
ಬೆಳಿಗ್ಗೆ, ಮಧ್ಯಾಹ್ನ, ರಾತ್ರಿಗೆ ಬೇರೆ ಬೇರೆ ಅಡುಗೆ ಮಾಡಿ ತಿನ್ನಲು ಸಾಧ್ಯವಿಲ್ಲ. ಬ್ಯುಸಿ ಲೈಫ್ ಸ್ಟೈಲ್ (Busy Modern Life)ನಲ್ಲಿ ಜನರು ಸುಲಭದ ಕೆಲಸ ಹುಡುಕ್ತಾರೆ. ಬೆಳಿಗ್ಗೆ ಮಾಡಿದ ಆಹಾರವನ್ನು ಫ್ರಿಜ್‌ನಲ್ಲಿಟ್ಟು, ರಾತ್ರಿ ಅದನ್ನೇ ಬಿಸಿ ಮಾಡಿ ತಿನ್ನುತ್ತಾರೆ. ತ್ವರಿತವಾಗಿ ಬಿಸಿ ಮಾಡುವ ವಿಧಾನವೆಂದ್ರೆ ಮೈಕ್ರೋವೇವ್. ಹಾಗಾಗಿಯೇ ಪಟ್ಟಣ ಒಂದೇ ಅಲ್ಲ ಹಳ್ಳಿಗಳಲ್ಲೂ ಈಗ ಮೈಕ್ರೋವೇವ್ ಗೆ ಬೇಡಿಕೆ ಹೆಚ್ಚಾಗಿದೆ. ಆದ್ರೆ ಆಹಾರ ಬಿಸಿ ಮಾಡಲು ಬಳಸುವ ಈ ಮೈಕ್ರೋವೇವ್ ಆರೋಗ್ಯಕ್ಕೆ ಹಾನಿಕರ (Microwave Hazardous to Health), ಇದ್ರಿಂದ ಕ್ಯಾನ್ಸರ್ (Cancer) ಬರುತ್ತೆ ಎನ್ನುವ ಮಾತುಗಳು ಆಗಾಗ ಕೇಳಿ ಬರ್ತಿರುತ್ತವೆ. ಮೈಕ್ರೋವೇವ್ ಬಳಸದಂತೆ ಅನೇಕರು ಸಲಹೆ ನೀಡ್ತಾರೆ. ಆದ್ರೆ ಮೈಕ್ರೋವೇವ್‌ನಿಂದ ಕ್ಯಾನ್ಸರ್ ಬರೋದಿಲ್ಲ ಎಂದು ಸಂದರ್ಶನವೊಂದರಲ್ಲಿ ಭಾರತೀಯ ಅಡುಗೆ ವಿಜ್ಞಾನಿ ಕಿಶನ್ ಅಶೋಕ್ ಹೇಳಿದ್ದಾರೆ. ಅವರು ಮಾತ್ರವಲ್ಲ ಸೆಲೆಬ್ರಿಟಿ ಪೌಷ್ಟಿಕತಜ್ಞೆ ಪೂಜಾ ಮಖಿಜಾ ಕೂಡ ಇದೇ ವಿಷ್ಯವನ್ನು ಹೇಳಿದ್ದರು. ಆಹಾರವನ್ನು ಮೈಕ್ರೋವೇವ್‌ನಲ್ಲಿ ನೀವು ಆರಾಮವಾಗಿ ಬಿಸಿ ಮಾಡ್ಬಹುದು. ಇದ್ರಿಂದ ಯಾವುದೇ ಅಪಾಯವಿಲ್ಲ ಎಂಬುದು ತಜ್ಞರ ಮಾತಾಗಿದೆ. ಇದಕ್ಕೆ ಕಾರಣವೇನು ಎಂಬುದನ್ನು ಅವರು ವಿವರಿಸಿದ್ದಾರೆ.
ನಮ್ಮಲ್ಲಿ ಸಾಕಷ್ಟು ವಿಕಿರಣ (Radiation) ವಿದೆ. ಅದರಲ್ಲಿ ಅಯಾನಿಕರಿಸುವ ವಿಕಿರಣ ಹಾನಿಕರ. ಯುವಿ ಕಿರಣಗಳು ನಮ್ಮ ಚರ್ಮದ ಮೇಲೆ ಹಾನಿ ಮಾಡುತ್ತವೆ. ಆದ್ರೆ ಮೈಕ್ರೋವೇವ್ (microwave) ವಿಕಿರಣ ಸುರಕ್ಷಿತವಾಗಿರುತ್ತವೆ. ಏಕೆಂದರೆ ಅವುಗಳು ಅಯಾನೀಕರಿಸದ ವಿಕಿರಣವನ್ನು ಬಳಸುತ್ತವೆ. ಇದು ಎಕ್ಸ್ ಕಿರಣಗಳಂತಹ ಅಯಾನೀಕರಿಸುವ ವಿಕಿರಣದಂತೆ ಬಿಗಿಯಾಗಿ ಬಂಧಿಸಲ್ಪಟ್ಟಿರುವ ಎಲೆಕ್ಟ್ರಾನ್‌ಗಳನ್ನು ತೆಗೆದುಹಾಕಲು ಅಥವಾ ಡಿಎನ್‌ಎ (DNA)ಗೆ ಹಾನಿ ಮಾಡಲು ಸಾಕಷ್ಟು ಶಕ್ತಿಯನ್ನು ಹೊಂದಿರುವುದಿಲ್ಲ. ಮೈಕ್ರೋವೇವ್ ನಲ್ಲಿ ನೀರಿನ ಅಣುಗಳನ್ನು ಕಂಪಿಸುವ ಮೂಲಕ ಶಾಖವನ್ನು ಉತ್ಪಾದಿಸಲಾಗುತ್ತದೆ. ಇದ್ರಿಂದ ಆಹಾರವನ್ನು ಬಿಸಿ ಮಾಡಲಾಗುತ್ತದೆ. ಹಾಗಾಗಿ ಮೈಕ್ರೋವೇವ್ ಕ್ಯಾನ್ಸರ್ ಗೆ ಕಾರಣವಾಗುವುದಿಲ್ಲ. ಇಲ್ಲಿ ಬೇಯಿಸುವ ಅಥವಾ ಬಿಸಿಯಾದ ಆಹಾರ ಸುರಕ್ಷಿತ ಹಾಗೂ ಪರಿಣಾಮಕಾರಿ ಎನ್ನುತ್ತಾರೆ ತಜ್ಞರು. ರೆಡಿಯೋ, ಫೋನ್ ಕೂಡ ಅಯಾನೀಕರಿಸದ ವಿಕಿರಣವನ್ನು ಹೊಂದಿರುತ್ತವೆ. ಇವು ಡಿಎನ್ ಎ ಬದಲಿಸುವ ಶಕ್ತಿ ಹೊಂದಿರುವುದಿಲ್ಲ ಎನ್ನುತ್ತಾರೆ ತಜ್ಞರು.
ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಹಠಾತ್ ಕಿವುಡುತನ! ಜೋರಾಗಿ ಸಂಗೀತ ಕೇಳಬೇಡಿ ಎಂದು ವಿನಂತಿ
ಮೈಕ್ರೋವೇವ್ ನಲ್ಲಿ ಆಹಾರ ಬಿಸಿ ಮಾಡುವುದರಿಂದ ಆಗುವ ಲಾಭಗಳು : ಗ್ಯಾಸ್ ಒಲೆಗಿಂತ ಅತಿ ವೇಗದಲ್ಲಿ ನೀವು ಮೈಕ್ರೋವೇವ್ ನಲ್ಲಿ ಆಹಾರವನ್ನು ಬಿಸಿ ಮಾಡಬಹುದು. ಅತಿ ಬೇಗ ಆಹಾರ ಬಿಸಿಯಾಗುವ ಕಾರಣ, ಆಹಾರದಲ್ಲಿರುವ ಪೋಷಕಾಂಶ ಹೆಚ್ಚು ಗರಿಷ್ಠ ಮಟ್ಟದಲ್ಲಿ ಉಳಿಯುತ್ತದೆ. ನೀವು ಗ್ಯಾಸ್ ನಲ್ಲಿ ಆಹಾರ ಬಿಸಿ ಮಾಡಿದಾಗ, ಮೈಕ್ರೋವೇವ್ ಗಿಂತ ಹೆಚ್ಚಿನ ಮಟ್ಟದಲ್ಲಿ ಆಹಾರದ ಪೋಷಕಾಂಶ ನಾಶವಾಗುತ್ತದೆ. ಕಿಶನ್ ಅಶೋಕ್ ಪ್ರಕಾರ, ವಿಟಮಿನ್ ಸಿ, ವಿಟಮಿನ್ ಇ ನಂತಹ ಮೈಕ್ರೋ ನ್ಯೂಟ್ರಿಯೆಂಟ್ಸ್ ಫ್ರಿಜ್ ನಲ್ಲಿಟ್ಟಾಗ ಕಡಿಮೆ ಆಗೋದಿಲ್ಲ. ಅದೇ ನೀವು ಆಹಾರವನ್ನು ರೀ ಹೀಟ್ ಮಾಡಿದಾಗ ಮೈಕ್ರೋ ನ್ಯೂಟ್ರಿಯೆಂಟ್ಸ್ ಕಡಿಮೆ ಆಗುತ್ತದೆ. ಅದ್ರಲ್ಲೂ ಒಲೆಯಲ್ಲಿ ಮಾಡಿದಾಗ ಹೆಚ್ಚು ಎನ್ನುತ್ತಾರೆ ಕಿಶನ್ ಅಶೋಕ್. ಅಧ್ಯಯನದ ಪ್ರಕಾರ ನೀವು ಮೈಕ್ರೋವೇವ್ ನಲ್ಲಿ ಆಹಾರ ಬಿಸಿ ಮಾಡಿದಾಗ ಅತ್ಯಂತ ಕಡಿಮೆ ಮಟ್ಟದಲ್ಲಿ ಆಹಾರದಲ್ಲಿರುವ ಮೈಕ್ರೋ ನ್ಯೂಟ್ರಿಯೆಂಟ್ಸ್ ಕಡಿಮೆ ಆಗುತ್ತದೆ.
ಯುವಜನರಲ್ಲಿ ಕ್ಯಾನ್ಸರ್ ಹೆಚ್ಚಳ; ಆಹಾರವೇ ಕಾರಣ!
ಮೈಕ್ರೋವೇವ್ ಬಳಸುವಾಗ ಇದು ನೆನಪಿರಲಿ : ಮೈಕ್ರೋವೇವ್‌ನಲ್ಲಿ ಆಹಾರ ಬಿಸಿ ಮಾಡುವ ಸಂದರ್ಭದಲ್ಲಿ ಗಾಜಿನ ಪಾತ್ರೆಗಳನ್ನು ಬಳಸಿ. ಮೈಕ್ರೋವೇವ್‌ನಲ್ಲಿ ಅಂಡಾಕಾರದ ಅಥವಾ ದುಂಡಗಿನ ಆಕಾರದ ಪಾತ್ರೆಗಳನ್ನು ಮಾತ್ರ ಬಳಸಿ. ಅಂತಹ ಪಾತ್ರೆಗಳಲ್ಲಿ ಆಹಾರವನ್ನು ತ್ವರಿತವಾಗಿ ಬಿಸಿ ಮಾಡುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.