ಜೇಬಲ್ಲಿ ಜೇಷ್ಠಮಧು ಇರಲಿ, ದಾಹಕ್ಕೂ ಮದ್ದು, ಕೆಮ್ಮೂ ಆಗುತ್ತೆ ಗುಣ

By Suvarna NewsFirst Published Jun 28, 2022, 1:13 PM IST
Highlights

ಮಾರುಕಟ್ಟೆಯಲ್ಲಿ ಸಾವಿರಾರು ಔಷಧಿಗಳು ಸಿಗಬಹುದು. ಆದರೆ, ಮನೆ ಹಿತ್ತಲಲ್ಲಿ ಸಿಗುವ ಔಷಧಿಗಳು ಆರೋಗ್ಯಕ್ಕೆ ಒಳ್ಳೆಯದು. ಕೆಲವು ಗಿಡಮೂಲಿಕೆಗಳನ್ನು ಆಗಾಗ ಅಲ್ಪ ಪ್ರಮಾಣದಲ್ಲಿ ತೆಗೆದುಕೊಂಡರೆ, ಸುಮಾರು ರೋಗಗಳು ಹತ್ತಿರುವೂ ಸುಳಿಯುವುದಿಲ್ಲ. 

ನಮ್ಮ ಇಮ್ಯೂನ್ ಸಿಸ್ಟಮ್ (Immune System) ಅನ್ನು ಕಾಯ್ದುಕೊಳ್ಳುವುದು ಕಷ್ಟವೇನಲ್ಲ. ಆದರೆ ಈಗೀಗ ಸಿಗುವ ಮೆಡಿಸಿನ್ (Medicine) ಅಥವಾ ಕೃತಕ ಔಷಧಿಗಳನ್ನು ಉಪಯೋಗಿಸುವುದಕ್ಕಿಂತ ನೈಸರ್ಗಿಕವಾಗಿ (Naturally) ಸಿಗುವ ಎಷ್ಟೋ ಔಷಧಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಈ ನಿಟ್ಟಿನಲ್ಲಿ ಜೇಷ್ಠಮಧು (Jeshtamadhu) ಸಹ ನಮ್ಮ ಆರೋಗ್ಯದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕೋವಿಡ್ ಸಂದರ್ಭದಲ್ಲಿ ಇಮ್ಯೂನ್ ಬೂಸ್ಟರ್ (Immune Booster) ಆಗಿ ಕೆಲಸ ಮಾಡಿದೆ ಈ ಜೇಷ್ಠಮಧು, ನೈಸರ್ಗಿಕವಾಗಿ ಸಿಗುವ ಉತ್ತಮ ಔಷಧೀಯ ಗುಣಗಳುಳ್ಳ ಆರೋಗ್ಯಕಾರಿ ವಸ್ತುವಾಗಿದೆ. 

ಬೇಸಿಗೆಯಲ್ಲಿ(Summer) ಬಾಯಾರಿಕೆಯಾದಾಗ ಜೇಬಿನಲ್ಲಿ ಒಂದು ಜೇಷ್ಠಮಧುವಿದ್ದರೆ ಸಾಕು. ಇದನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿ ನೀರು ಕುಡಿಯುವುದರಿಂದ ಬಾಯಾರಿಕೆ(Thrust) ನೀಗುತ್ತದೆ. ಇದರಲ್ಲಿ ಅಂತಹ ಗುಣವೇನಿದೆ ಎಂಬುದರ ಮಾಹಿತಿ ಇಲ್ಲಿದೆ.

ತುಳಸಿ ಬೀಜ ತಿನ್ನೋದ್ರಿಂದ ಒತ್ತಡ ಕಡಿಮೆಯಾಗಿ, ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ!

1. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಜೇಷ್ಠಮಧುವಿನಲ್ಲಿದೆ. ಇದು ಜ್ವರ(Fever), ಅರ್ಥರಿಟಿಸ್(Arthritis), ಶೀತ(Cold), ಕೆಮ್ಮುಗಳ(Cough) ವಿರುದ್ಧ ಹೋರಾಡುತ್ತದೆ. 
2. ಹೊಟ್ಟೆಯಲ್ಲಿ ಅಲ್ಸರ್(Stomach Ulcer) ಆಗಿದ್ದರೆ ಜೇಷ್ಠಮಧುವನ್ನು ಬಿಸಿ ನೀರಿನಲ್ಲಿ(Hot Water) ಕುದಿಸಿ(Boil) ಕುಡಿದರೆ ಹೊಟ್ಟೆ ಹುಣ್ಣು ನಿವಾರಣೆಯಾಗುತ್ತದೆ.
3. ಜನರು ಮಾನಸಿಕ ಕುಂಠಿತ(Mentally Upset) ಮತ್ತು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ ಇದು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಅನೇಕ ವೈದ್ಯರು ಇದನ್ನು ಪ್ರತೀ ದಿನ ಸೇವಿಸುವಂತೆ ಸಲಹೆ ನೀಡುತ್ತಾರೆ. ಏಕೆಂದರೆ ದೌರ್ಬಲ್ಯ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
4. ಇದರಲ್ಲಿ ಆಂಟಿ ಇನ್ಫ÷್ಲಮೇಟರಿ(Anti Inflammatory) ಅಂಶವಿದ್ದು, ಅರ್ಥರಿಟೀಸ್‌ನಂತಹ(Arthritis) ಸಮಸ್ಯೆಯನ್ನು ನಿವಾರಿಸುವುದಲ್ಲದೆ, ಸಂಧಿವಾತದ(Joint Pain) ಸಮಸ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಗುಣಪಡಿಸಲು ಸಹಾಯ ಮಾಡುತ್ತದೆ.
5. ಜೇಷ್ಠಮಧು ಅಲರ್ಜಿ(Allergy) ವಿರೋಧಿಯಾಗಿದೆ. ದದ್ದುಗಳು ಮತ್ತು ಅಲರ್ಜಿಗಳನ್ನು ಅಭಿವೃದ್ಧಿಪಡಿಸಿದರೆ, ಇದನ್ನು ಸೇವಿಸುವುದರಿಂದ ಅಲರ್ಜಿಯಂತಹ ಸಮಸ್ಯೆ ನಿವಾರಣೆಯಾಗುತ್ತದೆ. ಇದರಲ್ಲಿನ ಔಷಧೀಯ ಗುಣಗಳಿಂದಾಗಿ ಆಯುರ್ವೇದದಲ್ಲಿ(Ayurveda) ಮಹತ್ವದ ಸ್ಥಾನವಿದೆ. ಹಾಗಾಗಿ ಇದು ಹೊರ ದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ.
6. ಕೂದಲು(Hair) ಹಾಗೂ ಚರ್ಮದ ಸಮಸ್ಯೆಗಳಿಗೆ(Skin Disease) ರಾಮಬಾಣವಾಗಿದೆ. ಜೇಷ್ಠಮಧು ಸೇವಿಸುವುದರಿಂದ ಚರ್ಮದ ಕಾಂತಿ(Skin Shin) ಹೆಚ್ಚಿಸುತ್ತದೆ  ಹಾಗೂ ಕೂದಲ ಬೆಳವಣಿಗೆಗೆ(Hair Growth) ಸಹಕಾರಿಯಾಗಿದೆ. 
7. ದೇಹದಲ್ಲಿನ ಕೊಲೆಸ್ಟರಾಲ್ ಲೆವೆಲ್ (Cholesterol Level) ಅನ್ನು ಕಂಟ್ರೋಲ್ ಮಾಡುತ್ತದೆ. ಜೊತೆಗೆ ಇದರ ಬೇರಿನಲ್ಲಿ(Root) ಉತ್ತಮ ಪೌಷ್ಠಿಕಾಂಶ ಗುಣಗಳಿದ್ದು, ಹಲವು ರೋಗಗಳಿಗೆ ಉತ್ತಮ ಮದ್ದಾಗಿದೆ. ಜೇನುತುಪ್ಪದ(Honey) ಜೊತೆ ಇದರ ಪುಡಿ ಸೇವಿಸುವುದರಿಂದ ಜೀರ್ಣ ಶಕ್ತಿ(Digestive) ಹೆಚ್ಚಿಸುವುದರ ಜೊತೆಗೆ ಮಲಬದ್ಧತೆ(Constipation) ನಿವಾರಿಸುತ್ತದೆ.

Ayurvedic Tips : ಆರೋಗ್ಯಕ್ಕೆ ಈ ಹಣ್ಣು ಅಮೃತವಾದ್ರೂ ತಪ್ಪಾಗಿ ಸೇವನೆ ಮಾಡಿದ್ರೆ ಅಪಾಯ ಹೆಚ್ಚು

8. ಜೇಷ್ಠಮಧು ಹಾಗೂ ಜೇನುತುಪ್ಪವನ್ನು ತೇಯ್ದು ತಿನ್ನುವುದರಿಂದ ಗಂಟಲಿನ ಸಮಸ್ಯೆ(Throat Problem) ನಿವಾರಣೆಯಾಗುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ(Bacteria) ಶಮನಗೊಳಿಸುವ ಗುಣವಿದೆ. ಹಾಗಾಗಿ ಗಂಟಲಲ್ಲಿ ಕಿರಿಕಿರಿ(Throat Itching), ಗಂಟಲು ನೋವು(Throat Pain) ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ.
9. ಮಕ್ಕಳಿಗೆ(Children) ವಾರದಲ್ಲಿ ಎರಡು ಭಾರಿ ಜೇಷ್ಠಮಧುವನ್ನು ತೇಯ್ದು ತಿನ್ನಿಸುತ್ತಾರೆ. ಇದರಿಂದ ಅವುಗಳ ಜೀರ್ಣ ಶಕ್ತಿ ಹೆಚ್ಚುತ್ತದೆ ಹಾಗೂ ಬುದ್ಧಿ ಬೆಳವಣಿಗೆಗೆ ಸಹಕಾರಿಯಾಗಿದೆ.
10. ನಿದ್ರಾಹೀನತೆ(Insomnia) ಸಮಸ್ಯೆ ಎದುರಿಸುತ್ತಿರುವವರು ರಾತ್ರಿ(Night) ಹಾಲಿನಲ್ಲಿ(Milk) ಜೇಷ್ಠಮಧುವಿನ ಪುಡಿಯನ್ನು ಹಾಕಿ ಕುದಿಸಿ ಕುಡಿಯುವುದರಿಂದ ನಿದ್ರೆ(Sleep) ಚೆನ್ನಾಗಿ ಬರುತ್ತದೆ.
11. ವಾರದಲ್ಲಿ ಎರಡು ಬಾರಿ(Weekly Two Time) ಜೇಷ್ಠಮಧು ಪುಡಿಯನ್ನು ನೀರಿನಲ್ಲಿ(Water) ಕುದಿಸಿ ಕುಡಿಯುವುದರಿಂದ ನೆನಪಿನ ಶಕ್ತಿ(Memory Power) ಹೆಚ್ಚುತ್ತದೆ. ಹಾಗೂ ಸಂಧಿವಾತದಂತಹ ಸಮಸ್ಯೆ ನಿವಾರಣೆಯಾಗುತ್ತದೆ.
12. ಕಡಿಮೆ ರಕ್ತದೊತ್ತಡ(Low Blood Pressure), ಕರುಳು ಸಂಬಂಧಿ ಕಾಯಿಲೆಗಳು(intestine Problem), ಮಂಡಿ ನೋವು(Knee Pain), ಪಿತ್ತ(Pitta), ಶೀತ(Cold), ಬಾಯಿ ಹುಣ್ಣು(Mouth Ulcer), ಕೆಮ್ಮುಗಳ(Cough) ನಿವಾರಣೆಗೆ ಸಹಕಾರಿ.  
13. ಗರ್ಭಿಣಿಯರು(Pregnancy) ಇದನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಏಕೆಂದರೆ ಹೊಟ್ಟೆಯಲ್ಲಿನ ಮಗುವಿಗೆ ನೆನಪಿನ ಶಕ್ತಿ(Memory Power) ಕುಂದುತ್ತದೆ. 

click me!