ಅರಿಶಿಣವು ನಿಮ್ಮ ತ್ವಚೆಯ ಸೌಂದರ್ಯ (Beauty) ಹೆಚ್ಚಿಸುವ ಕೆಲಸ ಮಾಡುತ್ತದೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಹಾಗಾದರೆ ಇದರಿಂದ ಏನೆಲ್ಲಾ ಪ್ರಯೋಜನ ಇದೆ? ನೋಡೋಣ..
ಅರಿಶಿಣವು (Tureric) ನೀಡುವ ವೈದ್ಯಕೀಯ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಅರಿಶಿಣವು ಹಲವಾರು ಆರೋಗ್ಯ ವೃದ್ಧಿಸುವ ಗುಣಲಕ್ಷಣಗಳನ್ನು ಹೊಂದಿದೆ. ಈ ಕಾರಣಕ್ಕಾಗಿ ಸುಮಾರು 4000 ವರ್ಷಗಳಿಂದ ಇದನ್ನು ಬಳಸಲಾಗುತ್ತಿದೆ. ಗಾಯಗಳಾದಾಗ, ಶೀತ (Cold) ಮತ್ತು ಜ್ವರಕ್ಕೆ ಚಿಕಿತ್ಸೆ ನೀಡುವುದರ ಜೊತೆಗೆ, ಅರಿಶಿನವು ಚರ್ಮಕ್ಕೂ ಕೂಡ ಪ್ರಯೋಜನಕಾರಿಯಾಗಿದೆ ಎಂದು ತಿಳಿದುಬಂದಿದೆ.
ಹಿಂದೂಸ್ತಾನ್ ಟೈಮ್ಸ್ ವರದಿಗಳ ಪ್ರಕಾರ, ಸೌಂದರ್ಯವರ್ಧಕ ಶಸ್ತ್ರಚಿಕಿತ್ಸಕ ಮತ್ತು ಕ್ಷೇಮ ತಜ್ಞ, ಗೀತಾ ಗ್ರೆವಾಲ್ ಅವರು ಅರಿಶಿಣವು ಚರ್ಮವನ್ನು (Skin) ಸುಧಾರಿಸಲು ಸಹಾಯ ಮಾಡುತ್ತದೆ ಎಂದು ವಿವರಿಸಿದರು. ಇದು ಸನ್‌ಸ್ಪಾಟ್‌ಗಳನ್ನು ಕಡಿಮೆ ಮಾಡುತ್ತದೆ, ಒಬ್ಬ ವ್ಯಕ್ತಿಯು ಏಕರೂಪದ ತ್ವಚೆಯನ್ನು ಪಡೆಯಲು ಅರಿಷಿಣ ಸಹಾಯ ಮಾಡುತ್ತದೆ ಜೊತೆಗೆ ಇದು ಚರ್ಮದ ವಿನ್ಯಾಸವನ್ನು ಸುಧಾರಿಸುತ್ತದೆ. ಹೀಗೆ ಇನ್ನೂ ನಾನಾರೀತಿಯ ಉಪಯೋಗಗಳು ಇವೆ ಎಂಬುದಾಗಿ ಹೇಳುತ್ತಾರೆ.
Health Tips: ಆರೋಗ್ಯಕ್ಕೆ ಒಳ್ಳೇದಂತಾ ಸಿಕ್ಕಾಪಟ್ಟೆ ಪಿಸ್ತಾ ತಿನ್ಬೇಡಿ
ಅರಿಶಿಣದಿಂದ ಚರ್ಮದ ಪ್ರಯೋಜನಗಳು ಹಲವು, ಇದು ಚರ್ಮದ ಟೋನ್ (Tone) ಪಡೆಯಲು ಸಹಾಯ ಮಾಡುತ್ತದೆ, ಚರ್ಮದ ವಿನ್ಯಾಸವನ್ನು ಸುಧಾರಿಸುತ್ತದೆ, ಸೂರ್ಯನ ಕಲೆಗಳನ್ನು ಕಡಿಮೆ ಮಾಡುತ್ತದೆ, ಫೋಟೋಪ್ರೊಟೆಕ್ಟಿವ್ (Photoprotective) ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಚರ್ಮದ ಕಾಲಜನ್ ಸ್ಥಗಿತವನ್ನು ಕಡಿಮೆ ಮಾಡುತ್ತದೆ. ಅರಿಶಿಣ ಉರಿಯೂತದ ಗುಣಗಳನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ ಜೊತೆಗೆ ಬ್ಯಾಕ್ಟೀರಿಯಾ ವಿರೋಧಿ ಕೆಲಸಗಳನ್ನು ಹೆಚ್ಚಿಸುತ್ತದೆ. ಹೀಗೆ ಹಲವಾರು ಪ್ರಯೋಜನಗಳಿವೆ. ಆದರೆ, ಕೆಲವು ಸಂದರ್ಭಗಳಲ್ಲಿ ಅರಿಶಿಣವನ್ನು ನೇರವಾಗಿ (Directly) ತ್ವಚೆಯ ಮೇಲೆ ಅನ್ವಯಿಸುವುದರಿಂದ ಇದು ಚರ್ಮದ ಮೇಲೆ ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು. ಆದ್ದರಿಂದ, ನೀವು ಅದನ್ನು ನೇರವಾಗಿ ಮುಖದ ಮೇಲೆ ಬಳಸುವ ಮೊದಲು ಕೈಯಿಯ ಮೇಲ್ಬಾಗದ ಮೇಲೆ ಟೆಸ್ಟ್ ಪ್ಯಾಚ್ (Test ಮಾಡಿ ನೋಡಿ, ನಿಮ್ಮ ಚರ್ಮಕ್ಕೆ ಅರಿಷಿಣ ಸುರಕ್ಷಿತ (Safe) ಅಲ್ಲದಿದ್ದರೆ ಅದು ನಿಮ್ಮ ಕೈ ಮೇಲ್ಬಾಗದಲ್ಲಿಯೇ ತಿಳಿದುಬಿಡುತ್ತದೆ. ಎಂಬ ಮಾಹಿತಿಯನ್ನು ತಜ್ಞರು ನೀಡುತ್ತಾರೆ.
ಚರ್ಮಕ್ಕಾಗಿ ಅರಿಷಿಣದ ಕೆಲವು ಪ್ರಯೋಜನಗಳು (Benifits) ಹೀಗಿವೆ ನೋಡಿ..
ತ್ವಚೆ ಹೊಳೆಯುವಂತೆ ಮಾಡುವ ಬಾತ್ ಪೌಡರ್ ಮನೆಯಲ್ಲೇ ತಯಾರಿಸಿ
ಅರಿಶಿನವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಚರ್ಮಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ನೀವು ಮೇಲೆ ಪಟ್ಟಿ ಮಾಡಲಾದ ಸಮಸ್ಯೆಗಳನ್ನು (Problems) ಎದುರಿಸುತ್ತಿರುವವರಾಗಿದ್ದರೆ, ನಿಮ್ಮ ಚರ್ಮದ ಸಮಸ್ಯೆಗಳನ್ನು ತೊಡೆದುಹಾಕಲು ಇದು ಅಂತಿಮವಾಗಿ ಸಮಯವಾಗಿದೆ.
ಇದು ಮಾತ್ರವಲ್ಲದೆ ಅರಿಶಿಣವನ್ನು (Haldi) ಕೆಲವು ಬೇಸಿಗೆಯ ಪಾನೀಯಗಳಲ್ಲಿಯೂ ಬಳಸಬಹುದು, ಅದು ನಿಮ್ಮನ್ನು ದಿನವಿಡೀ ಉಲ್ಲಾಸ ಮತ್ತು ಚೈತನ್ಯದಿಂದ (Energised) ಇಡುತ್ತದೆ. ಶುಂಠಿ-ಅರಿಶಿನದ ಸ್ಮೂಥಿ, ಅರಿಶಿನ ಹಣ್ಣುಗಳ ಪಾನೀಯ ಮತ್ತು ಕಿತ್ತಳೆ-ಅರಿಶಿನ ಸ್ಮೂಥಿ ಕೂಡ ನೀವೊಮ್ಮೆ ಮಾಡಲು ಪ್ರಯತ್ನಿಸಬಹುದಾದ ಕೆಲವು ಪಾನೀಯಗಳಾಗಿವೆ.