ಅಸಿಡಿಟಿ ಸಮಸ್ಯೆ ನಿಮ್ಮನ್ನು ತುಂಬಾ ಭಾದಿಸುತ್ತಿದೆ ಎಂದಾದರೆ ಅದಕ್ಕೆ ನೀವು ಮಾಡುವ ದೈನಂದಿನ ತಪ್ಪುಗಳೇ ಕಾರಣ ಇರಬಹುದು. ಈ ಕೆಲವು ಅನಾರೋಗ್ಯಕರ ಅಭ್ಯಾಸಗಳನ್ನುಈಗಲೇ ನಿಲ್ಲಿಸಿ ಹಾಗೂ ಅಸಿಡಿಟಿಗೆ ಗುಡ್ ಬಾಯ್ ಹೇಳಿ.
ಮೊದಲೇ ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚು. ಅದರಲ್ಲಿಯೂ ಈ ಅಸಿಡಿಟಿ (Acidity) ಸಮಸ್ಯೆ ಜೊತೆಯಾದರೆ ಯಾವ ಕೆಲಸವೂ ಮುಂದೆ ಸಾಗುವುದಿಲ್ಲ. ಆದರೆ ನಿಮ್ಮ ಕೆಲವು ತಪ್ಪು ಹವ್ಯಾಸಗಳೇ ಈ ಅಸಿಡಿಟಿಗೆ ಕಾರಣ ಆಗಿರಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಉದಾಹರಣೆಗೆ ಹೆಚ್ಚು ಚಹಾ ಸೇವಿಸುವುದು, ಊಟವಾದ ಕೂಡಲೇ ಮಲಗಿ ಬಿಡಿವುದು, ಹೆಚ್ಚು ಮಸಾಲೆಯುಕ್ತ ಆಹಾರ ಸೇವಿಸುವುದು ಹೀಗೆ.. ಇನ್ನೂ ಕೆಲವು ಅನಾರೋಗ್ಯಕರ ಜೀವನ ಶೈಲಿ ಅಸಿಡಿಟಿಗೆ ಆಹ್ವಾನ ನೀಡುತ್ತಿರುತ್ತದೆ.
ಈ ರೀತಿಯ ಅಭ್ಯಾಸಗಳು ಯಾವುವು ನೋಡೋಣ.
ಜೀರ್ಣಕ್ರಿಯೆಗೆ ಕಷ್ಟವಾಗುವಂತಹ ಹೆಚ್ಚು ಮಸಾಲಯುಕ್ತ , ಉಪ್ಪಿನಾಂಶವಿರುವ, ಹುಳಿಯಾಗಿರುವ ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥ ಸೇವಿಸಬಾರದು ಹಾಗೂ ಮುಖ್ಯವಾಗಿ ಫಾಸ್ಟ್ ಫುಡ್‌ನಿಂದ ದೂರ ಇರಬೇಕು.
ಅತಿ ಹೆಚ್ಚು ಎನಿಸುವಷ್ಟು ಆಹಾರ ಸೇವನೆ ಮಾಡಬೇಡಿ. ಅಂದರೆ ಒಂದೇ ಬಾರಿಗೆ ಹೆಚ್ಚು ಊಟ ತಿನ್ನುವ ಬದಲು ಆಗಾಗ ಸ್ವಲ್ಪ ಪ್ರಮಾಣದ ಆಹಾರ ಸೇವನೆ ಮಾಡಿ. ಇದರಿಂದ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ. ಹೆಚ್ಚು ಹುಳಿಯ ಅಂಶವನ್ನು ಹೊಂದಿರುವ ಹಣ್ಣುಗಳಿಂದ (Fruits) ದೂರವಿರಿ, ಖಾಲಿ ಹೊಟ್ಟೆಯಲ್ಲಿ ಕಿತ್ತಳೆಯಂತಹ ಹುಳಿಯ ಹಣ್ಣುಗಳನ್ನು ತಿನ್ನುವುದರಿಂದ ಗ್ಯಾಸ್ಟಿಕ್ ಸಮಸ್ಯೆಯ ಜೊತೆಗೆ ಹೃದಯಕ್ಕೆ ತೊಂದರೆ ಉಂಟಾಗಬಹುದು.
ತುಂಬಾ ಸಮಯಗಳ ತನಕ ಹಸಿವನ್ನು (Hunger) ತಡೆದಿಟ್ಟುಕೊಳ್ಳಬೇಡಿ. ಇದರಿಂದ ಅಸಿಡಿಟಿ ಸಮಸ್ಯೆ ಜಾಸ್ತಿಯಾಗುತ್ತದೆ. ಹಾಗೂ ಊಟ ಮಾಡದೆ ಇರುವುದು ಕೂಡಾ ಅಸಿಡಿಟಿಗೆ ಕಾರಣವಾಗುತ್ತದೆ.
ಹೆಚ್ಚು ಬೆಳ್ಳುಳ್ಳಿ, ಉಪ್ಪು, ಎಣ್ಣೆ ಹಾಗೂ ಮೆಣಸಿನಕಾಯಿಯಿರುವ ಆಹಾರದಿಂದ ದೂರವಿದ್ದಷ್ಟೂ ಆರೋಗ್ಯ ಚನ್ನಾಗಿರುತ್ತದೆ.
ಇನ್ನು ಮುಖ್ಯವಾಗಿ ಏನನ್ನಾದರೂ ತಿಂದ ಕೂಡಲೇ ಮಲಗುವ ಅಭ್ಯಾಸ ಬಿಟ್ಟು ಬಿಡಿ.
ಆದಷ್ಟರ ಮಟ್ಟಿಗೆ ಆಲ್ಕೋಹಾಲ್ (Alcohol), ಧೂಮಪಾನ, ಟೀ ಹಾಗೂ ಕಾಫಿಯನ್ನು ಬಹಳ ಮಿತಿಯಲ್ಲಿ ಸೇವಿಸಿ, ಸೇವನೆ ನಿಲ್ಲಿಸಿಯೇ ಬಿಟ್ಟರೆ ಇನ್ನೂ ಒಳಿತು.
ಎಷ್ಟೇ ಎಚ್ಚರಿಕೆ ವಹಿಸಿದರೂ ಅಸಿಡಿಟಿ ಸಮಸ್ಯೆ ಎದುರಾಗುತ್ತಿದೆ ಎಂದಾದರೆ ಮನೆಯಲ್ಲಿಯೇ ಇದಕ್ಕೆ ಮದ್ದು ತಯಾರಿಸಬಹುದು.
ಕೊತ್ತಂಬರಿ (Coriander) ನೀರನ್ನು ಕುಡಿಯಿರಿ. ಇದನ್ನು ತಯಾರಿಸುವ ಕ್ರಮ ಹೀಗಿದೆ- ಕೊತ್ತೊಂಬರಿ ಬೀಜವನ್ನು ಪುಡಿ ಮಾಡಿ ನೀರಿನೊಂದಿಗೆ ಸೇರಿಸಿ ರಾತ್ರಿ ಇಡೀ ನೆನೆಯಲು ಇಡಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇಕಿದ್ದರೆ ಸಕ್ಕರೆ ಸೇರಿಸಿಕೊಂಡು ಕುಡಿಯಿರಿ.
ಊಟವಾದ ಮೇಲೆ ಅರ್ಧ ಚಮಚದಷ್ಟು ಸೋಂಪನ್ನು (Fennel) ತಿನ್ನಿ.
ರಾತ್ರಿ ಮಲಗುವಾಗ ಒಣ ದ್ರಾಕ್ಷಿಯನ್ನು ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ನೀರನ್ನು (Water) ಕುಡಿಯಿರಿ.
ಮಲಗುವ ಮುಂಚೆ ಹಸುವಿನ ತುಪ್ಪವನ್ನು ಬೆಚ್ಚಗಿನ ಹಾಲಿನೊಂದಿಗೆ ಮಿಶ್ರಣ ಮಾಡಿ ಕುಡಿಯಿರಿ. ಇದರಿಂದಾಗಿ ಮಲಬದ್ಧತೆ ಹಾಗೂ ನಿದ್ರಾಹೀನತೆಯ ಸಮಸ್ಯೆ ಮಾಯವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.