ಈ ಗಿಡಮೂಲಿಕೆಗಳನ್ನು ಬಳಸಿ Cholesterol ನಿಯಂತ್ರಿಸಿ!

By Suvarna NewsFirst Published Feb 21, 2022, 7:48 PM IST
Highlights

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಬಿಪಿ, ಡಯಾಬಿಟಿಸ್, ಕೊಲೆಸ್ಟ್ರಾಲ್ ನಂತಹ ಸಮಸ್ಯೆಗಳು ಒಮ್ಮೆ ಪ್ರಾರಂಭವಾಗಿಬಿಟ್ಟರೆ, ಅದರಿಂದ ಹೊರಬರುವುದಕ್ಕೆ ವೈದ್ಯರು ನೀಡುವ ಔಷಧಿಗಳನ್ನು ದಿನನಿತ್ಯ ಸೇವಿಸಬೇಕಾಗುತ್ತದೆ. ಇದನ್ನು ಹೊರತಾಗಿಸಿ ನಿಮ್ಮ ಮನೆಯಲ್ಲಿಯೇ ಇರುವ ಮಸಾಲಾ ಸಾಮಾಗ್ರಿಗಳು ಹಾಗೂ ಗಿಡಮೂಲಿಕೆಗಳಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು..

ಪ್ರತಿಯೊಂದು ಸಣ್ಣಪುಟ್ಟ ಸಮಸ್ಯೆಗಳಿಗೂ ವೈದ್ಯರಲ್ಲಿಗೆ (Doctor) ಓಡುತ್ತೇವೆ. ಆದರೆ ನಿಮ್ಮ ಮನೆಯಲ್ಲಿಯೇ ಕೆಲವು ಪದಾರ್ಥಗಳಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಬಹುದು. ಈಗಿನ ಕಾಲದಲ್ಲಿ ಸಣ್ಣ ವಯಸ್ಸಿನಲ್ಲಿಯೇ ಬಿಪಿ, ಡಯಾಬಿಟಿಸ್, ಕೊಲೆಸ್ಟ್ರಾಲ್, ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿ ಒಮ್ಮೆ ಮಾತ್ರೆ (Tablets) ತಿನ್ನುವ ಅಭ್ಯಾಸ ರೂಡಿಸಿಕೊಂಡರೆ ಮುಗಿಯಿತು ಜೀವನಪರ್ಯಂತ ಮಾತ್ರೆಗೆ ಅಂಟಿಕೊಂಡೇ ಇರಬೇಕಾಗುತ್ತದೆ. ಆದರೆ ನಿಮಗೆ ತಿಳಿಯದೆ ಇರುವ ಹಾಗೆ ನೀವು ದಿನನಿತ್ಯ ಅಡುಗೆಗೆ ಬಳಸುವ ಮಸಾಲೆ (spice) ಪದಾರ್ಥಗಳು ಹಾಗೂ ನಿಮ್ಮ ಮನೆಯಲ್ಲಿಯೇ ಸುಲಭವಾಗಿ ದೊರಕುವಂತಹ ಗಿಡಮೂಲಿಕೆಗಳಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

 ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ರಕ್ತದೊಂದಿಗೆ ಸೇರಿಕೊಂಡರೆ ಆಗ ಹೃದಯಕ್ಕೆ ಸಂಬಂಧಪಟ್ಟಂತಹ (Heart disease) ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆಯುರ್ವೇದದಲ್ಲಿ  ಕೊಲೆಸ್ಟ್ರಾಲ್ ಜೊತೆಗೆ ಬಿಪಿ ಹಾಗೂ ಕೊಬ್ಬು ಕರಗಿಸಿಕೊಳ್ಳಲು ಕೂಡ ಸಹಾಯ ಮಾಡುವ ಕೆಲವು ಗಿಡಮೂಲಿಕೆ ಹಾಗೂ ಮಸಾಲ ಪದಾರ್ಥಗಳನ್ನು ಸೂಚಿಸುತ್ತಾರೆ. ಅವುಗಳು ಸುಲಭವಾಗಿ ಮನೆಯಲ್ಲಿಯೇ ದೊರಕುತ್ತದೆ.

 ನೆಲ್ಲಿಕಾಯಿ ಅಥವಾ ಆಮ್ಲ (Amla)
 ನೆಲ್ಲಿಕಾಯಿಯನ್ನು ಪ್ರತಿದಿನ ಸೇವನೆ ಮಾಡುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಯಾಗುತ್ತದೆ. ನೀವು ನೆಲ್ಲಿಕಾಯಿಯನ್ನು ಪುಡಿಮಾಡಿ ಸೇವನೆ ಮಾಡಬಹುದು ಇಲ್ಲವೇ ನಲ್ಲಿಕಾಯಿಯ ಜ್ಯೂಸ್ ಮಾಡಿ ಕೂಡ ಕುಡಿಯಬಹುದು. ಇದರಲ್ಲಿ ಆರೋಗ್ಯ ವರ್ಧಿಸುವ ಶಕ್ತಿ ಇರುತ್ತದೆ.

ಮಸಾಲ ಪದಾರ್ಥಗಳ ಚಹಾ (Tea)
 ಜೀರಿಗೆ, ಕೊತ್ತಂಬರಿ ಹಾಗೂ ಫೆನ್ನೆಲ್ ಗಳನ್ನು ಮಿಶ್ರಣ ಮಾಡಿ ಚಹಾ ತಯಾರಿಸಿಕೊಂಡು ಪ್ರತಿದಿನ ನಿಯಮಿತವಾಗಿ ಕುಡಿಯುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ. ಫೆನ್ನೆಲ್ ಹಾಗೂ ಜೀರಿಗೆಯ ಮಿಶ್ರಣವನ್ನು ಊಟವಾದ ಬಳಿಕ ಬಾಯಿಯನ್ನು ಫ್ರೆಶ್ ಆಗಿರಿಸುವುದುಕ್ಕಾಗಿ ಕೂಡ ಸೇವನೆ ಮಾಡುತ್ತಾರೆ.

Health Tips: ಹೆಚ್ಚು ತಿಂದರೆ ಊಟ ಸರಿ ಜೀರ್ಣ ಆಗೋಲ್ವಾ? ಹೀಗ್ಮಾಡಿ

 ಬೆಳ್ಳುಳ್ಳಿ (Garlic)
 ಹೆಚ್ಚಿನ ಜನರು ಮನೆಯಲ್ಲಿ ಪ್ರತಿದಿನದ ಅಡುಗೆಗೆ ಬೆಳ್ಳುಳ್ಳಿಯನ್ನು ಬಳಸುತ್ತಾರೆ. ಇದರಲ್ಲಿ ಕೊಲೆಸ್ಟ್ರಾಲ್ ನಿಯಂತ್ರಿಸುವ ಅಂಶವಿದೆ ಎಂಬ ವಿಷಯ ತಿಳಿದಿರುವುದಿಲ್ಲ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಒಂದು ಎಸಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

 ನಿಂಬೆಹಣ್ಣು (Lemon) ಅಥವಾ ವಿನೆಗರ್ (Vinegar)
 ಒಂದು ಲೋಟ ಬೆಚ್ಚಗಿನ ನೀರಿಗೆ ನಿಂಬೆಹಣ್ಣು ಅಥವಾ ವಿನೆಗರ್ ಹಾಕಿ ಖಾಲಿ ಹೊಟ್ಟೆಯಲ್ಲಿ ಇಲ್ಲವೇ ಊಟ ಅಥವಾ ತಿಂಡಿಗಿಂತ ಒಂದು ಗಂಟೆ ಮುಂಚೆ ಸೇವನೆ ಮಾಡಿ. ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ, ಜೊತೆಗೆ ಹೊಟ್ಟೆಯನ್ನು ಶುದ್ಧವಾಗಿರಿಸುತ್ತದೆ.

 ಶುಂಠಿ (Ginger)
 ಪ್ರತಿದಿನ, ದಿನಕ್ಕೆ ಒಂದು ಅಥವಾ ಎರಡು ಬಾರಿ ಶುಂಠಿಯನ್ನು ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಶುಂಠಿಯನ್ನು ಪುಡಿ ಮಾಡಿ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬಹುದು ಇಲ್ಲವೇ ಬಿಸಿ ನೀರಿನೊಂದಿಗೆ ಶುಂಠಿಯನ್ನು ಕುದಿಸಿ ಕುಡಿಯಬಹುದು. ಶುಂಠಿಯ ಸೇವನೆಯಿಂದಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

 ತ್ರಿಕಟು
ತ್ರಿಕಟು ಎಂದರೆ ಆಯುರ್ವೇದ ಮೂಲಿಕೆಗಳಾದ ಮರಿಚ, ಪಿಪ್ಪಲ ಹಾಗೂ ಶುಂಠಿ ಈ ಮೂರನ್ನು ಸೇರಿಸಿ ತಯಾರಿಸಿದ ಸೂತ್ರ. ಇದನ್ನು ಪುಡಿಮಾಡಿಕೊಂಡು ಇಲ್ಲವೇ ಮಾತ್ರೆಯ ರೂಪದಲ್ಲಿ ಜೇನುತುಪ್ಪದೊಂದಿಗೆ ಮಿಶ್ರಣಮಾಡಿ ಸೇವನೆ ಮಾಡಬಹುದು.

Health Tips: ಒತ್ತಡ ಮತ್ತು ಹೃದಯಾಘಾತಕ್ಕೆ ಸಂಬಂಧವಿದ್ಯಾ ?
 

 ತ್ರಿಫಲ
ಅಮಲಕಿ, ಹರಿತಕಿ, ವಿಭಿತಕಿ ಈ ಮೂರು ಫಲಗಳನ್ನು ಮಿಶ್ರಣ ಮಾಡಿ ತಯಾರಿಸುವ ಸೂತ್ರವೇ ತ್ರಿಪಲ. ಇದನ್ನ ಕೂಡ ಮಾತ್ರೆ ಅಥವಾ ಪುಡಿಯ ರೂಪದಲ್ಲಿ ಜೇನುತುಪ್ಪದೊಂದಿಗೆ ಸೇವಿಸಬಹುದು.

 ಯಸ್ತಿಮಧು
ಮುಲೇತಿ ಎಂದು ಕೂಡ  ಯಸ್ತಿಮಧುವನ್ನು ಕರೆಯುತ್ತಾರೆ. ಇದನ್ನು ಚಹಾ ರೀತಿಯಲ್ಲಿ ಕೂಡ ಸೇರಿಸಬಹುದು ಇಲ್ಲದೆ ಇದರ ಜೀವನ ತಯಾರಿಸಿಕೊಂಡು ಸೇವಿಸಬಹುದು. ಇದರಿಂದಾಗಿಯೂ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ.

 ಈ ಪದಾರ್ಥಗಳಲ್ಲಿ ಹೆಚ್ಚಿನವು ಸುಲಭವಾಗಿ ಮನೆಯಲ್ಲಿಯೇ ಇಲ್ಲವೇ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಗುತ್ತದೆ. ಇದರ ವಿಶೇಷ ಗುಣಗಳನ್ನು ಅರಿತು ಸರಿಯಾದ ಕ್ರಮದಲ್ಲಿ ಸೇವನೆ ಮಾಡುವುದರಿಂದ ಮನೆಯಲ್ಲಿಯೇ ಆರೋಗ್ಯ ವೃದ್ಧಿಸಿಕೊಳ್ಳಬಹುದು.

click me!