ಆಂಟಿಯರಿಗೆ ಪ್ರವೇಶ ವಿಲ್ಲ, ಯುವತಿಯರಿಗೆ ಅವಕಾಶವಿದೆ ಅನ್ನೋ ಜಿಮ್ ನೋಟಿಸ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಆಂಟಿಯರಿಗೆ ಜಿಮ್ ಪ್ರವೇಶ ನಿರಾಕರಿಸಿದ್ದು ಯಾಕೆ ಅನ್ನೋ ವಿವಾದಕ್ಕೆ ಮಾಲೀಕರು ಉತ್ತರ ನೀಡಿದರೂ ವಿವಾದ ತಣ್ಣಗಾಗಿಲ್ಲ.
ಸೌತ್ ಕೊರಿಯಾ(ಜೂ.17) ಆಂಟಿಯರಿಗೆ ಜಿಮ್ ಬ್ಯಾನ್. ಜಿಮ್ ಸೆಂಟರ್‌ನ ನೋಟಿಸ್ ಬೋರ್ಡ್‌ನಲ್ಲಿ ಹಾಕಿದ್ದ ಈ ಸಂದೇಶ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಜಿಮ್ ಮಾಲೀಕರೇ ಈ ನೋಟಿಸ್ ಹಾಕಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಆಂಟಿರಿಗೆ ಈ ಜಿಮ್‌ನಲ್ಲಿ ಅವಕಾಶವಿಲ್ಲ. ಕೇವಲ ಉತ್ತಮ ಮ್ಯಾನರ್ಸ್ ಹೊಂದಿರುವ ಸುಂದರ ಹೆಂಗಸರಿಗೆ ಅವಕಾಶವಿದೆ ಎಂದು ಸ್ಪಷ್ಟವಾಗಿ ಬರೆದು ನೋಟಿಸ್ ಬೋರ್ಡ್‌ನಲ್ಲಿ ಹಾಕಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದು ಸೌತ್ ಕೊರಿಯಾದ ಜಿಮ್‌ನಲ್ಲಿ ನಡೆದಿರುವ ಘಟನೆ.
ಆಂಟಿಯರಿಗೆ ಪ್ರವೇಶ ನಿರಾಕರಿಸಿದ್ದು ಯಾಕೆ? ಆಂಟಿಯರು ಜಿಮ್ ಮಾಡಿ ಆರೋಗ್ಯ ಕಾಪಾಡಿಕೊಂಡರೆ ಸಮಸ್ಯೆ ಏನು? ಅನ್ನೋ ಪ್ರಶ್ನೆಗಳು ಭಾರಿ ಚರ್ಚೆಯಾಗುತ್ತಿದೆ. ಸಾಮಾಜಿಕ ಮಾಧ್ಯಮ, ಸೌತ್ ಕೊರಿಯಾ ಮಾಧ್ಯಮಗಳಲ್ಲೂ ಈ ವಿಚಾರ ಭಾರಿ ಚರ್ಚೆಯಾಗುತ್ತಿದೆ. ವಿವಾದ ಬೆನ್ನಲ್ಲೇ ಜಿಮ್ ಮಾಲೀಕ ಮಾಧ್ಯಮಕ್ಕೆ ತಮ್ಮ ನಿರ್ಧಾರದ ಕುರಿತು ಸ್ಪಷ್ಟನೆ ನೀಡಿದ್ದಾರೆ.
undefined
'ಜಿಮ್ ಹತ್ರ ಬರಬೇಡಿ, ಬಿಗಿ ಉಡುಗೆಯಲ್ಲಿ ಫೋಟೋ ತೆಗೆಸಿಕೊಳ್ಳೋ..'; ಪಾಪಾರಾಜಿಗಳಿಗೆ ಜಾನ್ವಿ ಕಪೂರ್ ಹೇಳಿದ್ದೇನು?
ಜಿಮ್ ಕೇಂದ್ರದಲ್ಲಿ ಆಂಟಿಯರಿಗೆ ಅವಕಾಶವಿಲ್ಲ ಎಂದು ನಾವು ಹಾಕಿದ್ದೇವೆ ನಿಜ. ಇದೇ ವೇಳೆ ಉತ್ತಮ ಗುಣದ, ಮ್ಯಾನರ್ಸ್ ಇರುವ ಹೆಂಗಸರಿಗೆ ಅವಕಾಶ ನೀಡಿದ್ದೇವೆ. ನಮ್ಮ ಜಿಮ್‌ಗೆ ಬರುವ ಎಲ್ಲಾ ಆಂಟಿಯರು ಜಿಮ್‌ಗೆ ಬಂದು ಇಲ್ಲಿನ ವಾಶಿಂಗ್ ಮಶೀನ್ ಬಳಕೆ ಮಾಡುತ್ತಾರೆ. ಜಿಮ್‌ಗೆ ಬರುವಾಗ ಮನೆಯ ಬಟ್ಟೆಗಳನ್ನು ತೆಗೆದುಕೊಂಡು ಬಂದು 1 ರಿಂದ 2 ಗಂಟೆ ವಾಶಿಂಗ್ ಮಶೀನ್‌ಗೆ ಹಾಕುತ್ತಾರೆ. ಆಂಟಿಯರಿಗೆ ನೀರು, ವಾಶಿಂಗ್ ಪೌಡರ್, ವಿದ್ಯುತ್ ಎಲ್ಲವೂ ನಮಗೆ ಹೆಚ್ಚಾಗಿ ಖರ್ಚಾಗುತ್ತಿದೆ. ಜಿಮ್‌ನಲ್ಲಿ ವಾಶಿಂಗ್ ಮಶೀನ್ ಇಡಲಾಗಿದೆ. ಇದು ಆಗಮಿಸುವವರಿಗೆ ಬೆವರು ಒರೆಸಿಕೊಳ್ಳಲು ಟವಲ್ ಜಿಮ್‌ನಿಂದ ನೀಡಲಾಗುತ್ತದೆ. ಈ ಟವಲ್‌ಗಳನ್ನು ಪ್ರತಿದಿನ ಒಗೆಯಲಾಗುತ್ತದೆ. ಆದರೆ ಅವರ ಮನೆಯ ಬಟ್ಟೆಗಳನ್ನು ಒಗೆಯಲು ಅಲ್ಲ ಎಂದು ಮಾಲೀಕರು ಹೇಳಿದ್ದಾರೆ.
ಆಂಟಿಯರು ಜಿಮ್ ಮಾಡುತ್ತಿರುವ ಯುವತಿಯರ ವಿರುದ್ಧ ಕಮೆಂಟ್ ಮಾಡುತ್ತಾರೆ. ಹಲವರು ನಮಗೆ ದೂರು ನೀಡಿದ್ದಾರೆ. ನಮ್ಮ ನಿರ್ಧಾರದಿಂದ ಕೆಲ ಗ್ರಾಹಕರನ್ನು ಕಳೆದುಕೊಳ್ಳುತ್ತೇವೆ. ಆದರೆ ಅವರ ಖರ್ಚು ವೆಚ್ಚಕ್ಕಿಂತ ಈ ನಿರ್ಧಾರವೇ ಸರಿ ಎಂದು ಜಿಮ್ ಮಾಲೀಕರು ಹೇಳಿದ್ದಾರೆ.
ಜಿಮ್ ಮಾಲೀಕರ ಸ್ಪಷ್ಟನೆ, ಇತ್ತ ಸೋಶಿಯಲ್ ಮೀಡಿಯಾದಲ್ಲಿನ ಚರ್ಚೆಯಿಂದ ವಿವಾದ ತಣ್ಣಗಾಗಿಲ್ಲ. ಈ ನಿರ್ಧಾರ ಸರಿಯಲ್ಲ ಎಂದು ಹಲವರು ವಾದಿಸಿದ್ದರೆ, ಮತ್ತೆ ಕೆಲವರು ನಿರ್ಧಾರ ಸರಿಯಾಗಿದೆ ಎಂದು ವಾದಿಸಿದ್ದಾರೆ.
ಕಸವನ್ನು ಹೀಗೆಲ್ಲಾ ಹೆಕ್ಕಿ ಹಾಕ್ತಾರಾ? ಪೋಸ್ ಕೊಡಲು ಹೋಗಿ ಮಲೈಕಾ ಅರೋರಾ ಸಕತ್ ಟ್ರೋಲ್!