
ಕೋವಿಡ್ ಸೋಂಕು ಹರಡುತ್ತಿದ್ದ ದಿನಗಳಲ್ಲಿ ಆಹಾರಗಳು, ದಿನಸಿ ವಸ್ತುಗಳು ಮತ್ತು ವೈದ್ಯಕೀಯ ಸರಬರಾಜುಗಳ ಕೊರತೆಯನ್ನು ಒಬ್ಬರು ಊಹಿಸಬಹುದು. ಆದರೆ ಟಾಯ್ಲೆಟ್ ಪೇಪರ್‌ಗಳ ಕೊರತೆಯ ಭಯಾನಕತೆಯೂ ನಿಜವಾಗಿಯೂ ಬೇರೆಯೇ ಆಗಿತ್ತು. ಯುರೋಪ್‌ನಾದ್ಯಂತ ಸೂಪರ್‌ಮಾರ್ಕೆಟ್ ಕಪಾಟುಗಳು ಟಾಯ್ಲೆಟ್ ಪೇಪರ್‌ನ ಕೊರತೆಯನ್ನು ಎದುರಿಸಿದ್ದವು. 2020 ರ ಮೊದಲ ಕೆಲವು ತಿಂಗಳುಗಳು ಇಲ್ಲಿನ ಜನರು ಈ ಸಮಸ್ಯೆಯನ್ನು ಎದುರಿಸಿದರು.
ಒರೆಸುವುದಕ್ಕಿಂತ ನೀರಿನಲ್ಲಿ ತೊಳೆಯುವುದು ಉತ್ತಮ
ಚಾನೆಲ್ ನ್ಯೂಸ್ ಏಷ್ಯಾ ಲೇಖನವೊಂದು ಇದಕ್ಕೆ ಪರಿಹಾರವನ್ನು ನೀಡಿತು. ನೆರೆಹೊರೆಯ ಸೂಪರ್‌ಮಾರ್ಕೆಟ್‌ನಲ್ಲಿ ಪ್ಯಾನಿಕ್ ಖರೀದಿಯಿಂದಾಗಿ ಟಾಯ್ಲೆಟ್ ಪೇಪರ್ ಅನ್ನು ಹುಡುಕಲು ನಿಮಗೆ ಸಾಧ್ಯವಾಗದಿದ್ದರೆ, ಒರೆಸುವ ಬದಲು ತೊಳೆಯಲು ಇದು ಉತ್ತಮ ಸಮಯವಾಗಿದೆ ಎಂದು ಸಲಹೆ ನೀಡಿತು. ಒರೆಸುವುದು ಅಥವಾ ತೊಳೆಯುವುದರ ಕುರಿತು ಹೆಚ್ಚು ನೈರ್ಮಲ್ಯದ ವಿಧಾನವನ್ನು ಮಾಡುವ ಸಂಶೋಧನೆಯು ವಿರಳವಾಗಿದ್ದರೂ, ಕೆಲವು ತಜ್ಞರು ಒರೆಸುವುದಕ್ಕಿಂತ, ತೊಳೆಯುವುದು ಉತ್ತಮವೆಂದು ಸಮರ್ಥಿಸುತ್ತಾರೆ. ತೊಳೆಯುವಾಗ ಹಿಂಭಾಗವು ಸ್ಥಿರವಾದ ನೀರಿನ ಹರಿವು ಉತ್ತಮ ಸ್ವಚ್ಛತೆಗೆ ಕಾರಣವಾಗುತ್ತದೆ ಎಂದು ತಿಳಿಸಲಾಗಿದೆ.
ಮೂರು ಗಂಟೆ ಟಾಯ್ಲೆಟ್‌ನಲ್ಲಿ ಕೂರೋ ಗಂಡನನ್ನು ಕರೆಯೋಕೆ ಸ್ಪೆಷಲ್ ಬೆಲ್ !
ಒಣ ಟಾಯ್ಲೆಟ್ ಪೇಪರ್ ಅನ್ನು ಬಳಸುವುದರಿಂದ ಬ್ಯಾಕ್ಟೀರಿಯಾ ಉಳಿದುಕೊಳ್ಳುವ ಸಾಧ್ಯತೆಯಿದೆ. ಆದರೆ ನೀವು ನೀರನ್ನು ಬಲಸಿ ತೊಳೆಯುತ್ತಿದ್ದರೆ ಇಂಥಾ ಸಮಸ್ಯೆ ಉಂಟಾಗುವುದಿಲ್ಲ ಎಂದು ಯುರಾಲಜಿ ಗುಂಪಿನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಫಿಲಿಪ್ ಬಫಿಂಗ್ಟನ್ ಹೇಳಿದ್ದಾರೆ. ಯುಎಸ್ ಕೊಲೊರೆಕ್ಟಲ್ ಶಸ್ತ್ರಚಿಕಿತ್ಸಕರು ತೊಳೆಯುವುದು ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ.
ಬಹುಶಃ ಈ ಕಾರಣಕ್ಕಾಗಿಯೇ ಹಿಂಭಾಗವನ್ನು ತೊಳೆಯುವ ಅಭ್ಯಾಸವಿರುವವರಿಗೆ ದದ್ದುಗಳು ಮತ್ತು ಅಸ್ವಸ್ಥತೆ ಮತ್ತು ಕಿರಿಕಿರಿಯ ಸಮಸ್ಯೆಗಳಿರುವ ಸಾಧ್ಯತೆ ಕಡಿಮೆ ಎಂದು ಹೆಲ್ತ್‌ಲೈನ್‌ನಲ್ಲಿ ಕ್ಯಾಲಿಫೋರ್ನಿಯಾ ಮೂಲದ ಕೊಲೊರೆಕ್ಟಲ್ ಮತ್ತು ಜನರಲ್ ಸರ್ಜನ್ ಡಾ ಅಲೆನ್ ಕಮ್ರಾವಾ ಹೇಳಿದರು.
ನೀರಿನಲ್ಲಿ ತೊಳೆಯುವ ಅಭ್ಯಾಸ ಕಾಯಿಲೆಗಳಿಂದ ದೂರವಿಡುತ್ತದೆ
ತೊಳೆಯುವುದು ಹಿಂಭಾಗವನ್ನು ಮೃದುವಾಗಿರುತ್ತದೆ. ಆದರೆ ಒರೆಸುವಿಕೆಯಿಂದ ಗುದದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಯಾಕೆಂದರೆ ಎಲ್ಲರೂ ಟಾಯ್ಲೆಟ್ ಪೇಪರ್‌ನಿಂದ ನಿಧಾನವಾಗಿ ಒರೆಸುವುದಿಲ್ಲ. ರಫ್ ಆಗಿ ಹಿಂಭಾಗವನ್ನು ಒರೆಸುವುದರಿಂದ ರಾಶಸ್, ಗುಳ್ಳೆಗಳು ಉಂಟಾಗುತ್ತವೆ. ನ್ಯೂಯಾರ್ಕ್ ನಗರದ ಗುದನಾಳದ ಶಸ್ತ್ರಚಿಕಿತ್ಸಕ ಡಾ ಇವಾನ್ ಗೋಲ್ಡ್‌ಸ್ಟೈನ್, ಬಿಸಿನೆಸ್ ಇನ್ಸೈಡರ್ ಸಿಂಗಾಪುರದಲ್ಲಿ ಹೇಳುವಂತೆ, ಗುದದ್ವಾರಕ್ಕೆ ಸಂಬಂಧಿಸಿದ ಅತ್ಯಂತ ಸಾಮಾನ್ಯವಾದ ಗಾಯಗಳು ಅನುಚಿತ ಒರೆಸುವಿಕೆಯಿಂದ ಉಂಟಾಗುವುದಾಗಿದೆ ಎಂದಿದ್ದಾರೆ.
ವಾಸ್ತು ಪ್ರಕಾರ ಶೌಚಾಲಯಗಳು ಹೇಗಿರಬೇಕು?
ಹಿಂಭಾಗವನ್ನು ಸ್ವಚ್ಛಗೊಳಿಸಲು ನೀವು ಬಳಸುವ ಟಾಯ್ಲೆಟ್ ಪೇಪರ್‌ನ್ನು ಅತಿಯಾಗಿ ಬಳಸೋದ್ರಿಂದ ಗುಪ್ತಾಂಗಳ ಸುತ್ತಲಿನ ಸೂಕ್ಷ್ಮ ಚರ್ಮಕ್ಕೆ ತೀವ್ರವಾದ ಹಾನಿಯನ್ನು ಉಂಟುಮಾಡಬಹುದು. ಕಠಿಣವಾದ ಒರೆಸುವಿಕೆಯಿಂದ ಹದಗೆಡುವ ಗುದದ್ವಾರ ಹದಗೆಡಬಹುದು. ಮಲಬದ್ಧತೆ ಉಂಟಾಗಬಹುದು ಎಂದು ಹೇಳಲಾಗಿದೆ. ಅಲ್ಲದೆ ಟಾಯ್ಲೆಟ್ ಪೇಪರ್ ಬಳಕೆ ಅಭ್ಯಾಸವು ಗುದದ ಬಿರುಕುಗಳು ಮತ್ತು ಮೂತ್ರದ ಸೋಂಕಿನಂತಹ ಆರೋಗ್ಯ ಸಮಸ್ಯೆಗಳಿಗೆ ನಿಮ್ಮನ್ನು ಗುರಿಯಾಗಿಸಬಹುದು. ಆದ್ದರಿಂದ, ತೊಳೆಯುವುದು ನಿಸ್ಸಂದೇಹವಾಗಿ ಆರೋಗ್ಯಕರ ಅಭ್ಯಾಸವಾಗಿದೆ.
ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ:
ಹಿಂಭಾಗವನ್ನು ತೊಳೆಯುವುದು ಮಹಿಳೆಯರಲ್ಲಿ ಯೋನಿ ಮತ್ತು ಯುಟಿಐ ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಕೇವಲ ನಿಮ್ಮ ಬುಡವನ್ನು ಒರೆಸುವುದರಿಂದ ಮಲವನ್ನು ಕ್ಲೀನ್ ಮಾಡಬಹುದು. ಆದರೆ ಇದು ನಿಮ್ಮನ್ನು ವಿವಿಧ ಆರೋಗ್ಯ ಪರಿಸ್ಥಿತಿಗಳಿಗೆ ಗುರಿಯಾಗಿಸಬಹುದು ಮತ್ತು ಸೋಂಕುಗಳು ಮತ್ತು ಯುಟಿಐಗಳಿಗೆ ಕಾರಣವಾಗಬಹುದು. ಯೋನಿ ಪ್ರದೇಶವನ್ನು, ಒಣ ಟಾಯ್ಲೆಟ್ ಪೇಪರ್‌ನಿಂದ ಒರೆಸುವುದಕ್ಕಿಂತ ತೊಳೆಯುವುದು ಸಹ ಮೃದುವಾಗಿರುತ್ತದೆ.
ನೀರಿನ ಬದಲು ಸ್ಪ್ರೇ ಅನ್ನು ಬಳಸುವುದರಿಂದ ಯೋನಿಯಲ್ಲಿ ಬ್ಯಾಕ್ಟೀರಿಯಾದ ಸಮತೋಲನವನ್ನು ಅಡ್ಡಿಉಂಟಾಗುವ ಬಗ್ಗೆ ಮಾತನಾಡಿದ ಡಾ.ಬಫಿಂಗ್‌ಟನ್, ಇದು ಮೂತ್ರನಾಳ ಅಥವಾ ಗರ್ಭಕಂಠವನ್ನು ತೊಂದರೆಗೊಳಪಡಿಸಬಹುದು ಎಂದಿದ್ದಾರೆ.
ತೊಳೆಯುವಿಕೆಯು ಕಡಿಮೆ ಇಂಗಾಲದ ಹೆಜ್ಜೆಗುರುತನ್ನು ಉಂಟುಮಾಡುತ್ತದೆ. ಒರೆಸುವ ಕಾಗದವು ಚರ್ಮಕ್ಕೆ ಹಾನಿಕಾರಕವಾದ ಬ್ಲೀಚ್ ಅನ್ನು ಹೊಂದಿರುತ್ತದೆ. ಅಲ್ಲದೆ, ಪರಿಸರದ ದೃಷ್ಟಿಕೋನದಿಂದ, ತೊಳೆಯುವಿಕೆಯು ಒರೆಸುವುದಕ್ಕಿಂತ ಕಡಿಮೆ ನೀರಿನ ಅಗತ್ಯವಿರುತ್ತದೆ. ಸೈಂಟಿಫಿಕ್ ಅಮೇರಿಕನ್‌ನಲ್ಲಿನ ಲೇಖನವೊಂದರ ಪ್ರಕಾರ ಟಾಯ್ಲೆಟ್ ಪೇಪರ್‌ನ ಒಂದು ರೋಲ್ ಅನ್ನು ತಯಾರಿಸಲು 140 ಲೀಟರ್ ನೀರು ಬೇಕಾಗುತ್ತದೆ. ಇದಕ್ಕೆ ವಿರುದ್ಧವಾಗಿ, ನೀವು ತೊಳೆಯುವಿಕೆಯಲ್ಲಿ ಸುಮಾರು 500 ಮಿಲಿ ನೀರನ್ನು ಬಳಸುತ್ತೀರಿ. ಹೀಗಾಗಿ ಮಲ ವಿಸರ್ಜನೆಯ ಬಳಿಕ ಹಿಂಭಾಗವನ್ನು ನೀರಲ್ಲಿ ತೊಳೆಯುವುಉ ಉತ್ತಮವೆಂದು ಪರಿಗಣಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.