Health Tips: ಒತ್ತಡ ಮತ್ತು ಹೃದಯಾಘಾತಕ್ಕೆ ಸಂಬಂಧವಿದ್ಯಾ ?

By Suvarna News  |  First Published Feb 21, 2022, 4:14 PM IST

ಮನೆ ಟೆನ್ಶನ್ (Tension), ಆಫೀಸ್ ಟೆನ್ಶನ್ ಎಲ್ಲರಿಗೂ ಇರೋದೆ. ಇದ್ರಿಂದಾನೇ ತಲೆನೋವು (Headache), ನಿದ್ರಾಹೀನತೆ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ರೆ ಇಲ್ಲದೆಯೂ ಒತ್ತಡ, ಹೃದಯಾಘಾತ (Heartattack)ಕ್ಕೂ ಕಾರಣವಾಗುತ್ತೆ ಅನ್ನೋದು ನಿಮಗೆ ಗೊತ್ತಾ ?


ಜೀವನದಲ್ಲಿ ಒತ್ತಡವನ್ನು ಅನುಭವಿಸುವವರು ಹಲವು ಆರೋಗ್ಯ (Health) ಸಮಸ್ಯೆಗಳು ಎದುರಿಸುತ್ತಾರೆ. ತಲೆನೋವು, ಮೈಗ್ರೇನ್, ನಿದ್ರಾಹೀನತೆ ಮೊದಲಾದ ಸಮಸ್ಯೆಗಳು ಸಾಮಾನ್ಯವಾಗಿ ಬಿಡುತ್ತದೆ. ಆದರೆ ಅದಲ್ಲದೆಯೂ ಅತಿಯಾದ ಒತ್ತಡದಿಂದ ಜೀವಕ್ಕೇ ಅಪಾಯವಿದೆ ಅನ್ನೋದು ನಿಮಗೆ ಗೊತ್ತಾ ? ಸಂಶೋಧನೆಯ ಪ್ರಕಾರ, ಹೆಚ್ಚಿನ ಮಾನಸಿಕ ಒತ್ತಡ (Pressure)ವು ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಹೃದಯರಕ್ತನಾಳದ ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧಿಸಿದೆ.

ಒತ್ತಡವು ನಿಮ್ಮ ಹೃದಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಒತ್ತಡ ಮತ್ತು ಹೃದಯಾಘಾತ (Heartattack)ದ ನಡುವಿನ ಸಂಬಂಧವೇನು ಎಂಬುದನ್ನು ತಿಳಿಯೋಣ.

Tap to resize

Latest Videos

ಒತ್ತಡವು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ?
ಒತ್ತಡ ಯಾವಾಗಲೂ ನಕಾರಾತ್ಮಕವಾದ ವಿಷಯವಲ್ಲ. ಕೆಲವೊಮ್ಮೆ ಇದು ಉಪಯುಕ್ತವಾಗಿಯೂ ಕೆಲಸ ಮಾಡುತ್ತದೆ. ಅಲ್ಪಾವಧಿಯ ಒತ್ತಡವು ಮಾಡುವ ಕೆಲಸದಲ್ಲಿ ವೇಗವನ್ನು ತರುತ್ತದೆ. ಯೋಜನೆಯನ್ನು ಪೂರ್ಣಗೊಳಿಸಲು ಶಕ್ತಿಯನ್ನು ನೀಡುತ್ತದೆ. ಆದರೆ, ಅತಿಯಾದ ಒತ್ತಡವು ಕೇವಲ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಕಂಗೆಡಿಸುತ್ತದೆ. ದೀರ್ಘಕಾಲದ ಒತ್ತಡವು ಭಾವನೆಗಳು ನಿಮ್ಮ ನಿಯಂತ್ರಣದಲ್ಲಿರದಂತೆ ಮಾಡುತ್ತದೆ. ಅತಿಯಾದ ಸಿಟ್ಟು, ತಾಳ್ಮೆ ಇಲ್ಲದಿರುವಿಕೆ, ಮೂಡ್ ಸ್ವಿಂಗ್ಸ್ ಉಂಟಾಗುತ್ತದೆ.

Heart Attack in Winter : ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚು, ಇರಲಿ ಎಚ್ಚರ

ಹೊಸ ಮದುವೆ, ಹೊಸ ಮನೆ ಅಥವಾ ಹೊಸ ಜನರನ್ನು ಭೇಟಿ ಮಾಡುವಂತಹ ಸಂತೋಷದ ಕ್ಷಣಗಳಲ್ಲಿ ನೀವು ಒತ್ತಡವನ್ನು ಅನುಭವಿಸಬಹುದು. ದೀರ್ಘಾವಧಿಯ ಒತ್ತಡವು ಕೆಲಸ, ಸಂಬಂಧ, ಆರೋಗ್ಯ ಸ್ಥಿತಿ ಅಥವಾ ಆರ್ಥಿಕ ಪರಿಸ್ಥಿತಿಗಳಿಂದ ಆಗಿರಬಹುದು. ಆದರೆ ಕಾರಣ ಏನೇ ಆಗಿರಲಿ, ಇದು ಸಂಪೂರ್ಣ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು ನಿಜ. ಒತ್ತಡ ಸಿಡುಕುತನ, ಖಿನ್ನತೆ, ಆತಂಕಕ್ಕೆ ಕಾರಣವಾಗುತ್ತದೆ.

ಒತ್ತಡವು ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದೇ ?
ಒತ್ತಡವು ನಿಮ್ಮ ದೇಹದ ಅನೇಕ ಭಾಗಗಳ ಮೇಲೆ ಪರಿಣಾಮ ಬೀರಬಹುದು, ವಿಶೇಷವಾಗಿ ನಿಮ್ಮ ಹೃದಯ (Heart) ಮತ್ತು ಹೃದಯರಕ್ತನಾಳದ ವ್ಯವಸ್ಥೆಯನ್ನು ಹದಗೆಡಿಸಬಹುದು. 2021ರ ಅಧ್ಯಯನದ ಪ್ರಕಾರ, ಸ್ಥಿರವಾದ ಹೃದಯ ಕಾಯಿಲೆ ಹೊಂದಿರುವ 900ಕ್ಕೂ ಹೆಚ್ಚು ರೋಗಿಗಳು ಒತ್ತಡ ಅನುಭವಿಸುತ್ತಿರುತ್ತಾರೆ. ಹೆಚ್ಚು ಮಾನಸಿಕ ಒತ್ತಡಕ್ಕೆ ಒಳಗಾದವರು ಹೃದಯಾಘಾತ ಅಥವಾ ಹೃದಯರಕ್ತನಾಳದ ಕಾಯಿಲೆಯಿಂದ ಮೃತಪಟ್ಟಿರುವುದು ತಿಳಿದುಬಂದಿದೆ.

Mental Health Problem: ‘ಪರ್ಫೆಕ್ಟ್’ ಆಗಿರಬೇಕೆಂಬ ಗೀಳು ಹುಡುಗಿಯರಲ್ಲಿ ಮಾನಸಿಕ ಕಾಯಿಲೆಗೂ ಕಾರಣವಾಗಬಹುದು..!

ಹೃದಯದ ಆರೋಗ್ಯವನ್ನು ಹೆಚ್ಚಿಸಲು ಇನ್ನೇನು ಮಾಡಬಹುದು ?
ಹೃದಯದ ಆರೋಗ್ಯವನ್ನು ಹೆಚ್ಚಿಸಲು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಒತ್ತಡವನ್ನು ಕಡಿಮೆ ಮಾಡುವುದು ಉತ್ತಮ ಮಾರ್ಗವಾಗಿದೆ. ಅಲ್ಲದೆ, ಹೃದಯದ ಯೋಗಕ್ಷೇಮವನ್ನು ಹೆಚ್ಚಿಸಲು ನೀವು ಇತರ ಕ್ರಮಗಳನ್ನು ತೆಗೆದುಕೊಳ್ಳಬಹುದು. ತೂಕವನ್ನು ಕಾಪಾಡಿಕೊಳ್ಳಿ: ದೀರ್ಘಕಾಲದ ಮಾನಸಿಕ ಒತ್ತಡವು ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಉಂಟು ಮಾಡುತ್ತದೆ.. ಆದರೆ ಧನಾತ್ಮಕ ಯೋಚನೆಗಳು ಇಂಥಹಾ ಆರೋಗ್ಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಮಧ್ಯಮ ತೂಕ (Weight)ವನ್ನು ಕಾಪಾಡಿಕೊಳ್ಳಲು ಮತ್ತು ಸಮತೋಲಿತ ಆಹಾರವನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.

ನಿಯಮಿತ ವ್ಯಾಯಾಮ: ವ್ಯಾಯಾಮವು ರಕ್ತದೊತ್ತಡವನ್ನು ಕಡಿಮೆ ಮಾಡಲು, ತೂಕವನ್ನು ನಿರ್ವಹಿಸಲು ಮತ್ತು ಮಾನಸಿಕ ಒತ್ತಡ ಸೇರಿದಂತೆ ಹೃದಯಾಘಾತಕ್ಕೆ ಸಂಬಂಧಿಸಿದ ಹೃದಯರಕ್ತನಾಳದ ಅಪಾಯಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ದಿನಕ್ಕೆ 15ರಿಂದ 20 ನಿಮಿಷಗಳ ನಡೆದರೂ ಸಾಕು ಆರೋಗ್ಯವನ್ನು ಉತ್ತಮವಾಗಿಡಬಹುದು.

ಚೆನ್ನಾಗಿ ನಿದ್ದೆ ಮಾಡಿ: ನಿದ್ರೆ (Sleep) ಮತ್ತು ಒತ್ತಡವು ಪರಸ್ಪರ ಸಂಬಂಧವನ್ನು ಹೊಂದಿದೆ. ಆಗಾಗ, ದೀರ್ಘಕಾಲದ ಒತ್ತಡವನ್ನು ಅನುಭವಿಸುತ್ತಿರುವ ಜನರು ಸಾಕಷ್ಟು ನಿದ್ರೆ ಮಾಡುವುದಿಲ್ಲ. ಇದು ಮಾನಸಿಕ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಹೀಗಾಗಿ ಹೊರಗಿನ ಬೆಳಕು ಅಥವಾ ಶಬ್ದವಿಲ್ಲದ ತಂಪಾದ, ಕತ್ತಲೆಯ ಸ್ಥಳದಲ್ಲಿ ನೆಮ್ಮದಿಯಿಂದ ನಿದ್ದೆ ಮಾಡಿ. ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಿ. ಕುಟುಂಬ ಸದಸ್ಯರೊಂದಿಗೆ, ಸ್ನೇಹಿತರೊಂದಿಗೆ ಮಾತನಾಡಿ ಮನಸ್ಸನ್ನು ಹಗುರವಾಗಿಸಿ. ಸಂಬಂಧಗಳು ಹೃದಯದ ಆರೋಗ್ಯವನ್ನು ಸುಧಾರಿಸಲು ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಧ್ಯಾನ, ಯೋಗ. ವ್ಯಾಯಾಮ ಮಾಡಿ: ಮೆದುಳನ್ನು ಶಾಂತಗೊಳಿಸಲು ಮತ್ತು ಒತ್ತಡದ ಪರಿಣಾಮಗಳನ್ನು ಕಡಿಮೆ ಮಾಡಲು ಧ್ಯಾನ, ಯೋಗ. ವ್ಯಾಯಾಮ ಸಹಾಯ ಮಾಡುತ್ತದೆ. ಹವ್ಯಾಸ (Habit) ಸಹ ನಕಾರಾತ್ಮಕ ಆಲೋಚನೆಗಳಿಂದ ದೂರವಿರಿಸಲು ಮತ್ತು ಚಿಂತೆಗಳನ್ನು ದೂರ ತಳ್ಳಲು ಸಹಾಯ ಮಾಡುತ್ತದೆ.

click me!