ತಿಂದಾಗ ಹೊಟ್ಟೆ ಉಬ್ಬರಿಸುತ್ತಾ? ಸೋಂಪು ನೀರು ಬೆಸ್ಟ್ ಮದ್ದು, ಯಾವಾಗ ಕುಡೀಬೇಕು?

Published : Feb 05, 2025, 12:47 PM ISTUpdated : Feb 05, 2025, 12:54 PM IST
ತಿಂದಾಗ ಹೊಟ್ಟೆ ಉಬ್ಬರಿಸುತ್ತಾ? ಸೋಂಪು ನೀರು ಬೆಸ್ಟ್ ಮದ್ದು, ಯಾವಾಗ ಕುಡೀಬೇಕು?

ಸಾರಾಂಶ

ಅಜ್ವೈನ್ ಮತ್ತು ಸೋಂಪಿನ ನೀರು ಜೀರ್ಣಕ್ರಿಯೆ ಸುಧಾರಿಸಿ, ಹೊಟ್ಟೆ ಉಬ್ಬರ, ಗ್ಯಾಸ್ ನಿವಾರಿಸುತ್ತದೆ. ಉಸಿರಾಟದ ತೊಂದರೆ ಕಡಿಮೆ ಮಾಡಿ, ಚರ್ಮದ ಆರೋಗ್ಯ ವೃದ್ಧಿಸುತ್ತದೆ. ಚಯಾಪಚಯ ಕ್ರಿಯೆ ಉತ್ತಮಗೊಳಿಸಿ ತೂಕ ಇಳಿಕೆಗೆ ಸಹಕಾರಿ. ಸೋಂಕು ನಿವಾರಣೆಗೂ ಪರಿಣಾಮಕಾರಿ. ಈ ಪಾನೀಯ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.

ಭಾರತದ ಅಡುಗೆ ಮನೆ (Indian kitchen)ಯಲ್ಲೇ ನಮ್ಮ ಅನಾರೋಗ್ಯಕ್ಕೆ ಮದ್ದಿದೆ. ಪ್ರತಿ ದಿನ ಕೆಲ ಮಸಾಲೆ ಪದಾರ್ಥ (spices)ಗಳನ್ನು ನಾವು ಸೇವನೆ ಮಾಡ್ತಾ ಬಂದ್ರೆ ಅನೇಕ ರೋಗಗಳು ನಮ್ಮಿಂದ ದೂರ ಓಡ್ತವೆ. ಪ್ರತಿಯೊಬ್ಬರ ಮನೆಯಲ್ಲಿ ಇರುವಂತ ಆಹಾರ ಪದಾರ್ಥದಲ್ಲಿ ಅಜ್ವೈನ್ (ajwain) ಮತ್ತೆ ಸೋಂಪು (anise) ಸೇರಿದೆ. ನಿಮ್ಮ ಆಹಾರಕ್ಕೆ ಒಳ್ಳೆಯ ಘಮ ನೀಡುವ ಈ ಎರಡೂ ಪದಾರ್ಥಗಳು, ಆರೋಗ್ಯಕ್ಕೆ ಹೆಚ್ಚು ಪರಿಣಾಮಕಾರಿ. ಪ್ರತಿ ದಿನ ನೀವು ಅಜ್ವೈನ ಮತ್ತು ಸೋಂಪಿನ ನೀರನ್ನು ಕುಡಿಯುತ್ತಾ ಬಂದ್ರೆ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತೀರಿ.

ಸೋಂಪು ಹಾಗೂ ಅಜ್ವೈನ  ಉತ್ತಮ ಜೀರ್ಣಕ್ರಿಯೆಗೆ ಹೆಸರುವಾಸಿಯಾಗಿದೆ. ಈ ಎರಡೂ ಜೀರ್ಣಕಾರಿ ಕಿಣ್ವಗಳನ್ನು ಹೆಚ್ಚಿಸುತ್ತವೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ. ಈ ಎರಡನ್ನೂ ಸೇರಿಸಿ ನೀವು ಟೀ ತಯಾರಿಸಿ. ಪ್ರತಿ ಆಹಾರದ ನಂತ್ರ ಅಥವಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡ್ಬಹುದು. ಆಹಾರದ ನಂತ್ರ ನೀವು ಈ ಟೀ ಕುಡಿದ್ರೆ ಅದ್ರ ಲಾಭ ಹೆಚ್ಚು. ನೀವು ಅಜ್ವೈನ ಮತ್ತು ಸೋಂಪಿನ ಟೀಯನ್ನು ಪ್ರತಿ ದಿನ ಸೇವನೆ ಮಾಡ್ತಾ ಬಂದ್ರೆ ಏನೆಲ್ಲ ಲಾಭ ಇದೆ ಗೊತ್ತಾ?.

ಎಬಿಸಿ ಜ್ಯೂಸ್: ಆರೋಗ್ಯಕ್ಕೂ ಬೆಸ್ಟ್‌, ತೂಕ ಇಳಿಕೆಗೂ ಸೂಪರ್!

ಜೀರ್ಣಕ್ರಿಯೆ ಸುಧಾರಣೆ : ಅತಿಯಾದ ಮಸಾಲೆ ಪದಾರ್ಥ ಸೇವನೆ ಮಾಡಿದಾಗ ಅಥವಾ ಅತಿ ಹೆಚ್ಚು ಆಹಾರ ತಿಂದಾಗ ಹೊಟ್ಟೆ ಭಾರ ಅನ್ನಿಸೋದು ಸಾಮಾನ್ಯ, ಹಾಗೆಯೇ ಹೊಟ್ಟೆ ಉಬ್ಬರ, ಉರಿ, ವಾಕರಿಕೆ ಸೇರಿದಂತೆ ಕೆಲ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಜ್ವೈನ ಜೀರ್ಣಕ್ರಿಯೆಗೆ ಅತ್ಯುತ್ತಮ. ಇದು ನೀವು ತಿಂದ ಆಹಾರವನ್ನು ಸರಿಯಾಗಿ ಡೈಜೆಸ್ಟ್ ಮಾಡುತ್ತೆ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ನೀವು ಅಜ್ವೈನದ ಜೊತೆ ಸೋಂಪು ಸೇರಿರುವ ಟೀ ಕುಡಿದಾಗ, ಹೊಟ್ಟೆ ಹಗುರಾಗುತ್ತದೆ. ಗ್ಯಾಸ್ ಸಮಸ್ಯೆಯಿಂದ ನಿಮಗೆ ಮುಕ್ತಿ ಸಿಗುತ್ತದೆ. 

ಉಸಿರಾಟ ಸಮಸ್ಯೆಗೆ ಪರಿಹಾರ : ಅಜ್ವೈನ್ ರೋಗನಿರೋಧಕ ಶಕ್ತಿಯನ್ನು ಬೆಂಬಲಿಸಲು ಮತ್ತು ಹೆಚ್ಚಿಸಲು ಸಹಾಯ ಮಾಡುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ನಿಮ್ಮ ಉಸಿರಾಟದ ಸಮಸ್ಯೆಗೆ ಪರಿಹಾರವಾಗಿದೆ. ನೀವು ಅಜ್ವೈನ ಮತ್ತು ಸೋಂಪಿನ ಟೀ ಕುಡಿಯುವುದರಿಂದ ನಿಮ್ಮ ಉಸಿರಾಟ ಸಾಮಾನ್ಯವಾಗುತ್ತದೆ. ಯಾವುದೇ ದಟ್ಟಣೆ ಸಮಸ್ಯೆ ನಿಮಗೆ ಕಾಡುವುದಿಲ್ಲ.

ಚರ್ಮದ ಆರೋಗ್ಯಕ್ಕೆ ಉತ್ತಮ : ಅಜ್ವೈನ ಮತ್ತು ಸೋಂಪಿನಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿದೆ. ಇದು ಹೊಳೆಯುವ ಚರ್ಮಕ್ಕೆ ಸಹಕಾರಿ. ಚರ್ಮದ ಆರೋಗ್ಯವನ್ನು ಇದು ಸುಧಾರಿಸುತ್ತದೆ. ನಿಮ್ಮ ಚರ್ಮವನ್ನು ಯಂಗ್ ಆಗಿ ಇಡೋದಲ್ದೆ  ಸ್ವತಂತ್ರ ರಾಡಿಕಲ್‌ಗಳ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. 

ಸೀಬೆ vs ಬಾಳೆಹಣ್ಣು: ತೂಕ ಇಳಿಸೋಕೆ ಈ ಎರಡರಲ್ಲಿ ಯಾವುದು ಬೆಸ್ಟ್?

ಉತ್ತಮಗೊಳ್ಳುವ ಚಯಾಪಚಯ ಕ್ರಿಯೆ : ಅಜ್ವೈನ ಮತ್ತು ಸೋಂಪು ಸೇರಿದ ಟೀ ನಿಮ್ಮ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದು ನೀವು ಸೇವಿಸಿದ ಆಹಾರದಿಂದ ಫೋಷಕಾಂಶಗಳನ್ನು ದೇಹ ಹೀರಿಕೊಳ್ಳಲು ನೆರವಾಗುತ್ತದೆ.  

ತೂಕ ಇಳಿಕೆ : ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಲು ಸೋಂಪು ಮತ್ತು ಅಜ್ವೈನದ ಟೀ ಬೆಸ್ಟ್. ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಇದ್ರಿಂದ ನಿಮಗೆ ಪದೇ ಪದೇ ಹಸಿವಾಗೋದಿಲ್ಲ. ಸಮಯವಲ್ಲದ ಸಮಯದಲ್ಲಿ ನೀವು ಆಹಾರ ಸೇವನೆ ಮಾಡಲು ಇಷ್ಟಪಡೋದಿಲ್ಲ. ಚಯಾಪಚಯ ವೇಗಗೊಳಿಸಿ ನಿಮ್ಮ ಕ್ಯಾಲೋರಿ ಬರ್ನ್ ಮಾಡಲು ಇದು ನೆರವಾಗುತ್ತದೆ. ಉರಿಯೂತ ವಿರೋಧಿ ಗುಣಲಕ್ಷಣವನ್ನು ಇದು ಹೊಂದಿದೆ. 

ಸೋಂಕು ನಿವಾರಣೆ : ಈ ನೀರು ಸೋಂಕನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಇದು ಹೊಟ್ಟೆಯ ಸಮಸ್ಯೆಗಳನ್ನು, ವಿಶೇಷವಾಗಿ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಸೋಂಕನ್ನು ಕಡಿಮೆ ಮಾಡುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ