಸೋಸಿ ತೆಗೆದುಕೊಳ್ಳಿ. ಇದನ್ನು ಸ್ವಚ್ಛವಾಗಿ ಒಣಗಿಸಿದ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿಡಬಹುದು.

ಕೂದಲಿಗೆ ಹೇಗೆ ಬಳಸಬೇಕು?

ಈ ಎಣ್ಣೆಯನ್ನು ಹೆಚ್ಚು ಪ್ರಮಾಣದಲ್ಲಿ ಹಚ್ಚುವ ಅಗತ್ಯವಿಲ್ಲ. ಸ್ವಲ್ಪ ಎಣ್ಣೆಯನ್ನು ಕೂದಲಿನ ಬುಡಕ್ಕೆ ಮತ್ತು ಕೂದಲಿನ ಉದ್ದಕ್ಕೆ ಹಚ್ಚಿ, ಬೆರಳ ತುದಿಗಳಿಂದ ನಿಧಾನವಾಗಿ ಮಸಾಜ್ ಮಾಡಿ. ಸುಮಾರು 30ರಿಂದ 60 ನಿಮಿಷ ಬಿಟ್ಟು ನಂತರ ಮೃದುವಾದ ಶಾಂಪೂವಿನಿಂದ ಕೂದಲನ್ನು ತೊಳೆಯಬಹುದು.

ಗಂಜಿ ಎಣ್ಣೆಯಿಂದ ಏನು ಪ್ರಯೋಜನ?

ಗಂಜಿ ಎಣ್ಣೆ ಕೂದಲಿನ ಒರಟುತನವನ್ನು ಕಡಿಮೆ ಮಾಡಲು ಮತ್ತು ಕೂದಲನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ. ಇದು ಕೂದಲಿಗೆ ತೇವಾಂಶ ಮತ್ತು ಲೂಬ್ರಿಕೇಶನ್ ನೀಡುವುದರಿಂದ ಕೂದಲು ನಯವಾಗಿ ಕಾಣಲು ಸಹಾಯ ಮಾಡುತ್ತದೆ.

ಬಳಸುವ ಮೊದಲು ಈ ಎಚ್ಚರಿಕೆ ಇರಲಿ

ಮೊದಲ ಬಾರಿ ಬಳಸುತ್ತಿದ್ದರೆ, ಚರ್ಮದ ಸಣ್ಣ ಭಾಗಕ್ಕೆ ಸ್ವಲ್ಪ ಎಣ್ಣೆ ಹಚ್ಚಿ ಪರೀಕ್ಷಿಸಿ. ತುರಿಕೆ, ಉರಿ ಅಥವಾ ಯಾವುದೇ ಅಲರ್ಜಿ ಕಾಣಿಸಿಕೊಂಡರೆ ಬಳಸಬೇಡಿ. ಕೂದಲು ನಿರಂತರವಾಗಿ ಉದುರುತ್ತಿದ್ದರೆ ಅಥವಾ ತಲೆಬುರುಡಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಮನೆಮದ್ದುಗಳನ್ನು ಮಾತ್ರ ಅವಲಂಬಿಸದೆ ಚರ್ಮರೋಗ ತಜ್ಞರ ಸಲಹೆ ಪಡೆಯುವುದು ಉತ್ತಮ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮನೆಯಲ್ಲಿ ಹಸಿರು ಮೆಣಸಿನಕಾಯಿ ಬೆಳಿತೀರಾ? ಈ ತಪ್ಪು ಮಾಡ್ಬೇಡಿ!
ಬಿಸಿ ಅನ್ನಕ್ಕೆ ತುಪ್ಪ ಸೇರಿಸಿ ತಿನ್ನೋದು ಹಳೆಯ ಪದ್ಧತಿ.. ಆಧುನಿಕ ವಿಜ್ಞಾನ ಈ ಬಗ್ಗೆ ಏನು ಹೇಳುತ್ತೆ? ಇಲ್ಲಿದೆ ರಹಸ್ಯ..!