ನೀವು ಏನು ಆಲೋಚನೆ ಮಾಡ್ತೀರೋ ಅದೇ ನೀವು, ಯಶಸ್ಸಿಗೆ ಪರಿಸರವಲ್ಲ ನಿಮ್ಮ ಮೆದುಳೇ ಕಾರಣ

Published : Aug 19, 2025, 12:17 PM IST
Personal Growth

ಸಾರಾಂಶ

Personal Growth : ನಮ್ಮ ಆಲೋಚನೆ ನಮ್ಮನ್ನು ಬದಲಿಸಬಲ್ಲದು. ಮನೆ, ಪರಿಸರ ಬದಲಿಸುವ ಮುನ್ನ ನಿಮ್ಮ ಮೆದುಳನ್ನು ಸ್ವಚ್ಛಗೊಳಿಸೋದು ಬಹಳ ಮುಖ್ಯ. 

ಇದು ನನ್ನಿಂದ ಸಾಧ್ಯವಿಲ್ಲಅಂದ್ಕೊಂಡು ಚಿಕ್ಕ ಕಲ್ಲನ್ನು ಎತ್ತಲು ಪ್ರಯತ್ನಿಸಿದ್ರೂ ಆ ಕಲ್ಲನ್ನು ಎತ್ತಲು ನಿಮಗೆ ಸಾಧ್ಯವಾಗೋದಿಲ್ಲ. ಕಲ್ಲು ಭಾರವಾಗಿಲ್ಲ, ನಿಮ್ಮ ಮನಸ್ಸು ನಕಾರಾತ್ಮಕ ಆಲೋಚನೆಯಿಂದ ತುಂಬಿದೆ. ಇದು ನಿಮ್ಮ ಯಶಸ್ಸಿಗೆ ದೊಡ್ಡ ತಡೆಗೋಡೆ. ನಮ್ಮ ಜೀವನ ನಮ್ಮ ಆಲೋಚನೆಗಳ ಜೊತೆ ಆಳವಾಗಿ ಸಂಪರ್ಕ ಹೊಂದಿದೆ. ಹೊರಗಿನ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬುದ್ರ ಮೇಲೆ ನಮ್ಮ ಪ್ರತಿಕ್ರಿಯೆ ಆಯ್ಕೆ, ಅನುಭವ ನಿಂತಿರೋದಿಲ್ಲ. ಅನೇಕ ಬಾರಿ ನಮಗೆ ನಾವು ಏನು ಹೇಳಿಕೊಳ್ತೇವೋ ಅದ್ರ ಮೂಲಕ ನಿರ್ಧಾರ ತೆಗೆದುಕೊಳ್ತೇವೆ. ನಮ್ಮ ಆಲೋಚನೆ, ಮೆದುಳನ್ನು ನಾವು ಮರು ಹೊಂದಿಸಬಹುದು. ನಕಾರಾತ್ಮಕ ಆಲೋಚನೆಯಿಂದ ಹೊರ ಬಂದು ನಮ್ಮನ್ನು ನಾವು ಮರುಸಂಘಟಿಸಿಕೊಳ್ಳುವ ಸಾಮರ್ಥ್ಯ ನಮಗಿದೆ. ನಮ್ಮ ನಿರ್ಧಾರವನ್ನು ಬದಲಿಸಿಕೊಂಡು, ಆಲೋಚನೆಯನ್ನು ಮರುಸಂಪರ್ಕಿಸಲು ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ಕೆಲ ಮಾರ್ಗಗಳಿವೆ.

ಸೀಮಿತಗೊಳಿಸುವ ನಂಬಿಕೆ ಬಿಡಿ : ಅನೇಕರ ನಂಬಿಕೆ ಸೀಮಿತಗೊಂಡಿದೆ. ಅವರು ಅದಕ್ಕಿಂತ ಹೆಚ್ಚಿನದನ್ನು ನಂಬಲಾರರು. ಉದಾಹರಣೆಗೆ ನಾನು ಹೆಚ್ಚು ಒಳ್ಳೆಯವನಲ್ಲ, ನಾನು ಯಾವಾಗ್ಲೂ ಸಕ್ಸಸ್ ಕಾಣೋದಿಲ್ಲ, ನಾನು ಗೆಲುವಿಗೆ ಅರ್ಹನಲ್ಲ ಇಂಥ ನಂಬಿಕೆಯಲ್ಲೇ ಜನರು ಬದುಕ್ತಿರುತ್ತಾರೆ. ಅವರಿಗೆ ಇದನ್ನು ಮೀರಿ ಹೋಗೋದು ಕಷ್ಟವಾಗುತ್ತೆ. ನೀವೂ ಇದೇ ಸ್ಥಿತಿಯಲ್ಲಿದ್ದರೆ ನಿಮ್ಮ ಇಂಥ ಸೀಮಿತ ನಂಬಿಕೆಯನ್ನು ಪ್ರಶ್ನೆ ಮಾಡಿ, ಯಾಕೆ ಸಾಧ್ಯವಿಲ್ಲ ಅಂತ ನಿಮಗೆ ನೀವೇ ಕೇಳಿಕೊಳ್ಳಿ. ನಿಮ್ಮ ಮನಸ್ಥಿತಿ ಬದಲಾದಂತೆ ನೀವು ಬದಲಾಗ್ತೀರಿ. ನಾನು ಚಾಲೆಂಜ್ ಎದುರಿಸಬಲ್ಲೆನು, ನಾನು ಚಾಲೆಂಜ್ ಎದುರಿಸಲು ಕಲಿಯುತ್ತೇನೆ ಅಂತ ನಿಮಗೆ ನೀವೇ ಹೇಳಿಕೊಳ್ತಾ ಬಂದಲ್ಲಿ ನಿಮ್ಮ ಮನಸ್ಥಿತಿ ಬದಲಾಗ್ತಾ ಬರುತ್ತದೆ.

ಮನಸ್ಸಿನ ಅರಿವನ್ನು ಅಭ್ಯಾಸ ಮಾಡಿ : ಕೆಲ್ಸ ಮಾಡುವ ಮೊದಲೇ ನೀವು ನಿರ್ಣಯಕ್ಕೆ ಬರೋದನ್ನು ನಿಲ್ಲಿಸಿ. ಅದು ಆಗೋದಿಲ್ಲ ಬಿಡು, ಅದು ಸಾಧ್ಯವೇ ಇಲ್ಲ ಎಂಬ ನಿರ್ಣಯಕ್ಕೆ ಮೊದಲೇ ಬರಬೇಡಿ. ಪರಿಸ್ಥಿತಿಯನ್ನು ಗಮನಿಸಿ. ದೀರ್ಘವಾದ ಉಸಿರಾಟ, ಡೈರಿ ಬರೆಯುವುದು ಅಥವಾ ಇಡೀ ದಿನ ನಡೆಯಬೇಕಾದ, ನಡೆದ ಘಟನೆ ಬಗ್ಗೆ ಯೋಚಿಸುವ ಮೂಲಕ ಮೈಂಡ್ಫುಲ್ನೆಸ್ ಅಭ್ಯಾಸ ಮಾಡ್ಬೇಕು. ಅದು ನಮ್ಮನ್ನು ನಕಾರಾತ್ಮಕ ಆಲೋಚನೆಯಿಂದ ದೂರ ಇಡುತ್ತದೆ. ಪ್ರಜ್ಞಾಪೂರ್ವಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಬೆಳವಣಿಗೆಯ ಮನಸ್ಥಿತಿ ಅಗತ್ಯ : ಅಮೇರಿಕನ್ ಮನಶ್ಶಾಸ್ತ್ರಜ್ಞ ಕರೋಲ್ ಡ್ವೆಕ್ ಪ್ರಕಾರ, ಬೆಳವಣಿಗೆಯ ಮನಸ್ಥಿತಿ, ಕಠಿಣ ಪರಿಶ್ರಮ ಮತ್ತು ಶಿಕ್ಷಣದ ಮೂಲಕ ಸಾಧ್ಯ. ಇದು ನಮ್ಮ ಸಾಮರ್ಥ್ಯದ ದೃಷ್ಟಿಕೋನವನ್ನು ಉತ್ತೇಜಿಸುತ್ತದೆ. ನಾನು ಇದನ್ನು ಮಾಡಲು ಸಾಧ್ಯವಿಲ್ಲ ಎನ್ನುವ ಬದಲು ನಾನು ಈಗ ಇದನ್ನು ಮಾಡಲು ಸಾಧ್ಯವಿಲ್ಲಅಂತ ನೀವು ಅಂದುಕೊಂಡ್ರೆ ಈ ಬದಲಾವಣೆ ಕುತೂಹಲ, ನಿರಂತರತೆ ಮತ್ತು ಸ್ವಯಂ ಸುಧಾರಣೆಗೆ ಸಹಕಾರಿ.

ಸಕಾರಾತ್ಮಕತೆಯನ್ನು ಕಲ್ಪಿಸಿಕೊಳ್ಳಿ : ಹಗಲುಗನಸು ಕಾಣುವುದು ಮತ್ತು ಕಲ್ಪಿಸಿಕೊಳ್ಳುವುದು ವಿಭಿನ್ನ ವಿಷಯ. ಕಲ್ಪನೆ ಮೆದುಳಿಗೆ ಯಶಸ್ವಿಯಾಗುವುದನ್ನು ಕಲಿಸುವ ಮಾರ್ಗ. ಕಷ್ಟವಾದ ಕೆಲಸವನ್ನು ಸರಳವಾಗಿ ಹಾಗೂ ಸುಲಭವಾಗಿ ಮಾಡಿ ಮುಗಿಸಿರೋದಾಗಿ ಕಲ್ಪಿಸಿಕೊಂಡಾಗ ಆ ಚಿತ್ರಗಳಿಗೆ ಅನುಗುಣವಾಗಿ ಅವಕಾಶಗಳನ್ನು ಆಕರ್ಷಿಸಲು ಮತ್ತು ಗುರುತಿಸಲು ಮೆದುಳನ್ನು ಸಿದ್ಧಪಡಿಸುತ್ತೇವೆ.

ನಿಮ್ಮ ಸುತ್ತ ಸಕಾರಾತ್ಮಕ ಪ್ರಭಾವ : ನಮ್ಮ ಸುತ್ತಲಿನ ಪರಿಸರವು ನಮ್ಮ ಆಲೋಚನೆಯ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ಸ್ಪೂರ್ತಿದಾಯಕ, ಸವಾಲಿನ ಮತ್ತು ಬೆಂಬಲ ನೀಡುವ ಜನರೊಂದಿಗೆ ಸಮಯ ಕಳೆಯುವ ಮೂಲಕ ಸಕಾರಾತ್ಮಕ ಚಿಂತನೆಯನ್ನು ಬಲಪಡಿಸಬಹುದು. ಬೆಳವಣಿಗೆಯನ್ನು ಉತ್ತೇಜಿಸುವ ಪುಸ್ತಕಗಳು, ಪಾಡ್ಕ್ಯಾಸ್ಟ್ಗಳು ಮತ್ತು ಸಂಭಾಷಣೆಗಳು ನಮ್ಮ ಮೆದುಳನ್ನು ಪ್ರೋತ್ಸಾಹಿಸುತ್ತದೆ. ನಮ್ಮ ಆಲೋಚನೆಯನ್ನು ಬದಲಾಯಿಸುವುದು ಕಷ್ಟವಲ್ಲ. ನಿರಂತರ ಅಭ್ಯಾಸ, ಬದಲಾವಣೆಯನ್ನು ಆಳಗೊಳಿಸುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಗಡಿ, ಕೆಮ್ಮು ಇದ್ದಾಗ ಮಕ್ಕಳಿಗೆ ಬಾಳೆಹಣ್ಣು, ಮೊಸರು ಕೊಡಬಹುದಾ? ಕೊಟ್ಟರೆ ಏನಾಗುತ್ತೆ?
ಇಂಥವರನ್ನು ಮದುವೆ ಆದ್ರೆ ಆರೋಗ್ಯವಾಗಿ ಹುಟ್ಟಲ್ಲ ಮಕ್ಕಳು, ಕಾಡುತ್ತೆ ನಾನಾ ಖಾಯಿಲೆ