Health Tips: ಈ ಐದು ಸಂದರ್ಭಗಳಲ್ಲಿ ತೂಕ ನೋಡ್ಬೇಡಿ!

By Suvarna News  |  First Published Aug 25, 2023, 4:59 PM IST

ಪದೇ ಪದೇ ತೂಕ ಪರೀಕ್ಷೆ ಮಾಡೋದು ಒಂದು ಮಾನಸಿಕ ಖಾಯಿಲೆ. ಊಟ ಮಾಡಿದ್ಮೇಲೆ, ನಿದ್ರೆ ಮಾಡಿ ಎದ್ಮೇಲೆ ಆಗ – ಈಗ ಅಂತ ದಿನದಲ್ಲಿ ಒಮ್ಮೆ ನೀವೂ ತೂಕ ಚೆಕ್ ಮಾಡ್ತಿದ್ದರೆ ಯಾವಾಗ ನಿಮ್ಮ ತೂಕವನ್ನು ಪರೀಕ್ಷೆ ಮಾಡ್ಬಾರದು ಅಂತಾ ಮೊದಲು ತಿಳಿದ್ಕೊಳ್ಳಿ. 
 


ದೇಹದ ತೂಕ ಏರಿದ್ರೂ ಕಷ್ಟ, ಇಳಿದ್ರೂ ಕಷ್ಟ. ಅದನ್ನು ಸಮತೋಲನದಲ್ಲಿಟ್ಟುಕೊಳ್ಳುವುದು ಒಂದು ಸವಾಲು. ನಮ್ಮ ತೂಕ ನಾನಾ ಕಾರಣಕ್ಕೆ ಏರುತ್ತದೆ. ಅನೇಕ ಬಾರಿ ಏಕಾಏಕಿ ನಾಲ್ಕೈದು ಕೆಜಿ ತೂಕ ಏರಬಹುದು ಇಲ್ಲ ಇಳಿಯಬಹುದು. ಇಷ್ಟು ದೊಡ್ಡ ಪ್ರಮಾಣದಲ್ಲಿ ತೂಕದಲ್ಲಿ ಏರುಪೇರಾದಾಗ ಭಯವಾಗುತ್ತದೆ. ಕನ್ನಡಿ ಮುಂದೆ ನಿಂತಾಗ, ಸ್ನೇಹಿತರು, ಸಂಬಂಧಿಕರು ಸ್ವಲ್ಪ ದಪ್ಪವಾಗಿದ್ದೀರಿ ಅಲ್ವಾ ಅಂದಾಗ ಅನುಮಾನ ಕ್ಲಿಯರ್ ಮಾಡಿಕೊಳ್ಳೋಕೆ ತೂಕ ಚೆಕ್ ಮಾಡ್ಬೇಕಲ್ವಾ? ಹಿಂದೆ ಒಂದು ರೂಪಾಯಿ ಕಾಯಿನ್ ಹಾಕಿ ತೂಕ ಚೆಕ್ ಮಾಡಿಕೊಳ್ತಿದ್ವಿ. ಈಗ ಬಹುತೇಕರ ಮನೆಗೆ ವೇಟಿಂಗ್ (Waiting) ಮಷಿನ್ ಲಗ್ಗೆ ಇಟ್ಟಿದೆ. ಕಡಿಮೆ ಬೆಲೆಯಲ್ಲಿ ಸಿಗುವ ತೂಕ ಲೆಕ್ಕ ಮಾಡುವ ಮಷಿನನ್ನು ಜನರು ಮನೆಯಲ್ಲೇ ಇಟ್ಟುಕೊಂಡು ಆಗಾಗ ಚೆಕ್ ಮಾಡ್ತಿರುತ್ತಾರೆ. ದಿನ ಬೆಳಿಗ್ಗೆ ಒಮ್ಮೆ, ರಾತ್ರಿ ಒಮ್ಮೆ, ಊಟವಾದ್ಮೇಲೆ ಒಂದು ಬಾರಿ ಅಂತಾ ಆಗಾಗ ಚೆಕ್ ಮಾಡುವ ಜನರಿದ್ದಾರೆ ಅಂದ್ರೆ ನೀವು ನಂಬ್ಲೇಬೇಕು.

ಹೀಗೆ ಪದೇ ಪದೇ ತೂಕ (Weight) ವನ್ನು ಪರೀಕ್ಷಿಸಿಕೊಳ್ಳುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ ಅಲ್ಲದೇ ಕೆಲವು ಸಮಯದಲ್ಲಿ ನಾವು ವೇಟ್ ಚೆಕ್ ಮಾಡಿದರೆ ಅದರಿಂದ ನಮಗೆ ತಪ್ಪು ಮಾಹಿತಿಯೂ ಸಿಗಬಹುದು. ಹಾಗಾಗಿ ತೂಕವನ್ನು ಪರೀಕ್ಷಿಸಿಕೊಳ್ಳಲೂ ಸರಿಯಾದ ಸಮಯ ಯಾವುದೆಂದು ನಾವು ತಿಳಿದುಕೊಳ್ಳಬೇಕು. ನಾವು ಆಸ್ಪತ್ರೆಗಳಲ್ಲಿ ಕೆಲವು ಪರೀಕ್ಷೆಗಳನ್ನು ಮಾಡಿಸುವಾಗ ವೈದ್ಯರು ಮೊದಲೇ ನಮಗೆ ಕೆಲವು ನಿಯಮಗಳನ್ನು ಹೇಳುತ್ತಾರೆ. ಹಾಗೆಯೇ ನಮ್ಮ ದೇಹದ ತೂಕವನ್ನು ಪರೀಕ್ಷಿಸಲು ಕೂಡ ಕೆಲವು ನಿಯಮಗಳನ್ನು ಪಾಲಿಸುವ ಅವಶ್ಯಕತೆಯಿದೆ. ಆ ನಿಯಮಗಳನ್ನು ಪಾಲಿಸಿದಾಗ ಮಾತ್ರ ನಿಖರವಾದ ತೂಕ ತಿಳಿಯುತ್ತದೆ. ಇಲ್ಲದಿದ್ದಲ್ಲಿ ನಾವು ಸರಿಯಾದ ತೂಕವನ್ನು ತಿಳಿಯಲು ಸಾಧ್ಯವಿಲ್ಲ.

Tap to resize

Latest Videos

ಲೈಂಗಿಕ ಸೋಂಕಿನಿಂದ ಜೀವಕ್ಕೆ ಅಪಾಯ; ಪುರುಷರೇ ಇರಲಿ ಜಾಗೃತಿ

ಈ ಸಮಯದಲ್ಲಿ ಚೆಕ್ ಮಾಡಿದ್ರೆ ತೂಕ ಸರಿಯಾಗಿ ಬರೋದಿಲ್ಲ : 

ಆಹಾರ ಸೇವಿಸಿದ ತಕ್ಷಣ ವೇಟ್ ಚೆಕ್ ಮಾಡ್ಬೇಡಿ : ಊಟ ಮಾಡುವಾಗ ನೀವು ಹೆಚ್ಚಿನ ನೀರು ಮತ್ತು ಆಹಾರವನ್ನು ಸೇವಿಸುವುದರಿಂದ ನಿಮ್ಮ ತೂಕ ಹೆಚ್ಚಾಗಿರುತ್ತದೆ. ಹಾಗಾಗಿ ಊಟ ಮಾಡಿದ ತಕ್ಷಣ ನೀವು ತೂಕವನ್ನು ಪರೀಕ್ಷಿಸಿಕೊಂಡರೆ ತೂಕ ಸರಿಯಾಗಿ ತೋರಿಸುವುದಿಲ್ಲ. ಬದಲಾಗಿ ನಿಮ್ಮ ದೇಹದ ತೂಕಕ್ಕಿಂತ ಹೆಚ್ಚಿನ ತೂಕವನ್ನು ತೋರಿಸುತ್ತದೆ. ಹಾಗಾಗಿ ಊಟವಾದ ತಕ್ಷಣ ವೇಟ್ ಚೆಕ್ ಮಾಡೋದು ಸರಿಯಲ್ಲ.

ಹೆಚ್ಚು ನೀರು ಕುಡಿದ ನಂತರ ತೂಕ ನೋಡಬೇಡಿ : ಬಾಯಾರಿಕೆಯಾದಾಗ ನಾವು ಹೆಚ್ಚು ನೀರು ಕುಡಿಯುವುದು ಸಹಜ. ಹಾಗೆ ನೀರು ಕುಡಿದ ನಂತರವೂ ನಮ್ಮ ದೇಹದ ತೂಕದಲ್ಲಿ ಏರಿಕಾಯಾಗುತ್ತದೆ. ಆದ್ದರಿಂದ ಅತಿಯಾಗಿ ನೀರು ಕುಡಿದ ನಂತರವೂ ತೂಕ ಎಷ್ಟಿದೆ ಎಂದು ನೋಡಬಾರದು.

ವ್ಯಾಯಾಮ ಮಾಡಿದ ನಂತರ ತೂಕ ನೋಡೋದು ತಪ್ಪು : ವರ್ಕ್ ಔಟ್ ಅಥವಾ ವ್ಯಾಯಾಮ ಮಾಡಿದ ನಂತರ ತೂಕ ನೋಡಿಕೊಳ್ಳುವುದೂ ತಪ್ಪು. ಏಕೆಂದರೆ ವ್ಯಾಯಾಮ ಮಾಡಿದ ಸಮಯದಲ್ಲಿ ನಮ್ಮ ದೇಹದಿಂದ ಸಾಕಷ್ಟು ಬೆವರು ಹರಿಯುತ್ತದೆ. ಈ ಸಮಯದಲ್ಲಿ ದೇಹದ ತೂಕ ಕಡಿಮೆಯಾಗುತ್ತದೆ ಹಾಗೂ ಆ ತೂಕ ತಾತ್ಕಾಲಿಕವಾಗಿರುತ್ತದೆ. ಹಾಗಾಗಿ ವ್ಯಾಯಾಮದ ನಂತರ ವೇಟ್ ಚೆಕ್ ಮಾಡೋದ್ರಿಂದ ನಿಮ್ಮ ಸರಿಯಾದ ವೇಟ್ ಎಷ್ಟು ಅನ್ನೋದು ಗೊತ್ತಾಗೊಲ್ಲ.

Health Tips: ನಕ್ರೆ ಮಾತ್ರವಲ್ಲ, ಅತ್ತರೂ ಆರೋಗ್ಯಕ್ಕೆ ಒಳ್ಳೇದು!

ಋತುಸ್ರಾವದ ಸಮಯದಲ್ಲೂ ತೂಕ ಪರೀಕ್ಷೆ ಬೇಡ : ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಹಾರ್ಮೋನ್ ಇಂಬಾಲೆನ್ಸ್ ಆಗುತ್ತೆ. ಅಂತಹ ಸಮಯದಲ್ಲಿ ಅವರ ತೂಕ ಹೆಚ್ಚಾಗಬಹುದು. ಅಷ್ಟೇ ಅಲ್ಲದೇ ಮುಟ್ಟಿನ ಅವಧಿಯಲ್ಲಿ ಶ್ರೋಣಿಯ ಪ್ರದೇಶದಲ್ಲಿ ಉಂಟಾಗುವ ಬದಲಾವಣೆಗಳಿಂದಲೂ ಮಹಿಳೆಯರ ತೂಕದಲ್ಲಿ ವ್ಯತ್ಯಾಸವುಂಟಾಗಬಹುದು. ಇದರಿಂದಾಗಿ ಋತುಸ್ರಾವದ ಸಮಯದಲ್ಲಿ ಮಹಿಳೆಯರು ತೂಕವನ್ನು ಚೆಕ್ ಮಾಡಿಕೊಳ್ಳುವುದು ಒಳ್ಳೆಯದಲ್ಲ.

ಅನಾರೋಗ್ಯದ ಸಮಯದಲ್ಲಿ ವೇಟ್ ಚೆಕ್ ಮಾಡೋದು ಬೇಡ : ಅನಾರೋಗ್ಯದ ಸಮಯದಲ್ಲಿಯೂ ದೇಹದ ತೂಕ ಕಡಿಮೆಯಾಗಿರುತ್ತದೆ. ಅಂತಹ ಸಂದರ್ಭದಲ್ಲಿಯೂ ವೇಟ್ ಚೆಕ್ ಮಾಡ್ಬೇಡಿ.

ದಿನದ ಈ ಸಮಯದಲ್ಲೂ ತೂಕ ನೋಡಬೇಡಿ : ಬೆಳಿಗ್ಗೆ ಎದ್ದೊಡನೆ ನಿಮ್ಮ ತೂಕದಲ್ಲಿ ಇಳಿಕೆಯಾಗಿರುತ್ತದೆ ಹಾಗಾಗಿ ಬೆಳಿಗ್ಗೆ ತೂಕ ನೋಡಬೇಡಿ.

ನಿದ್ದೆ ಸರಿಯಾಗಿ ಆಗದೇ ಇದ್ದಾಗ :  ನೀವು ಸರಿಯಾಗಿ ನಿದ್ರೆ ಮಾಡದೇ ಇದ್ದಾಗ ನಿಮ್ಮ ದೇಹದಲ್ಲಿ ಹಾರ್ಮೋನ್ ನಲ್ಲಿ ವ್ಯತ್ಯಾಸವಾಗಿ ಹಸಿವು ಹೆಚ್ಚುತ್ತದೆ ಅಥವಾ ಚಯಾಪಚಯ ಕ್ರಿಯೆ ನಿಧಾನವಾಗಬಹುದು ಹಾಗಾಗಿ ಸರಿಯಾದ ನಿದ್ರೆ ಇಲ್ಲದೇ ಇದ್ದಾಗ ತೂಕ ಪರೀಕ್ಷೆ ಬೇಡ.  

click me!