Be Happy: ಯಾವಾಗ್ಲೂ ಖುಷಿಯಾಗಿರ್ಬೇಕಾ ? ಹೀಗೆ ಮಾಡಿ ಸಾಕು

By Suvarna News  |  First Published Feb 21, 2022, 4:45 PM IST

ದಿನಪೂರ್ತಿ ಸಪ್ಪಗಿರ್ತೀರಾ ? ಎಲ್ಲಿಗೆ ಹೋದ್ರೂ, ಏನ್ ಮಾಡಿದ್ರೂ ಖುಷಿ (Happy)ಯಾಗಲ್ಲ ಅನ್ನೋ ಸಮಸ್ಯೆನಾ ? ಎಲ್ರೂ ಹೇಗಪ್ಪಾ ಇಷ್ಟು ಖುಷಿಯಾಗಿರ್ತಾರೆ ಅಂತ ಹೊಟ್ಟೆಕಿಚ್ಚು (Jealous) ಪಡ್ತಿದ್ದೀರಾ ? ಹಾಗಿದ್ರೆ ಇಲ್ ಕೇಳಿ. ಯಾವಾಗ್ಲೂ ಖುಷಿಯಾಗಿರೋದು ಹೇಗೆ ನಾವ್ ಹೇಳ್ತೀವಿ.


ಕೆಲವೊಬ್ಬರನ್ನು ನೀವು ನೋಡಿರಬಹುದು. ಇತರರನ್ನು ಪ್ರೀತಿಸುವುದು ಬಿಡಿ. ತಮ್ಮನ್ನು ತಾವೇ ಪ್ರೀತಿಸುವುದಿಲ್ಲ. ತಮ್ಮ ಬಗ್ಗೆಯೇ ಅಪನಂಬಿಕೆ, ಕೀಳರಿಮೆ ಹೊಂದಿರುತ್ತಾರೆ. ಹೀಗಿದ್ದಾಗ ಜೀವನದಲ್ಲಿ ಏನನ್ನಾದರೂ ಸಾಧಿಸುವುದು ಕಷ್ಟ. ಬದುಕಿನ ಪ್ರತಿ ದಿನವೂ ನೀರಸವಾಗಿ ಬಿಡುತ್ತದೆ. ಖುಷಿಯಿಂದ ಜೀವನ (Life) ನಡೆಸಲು ಮೊದಲು ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿಯುವುದು ಮುಖ್ಯ. ಸೋಲು, ನಿಮ್ಮಲ್ಲಿರುವ ನ್ಯೂನ್ಯತೆ, ಅಪೂರ್ಣತೆಯನ್ನು ತಿಳಿದುಕೊಂಡ ಬಳಿಕವೂ ನೀವು ನಿಮ್ಮ ಬಗ್ಗೆ ಆತ್ಮವಿಶ್ವಾಸ (Confidence) ಬೆಳೆಸಿಕೊಳ್ಳಬೇಕು. ನಿಮ್ಮನ್ನು ನೀವು ಪ್ರೀತಿಸಲು ಕಲಿಯಬೇಕು. ಯಾವಾಗಲೂ ಖುಷಿಯಾಗಿರಲು ಏನು ಮಾಡಬಹುದು ? ತಿಳಿದುಕೊಳ್ಳೋಣ.

ಮತ್ತೊಬ್ಬರಿಗೆ ಹೋಲಿಸಿ ನೋಡಬೇಡಿ
ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ವ್ಯಕ್ತಿತ್ವ (Personality)ವನ್ನು ಹೊಂದಿರುತ್ತಾರೆ. ಎಲ್ಲರೂ ತಮ್ಮ ವ್ಯಕ್ತಿತ್ವದಲ್ಲಿ ಸುಂದರವಾಗಿರುತ್ತಾರೆ, ಒಳ್ಳೆಯವರಾಗಿರುತ್ತಾರೆ. ಹೀಗಾಗಿ ಯಾವತ್ತೂ ನಿಮ್ಮನ್ನು ಮತ್ತೊಬ್ಬರೊಂದಿಗೆ ಹೋಲಿಸಿ ನೋಡಬೇಡಿ. ನೀವು ನಡೆದುಬಂದ ಹಾದಿ, ನಿಮ್ಮ ಜೀವನಕ್ರಮ ಇತರರಿಂತ ವಿಭಿನ್ನ. ಹೀಗಾಗಿಯೇ ನೀವೇನಾಗಿದ್ದೀರೋ, ಏನು ಮಾಡುತ್ತಿದ್ದರೋ ಅದಕ್ಕಾಗಿ ಖುಷಿ ಪಡಿ.

Tap to resize

Latest Videos

Be Happy: ಟೆನ್ಶನ್‌ ಆದಾಗ ರಿಲ್ಯಾಕ್ಸ್ ಆಗಲು ಹೀಗೆ ಮಾಡಿ

ಧ್ಯಾನ ಮಾಡಿ
ಧ್ಯಾನ (Meditation)ವು ಮನಸ್ಸನ್ನು ಶಾಂತಗೊಳಿಸಲು ಮತ್ತು ಒಂದೇ ವಿಷಯದೆಡೆ ನಿಮ್ಮ ಗಮನವನ್ನು ಕೇಂದ್ರೀಕರಿಸಲು ನೆರವಾಗುತ್ತದೆ. ದಿನವೊಂದಕ್ಕೆ ಧ್ಯಾನವನ್ನು ಮಾಡಲು ಕನಿಷ್ಠ ಮೂರು ನಿಮಿಷಗಳನ್ನು ನೀಡಿದರೂ ಸಾಕು. ಶಾಂತಿಯುತವಾದ ಸ್ಥಳದಲ್ಲಿ, ದೀರ್ಘವಾಗಿ ಉಸಿರೆಳೆದುಕೊಂಡು ಧ್ಯಾನದಲ್ಲಿ ನಿರತರಾಗಿ. ಇದು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ ಏಕಾಗ್ರತೆಯನ್ನು ನೀಡುತ್ತದೆ. 

undefined

ಸ್ವಯಂ ಆರೈಕೆ ಮಾಡಿಕೊಳ್ಳಿ
ನಿಮ್ಮನ್ನು ನೀವು ಪ್ರೀತಿಸುವುದನ್ನು ಮೊದಲು ಕಲಿಯಿರಿ. ನಿಮ್ಮನ್ನು ನೀವು ಆರೈಕೆ ಮಾಡಿ. ಸ್ಕಿನ್ ಹೇರ್, ಹೇರ್ ಕೇರ್ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಇದಕ್ಕಾಗಿ ಸಮಯ ಮೀಸಲಿಡುವುದು ನಿಮಗೆ ಬೇಸರವೆನಿಸಿದರೂ, ಇಂಥಹಾ ಚಟುವಟಿಕೆಗಳಲ್ಲಿ ತೊಡಗಿಸಿಕೊಡುವುದು ನಿಮ್ಮ ಮನಸ್ಸಿಗೆ ಖುಷಿ ನೀಡುತ್ತದೆ. ಜೀವನಕ್ಕೆ ಹೊಸ ಉತ್ಸಾಹವನ್ನು ತುಂಬುತ್ತದೆ. ಫೇಶಿಯಲ್ ಕಿಟ್ ಆಗಿರಲಿ ಅಥವಾ ಬಬಲ್ ಬಾತ್ ಆಗಿರಲಿ ಇಂಥಾ ಸೆಲ್ಫ್ ಪ್ಯಾಪರಿಂಗ್ ನಿಮ್ಮ ಬಗ್ಗೆ ಆತ್ಮವಿಶ್ವಾಸ ಹೆಚ್ಚುವಂತೆ ಮಾಡುತ್ತದೆ.

Personality Traits: ಏಕಾಂತವನ್ನು ಪ್ರೀತಿಸೋ ನಾಲ್ಕು ರಾಶಿಗಳಿವು..

ಮನಸ್ಸಿನ ಭಾವನೆಯನ್ನು ಬರೆಯುತ್ತಿರಿ
ಜೀವನದ ಪ್ರತಿಕ್ಷಣದ ನೆನಪುಗಳನ್ನು ದಾಖಲಿಸಿ. ಮನಸ್ಸಿನ ಭಾವನೆಗಳನ್ನು ಪುಸ್ತಕದಲ್ಲಿ ಬರೆಯಿರಿ. ನಿಮ್ಮ ಕನಸುಗಳು, ಗುರಿಗಳು, ಸಂದಿಗ್ಧತೆಗಳು ಅಥವಾ ಖುಷಿಯ ಕ್ಷಣಗಳನ್ನು ಅಕ್ಷರ ರೂಪಕ್ಕಿಳಿಸಿ. ಇದರಿಂದ ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳು ಹೆಚ್ಚಾಗುತ್ತದೆ. ಇದು ಔದ್ಯೋಗಿಕವಾಗಿ ಯಶಸ್ಸನ್ನು ಕೊಡುತ್ತದೆ.

ಮನಸ್ಸಿಗೆ ಇಷ್ಟವಾದ ಊಟ ಮಾಡಿ
ನಮಗಿಷ್ಟವಾದ ಊಟವನ್ನು ಮಾಡುವುದರಿಂದ ಮನಸ್ಸು ಸಂತೃಪ್ತಗೊಳ್ಳುತ್ತದೆ. ಹೀಗಾಗಿ ತಿನ್ನುವ ವಿಷಯ ಬಂದಾದ ದುಡ್ಡಿನ ಮುಖ ನೋಡಬೇಡಿ. ಮನಸ್ಸಿಗೆ ಇಷ್ಟವಾದ ಆಹಾರವನ್ನು ತಿನ್ನಿ. ಪದೇ ಪದೇ ಒಂದೇ  ಆಹಾರ (Food) ತಿನ್ನುವುದು ನಿಮಗೆ ಇಷ್ಟವಾದರೂ ಪರವಾಗಿಲ್ಲ, ಅದನ್ನೇ ಸೇವಿಸಿ. ಇದು ನಿಮ್ಮ ಮನಸ್ಸನ್ನು ಖುಷಿಪಡಿಸುತ್ತದೆ. ಮನಸ್ಸಿನಲ್ಲಿ ಸಕಾರಾತ್ಮಕ ಯೋಚನೆಗಳು ಹೆಚ್ಚಾಗುತ್ತವೆ.

ಇಷ್ಟವಾದ ಸ್ಥಳಗಳಿಗೆ ಭೇಟಿ ನೀಡಿ
ನೀವು ಗಮನಿಸಿರಬಹುದು, ನಿಮಗಿಷ್ಟವಾದ ಸ್ಥಳ (Place)ಗಳಿಗೆ ಭೇಟಿ ನೀಡುವಾಗ ಮುಖದಲ್ಲೊಂದು ನಗು ಮೂಡುತ್ತದೆ. ಮನಸ್ಸು ಹಗುರವಾದಂತೆ ಭಾಸವಾಗುತ್ತದೆ. ನಮಗಿಷ್ಟವಾದ ಸ್ಥಳವು ನಮಗರಿವಿಲ್ಲದಂತೆ ಮನಸ್ಸಿನಲ್ಲಿ ಪಾಸಿಟಿವ್ ವೈಬ್ ಮೂಡಿಸುತ್ತದೆ. ಹೀಗಾಗಿ ಬಿಡುವಿದ್ದಾಗಲ್ಲೆಲ್ಲಾ ನಿಮಗಿಷ್ಟವಾದ ಸ್ಥಳಗಳಿಗೆ ಭೇಟಿ ನೀಡಿ, ಸಮಯವನ್ನು ಕಳೆಯಿರಿ. 

ಇವಿಷ್ಟೇ ಅಲ್ಲದೆಯೂ, ನಿಮ್ಮ ಸಮಸ್ಯೆಗಳ ಮಧ್ಯೆಯೂ ನಿಮ್ಮನ್ನು ನೀವು ಪ್ರೀತಿಸಿ .ದಿನದಲ್ಲಿ ಹೆಚ್ಚೆಚ್ಚು ನೀರು ಕುಡಿಯಿರಿ. ದಿನದಲ್ಲಿ ಮೂರು ಹೊತ್ತು ಆರೋಗ್ಯಕರ ಆಹಾರ ಸೇವಿಸಿ. ಎಂಟು ಗಂಟೆಗಳ ನಿದ್ರೆ ಮಾಡಿ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾಗುವ ಚಟುವಟಿಕೆಗಳನ್ನು ತಪ್ಪಿಸಿ. ಇದರಿಂದ ಪ್ರತಿದಿನ, ಪ್ರತಿಕ್ಷಣ ನೀವು ಖುಷಿಯಿಂದ ಜೀವನ ನಡೆಸಬಹುದು.

click me!