ಜೀವಾನೇ ಕಿತ್ತುಕೊಳ್ತು Weight Lose ಮಾಡ್ಕೊಳ್ಳೋಕೆ ತಗೊಂಡ ಟ್ಯಾಬ್ಲೆಟ್ಸ್‌!

By Vinutha Perla  |  First Published Jan 5, 2023, 12:29 PM IST

ತೂಕ ಹೆಚ್ಚಳ ಇತ್ತೀಚಿನ ವರ್ಷಗಳಲ್ಲಿ ಹಲವರನ್ನು ಕಾಡುತ್ತಿರುವ ಸಮಸ್ಯೆ, ಹೀಗಾಗಿ ಥಟ್ಟಂತ ವೈಟ್ ಲಾಸ್ ಮಾಡಿಕೊಳ್ಬೇಕು ಅಂತ ಈಜಿ ಮೆಥಡ್ ಅನುಸರಿಸ್ತಾರೆ. ಹಾಗೆಯೇ ಚೆನ್ನೈನಲ್ಲೊಬ್ಬ ವ್ಯಕ್ತಿ ತೂಕ ಇಳಿಸಿಕೊಳ್ಳಲು ಟ್ಯಾಬ್ಲೆಟ್ ಸೇವಿಸಿ ಮೃತಪಟ್ಟಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 


ಚೆನ್ನೈ: ತೂಕ ಇಳಿಸೋದು (Weight lose) ಚಿಟಿಕೆ ಹೊಡೆದಷ್ಟು ಸುಲಭವಲ್ಲ. ಅತಿ ವ್ಯಾಯಾಮ, ಅತಿ ಡಯಟ್ ಮಾಡಿ ಕೂಡ ತೂಕ ಇಳಿಸೋದು ಅಪಾಯ. ಸರಿಯಾಗಿ ವರ್ಕೌಟ್‌, ಡಯೆಟ್, ವಾಕಿಂಗ್‌, ರನ್ನಿಂಗ್ ಮೊದಲಾದವುಗಳನ್ನು ಮಾಡಿದರಷ್ಟೇ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಆದರೆ ಇದನ್ನೆಲ್ಲಾ ಯಾರ್ ಮಾಡ್ತಾರಪ್ಪಾ ಅಂತ ಸೋಮಾರಿಯಾಗಿರುವವರು ಸುಲಭವಾದ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾರೆ. ಅಂಥಹದ್ದರಲ್ಲಿ ಒಂದು ವೈಟ್ ಲಾಸ್ ಪಿಲ್ಸ್. ಇದರಿಂದ ಸುಲಭವಾಗಿ ತೂಕ ಇಳಿಕೆಯಾಗುತ್ತೆ ಅಂತ ಹೇಳುತ್ತಾರಾದರೂ ಇದರಿಂದಾಗೋ ಅಡ್ಡ ಪರಿಣಾಮಗಳು ಸಹ ಒಂದೆರಡಲ್ಲ. ಹಾಗೆಯೇ ತೂಕ ಇಳಿಸಿಕೊಳ್ಳೋ ಭರದಲ್ಲಿ ತಾಂಬರಂನಲ್ಲಿ ತೂಕ ಇಳಿಸುವ ಮಾತ್ರೆ ಸೇವಿಸಿದ 21 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆಗೆ (Treatment) ಸ್ಪಂದಿಸದೆ ಮೃತಪಟ್ಟಿದ್ದಾರೆ.

ತೂಕ ಇಳಿಸಿಕೊಳ್ಳಲು ಪಿಲ್ಸ್ ಸೇವಿಸಿದ್ದ ವ್ಯಕ್ತಿ ಸಾವು
ಮೃತರನ್ನು ಪಿ ಸೂರ್ಯ (21) ಎಂದು ಗುರುತಿಸಲಾಗಿದ್ದು, ಕಾಂಚೀಪುರಂನ ಶ್ರೀಪೆರಂಬದೂರು ಸಮೀಪದ ಸೋಮಂಗಲಂನಲ್ಲಿ ಹಾಲಿನ ಸಂಸ್ಥೆಯೊಂದರಲ್ಲಿ ವಿತರಕರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥೂಲಕಾಯದಿಂದ ಬಳಲುತ್ತಿದ್ದ ಸೂರ್ಯ ಅವರಿಗೆ ಕಳೆದ ತಿಂಗಳುಗಳಿಂದ ತೂಕ ಕಡಿಮೆ ಮಾಡಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಡಿಸೆಂಬರ್ 22 ರಿಂದ, ಅವರು ಸ್ನೇಹಿತರ ಸಲಹೆಗಳ ಆಧಾರದ ಮೇಲೆ ಮಾತ್ರೆಗಳನ್ನು (Tablets) ತೆಗೆದುಕೊಳ್ಳಲು ಪ್ರಾರಂಭಿಸಿದರು. ಔಷಧಗಳ ಡೋಸೇಜ್ ಮತ್ತು ಅಂಶಗಳ ಬಗ್ಗೆ ವಿಚಾರಣೆಗೆ ಹಾಜರಾಗಲು ಖಾಸಗಿ ಕಂಪನಿಗೆ ಕರೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tap to resize

Latest Videos

New Year 2023: ತೂಕ ಇಳಿಸಿಕೊಳ್ಳೋ ರೆಸಲ್ಯೂಶನ್ ಮಾಡಿದೋರಿಗೆ ಸಿಂಪಲ್ ಟಿಪ್ಸ್

ಕಂಪನಿಯು ಬಹು-ಹಂತದ ಮಾರ್ಕೆಟಿಂಗ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಹೀಗಾಗಿ ಸೂರ್ಯ ಅವರ ಬಳಿ ಪ್ರಿಸ್ಕ್ರಿಪ್ಷನ್ ಇರಲಿಲ್ಲ. ಹಾಗೆಯೇ ನೇರವಾಗಿ ಅವರಿಗೆ ವೈಟ್‌ ಲಾಸ್‌ ಪಿಲ್ಸ್‌ಗಳು ದೊರಕಿತ್ತು. ಮಾತ್ರೆಗಳನ್ನು ಸೇವಿಸಿದ ಹತ್ತು ದಿನಗಳಲ್ಲಿ ಅವರ ದೇಹ (Body)ದಲ್ಲಿ ತೀವ್ರ ಬದಲಾವಣೆ ಕಂಡುಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಟ್ಯಾಬ್ಲೆಟ್ ತೆಗೆದುಕೊಂಡು ಮನೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಸೂರ್ಯ
ಜನವರಿ 1ರಂದು ಸೂರ್ಯ ತನ್ನ ಮನೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದು, ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೂಡಲೇ ಅವರನ್ನು ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ (Hospital) ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸೂರ್ಯನ ತಂದೆ ಪಾಳಯಂ ನೀಡಿದ ದೂರಿನ ಆಧಾರದ ಮೇಲೆ ಸೋಮಂಗಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸುಲಭವಾಗಿ ತೂಕ ಇಳಿಸಿಕೊಳ್ಳಲು ಹೀಗೆ ಮಾಡಿ
ತಜ್ಞರ ಪ್ರಕಾರ ಮೂರು ತಿಂಗಳ ಕಾಲ ನೀವು ಕೆಲ ಡಯಟ್ ಪಾಲನೆ ಮಾಡಿದ್ರೆ ಆರಾಮವಾಗಿ ಬೊಜ್ಜನ್ನು ಇಳಿಸಬಹುದು. ನಾವಿಂದು ಅದು ಯಾವುದು ಎಂಬುದನ್ನು ನಿಮಗೆ ಹೇಳ್ತೆವೆ. ಬೆಳಿಗ್ಗೆ ಎದ್ದ ತಕ್ಷಣ ಮಾಡಿ ಈ ಕೆಲಸ. ಬೆಳಿಗ್ಗೆ (Morning) ಬೇಗ ಏಳುವುದು ಬಹಳ ಮುಖ್ಯ. ಬೆಳಿಗ್ಗೆ 7 ಗಂಟೆ ಸುಮಾರಿ ನೀವು ನಿಂಬೆ ನೀರನ್ನು ಸೇವನೆ ಮಾಡಬೇಕು. ನಮ್ಮ ದೇಹದಲ್ಲಿ ಸಾಕಷ್ಟು ವಿಷ ಪದಾರ್ಥವಿದ್ದು, ಅದು ಹೋಗ್ಬೇಕೆಂದ್ರೆ ಈ ನಿಂಬೆ ನೀರು ಪರಿಣಾಮಕಾರಿ. ಬೆಳಿಗ್ಗೆ ಒಂದು ಲೋಟ ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸ (lemon juice) ಬೆರೆಸಿ ಸೇವನೆ ಮಾಡಿ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು  ಆರೋಗ್ಯಕರವಾಗಿರಿಸುತ್ತದೆ. ಇದನ್ನು ನೀವು ಬದಲಿಸಬಹುದು. ಒಂದು ದಿನ ನಿಂಬೆ ನೀರು, ಒಂದು ದಿನ ಬೆಚ್ಚಗಿನ ನೀರು, ಇನ್ನೊಂದು ದಿನ ಅಜ್ವೈನ ನೀರು, ಮೆಂತೆ ನೀರು, ಹೀಗೆ ಬೇರೆ ಬೇರೆ ನೀರಿನ ಸೇವನೆ ಮಾಡಬಹುದು.

Weight Loss : 3 ತಿಂಗಳಲ್ಲಿ 15 ಕೆಜಿ ತೂಕ ಇಳಿಬೇಕೆಂದ್ರೆ ಈ ರೂಲ್ಸ್ ಫಾಲೋ ಮಾಡಿ

ಉಪಾಹಾರ ಮುಖ್ಯ : ಕೆಲವರು ತೂಕ ಇಳಿಸಿಕೊಳ್ಳಲು ಉಪಹಾರ (Breakfast) ಸ್ಕಿಪ್ ಮಾಡ್ತಾರೆ. ಅದು ತಪ್ಪು. ಹಾಗೆಯೇ ಸರಿಯಾದ ಸಮಯಕ್ಕೆ ಉಪಹಾರ ಸೇವನೆ ಮಾಡಬೇಕು. ನೀವು ಬೆಳಿಗ್ಗೆ 8.30ರ ಒಳಗೆ ಉಪಹಾರ ತಿನ್ನಿ. ಅದ್ರಲ್ಲಿ ಬಾಟಲ್ ಸೋರೆಕಾಯಿ ಇರುವಂತೆ ನೋಡಿಕೊಳ್ಳಿ. ಚೀಸ್ ನೊಂದಿಗೆ ಅರ್ಧ ಕಪ್ ಮೊಸರು ಮತ್ತು ಒಂದು ಸೇಬು ಹಣ್ಣನ್ನು ನೀವು ತಿನ್ನಬಹುದು. ಇದಲ್ಲದೆ ಬ್ರೌನ್ ಬ್ರೆಡ್ ನ 2 ಸ್ಲೈಸ್, ಸ್ಯಾಂಡ್ವಿಚ್ ಕೂಡ ತಿನ್ನಬಹುದು. ಇದ್ರಲ್ಲಿರುವ ತರಕಾರಿ ಆರೋಗ್ಯಕ್ಕೆ ಒಳ್ಳೆಯದು.  ಉಪಹಾರವನ್ನು ನೀವು ಬದಲಿಸಬಹುದು. 2 ಇಡ್ಲಿ , 2 ಗೋಧಿ ದೋಸೆ ಕೂಡ ನೀವು ತಿನ್ನಬಹುದು. ಉಪಹಾರ ಸೇವನೆ ಮಾಡಿದ ಒಂದು ಗಂಟೆ ನಂತ್ರ ನೀವು ಗ್ರೀನ್ ಟೀ ಸೇವನೆ ಮಾಡಿ.   

ಮಧ್ಯಾಹ್ನದ ಊಟ ಹೀಗಿರಲಿ :  ಮಧ್ಯಾಹ್ನದ ಊಟ ಏನು ಮಾಡ್ತೀರಿ ಎನ್ನುವ ಜೊತೆಗೆ ಯಾವ ಸಮಯದಲ್ಲಿ ಮಾಡುತ್ತೀರಿ ಎನ್ನುವುದು ಮುಖ್ಯ. ನೀವು 1.30 ರೊಳಗೆ ಊಟ ಮುಗಿಸಬೇಕು. ಊಟಕ್ಕೆ ಲೆಮನ್ ರೈಸ್, ಸಾಂಬಾರ್ ಬಳಸಬಹುದು. ಮಿಕ್ಸ್ ವೆಜ್ ಜೊತೆಗೆ 2 ರೋಟಿ ಮತ್ತು ಅರ್ಧ ಬೌಲ್ ಬೇಳೆ ಸೇವನೆ ಮಾಡಬಹುದು. ರಾಗಿ ಇಡ್ಲಿ - ಸಾಂಬಾರ್, ಗೋಧಿ ವೆಜ್ ಗಂಜಿ ಮತ್ತು ಅರ್ಧ ಕಪ್ ಮೊಸರು ಕೂಡ ಸೇವನೆ ಮಾಡಬಹುದು. ಒಂದೇ ಊಟ ಬೇಸರವಾದ್ರೆ ಇದನ್ನು ಬದಲಿಸಬೇಕು.  

ಮಸಾಲಾ ಟೀ: ನೀವು ನಾಲ್ಕು ಗಂಟೆ ಸುಮಾರಿ ಗ್ರೀನ್ ಟೀ ಅಥವಾ ಮಸಾಲಾ ಟೀ ಸೇವನೆ ಮಾಡಿ. ಮಸಾಲಾ ಟೀ ಜೀರ್ಣಕ್ರಿಯೆ ಸುಧಾರಿಸುತ್ತದೆ. ಕೊಬ್ಬನ್ನು ಕರಗಿಸಲು ಇದು ಸಹಾಯಕಾರಿ.  

ರಾತ್ರಿ ಊಟ: ರಾತ್ರಿ 7.30ರ ಆಸುಪಾಸಿಗೆ ನೀವು ಊಟ ಮಾಡುವುದು ಒಳ್ಳೆಯದು. ಊಟಕ್ಕೆ 1 ರೊಟ್ಟಿ ಮತ್ತು 1 ತರಕಾರಿ ಸೇವನೆ ಮಾಡಬಹುದು. ಸಲಾಡ್ ಇರಲಿ. ಆದ್ರೆ ರಾತ್ರಿ ಊಟವನ್ನು ಬಿಡಬೇಡಿ.  

click me!