ಕಾಸರಗೋಡು: ದೇಹದಲ್ಲಿ ಐದು ಕೆಜಿ ಗೆಡ್ಡೆ ಹೊತ್ತುಕೊಂಡು ತಿರುಗುತ್ತಿದ್ದ ಬೀದಿ ನಾಯಿಯೊಂದಕ್ಕೆ ಪಶುವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಕೇರಳದ ಕಾಸರಗೋಡಿನ ಛುಲ್ಲಿಕರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅದರಲ್ಲೂ ಈ ಕಾರ್ಯದಲ್ಲಿ ಊರಿನ ಸಮಸ್ತ ಜನರು ಮತ್ತು ಪಶುವೈದ್ಯರಿಂದ ಹಿಡಿದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರವರೆಗೆ ಎಲ್ಲರೂ ಒಗ್ಗೂಡಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲು ನೆರವಾಗಿದ್ದಾರೆ.
ಆ ಶ್ವಾನದ ಹೆಸರು ಮುತ್ತುಮಣಿ, ಬೀದಿಯಲ್ಲಿ ಅವರಿವರು ಕೊಟ್ಟಿದ್ದನ್ನು ತಿನ್ನುತ್ತಾ ಅಲ್ಲಿ ಇಲ್ಲಿ ಸ್ವತಂತ್ರವಾಗಿ ತಿರುಗುತ್ತಿದ್ದ ಅದರ ದೇಹದ ಹೊಟ್ಟೆಯ ಭಾಗದಲ್ಲಿ ಇತ್ತೀಚೆಗೆ ಬೃಹತ್ ಗಾತ್ರದ ಗೆಡ್ಡೆಯೊಂದು ಬೆಳೆದು ಅದರ ಭಾರವನ್ನು ಹೊರಲಾಗದೇ ಎಳೆದಾಡಿಕೊಂಡೆ ಬಹಳ ಪ್ರಯಾಸದಿಂದ ಮುತ್ತುಮಣಿ ನಡೆದಾಡುತ್ತಿತ್ತು. ಆದರೆ ಈಗ ಅದಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಊರವರೆಲ್ಲಾ ಖುಷಿ ಪಡುತ್ತಿದ್ದಾರೆ.
ಮಹಿಳೆಯ ದೇಹದಿಂದ 47 ಕೆಜಿ ತೂಕದ ಬೃಹತ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದ ವೈದ್ಯರು
ಮುತ್ತುಮಣಿಗೆ ಚುಲ್ಲಿಕ್ಕರದಿಂದ 40 ಕಿಲೋಮೀಟರ್ ದೂರದಲ್ಲಿರುವ ತ್ರಿಕರಿಪುರದ ಸರ್ಕಾರಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 5 ಕೆಜಿ ತೂಕದ ಸಸ್ತನಿ ಗ್ರಂಥಿಯ ಗೆಡ್ಡೆಯನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೆ ಮೂಲಕ ತೆಗೆದು ಹಾಕಲಾಗಿದ್ದು, ಅದು ಚೇತರಿಸಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ. ಪ್ರತಿ ವರ್ಷ ಮುತ್ತುಮಣಿ ಮರಿಗಳಿಗೆ ಜನ್ಮ ನೀಡುತ್ತದೆ. ಜನರು ಅದರ ಮರಿಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಸಾಕುತ್ತಿದ್ದರು. ಮೂರು ತಿಂಗಳ ಹಿಂದೆಯೂ ಇದು ಎರಡು ಮರಿಗಳಿಗೆ ಜನ್ಮ ನೀಡಿತ್ತು.
ಇದಾದ ಸ್ವಲ್ಪ ಸಮಯದಲ್ಲೇ ಅದರ ಮೊಲೆಯ ಭಾಗದಲ್ಲಿ ಊತ ಕಾಣಿಸಿಕೊಂಡಿತ್ತು. ಒಂದು ವಾರದಲ್ಲಿ ಅದು ತುಂಬಾ ದೊಡ್ಡದಾಯಿತು. ಹೀಗಾಗಿ ನಿವಾಸಿಗಳು ಆಕೆಯನ್ನು ರಾಜಪುರಂನಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಸಿರಿಂಜ್ ಬಳಸಿ ಊತದಲ್ಲಿದ್ದ ದ್ರವವನ್ನು ತೆಗೆದರು. ಆದಾಗ್ಯೂ ಊತವು ಒಂದು ವಾರದಲ್ಲಿ ಮತ್ತೆ ಕಾಣಿಸಿಕೊಂಡಿತ್ತು ಎಂದು ಸ್ಥಳೀಯ ನಿವಾಸಿ ರಾಜು ಹೇಳಿದರು.
ಯುವಕನ ಎದೆಯಿಂದ ಫುಟ್‌ಬಾಲ್ ಗಾತ್ರದ ಗಡ್ಡೆ ತೆಗೆದ ಫೋರ್ಟಿಸ್ ಆಸ್ಪತ್ರೆ ವೈದ್ಯರು
ನಂತರ ನಂತರ ನಾವು ಈ ಹಿಂದೆ ರಾಜಪುರಂನಲ್ಲಿ ಕೆಲಸ ಮಾಡಿದ ವೈದ್ಯ ಮುರಳೀಧರನ್ ಅವರನ್ನು ಕರೆಸಿದೆವು ಅವರು ಈ ಶಸ್ತ್ರಚಿಕಿತ್ಸೆಗೆ ತಗಲುವ ದುಬಾರಿ ವೆಚ್ಚವನ್ನು ಬರಿಸಲು ಸಿದ್ಧರಿದ್ದರೆ ಶಸ್ತ್ರಚಿಕಿತ್ಸೆ ನಡೆಸುವುದಾಗಿ ಹೇಳಿದರು. ಶೀಘ್ರದಲ್ಲೇ, ಜನರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರು ಚುಲ್ಲಿಕ್ಕರಕ್ಕೆ ಬಂದಾಗ ಈ ನಾಯಿಯ ವಿಚಾರವನ್ನು ಅವರ ಬಳಿ ಚರ್ಚಿಸಿದರು. ಅವರು ಈ ಶ್ವಾನವನ್ನು ಜಿಲ್ಲಾ ಪಂಚಾಯತ್ ತ್ರಿಕರಿಪುರ ಆಸ್ಪತ್ರೆಯಿಂದ ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ಕೇಂದ್ರಕ್ಕೆ ರೆಫರ್ ಮಾಡುವಂತೆ ಡಾ.ಮುರಳೀಧರನ್ ಅವರನ್ನು ಕೇಳಿಕೊಂಡರು.
ನಂತರ ಪ್ರಾಣಿಗಳ ಜನನ ನಿಯಂತ್ರಣ ಕೇಂದ್ರದ ವಾಹನ ಬಂದು ಮುತ್ತುಮಣಿಯನ್ನು ಕರೆದುಕೊಂಡು ಹೋಗಿತ್ತು. ನಂತರ ಅಲ್ಲಿ ಡಾ.ಫಾಬಿನ್ ಎಂ ಪೈಲಿ ಅವರು ಮುತ್ತುಮಣಿಗೆ ಶಸ್ತ್ರಚಿಕಿತ್ಸೆ ನಡೆಸಿದರು. ಫಾಬಿನ್ ಅವರು ಜಿಲ್ಲೆಯ ಸೂಪರ್ ಸರ್ಜನ್ ಆಗಿದ್ದಾರೆ. ತುರ್ತು ಪರಿಸ್ಥಿತಿಗೆ ಯಾವಾಗಲೂ ಲಭ್ಯವಿರುತ್ತಾರೆ ಎಂದು ಡಾ.ಮುರಳೀಧರನ್ ಹೇಳಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ಮುತ್ತುಮಣಿ (Muthumani) ಆರೋಗ್ಯವನ್ನು ಮರಳಿ ಪಡೆದಿದ್ದಾರೆ ಎಂದು ಶಸ್ತ್ರಚಿಕಿತ್ಸಕರು ತಿಳಿಸಿದ್ದಾರೆ. ಗಡ್ಡೆಯ ಭಾರದಿಂದಾಗಿ ಮುತ್ತುಮಣಿಯ ಬೆನ್ನು ಬಾಗಿ ಅವಳನ್ನು ದುರ್ಬಲಗೊಳಿಸಿದೆ ಎಂದು ಹಿರಿಯ ಪಶುವೈದ್ಯಕೀಯ ವೈದ್ಯ ಡಾ.ಎ.ಮುರಳೀಧರನ್ (Dr A Muraleedharan) ಹೇಳಿದ್ದಾರೆ. ಅವಳು ಈಗ ತ್ರಿಕರಿಪುರದ (Trikaripur) ಪಶುವೈದ್ಯಕೀಯ ಆಸ್ಪತ್ರೆಯ ಎಬಿಸಿ ಕೇಂದ್ರದ ಆಶ್ರಯದಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ಅವಳು ಆರೋಗ್ಯವನ್ನು ಮರಳಿ ಪಡೆದಿದ್ದಾಳೆ ಮತ್ತು ಅಲ್ಲಿಂದ ತೆರಳಲು ಸಿದ್ಧಳಾಗಿದ್ದಾಳೆ ಎಂದು ವೈದ್ಯರು ಹೇಳಿದರು.
ಕಾಸರಗೋಡಿನ ಕೊಡೋಂ-ಬೆಳ್ಳೂರು (Kodom-Bellur) ಗ್ರಾಮ ಪಂಚಾಯತ್ ವ್ಯಾಪ್ತಿಯ ಚುಳ್ಳಿಕ್ಕರ ಗ್ರಾಮದ ಅಂಗಡಿಯವರು ಮತ್ತು ಕ್ಯಾಬ್ ಚಾಲಕರು ಮುತ್ತುಮಣಿ (ಶ್ವಾನ) ಆಸ್ಪತ್ರೆಯಿಂದ ವಾಪಸ್ ಬರಲು ಕಾಯುತ್ತಿದ್ದಾರೆ. ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ ಮತ್ತು ಒಂದೆರಡು ದಿನಗಳಲ್ಲಿ ಹಿಂತಿರುಗುತ್ತಾಳೆ ಎಂದು ನಮಗೆ ತಿಳಿಸಲಾಗಿದೆ ಎಂದು ಪಿಕಪ್ ಓಡಿಸುವ ರಾಜು ಚೂರನೊಲಿಕಲ್ (Raju Chooranolikkal) ಹೇಳುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.