ತರಕಾರಿ ಕತ್ತರಿಸಲು ಯಾವ ಚಾಪಿಂಗ್ ಬೋರ್ಡ್ ಬಳಸಬೇಕು ಎಂಬ ಪ್ರಶ್ನೆ ಬಹುತೇಕರನ್ನು ಕಾಡುತ್ತದೆ. ತಜ್ಞರ ಪ್ರಕಾರ, ಪ್ಲಾಸ್ಟಿಕ್ ಮಾತ್ರವಲ್ಲ ಮರದ ಬೋರ್ಡ್ ಕೂಡ ಅಪಾಯಕಾರಿ.
ಪ್ಲಾಸ್ಟಿಕ್ ಚಾಪಿಂಗ್ ಬೋರ್ಡ್ (Plastic chopping board) ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಚಾಪಿಂಗ್ ಬೋರ್ಡ್ ಬಳಸುವವರ ಸಂಖ್ಯೆ ಕಡಿಮೆಯಾಗ್ತಿದೆ. ಅದ್ರ ಬದಲು ಜನರು ಮರದ ಚಾಪಿಂಗ್ ಬೋರ್ಡ್ ಬಳಸ್ತಿದ್ದಾರೆ. ಆದ್ರೆ ಮರದ ಚಾಪಿಂಗ್ ಬೋರ್ಡ್ (wooden chopping board) ಬಗ್ಗೆ ಈಗ ಆಘಾತಕಾರಿ ವಿಷ್ಯ ಹೊರ ಬಿದ್ದಿದೆ. ತಜ್ಞರೊಬ್ಬರು ಮರದ ಚಾಪಿಂಗ್ ಬೋರ್ಡ್ ಕೂಡ ಆರೋಗ್ಯಕ್ಕೆ ಹಾನಿಕರ ಎಂದು ತಜ್ಞರು ಹೇಳಿದ್ದಾರೆ.
ಮರದ ಚಾಪಿಂಗ್ ಬೋರ್ಡ್ ಎಷ್ಟು ಅಪಾಯಕಾರಿ? : ಅಪೋಲೋ ಹಾಸ್ಪಿಟಲ್ಸ್ ನವಿ ಮುಂಬೈನ ಹಿರಿಯ ಕ್ಲಿನಿಕಲ್ ಡಯೆಟಿಷಿಯನ್ ವರ್ಷಾ ಗೋರ್, ಮರದ ಚಾಪಿಂಗ್ ಬೋರ್ಡ್ ಹೇಗೆ ಅಪಾಯಕಾರಿ ಎಂಬುದನ್ನು ವಿವರಿಸಿದ್ದಾರೆ. ಅವರ ಪ್ರಕಾರ, ಮರದ ಚಾಪಿಂಗ್ ಬೋರ್ಡ್ ಸ್ವಭಾವತಃ ರಂಧ್ರಗಳಿಂದ ಕೂಡಿರುತ್ತದೆ. ತರಕಾರಿಯ ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಟೊಮೆಟೊ ರಸ, ಶುಂಠಿ ಮತ್ತು ಬೆಳ್ಳುಳ್ಳಿಯಿಂದ ಹೊರಬಂದ ರಸಗಳನ್ನು ಇದು ಹೀರಿಕೊಳ್ಳುತ್ತದೆ. ಈ ತೇವಾಂಶ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಬೆಳೆಯಲು ಅವಕಾಶ ಮಾಡಿಕೊಡುತ್ತದೆ.
ವಿಷಕಾರಿ ಅಂಶ ತೆಗೆದು ಶರೀರ ಶುದ್ಧಗೊಳಿಸುವ 5 ಅತ್ಯುತ್ತಮ ಪಾನೀಯಗಳಿವು!
ನಿಯಮಿತವಾಗಿ ನೀವು ಮರದ ಚಾಪಿಂಗ್ ಬೋರ್ಡ್ ಬಳಸ್ತಾ ಇದ್ದಲ್ಲಿ ಚಾಕುವಿನಿಂದ ಬೋರ್ಡ್ ಮೇಲೆ ಗೀರುಗಳಾಗುತ್ತವೆ. ಈ ಗೀರುಗಳಲ್ಲಿ ತೇವಾಂಶ, ತರಕಾರಿ ಚೂರು ಸೇರುತ್ತದೆ. ಅದನ್ನು ಸ್ವಚ್ಛಗೊಳಿಸುವುದು ಬಹಳ ಕಷ್ಟ. ಸಾಲ್ಮೊನೆಲ್ಲಾ, ಇ ಸಂತಾನೋತ್ಪತ್ತಿಗೆ ಅವಕಾಶ ಮಾಡಿಕೊಡುತ್ತದೆ. ಈ ಬ್ಯಾಕ್ಟೀರಿಯಾ ಆಹಾರವನ್ನು ಕಲುಷಿತಗೊಳಿಸುತ್ತದೆ. ಆಹಾರದಿಂದ ಹರಡುವ ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ದೀರ್ಘ ಕಾಲದವರೆಗೆ ಇದನ್ನು ಬಳಸಿದ್ರೆ ಹಲಗೆ ಒಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಆಗ ಮರದ ಸಣ್ಣ ಕಣಗಳು ಆಹಾರದಲ್ಲಿ ಸೇರಿಕೊಳ್ಳುತ್ತವೆ. ಈ ಕಣಗಳು ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಬೀರಿತ್ತವೆ.
ಮರದ ಚಾಪಿಂಗ್ ಬೋರ್ಡ್ ನಿಂದ ಆರೋಗ್ಯ ಅಪಾಯ :
ಹೊಟ್ಟೆ ಸಮಸ್ಯೆ : ಸರಿಯಾಗಿ ಸ್ವಚ್ಛಗೊಳಿಸದ ಮರದ ಹಲಗೆಗಳಿಂದ ಇ.ಕೋಲಿ ಮತ್ತು ಸಾಲ್ಮೊನೆಲ್ಲಾದಂತಹ ಸೂಕ್ಷ್ಮಜೀವಿಗಳು ಆಹಾರದಿಂದ ಹರಡುವ ಕಾಯಿಲೆಗಳನ್ನು ಉಂಟುಮಾಡಬಹುದು. ಜಠರಗರುಳಿನ ಸೋಂಕಿನಿಂದಾಗಿ, ಜನರು ಜ್ವರ, ಅತಿಸಾರ, ವಾಂತಿ ಮತ್ತು ನಿರ್ಜಲೀಕರಣ, ವಾಕರಿಕೆ ಮತ್ತು ವಾಂತಿ ಮುಂತಾದ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ.
ಉಸಿರಾಟದ ಸಮಸ್ಯೆ : ಮರದ ಚಾಪಿಂಗ್ ಬೋರ್ಡ್ ತೇವಾಂಶ ಹೀರಿಕೊಳ್ಳುವ ಕಾರಣ ಮೈಕೋಟಾಕ್ಸಿನ್‌ಗಳ ನಿರ್ಮಾಣಕ್ಕೆ ದಾರಿಯಾಗುತ್ತದೆ. ಉಸಿರಾಟದ ತೊಂದರೆ ಮತ್ತು ಅಲರ್ಜಿ ಸಮಸ್ಯೆ ನಿಮ್ಮನ್ನು ಕಾಡುತ್ತದೆ.
ಜೀರ್ಣಾಂಗ ಸಮಸ್ಯೆ : ಮರದ ಸಣ್ಣ ತುಂಡುಗಳು ಅಥವಾ ಹಳೆಯ ಹಲಗೆ ಕಣಗಳು ಹೊಟ್ಟೆ ಸೇರುವ ಕಾರಣ ಜೀರ್ಣಕ್ರಿಯೆ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಇದಲ್ಲದೆ ಕರುಳಿನ ಗಾಯ ಕಾಡುತ್ತದೆ.
ಈ 4 ಆಹಾರಗಳು ತಿಂದ್ರೆ ಹೊಟ್ಟೆಗೆ ಅಪಾಯ ತಪ್ಪಿದ್ದಲ್ಲ! ಉತ್ತಮ ಆಹಾರ ಯಾವುದು?
ಇತರ ಸಮಸ್ಯೆ : ಒಂದೇ ಬೋರ್ಡ್ ನಲ್ಲಿ ಮಾಂಸ, ತರಕಾರಿ ಎಲ್ಲವನ್ನೂ ಕತ್ತರಿಸುವ ಕಾರಣ ಬೋರ್ಡ್ ರೋಗಕ್ಕೆ ದಾರಿಮಾಡಿಕೊಡುತ್ತದೆ. ಆಹಾರದಿಂದ ಬರುವ ರೋಗಕ್ಕೆ ಇದು ಕಾರಣವಾಗುತ್ತದೆ.
ಯಾವ ಬೋರ್ಡ್ ಬಳಸಬೇಕು? : ಪ್ಲಾಸ್ಟಿಕ್ ಹಾಗೂ ಮರದ ಬೋರ್ಡ್ ಅಪಾಯಕಾರಿಯಾಗಿದ್ದು, ನೀವು ಮತ್ತ್ಯಾವ ಬೋರ್ಡ್ ಬಳಕೆ ಮಾಡ್ಬೇಕು ಎಂಬ ವಿವರ ಇಲ್ಲಿದೆ.
ಬಿದಿರಿನಿಂದ ಮಾಡಿದ ಚಾಪಿಂಗ್ ಬೋರ್ಡ್ : ಬಿದಿರು ಪರಿಸರ ಸ್ನೇಹಿಯಾಗಿದೆ. ಸಾಂಪ್ರದಾಯಿಕ ಮರದ ಹಲಗೆಗಳಿಗಿಂತ ಭಿನ್ನವಾಗಿ, ಬಿದಿರು ಕಡಿಮೆ ರಂಧ್ರಗಳನ್ನು ಹೊಂದಿರುತ್ತದೆ ಮತ್ತು ನೀರನ್ನು ಹೀರಿಕೊಳ್ಳುವುದಿಲ್ಲ.
ಗ್ಲಾಸ್ ಅಥವಾ ಅಕ್ರಿಲಿಕ್ ಬೋರ್ಡ್: ಗ್ಲಾಸ್ ಬೋರ್ಡ್ ರಂಧ್ರ ಹೊಂದಿರುವುದಿಲ್ಲ. ಇವು ಸ್ವಚ್ಛಗೊಳಿಸಲು ಅತ್ಯಂತ ಸುಲಭ. ಆದ್ರೆ ಬಿಸಿಯಾದ ಅಥವಾ ಸೂಕ್ಷ್ಮವಾದ ಆಹಾರವನ್ನು ಕತ್ತರಿಸಲು ಅವು ಉತ್ತಮವಾಗಿಲ್ಲ.
ಸ್ಟೀಲ್ ಬೋರ್ಡ್ : ಸ್ಟೇನ್‌ಲೆಸ್ ಸ್ಟೀಲ್ ಬೋರ್ಡ್‌ಗಳು ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಗಳಿಸುತ್ತಿವೆ. ಹೆಚ್ಚು ಬಾಳಿಕೆ ಬರುವ, ರಂಧ್ರಗಳಿಲ್ಲದ ಮತ್ತು ಅತ್ಯಂತ ಸುಲಭವಾಗಿ ಸ್ವಚ್ಛಗೊಳಿಸಬಹುದಾದ ಬೋರ್ಡ್ ಆಗಿದೆ.