ಅಣಬೆ ಸಸ್ಯಹಾರವೇ, ಮಾಂಸಹಾರವೇ ಎನ್ನುವ ಬಗ್ಗೆ ಅನೇಕರಿಗೆ ಗೊಂದಲವಿದೆ. ಅದು ಸಸ್ಯಹಾರವಾಗಿದ್ದು, ಅದರ ಸೇವನೆಯಿಂದ ಸಾಕಷ್ಟು ಲಾಭವಿದೆ. ಅಣಬೆ ತಿಂದ್ರೆ ನಿಮ್ಮ ದೇಹಕ್ಕೆ ಏನೇಲ್ಲ ಪ್ರಯೋಜನ ಎಂಬುದನ್ನು ನಾವು ಹೇಳ್ತೇವೆ.
ದೇಹದ ತೂಕ ಇಳಿಸಿಕೊಳ್ಳಲು ಅಥವಾ ದೇಹದ ತೂಕವನ್ನು ಸಮತೋಲನದಲ್ಲಿಡುವುದಕ್ಕಾಗಿ ಅನೇಕ ಮಂದಿ ಜಿಮ್, ವ್ಯಾಯಾಮ, ಡಯಟ್, ವರ್ಕ್ ಔಟ್ ನಂತಹ ನಾನಾ ಬಗೆಯ ಫಿಟ್ನೆಸ್ ತಂತ್ರಗಳ ಪ್ರಯೋಗ ಮಾಡುತ್ತಾರೆ. ಕೊಬ್ಬಿನ ಆಹಾರಗಳ ಸೇವನೆ ದೇಹದ ತೂಕವನ್ನು ಹೆಚ್ಚಿಸುತ್ತದೆ. ಹಾಗಾಗಿ ತೂಕ ಇಳಿಸಲು ಕೊಬ್ಬಿನ ಅಂಶ ಕಡಿಮೆಯಿರುವ ಮತ್ತು ಪೋಷಕಾಂಶಗಳು ಹೆಚ್ಚಿರುವ ಆಹಾರದ ಸೇವನೆ ಅತ್ಯಗತ್ಯವಾಗಿದೆ.
ದೇಹ (Body)ದ ತೂಕವನ್ನು ಇಳಿಸುವಂತಹ ಅನೇಕ ಆಹಾರ (Food) ಗಳಿವೆ. ಅವುಗಳಲ್ಲಿ ಅಣಬೆ ಕೂಡ ಒಂದು. ಅಣಬೆ (Mushroom) ಯನ್ನು ಈಗಾಗಲೇ ಅನೇಕ ಮಂದಿ ತಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಶಿಲೀಂಧ್ರವಾಗಿರುವ ಅಣಬೆಯನ್ನು ಎಲ್ಲ ತರಕಾರಿಗಳಂತೆಯೇ ಬಳಸಲಾಗುತ್ತದೆ. ನಮ್ಮಲ್ಲಿ ಪ್ರಾಚೀನ ಕಾಲದಿಂದಲೂ ಇದರಿಂದ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಅಣಬೆಯಿಂದ ನಾನಾ ತಿಂಡಿ, ಸ್ನ್ಯಾಕ್ಸ್ ನಂತಹ ಆಹಾರಗಳನ್ನು ಕೂಡ ತಯಾರಿಸಬಹುದಾಗಿದೆ. ಬೇರೆ ತರಕಾರಿಗಳೊಡನೆ ಕೂಡ ಇದನ್ನು ಸೇರಿಸಿ ಅಡುಗೆ ಮಾಡಲಾಗುತ್ತದೆ. ಹಾಗಂತ ಎಲ್ಲ ಅಣಬೆಗಳು ಸೇವಿಸಲು ಯೋಗ್ಯವಾಗಿರುವುದಿಲ್ಲ. ಅವುಗಳಲ್ಲಿ ಕೆಲವೇ ಪ್ರಭೇದದ ಅಣಬೆಗಳು ಮಾತ್ರ ಸೇವಿಸಲು ಯೋಗ್ಯವಾಗಿರುತ್ತದೆ.
HEALTH TIPS: ತಲೆನೋವಿಗೆ ಕ್ಷಣದಲ್ಲಿ ಉಪಶಮನ ಅಂತಾ ಮಾತ್ರೆ ನುಂಗೋದು ಸರೀನಾ?
ಅಣಬೆಗಳು ದೇಹಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ನೀಡುತ್ತವೆ. ಇದು ವಿವಿಧ ಆಕಾರದಲ್ಲಿ ಮತ್ತು ಬಣ್ಣಗಳಲ್ಲಿ ದೊರೆಯುತ್ತದೆ. ಅಣಬೆ ಬಿ ಜೀವಸತ್ವವನ್ನು ಹೊಂದಿದ್ದು, ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ಇದು ಪ್ರೋಟೀನ್, ಎಂಟಿಆಕ್ಸಿಡೆಂಟ್ ಮತ್ತು ಪೋಷಕಾಂಶಗಳ ಆಗರವಾಗಿದೆ. ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯದ ಸಮಸ್ಯೆಗೆ ಇದು ರಾಮಬಾಣವಾಗಿದೆ. ಆಧುನಿಕ ಆಹಾರ ಪದ್ಧತಿಯಿಂದ ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಹೊರಹಾಕುವ ಕೆಲಸ ಇದು ಮಾಡುತ್ತದೆ.
ಅಣಬೆಯಿಂದ ಶರೀರಕ್ಕಾಗುವ ಪ್ರಯೋಜನಗಳಿವು :
ಅಣಬೆಯಲ್ಲಿದೆ ಹೆಚ್ಚಿನ ಫೈಬರ್ : ಅಣಬೆಗಳು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುವುದರಿಂದ ಇದನ್ನು ತಿಂದಾಗ ಬೇಗನೆ ಹಸಿವಾಗುವುದಿಲ್ಲ. ಹಸಿವಾಗದೇ ಇದ್ದಾಗ ನಾವು ಸೇವಿಸುವ ಆಹಾರದ ಪ್ರಮಾಣವೂ ಕಡಿಮೆಯಾಗುತ್ತದೆ. ಇದರಿಂದ ದೇಹದ ತೂಕ ಕಡಿಮೆಯಾಗುತ್ತದೆ.
Health Tips: ಈ ಐದು ಸಂದರ್ಭಗಳಲ್ಲಿ ತೂಕ ನೋಡ್ಬೇಡಿ!
ಕಡಿಮೆ ಕ್ಯಾಲೊರಿ ಮತ್ತು ಕೊಬ್ಬು : ಕೊಬ್ಬಿನ ಪ್ರಮಾಣವನ್ನು ಕಡಿಮೆ ಹೊಂದಿರುವ ಮತ್ತು ಕಡಿಮೆ ಕ್ಯಾಲೊರಿಯುಳ್ಳ ಅಣಬೆ ಬೊಜ್ಜಿನ ಸಮಸ್ಯೆ ಹೊಂದಿರುವವರಿಗೆ ಒಳ್ಳೆಯ ಆಹಾರವಾಗಿದೆ.
ಕರುಳಿನ ಆರೋಗ್ಯಕ್ಕೆ ಒಳ್ಳೆಯದು : ಕರುಳಿನ ಆರೋಗ್ಯಕ್ಕೆ ಅಣಬೆ ಉತ್ತಮ ಆಹಾರವಾಗಿದೆ. ಕರುಳಿನ ಆರೋಗ್ಯ ಚೆನ್ನಾಗಿದ್ದರೆ ಅದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ ಮತ್ತು ತೂಕ ಕೂಡ ಇಳಿಯತ್ತದೆ.
ಅಣಬೆ ಎಂಟಿಆಕ್ಸಿಡೆಂಟ್ ಆಗಿದೆ : ಅಣಬೆಯಲ್ಲಿರುವ ಉತ್ಕರ್ಷಣ ನಿರೋಧಕಗಳಿಂದಾಗಿ ಇದು ದೇಹದಲ್ಲಿ ಉರಿಯೂತದ ಅಪಾಯವನ್ನು ಕಡಿಮೆಮಾಡುತ್ತದೆ. ಅಣಬೆ ಎಣ್ಣೆ ಮತ್ತು ಕೊಬ್ಬಿನ ಆಹಾರಗಳಿಂದ ದೇಹವನ್ನು ರಕ್ಷಿಸುತ್ತದೆ.
ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ : ಅಣಬೆಯಲ್ಲಿ ಖನಿಜ ಮತ್ತು ಪೋಷಕಾಂಶಗಳು ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದರಿಂದ ಹೃದಯದ ಖಾಯಿಲೆಗಳು ಕೂಡ ಕಡಿಮೆಯಾಗುತ್ತದೆ. ಮಧುಮೇಹ 2 ಹೊಂದಿರುವವರು ಅಣಬೆಯನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ.
ವಿಟಮಿನ್ ‘ಡಿ’ಯ ಆಗರ : ಇಂದು ಬಹುತೇಕ ಮಂದಿ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಸೂರ್ಯನಿಂದ ನಮಗೆ ವಿಟಮಿನ್ ಡಿ ಸಿಗುತ್ತದೆ. ಅದರ ಹೊರತಾಗಿ ಅಣಬೆಗಳಿಂದಲೂ ನಮ್ಮ ಶರೀರಕ್ಕೆ ವಿಟಮಿನ್ ಡಿ ಸಿಗುತ್ತದೆ. ಕೆಲವು ಅಧ್ಯಯನಗಳು, ಅಣಬೆಗಳು ಹೃದಯಕ್ಕೆ ಹಾಗೂ ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಉತ್ತಮ ಆಹಾರವಾಗಿದೆ. ಇದು ನೀವು ಅನೇಕ ಗಂಭೀರ ಖಾಯಿಲೆಗೆ ತುತ್ತಾಗುವುದನ್ನು ತಪ್ಪಿಸುತ್ತದೆ. ಇದು ಮೂಳೆಗಳನ್ನು ಕೂಡ ಬಲಪಡಿಸುತ್ತದೆ ಮತ್ತು ಸ್ತನ ಕ್ಯಾನ್ಸರ್ ಅನ್ನು ತಡೆಯುವ ಶಕ್ತಿ ಅಣಬೆಗೆ ಇದೆ. ಅಣಬೆಗಳು ದೇಹದ ಚಯಾಪಚಯ ಕ್ರಿಯೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇವು ಕ್ಯಾಲೊರಿಗಳನ್ನು ಸುಡುವ ಮೂಲಕ ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ ಎಂದು ಹೇಳುತ್ತವೆ.