ಬೆಂಗ್ಳೂರಲ್ಲಿ ಪುರುಷರು, ಸ್ತ್ರೀಯರಲ್ಲಿ ಹೆಚ್ಚಿದ ಕ್ಯಾನ್ಸರ್‌!

Published : Feb 04, 2025, 09:20 AM ISTUpdated : Feb 04, 2025, 09:23 AM IST
ಬೆಂಗ್ಳೂರಲ್ಲಿ ಪುರುಷರು, ಸ್ತ್ರೀಯರಲ್ಲಿ ಹೆಚ್ಚಿದ ಕ್ಯಾನ್ಸರ್‌!

ಸಾರಾಂಶ

ಬೆಂಗಳೂರಲ್ಲಿ ಜನಸಂಖ್ಯಾ ಆಧಾರಿತ ಕ್ಯಾನ್ಸರ್ ನೋಂದಣಿ (ಪಿಬಿಸಿಆರ್) ವ್ಯವಸ್ಥೆಯ ಮೂಲಕ, ರಾಜ್ಯದಲ್ಲಿ ವಾರ್ಷಿಕವಾಗಿ ಸರಾಸರಿ ಶೇ.1 ರಷ್ಟು ಪುರುಷರು ಮತ್ತು ಮಹಿಳೆಯರಲ್ಲಿ ಕ್ಯಾನ್ಸರ್‌ ಪ್ರಕರಣದಲ್ಲಿ ಹೆಚ್ಚಳ ಆಗುತ್ತಿರುವುದು ಗಮನಕ್ಕೆ ಬಂದಿದೆ.   

ಬೆಂಗಳೂರು(ಫೆ.04): ಬೆಂಗಳೂರಿನಲ್ಲಿರುವ ಪುರುಷರಲ್ಲಿ ಶ್ವಾಸಕೋಶ, ಹೊಟ್ಟೆ ಪ್ರಾಸ್ಟೇಟ್ ಮತ್ತು ಅನ್ನನಾಳದ ಕ್ಯಾನ್ಸರ್ ಮತ್ತು ಮಹಿಳೆಯರಲ್ಲಿ ಸ್ತನ, ಗರ್ಭಕಂಠ, ಅಂಡಾಶಯ ಕ್ಯಾನ್ಸರ್ ಪ್ರಧಾನವಾಗಿ ಕಂಡು ಬರುತ್ತಿದ್ದು, ಕಳೆದ ವರ್ಷ 15 ಸಾವಿರಕ್ಕೂ ಅಧಿಕ ಕ್ಯಾನ್ಸರ್ ಪತ್ತೆ ಆಗಿರುವುದಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ತಿಳಿಸಿದೆ.

ನಗರದಲ್ಲಿ ವರ್ಷಕ್ಕೆ ಪುರುಷಮತ್ತು ಮಹಿಳೆಯರಲ್ಲಿ ಕ್ರಮವಾಗಿ 6880 ಮತ್ತು 8723 ಕ್ಯಾನ್ಸರ್‌ ಪ್ರಕರಣಗಳು ದಾಖಲಾಗಿವೆ. ಶ್ವಾಸಕೋಶ (9.7%), ಪ್ರಾಸ್ಟೇಟ್ (6.9%), ಹೊಟ್ಟೆ (6.5%) 2 0 (6.4%) ಕ್ಯಾನ್ಸರ್‌ಪುರುಷರಲ್ಲಿ ಕಂಡು ಬಂದಿದೆ.ಸ್ತನ (31.5%), ಗರ್ಭಕಂಠ (9.1%), ಅಂಡಾಶಯ (6.4%) ಮತ್ತು ಬಾಯಿ (4.3%) ಕ್ಯಾನ್ಸರ್‌್ರಮಹಿಳೆಯರಲ್ಲಿ ಪತ್ತೆಯಾ ಗಿದೆ. ಆರಂಭಿಕ ಹಂತದಲ್ಲಿ ರೋಗನಿರ್ಣಯ ಮತ್ತು ಸೂಕ್ತ ಚಿಕಿತ್ಸೆ ನೀಡಿದಲ್ಲಿ 60-70% ರಷ್ಟು ಕ್ಯಾನ್ಸರ್ ಗುಣಪಡಿಸಬಹುದು ಎಂದು ಸಂಸ್ಥೆ ತಿಳಿಸಿದೆ.

ಕ್ಯಾನ್ಸರ್ ಅಪಾಯ ಹೆಚ್ಚಿಸುವ ಆಹಾರಗಳು

ಬೆಂಗಳೂರಲ್ಲಿ ಜನಸಂಖ್ಯಾ ಆಧಾರಿತ ಕ್ಯಾನ್ಸರ್ ನೋಂದಣಿ (ಪಿಬಿಸಿಆರ್) ವ್ಯವಸ್ಥೆಯ ಮೂಲಕ, ರಾಜ್ಯದಲ್ಲಿ ವಾರ್ಷಿಕವಾಗಿ ಸರಾಸರಿ ಶೇ.1 ರಷ್ಟು ಪುರುಷರು ಮತ್ತು ಮಹಿಳೆಯರಲ್ಲಿ ಕ್ಯಾನ್ಸರ್‌ ಪ್ರಕರಣದಲ್ಲಿ ಹೆಚ್ಚಳ ಆಗುತ್ತಿರುವುದು ಗಮನಕ್ಕೆ ಬಂದಿದೆ. 

ಹಠಾತ್ ದೇಹದ ತೂಕ ಕಡಿಮೆಯಾಗುವುದು. ಸ್ತನ ದಲ್ಲಿ ನೋವು, ಗಡ್ಡೆಗಳು ಕಂಡು ಬಂದರೆ ಸ್ತನ ಕ್ಯಾನ್ಸರ್ ಇರಬಹುದು. ಹೊಟ್ಟೆ ಉಬ್ಬರ, ವಿಪರೀತ ರಕ್ತಸ್ರಾವ ಆದಲ್ಲಿ ಗರ್ಭಕೋಶದ ಕ್ಯಾನ್ಸರ್‌ಇರಬ ಹುದು. ಚರ್ಮದ ತುರಿಕೆ ಹಾಗೂ ಗುಳ್ಳೆ, ಮೈಯಲ್ಲಿ ಊತ, ಸಂಧಿ ನೋವು. ಧ್ವನಿಯಲ್ಲಿ ಬದಲಾವಣೆ ಕ್ಯಾನ್ಸರ್ ಲಕ್ಷಣಗಳು, ಧೂಮಪಾನ, ತಂಬಾಕು, ಮದ್ಯಪಾನ ಮುಂತಾದ ದುಶ್ಚಟಗಳು ಹಾಗೂ ಅನುವಂಶೀಯತೆ ಕ್ಯಾನ್ಸರ್‌ಗೆ ಕಾರಣಗಳಾಗಿವೆ. ಕಿದ್ವಾಯಿ ಸಂಸ್ಥೆಯಲ್ಲಿನ ಅಸ್ತಿಮಜ್ಜೆ ಕಸಿ ಘಟಕವು (ಬಿಎಂಟಿ) ರಾಜ್ಯದಲ್ಲಿ ಏಕೈಕ ಸರ್ಕಾರಿ ಘಟಕವಾಗಿದ್ದು, ಜನವರಿಯಲ್ಲಿ 3 ಅಟೋ ಲೋಗಸ್ ಅಸ್ತಿಮಜ್ಜೆ ಕಸಿ ಚಿಕಿತ್ಸೆ ನೀಡಿರುವುದು ರಾಜ್ಯ ದಲ್ಲೆ ಮೊದಲಾಗಿದೆ. ಈವರೆಗೂ 105 ಮಂದಿಗೆ ಅಸ್ತಿ ಮಜ್ಜೆ ಕಸಿ ಚಿಕಿತ್ಸೆ ಯಶಸ್ವಿಯಾಗಿ ನೀಡಲಾಗಿದೆ. ಪ್ರಾ ಸ್ಟೇಟ್ ಕ್ಯಾನ್ಸರ್‌ಗೆ ಅಯೋಡಿನ್ 125 ಬ್ರಾಕಿ ಥೆರಪಿ ಚಿಕಿತ್ಸೆ ಪಡೆಯುತ್ತಿದ್ದು ದೇಶಕ್ಕೆ ಮಾದರಿಯಾಗಿದೆ. 

ಬಾಲ್ಯ ಕ್ಯಾನ್ಸರ್: 

2024ರಲ್ಲಿ 50ಕ್ಕೂ ಹೆಚ್ಚು ಶಿಬಿರ ಹಾಗೂ ಕಾರ್ಯಾಗಾರ ನಡೆಸಲಾಗಿದೆ. ಸಂಸ್ಥೆಯು 2024ರ ನವೆಂಬರ್ 7ರಂದು ರಾಷ್ಟ್ರದಲ್ಲಿ ಮೊದಲ ಬಾರಿಗೆ ಬಾಲ್ಯದ ಕ್ಯಾನ್ಸರ್‌ ನೋಂದಣಿ ಕಾರ್ಯಾಗಾರ ಆಯೋಜಿಸಿತ್ತು. ಸಂಸ್ಥೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಸಂಸದೀಯ ಸ್ಥಾಯಿ ಸಮಿತಿಗೆ ಬಾಲ್ಯದ ಕ್ಯಾನ್ಸರ್‌ ಸಮಗ್ರ ನಿರ್ವಹಣಾ ನೀತಿಗಾಗಿ ವಿವರವಾದ ಪ್ರಸ್ತಾವನೆ ಸಲ್ಲಿಸಿದ್ದು, ರಾಷ್ಟ್ರೀಯ ಬಾಲ್ಯದ ಕ್ಯಾನ್ಸರ್‌ಯೋಜನೆ ಪರಿಗಣನೆಯಲ್ಲಿದೆ.

ಕ್ಯಾನ್ಸರ್ ಗೆದ್ದ ಶಿವಣ್ಣನ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ಜಾಗೃತಿ: 

ಕ್ಯಾನ್ಸರ್‌ಗೆ ಕಾರಣವಾಗುವ ಜೀವನಶೈಲಿಯ ಅಂಶಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಂಚಾರಿ ಕ್ಯಾನ್ಸರ್‌ ತಪಾಸಣಾ ಬಸ್ ಮತ್ತು ಮ್ಯಾಮೋಗ್ರಫಿ ಒಳಗೊಂಡಿದೆ. ಈ ಬಸ್‌ನಲ್ಲಿ ಡಿಜಿಟಲ್ ಎಕ್ಸ್-ರೇ, ಸಿ.ಟಿ.ಸ್ಮಾನ್, ಆಟೋ ಆನಸರ್ ಮತ್ತಿತರ ಸಲಕರಣೆಗಳಿವೆ.

ಕಿದ್ವಾಯಿ ಕ್ಯಾನ್ಸ‌ರ್ ರೋಗಕ್ಕೆ ಪೂರಕ ಚಿಕತ್ಸೆ ನೀಡುತ್ತಿದ್ದು, ಅತ್ಯಾಧುನಿಕ ಸೌಲಭ್ಯ ಹೊಂದಿದೆ. ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಗುರುತಿಸಿ ದಲ್ಲಿ ರೋಗಿ ಶೀಘ್ರ ಗುಣ ಅಗಬಹುದು ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಅಧಿಕ ಪ್ರಭಾರ ಡಾ| ಟಿ.ನವೀನ್ ತಿಳಿಸಿದ್ದಾರೆ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹಸಿ ಬೆಳ್ಳುಳ್ಳಿಯ ಶಕ್ತಿ.. ಬೆಳಗ್ಗೆ ಮೊದಲು ಈ ಕೆಲಸ ಮಾಡಿ ಅದೆಂಥದ್ದೇ ಕಾಯಿಲೆಯಾದ್ರೂ ಹಿಮ್ಮೆಟ್ಟುತ್ತೆ
ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು