ಅವಳಿ ಮಕ್ಕಳ ಜನನವು ಒಂದು ಅಪರೂಪದ ವಿದ್ಯಮಾನ. ಈ ಲೇಖನದಲ್ಲಿ ಅವಳಿ ಮಕ್ಕಳ ಜನನ ಹೇಗೆ ಆಗುತ್ತದೆ, ಯಾರಲ್ಲಿ ಈ ರೀತಿಯ ಸಂತಾನೋತ್ಪತ್ತಿ ಹೆಚ್ಚಿರುತ್ತೆ, ಮತ್ತು ಅವಳಿ ಮಕ್ಕಳನ್ನು ಹೊಂದುವವರ ಲಕ್ಷಣಗಳ ಬಗ್ಗೆ ತಿಳಿಸಲಾಗಿದೆ.
Twin Pregnancy: ನಿಮ್ಮ ಸುತ್ತಮುತ್ತ ಅವಳಿ ಸೋದರರು/ಸೋದರಿಯರನ್ನು ನೋಡಿರುತ್ತೇವೆ. ನೀವು ವಾಸಿಸುವ ಪ್ರದೇಶದಲ್ಲಿ ಬೆರಳಣಿಕೆಯಷ್ಟೇ ಕುಟುಂಬಗಳಲ್ಲಿ ಈ ರೀತಿಯ ಅವಳಿ ಮಕ್ಕಳು ಕಂಡು ಬರುತ್ತಿರುತ್ತವೆ. ಕೆಲವರ ಕುಟುಂಬದಲ್ಲಿ ಈ ಹಿಂದೆ ಯಾರಿಗೂ ಅವಳಿ ಮಕ್ಕಳ ಜನನ ಆಗಿರಲ್ಲ. ಆದರೆ ಹೊಸ ತಲೆಮಾರಿಗೆ ಅವಳಿ ಮಕ್ಕಳು ಆಗುತ್ತಿರುತ್ತವೆ. ಈ ರೀತಿಯ ಅವಳಿ ಮಕ್ಕಳ ಜನನ ಹೇಗೆ ಆಗುತ್ತೆ? ಯಾವ ಮಹಿಳೆಯರಲ್ಲಿ ಅವಳಿ ಮಕ್ಕಳ ಸಾಧ್ಯತೆ ಹೆಚ್ಚಿರುತ್ತೆ? ವೈದ್ಯಕೀಯ ಲೋಕದಲ್ಲಿ ಅವಳಿ ಮಕ್ಕಳ ಜನನಕ್ಕೆ ಏನು ಹೇಳುತ್ತಾರೆ? ಆ ಕುರಿತಿ ಕೆಲವು ಪ್ರಶ್ನೆಗಳಿಗೆ ಉತ್ತರ ಈ ಲೇಖನದಲ್ಲಿದೆ.
ವೈದ್ಯಕೀಯ ಭಾಷೆಯಲ್ಲಿ ಒಂದಕ್ಕಿಂತ ಹೆಚ್ಚು ಮಗುವಿಗೆ ಜನ್ಮ ನೀಡುವ ಸಂತಾನೋತ್ಪತ್ತಿ ವಿದ್ಯಮಾನವನ್ನು ಬಹು ಗರ್ಭಧಾರಣೆ ಎಂದು ಕರೆಯಲಾಗುತ್ತದೆ. ಬಹು ಗರ್ಭಧಾರಣೆ ಹೊಂದಿರುವ ಮಹಿಳೆ ತನ್ನ ಗರ್ಭದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುತ್ತಾಳೆ. ಗರ್ಭದಲ್ಲಿರುವ ಮಗುವಿನ ಲಿಂಗ ಒಂದೇ ಆಗಿರಬಹುದು ಅಥವಾ ಬೇರೆಯೂ ಆಗಿರಬಹುದು. ಅವಳಿ ಸೋದರ-ಸೋದರಿಯ ಉದಾಹರಣೆಗಳು ಹಲವು ಇವೆ. ಆಕ್ಸ್‌ಫರ್ಡ್‌ನ ಹೊಸ ಸಂಶೋಧನೆಯ ಪ್ರಕಾರ ಪ್ರತಿ ವರ್ಷ 1.6 ಮಿಲಿಯನ್ ಅವಳಿ ಮಕ್ಕಳು ಜಗತ್ತಿನಲ್ಲಿ ಜನಿಸುತ್ತಾರೆ. ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ಪ್ರತಿ 250 ಗರ್ಭಿಣಿ ಮಹಿಳೆಯರಲ್ಲಿ ಒಬ್ಬರಿಗೆ ಅವಳಿ ಮಕ್ಕಳಾಗುವ ಅವಕಾಶವಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಅವಳಿಗಳ ಜನನ ಹೇಗೆ ಆಗುತ್ತೆ?
ಒಂದೇ ಎಗ್‌ನಿಂದ ಅವಳಿ ಅಥವಾ ಹೆಚ್ಚು ಮಕ್ಕಳು ಜನಿಸಿದಾಗ ಅದನ್ನು ಐಡೆಂಟಿಕಲ್ ಎಂದು ಕರೆಯಲಾಗುತ್ತದೆ. ಈ ರೀತಿ ಒಂದು ಎಗ್ ಮತ್ತು ಒಂದು ಸ್ಪರ್ಮ ಫರ್ಟಿಲೈಸರ್ ಆಗೋದರಿಂದ ಆಗುತ್ತದೆ. ಫರ್ಟಿಲೈಸಡ್ ಬಳಿಕ ಎಗ್ ಎರಡು ಅಥವಾ ಹೆಚ್ಚು ಭಾಗಗಳಾಗಿ ವಿಭಜಿಸುತ್ತದೆ. ಈ ರೀತಿಯ ವಿಭಜನೆ ತುಂಬಾ ಅಪರೂಪವಾಗಿರುತ್ತದೆ. ಈ ಮಕ್ಕಳ ಮುಖ ಮತ್ತು ಸ್ವಭಾವ ಕೂಡ ಹೊಂದಿಕೆಯಾಗುತ್ತದೆ.
ಬೇರೆ ಬೇರೆ ಎಗ್‌ನಿಂದ ಹುಟ್ಟುವ ಮಕ್ಕಳನ್ನು ಫ್ರೆಟರನಲ್ ಎಂದು ಕರೆಯಲಾಗುತ್ತದೆ. ಎರಡು ಅಥವಾ ಹೆಚ್ಚಿನ ಎಗ್ ಮತ್ತು ವಿಭಿನ್ನ ವೀರ್ಯದಿಂದ ಫಲವತ್ತಾಗುವುದರಿಂದ ಇದು ಸಂಭವಿಸುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಎರಡು ವಿಭಿನ್ನ ಮೊಟ್ಟೆಗಳು ಗರ್ಭಾಶಯದಲ್ಲಿ ಫಲವತ್ತಾದಾಗ ಅಥವಾ ಒಂದು ಫಲವತ್ತಾದ ಮೊಟ್ಟೆಯು ಎರಡು ಭ್ರೂಣಗಳಾಗಿ ವಿಭಜನೆಯಾದಾಗ, ಅವಳಿ ಮಕ್ಕಳು ಜನಿಸುತ್ತಾರೆ.
ಯಾವ ರೀತಿಯ ಜನರಲ್ಲಿ ಅವಳಿ ಮಕ್ಕಳ ಜನನ ಆಗುತ್ತೆ?
1.ಈಗಾಗಲೇ ಕುಟುಂಬದಲ್ಲಿ ಅವಳಿ ಮಕ್ಕಳಿದ್ರೆ ಅನುವಂಶೀಯತೆಯಿಂದಾಗಿ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚಿರುತ್ತವೆ. ಈ ರೀತಿಯ ಲಕ್ಷಣಗಳು ಸಂಬಂಧಿಗಳಲ್ಲಿಯೂ ಕಂಡು ಬರುತ್ತವೆ.
2. ಅಮೇರಿಕನ್ ಕಾಲೇಜ್ ಆಫ್ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, 30 ಅಥವಾ ಅದಕ್ಕಿಂತ ಹೆಚ್ಚಿನ BMI (ಬಾಡಿ ಮಾಸ್ ಇಂಡೆಕ್ಸ್) ಹೊಂದಿರುವ ಮಹಿಳೆಯರು ಅವಳಿ ಮಕ್ಕಳನ್ನು ಹೊಂದುವ ಹೆಚ್ಚಿನ ಅವಕಾಶವನ್ನು ಹೊಂದಿರುತ್ತಾರೆ.
3. ಮಹಿಳೆಯು ಫಲವತ್ತತೆ ಚಿಕಿತ್ಸೆಯ ಮೂಲಕ ಗರ್ಭಧರಿಸಿದರೆ ಮತ್ತು ಆಕೆಯ ವಯಸ್ಸು 35 ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ, ಅವಳಿಗಳ ಸಾಧ್ಯತೆ ಹೆಚ್ಚು.
4.IVFನ ಸಹಾಯವನ್ನು ತೆಗೆದುಕೊಂಡ ಮಹಿಳೆಯರಲ್ಲಿ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚಿರುತ್ತದೆ
ಇದನ್ನೂ ಓದಿ: ಮುಟ್ಟು ನಿಲ್ಲುವ ಮೊದಲೇ ಗರ್ಭಿಣಿ ಹೌದೋ, ಅಲ್ವೋ ತಿಳಿದುಕೊಳ್ಳೋ 9 ಲಕ್ಷಣಗಳಿವು: ವೈದ್ಯೆಯಿಂದ ಮಾಹಿತಿ
ಅವಳಿ ಮಕ್ಕಳನ್ನು ಹೊಂದುವವರ ಲಕ್ಷಣಗಳು
1. ಬಹಳಷ್ಟು ಬೆಳಗಿನ ಬೇನೆಯನ್ನು ಹೊಂದಿರುವುದು
2. ಸಾಮಾನ್ಯಕ್ಕಿಂತ ಹೆಚ್ಚು ತೂಕ ಹೆಚ್ಚಾಗುವುದು
3. ರಕ್ತಸ್ರಾವ ಮತ್ತು ಚುಕ್ಕೆ ಸಮಸ್ಯೆಗಳು
4. ತುಂಬಾ ಹಸಿದ ಭಾವನೆ.
5. ಭ್ರೂಣದ ಅತಿಯಾದ ಚಲನೆ
6. ಆಯಾಸದಿಂದ ಆಗಾಗ ಮೂತ್ರ ವಿಸರ್ಜನೆ
ಇದನ್ನೂ ಓದಿ: ಗರ್ಭದಲ್ಲಿರುವಾಗಲೇ ಮಗು ವಿಶೇಷ ಚೈತನ್ಯ ಎನ್ನುವುದನ್ನು ಗುರುತಿಸೋದು ಹೇಗೆ? ವೈದ್ಯರು ಹೇಳಿದ್ದಾರೆ ಕೇಳಿ...