ಎಚ್ಚರ ತಪ್ಪಿದ್ರೆ ಅಪಾಯಕ್ಕೆ ಆಹ್ವಾನ ನೀಡುತ್ತದೆ Room Heater

By Suvarna NewsFirst Published Jan 24, 2022, 5:37 PM IST
Highlights

ಚಳಿಗಾಲದಲ್ಲಿ ಮೈ ಬೆಚ್ಚಗಿಡುವುದು ಬಹಳ ಮುಖ್ಯ. ಹೊದಿಕೆ,ಸ್ವೆಟರ್ ಬಳಸಿದ್ರೂ ಚಳಿ ಹೋಗ್ತಿಲ್ಲ ಎನ್ನುವವರು ಸಾಮಾನ್ಯವಾಗಿ ಹೀಟರ್ ಬಳಸ್ತಾರೆ. ಅತಿ ಹೆಚ್ಚು ಚಳಿಯಿರುವ ಪ್ರದೇಶಗಳಲ್ಲಿ ಹೀಟರ್ ಬಳಕೆ ಮಾಮೂಲಿ.ಆದ್ರೆ ಇದನ್ನು ಬಳಸುವಾಗ ಅದರ ಲಾಭ-ನಷ್ಟಗಳನ್ನು ತಿಳಿದಿರುವುದು ಒಳ್ಳೆಯದು.
 

ಡಿಸೆಂಬರ್ (December) ಮತ್ತು ಜನವರಿ (January)ಯಲ್ಲಿ ವಿಪರೀತ ಚಳಿ (Cold )ಇರುತ್ತದೆ. ಚಳಿಯಿಂದ  ರಕ್ಷಣೆ ಪಡೆಯಲು ಬೆಚ್ಚಗಿನ ಬಟ್ಟೆ,ಹೊದಿಕೆಯನ್ನು ಬಳಸ್ತೇವೆ. ಚಳಿ ತಡೆಯಲು ಅಸಾಧ್ಯ ಎನ್ನುವವರು ಹೀಟರ್ ಬಳಕೆ ಮಾಡ್ತಾರೆ.  ಹಗಲು ರಾತ್ರಿ ಹೀಟರ್ (Heater )ಬಳಸುವವರು ಅನೇಕರಿದ್ದಾರೆ. ಹೀಟರ್,ದೇಹವನ್ನು ಬೆಚ್ಚಗಿಡುತ್ತದೆ. ಚಳಿ ಓಡಿಸಿ, ದೇಹಕ್ಕೆ ಹಿತ ನೀಡುತ್ತದೆ. ಹೀಟರ್‌ಗಳಿಂದ ಹೊರಹೊಮ್ಮುವ ಶಾಖವು ಚಳಿಗಾಲದಲ್ಲಿ ಮನಸ್ಸನ್ನು ರಿಫ್ರೆಶ್ ಮಾಡುತ್ತದೆ. ಆದರೆ ಹೀಟರ್ ವಿಪರೀತ ಬಳಕೆ ಒಳ್ಳೆಯದಲ್ಲ. ಹೀಟರ್ ಬಳಕೆ ಮುನ್ನ ಅದನ್ನು ಬಳಸುವ ವಿಧಾನ ಹಾಗೂ ಅದರಿಂದ ಆರೋಗ್ಯದ ಮೇಲೆ ಆಗುವ  ಅಪಾಯಗಳ ಬಗ್ಗೆ ಸರಿಯಾಗಿ ತಿಳಿದಿರಬೇಕು.

ವಾಸ್ತವವಾಗಿ, ಮಾರುಕಟ್ಟೆಯಲ್ಲಿ ಹಲವಾರು ವಿಧದ ರೂಮ್ ಹೀಟರ್‌ಗಳು ಲಭ್ಯವಿವೆ, ಅವು ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ ಕೊಠಡಿಯಲ್ಲಿರುವ ಗಾಳಿಯನ್ನು ಅವು ಬಿಸಿ ಮಾಡುವ ಕೆಲಸವನ್ನು ಮಾಡುತ್ತವೆ. ಹೀಟರ್, ಗಾಳಿಯನ್ನು ಬಿಸಿ ಮಾಡುವುದರ ಜೊತೆಗೆ ಅದನ್ನು ಒಣಗಿಸುತ್ತದೆ. ರಾತ್ರಿ ಪೂರ್ತಿ ರೂಮ್ ಹೀಟರ್ ಬಳಸುವುದ್ರಿಂದ  ಆರೋಗ್ಯದಲ್ಲಿ ಏರುಪೇರಾಗುತ್ತದೆ. 
ರೂಮ್ ಹೀಟರ್ ಕಣ್ಣಿನ ಶುಷ್ಕತೆ ಹೆಚ್ಚುವುದಲ್ಲದೆ, ಕಣ್ಣುಗಳಲ್ಲಿ ಕಿರಿಕಿರಿಯುಂಟು ಮಾಡುತ್ತದೆ. 

ರಾತ್ರಿ ರೂಮ್ ಹೀಟರ್ ಬಳಕೆಯಿಂದಾಗುವ ಸಮಸ್ಯೆಗಳು : 

ತುರಿಕೆ : ರಾತ್ರಿಯಿಡಿ ರೂಮ್ ಹೀಟರ್ ಬಳಕೆಯಿಂದ ಚರ್ಮ ಶಾಖಕ್ಕೆ ಒಡ್ಡಿಕೊಳ್ಳುತ್ತದೆ. ಇದ್ರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಇದು ಚರ್ಮದಲ್ಲಿ ಶುಷ್ಕತೆ, ತುರಿಕೆ, ಚರ್ಮದ ಅನಾರೋಗ್ಯಕ್ಕೆ ಕಾರಣವಾಗುತ್ತದೆ. 

ಅಸ್ತಮಾ ರೋಗಿಗಳಿಗೆ ಅಪಾಯ : ಚಳಿಗಾಲದಲ್ಲಿ ಗಾಳಿ ಶುಷ್ಕವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗಾಳಿಯ ಆರ್ದ್ರತೆಯನ್ನು ಮತ್ತಷ್ಟು ಕಡಿಮೆ ಮಾಡುವ ಕೆಲಸವನ್ನು ರೂಮ್ ಹೀಟರ್  ಮಾಡುತ್ತದೆ. ಇದು ಅಸ್ತಮಾ ರೋಗಿಗಳಿಗೆ ಒಳ್ಳೆಯದಲ್ಲ. ಅವರ ಅನಾರೋಗ್ಯಕ್ಕೆ ರೂಮ್ ಹೀಟರ್ ಕಾರಣವಾಗುತ್ತದೆ. 

Hearing Loss: ಶೀತದಿಂದ ಕಿವಿ ಕೆಪ್ಪಾದೀತು ಎಚ್ಚರ!

ಉಸಿರಾಟದ ಸಮಸ್ಯೆ : ನಿಮಗೂ  ರೂಮ್ ಹೀಟರ್ ಹಾಕಿಕೊಂಡು ಮಲಗುವ ಅಭ್ಯಾಸವಿದ್ದರೆ ಅದರಿಂದ ದೂರವಿರಿ. ಏಕೆಂದರೆ ಈ ಅಭ್ಯಾಸವು ನಿಮಗೆ ಮಾರಕವಾಗಬಹುದು. ಇದರಿಂದ ಉಸಿರಾಟ ಸರಿಯಾಗುವುದಿಲ್ಲ. ರೂಮ್ ಹೀಟರ್‌ಗಳನ್ನು ಬಳಸುವುದರಿಂದ ಕಾರ್ಬನ್ ಮಾನಾಕ್ಸೈಡ್ ಉತ್ಪತ್ತಿಯಾಗುತ್ತದೆ. ಇದು ಉಸಿರುಗಟ್ಟುವಿಕೆ ಮತ್ತು ಸಾವಿಗೆ ಕಾರಣವಾಗಬಹುದು.

ಮಕ್ಕಳಿಂದ ದೂರವಿಡಿ : ಸಾಧ್ಯವಾದಷ್ಟು ಕೋಣೆಯಲ್ಲಿ ಹೀಟರ್ ಬಳಸುವಾಗ ಮಕ್ಕಳನ್ನು ದೂರವಿಡಿ. ಇದನ್ನು ಎತ್ತರದ ಸ್ಥಳದಲ್ಲಿ ಇಡಬಹುದು. 

ರೂಮ್ ಹೀಟರ್ ಬಳಕೆ ವಿಧಾನ :ರೂಮ್ ಹೀಟರ್ ಬಳಸುವ ವಿಧಾನವನ್ನೂ ನೀವು ತಿಳಿದಿರಬೇಕಾಗುತ್ತದೆ. 
ಬೆಂಕಿ ಹತ್ತಿಕೊಳ್ಳುವ ವಸ್ತುಗಳಿಂದ ದೂರವಿಡಿ : ರೂಮ್ ಹೀಟರ್ ಬಳಕೆ ಅನಿವಾರ್ಯವಾಗಿದ್ದರೆ ಅದನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕು. ಬೆಂಕಿ ಹತ್ತಿಕೊಳ್ಳುವ ವಸ್ತುಗಳಿಂದ ದೂರವಿಡಿ. ನಿರಂತರವಾಗಿ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ವಸ್ತುಗಳಿಗೆ ಬೆಂಕಿ ಹೊತ್ತಿಕೊಳ್ಳುವ ಅಪಾಯವಿರುತ್ತದೆ.

ನಿಮ್ಮಿಂದ ದೂರವಿರಲಿ : ರೂಮ್ ಹೀಟರ್ ನಿಂದ ಕೋಣೆ ಬೆಚ್ಚಗಾದ್ರೆ ಸಾಕು. ತಾನಾಗಿಯೇ ನಿಮ್ಮ ದೇಹ ಬೆಚ್ಚಗಿನ ಅನುಭವ ಪಡೆಯುತ್ತದೆ. ಹಾಗಾಗಿ ಆದಷ್ಟು ರೂಮ್ ಹೀಟರ್ ದೂರವಿಡಿ. ಅದರ ಹತ್ತಿರ ಮಲಗಬೇಡಿ. ಅದರ ಶಾಖ ನೇರವಾಗಿ ನಿಮ್ಮ ಮೈಗೆ ತಾಗಿದ್ರೆ ಚರ್ಮದ ಸಮಸ್ಯೆ ಕಾಡುತ್ತದೆ.    

ಬಟ್ಟೆಯಿಂದ ಮುಚ್ಚಬೇಡಿ : ರೂಮ್ ಹೀಟರ್ ಕೊಳಕಾಗದಂತೆ ನೋಡಿಕೊಳ್ಳಲು ಅದನ್ನು ಮುಚ್ಚಿಡುವುದು ಮುಖ್ಯ. ಆದರೆ ಅದನ್ನು ಎಂದಿಗೂ ಬಟ್ಟೆಯಿಂದ ಮುಚ್ಚಬೇಡಿ. ಇದು ಬೆಂಕಿಯ ಅಪಾಯಕ್ಕೆ ಕಾರಣವಾಗಬಹುದು. 

Pet Care : ಚಳಿಗಾಲದಲ್ಲಿ ನಿಮ್ಮ ಮುದ್ದಾದ ಪ್ರಾಣಿಗಳ ಆರೈಕೆ ಹೀಗಿರಲಿ

ನೀರಿನ ಹತ್ತಿರ ಇಡಬೇಡಿ : ಇದು ಎಲೆಕ್ಟ್ರಾನಿಕ್ ಸಾಧನವಾಗಿರುವುದರಿಂದ, ನೀರಿನ ಸಂಪರ್ಕವು ವಿದ್ಯುತ್ ಆಘಾತಕ್ಕೆ ಕಾರಣವಾಗಬಹುದು. ಹಾಗಾಗಿ ರೂಮ್ ಹೀಟರನ್ನು ನೀರಿನ ಬಳಿ ಇಡಬೇಡಿ.    

ಪ್ಲಗ್ ಹಾಕುವಾಗ ಎಚ್ಚರಿಕೆ : ಈ ಹಿಂದೆ ಹೇಳಿದಂತೆ ಇದು ಎಲೆಕ್ಟ್ರಾನಿಕ್ ವಸ್ತು. ಪ್ಲಗ್ ಹಾಕುವಾಗ ಎಚ್ಚರಿಕೆಯಿಂದಿರಬೇಕು. ಶಾಕ್ ಹೊಡೆಯುವ ಅಪಾಯವಿರುತ್ತದೆ. ನೀರಿನ ಕೈನಲ್ಲಿ ಪ್ಲಗ್ ಹಾಕಬೇಡಿ. 
 

click me!