ಕೋವಿಡ್ ಸಾಂಕ್ರಾಮಿಕ ಮುಗಿದಿಲ್ಲ, 110 ರಾಷ್ಟ್ರದಲ್ಲಿ ಸೋಂಕು ಹೆಚ್ಚುತ್ತಿದೆ; WHO ವಾರ್ನಿಂಗ್‌

By Suvarna News  |  First Published Jun 30, 2022, 12:19 PM IST

ಸತತ ಎರಡು ವರ್ಷಗಳ ಕಾಲ ಜನಜೀವನವನ್ನು ಕಂಗೆಡಿಸಿದ್ದ ಕೊರೋನಾ (Corona) ಸೋಂಕಿನ ಪ್ರಮಾಣ ಕೊಂಚ ಮಟ್ಟಿಗೆ ಕಡಿಮೆಯಾದ ಕಾರಣ ಜನರು ನಿರಾಳಗೊಂಡಿದ್ದರು. ಸದ್ಯ ಮಹಾಮಾರಿಯ ಕಾಟ ತಪ್ತು ಅಂತ ಖುಷಿಪಟ್ಟಿದ್ರು. ಆದ್ರೆ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗ್ತಿವೆ. ಈ ಮಧ್ಯೆ ಕೋವಿಡ್ ಸಾಂಕ್ರಾಮಿಕ (Pandemic) ಮುಗಿದಿಲ್ಲ, 110  ರಾಷ್ಟ್ರದಲ್ಲಿ (Countries) ಸೋಂಕು ಹೆಚ್ಚುತ್ತಿದೆ ಎಂದು WHO ವಾರ್ನಿಂಗ್‌ ನೀಡಿದೆ.


ಚೀನಾ (China)ದ ವುಹಾನ್‌ನಲ್ಲಿ ಕಾಣಿಸಿಕೊಂಡ ಕಣ್ಣಿಗೆ ಕಾಣದ ವೈರಸ್‌ (Virus)ವೊಂದು ಜಗತ್ತಿನ ಎಲ್ಲಾ ರಾಷ್ಟ್ರಗಳನ್ನು ಅಕ್ಷರಶಃ ನಡುಗಿಸಿತ್ತು. ವ್ಯಕ್ತಿಯಿಂದ ವ್ಯಕ್ತಿಗೆ ಸೆಕೆಂಡುಗಳಲ್ಲಿ ಹಬ್ಬುವ ಸೋಂಕಿನಿಂದ ಕೋಟ್ಯಾಂತರ ಮಂದಿ ಆಸ್ಪತ್ರೆ ಪಾಲಾದರು, ಮೃತಪಟ್ಟರು. ಇವತ್ತಿಗೂ ಅದೆಷ್ಟೋ ಮಂದಿ ಕೊರೋನಾ (Corona) ಕಾರಣದಿಂದಲೇ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೊರೋನಾ ಹರಡಲು ಆರಂಭವಾದಾಗಿನಿಂದ ಜನಜೀವನವೇ ಸಂಪೂರ್ಣ ಬದಲಾಯಿತು. ಉದ್ಯೋಗ, ವಿದ್ಯಾಭ್ಯಾಸ, ವ್ಯಾಪಾರ, ಆರ್ಥಿಕತೆ ಎಲ್ಲದರ ಮೇಲೂ ಹೊಡೆತ ಬಿತ್ತು. ಕ್ರಮೇಣ ಕೊರೋನಾ ಕಡಿಮಯಾದ ಹಾಗೆಯೇ ಜನಜೀವನ ಸಮಪೂರ್ಣ ಸಹಜಸ್ಥಿತಿಗೆ ಮರಳುತ್ತಿದೆ ಎಂದುಕೊಳ್ಳುವಾಗಲೇ ಮತ್ತೆ ಕೊರೋನಾ ಕಾಟ ಶುರುವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆ
ಹಲವು ರಾಜ್ಯಗಳಲ್ಲಿ ಕೋವಿಡ್ ಪ್ರಮಾಣಗಳಲ್ಲಿ ಏರಿಕೆಯಾಗಿದೆ. ಮಾಸ್ಕ್ (Mask), ಸಾಮಾಜಿಕ ಅಂತರ (Social Distance)ವನ್ನು ಕಡ್ಡಾಯಗೊಳಿಸಲಾಗಿದೆ. ಈ ಮಧ್ಯೆ ಕೋವಿಡ್ ಸಾಂಕ್ರಾಮಿಕ ಮುಗಿದಿಲ್ಲ, 110 ರಾಷ್ಟ್ರದಲ್ಲಿ ಸೋಂಕು ಹೆಚ್ಚುತ್ತಿದೆ ಎಂದು WHO ವಾರ್ನಿಂಗ್‌ ನೀಡಿದೆ. ಒಟ್ಟಾರೆಯಾಗಿ, ಜಾಗತಿಕ ಪ್ರಕರಣಗಳು ಶೇಕಡಾ 20 ರಷ್ಟು ಹೆಚ್ಚಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಡೈರೆಕ್ಟರ್ ಜನರಲ್ ಟೆಡ್ರೊಸ್ ಆಡನಮ್  ಹೇಳಿದ್ದಾರೆ. ವೈರಸ್ ಅನ್ನು ಟ್ರ್ಯಾಕ್ ಮಾಡುವ ನಮ್ಮ ಸಾಮರ್ಥ್ಯವು ಕ್ಷೀಣಿಸುತ್ತಿದೆ. ಮನುಷ್ಯರ ಆರೋಗ್ಯವೂ ಜೀನೋಮಿಕ್ ಅನುಕ್ರಮಗಳಿಂದ ಅಪಾಯದಲ್ಲಿದೆ. ಇದರರ್ಥ ಓಮಿಕ್ರಾನ್ ಅನ್ನು ಟ್ರ್ಯಾಕ್ ಮಾಡುವುದು ಮತ್ತು ಭವಿಷ್ಯದ ರೂಪಾಂತರಗಳನ್ನು ವಿಶ್ಲೇಷಿಸುವುದು ಕಷ್ಟ ಎಂದಿದ್ದಾರೆ.

Tap to resize

Latest Videos

ದೀರ್ಘಾವದಿಯ ಕೋವಿಡ್ ಅಪಾಯ ಪುರುಷರಿಗಿಂತ ಮಹಿಳೆಯರಿಗೆ ಶೇ.22ರಷ್ಟು ಹೆಚ್ಚು !

ಎಲ್ಲಾ ದೇಶಗಳು ತಮ್ಮ ಜನಸಂಖ್ಯೆಯ ಕನಿಷ್ಠ 70 ಪ್ರತಿಶತದಷ್ಟು ಕೋವಿಡ್ ಲಸಿಕೆಯನ್ನು ಒದಗಿಸುವಂತೆ ಕೇಳಲಾಗಿದೆ. ಕಳೆದ 18 ತಿಂಗಳುಗಳಲ್ಲಿ, ಜಾಗತಿಕವಾಗಿ 12 ಶತಕೋಟಿಗೂ ಹೆಚ್ಚು ಲಸಿಕೆಗಳನ್ನು ವಿತರಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಮತ್ತು ವೃದ್ಧರು ಸೇರಿದಂತೆ ಹಿಂದುಳಿದ ದೇಶಗಳಲ್ಲಿ ಲಕ್ಷಾಂತರ ಜನರಿಗೆ ಲಸಿಕೆ ನೀಡಲಾಗಿಲ್ಲ. ಇದರರ್ಥ ಮುಂದಿನ ದಿನಗಳಲ್ಲಿ ವೈರಸ್‌ ಇಂಥವರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಹೆಚ್ಚಿನ ಅಪಾಯದಲ್ಲಿರುವ ಜನರಿಗೆ ಲಸಿಕೆ ಹಾಕಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

ಲಸಿಕೆ ಹಾಕದವರಿಗೆ ಅಪಾಯ ಹೆಚ್ಚು 
ಕಳೆದ 18 ತಿಂಗಳುಗಳಲ್ಲಿ ಜಾಗತಿಕವಾಗಿ 12 ಶತಕೋಟಿಗೂ ಹೆಚ್ಚು ಲಸಿಕೆ (Vaccine)ಗಳನ್ನು ವಿತರಿಸಲಾಗಿದೆ ಎಂದು ಟೆಡ್ರೊಸ್ ಆಡನಮ್ ಹೇಳಿದ್ದಾರೆ.  ಪ್ರಪಂಚದಾದ್ಯಂತ 75 ಪ್ರತಿಶತದಷ್ಟು ಆರೋಗ್ಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ಈಗ ಲಸಿಕೆಯನ್ನು ಹೊಂದಿದ್ದಾರೆ. ಲಸಿಕೆಗಳಿಂದಾಗಿ 20 ಮಿಲಿಯನ್ ಜೀವಗಳನ್ನು ಉಳಿಸಲಾಗಿದೆ ಎಂದು ಲ್ಯಾನ್ಸೆಟ್ ಅಂದಾಜಿಸಿದೆ. ಆದರೆ, ಕಡಿಮೆ ಆದಾಯದ ದೇಶಗಳಲ್ಲಿ ಲಕ್ಷಾಂತರ ಆರೋಗ್ಯ ಕಾರ್ಯಕರ್ತರು ಮತ್ತು ವೃದ್ಧರು ಸೇರಿದಂತೆ ನೂರಾರು ಮಿಲಿಯನ್ ಜನರಿಗೆ ಲಸಿಕೆ ಹಾಕಲಾಗುತ್ತಿಲ್ಲ, ಅಂದರೆ ಅವರು ವೈರಸ್‌ನ ಭವಿಷ್ಯದ ಅಲೆಗಳಿಗೆ ಹೆಚ್ಚು ಗುರಿಯಾಗುತ್ತಾರೆ ಎಂದು ಟ್ರೆಡೋಸ್ ಆಡನಮ್ ಹೇಳಿದರು.

ಮಧುಮೇಹ ಇರುವವರಿಗೆ ದೀರ್ಘಾವಧಿಯ ಕೋವಿಡ್‌ ಅಪಾಯ ಹೆಚ್ಚು, ಅಧ್ಯಯನದ ಹೊಸ ವಿಶ್ಲೇಷಣೆ

ವೇಗವಾಗಿ ಹರಡುವ ಓಮಿಕ್ರಾನ್ ಉಪ-ವ್ಯತ್ಯಯಗಳಾದ BA.4 ಮತ್ತು BA.5 ಒಟ್ಟಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅರ್ಧದಷ್ಟು ಕೊರೊನಾವೈರಸ್ ಪ್ರಕರಣಗಳನ್ನು ಮಾಡುತ್ತವೆ ಎಂದು ಅಂದಾಜಿಸಲಾಗಿದೆ. ಜೂನ್ 25 ರ ಹೊತ್ತಿಗೆ, US ನಲ್ಲಿನ ಒಟ್ಟು ಕೊರೊನಾವೈರಸ್ ಪ್ರಕರಣಗಳಲ್ಲಿ BA.5 ಶೇಕಡಾ 36.6 ರಷ್ಟಿದ್ದರೆ, BA.4 ಶೇಕಡಾ 15.7 ರಷ್ಟಿದೆ, ಒಟ್ಟಾರೆಯಾಗಿ US ನಲ್ಲಿ ಸುಮಾರು 52 ಶೇಕಡಾ ಹೊಸ ಪ್ರಕರಣಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಒಂದೇ ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಾಲ್ಕನೇ ಅಲೆ ಆತಂಕ ಇನ್ನಿಲ್ಲದಂತೆ ಕಾಡುತ್ತಿದೆ. ಕಳೆದ 24 ಗಂಟೆಯಲ್ಲಿ 18,819 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಏರಿಕೆ ಕಂಡಿದ್ದು, 24 ಗಂಟೆಯಲ್ಲಿ 39 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 5,25,116 ಕ್ಕೆ ಏರಿಕೆಯಾಗಿದೆ.

click me!