ಹೊಸತು ಹಳೆಯದಾಗುವವರೆಗೂ ಸಮಸ್ಯೆಯೇ. ಇದಕ್ಕೆ ಚಪ್ಪಲಿ ಉತ್ತಮ ನಿದರ್ಶನ . ಬಹುತೇಕರಿಗೆ ಹೊಸ ಚಪ್ಪಲಿಯಿಂದ ಗಾಯವಾಗುತ್ತದೆ. ಗಾಯ ಕಡಿಮೆಯಾಗುವಷ್ಟರಲ್ಲಿ ಚಪ್ಪಲಿ ಹಳೆಯದಾಗಿರುತ್ತದೆ. ವಿಪರೀತ ನೋವು ನೀಡುವ ಈ ಚಪ್ಪಲಿ ಗಾಯಕ್ಕೆ ಮನೆಯಲ್ಲಿಯೇ ಉಪಾಯವಿದೆ.
ಡ್ರೆಸ್ (Dress) ಗೆ ತಕ್ಕಂತೆ ಚಪ್ಪಲಿ (Slippers) ಧರಿಸಲು ಎಲ್ಲರೂ ಇಷ್ಟಪಡ್ತಾರೆ. ಮಾರುಕಟ್ಟೆ (Market) ಯಲ್ಲಿ ಅನೇಕ ವೆರೈಟಿ ಚಪ್ಪಲಿಗಳು ಸಿಗ್ತವೆ. ಕಚೇರಿಗೆ ಒಂದು ರೀತಿಯ ಚಪ್ಪಲಿ, ಸಮಾರಂಭಕ್ಕೆ ಒಂದು ರೀತಿಯ ಚಪ್ಪಲಿ, ವಾಕಿಂಗ್ ಗೆ ಒಂದು ಶೂ ಹೀಗೆ ಅನೇಕ ಚಪ್ಪಲಿಯನ್ನು ಜನರು ಮನೆಯಲ್ಲಿಟ್ಟಿರುತ್ತಾರೆ. ನಾಲ್ಕೈದು ಜೊತೆ ಚಪ್ಪಲಿ, ಶೂ ಇದ್ದರೂ ಜನರು ಹೊಸ ಚಪ್ಪಲಿ ನೋಡಿದಾಗ ಖರೀದಿಗೆ ಮುಂದಾಗ್ತಾರೆ. ಅಂಗಡಿಯಲ್ಲಿ ನೋಡಿದ ಚಪ್ಪಲಿ ಕಾಲಿಗೆ ಸರಿಯಾಗಿದೆ ಎನ್ನಿಸುತ್ತದೆ. ಆದ್ರೆ ಮನೆಗೆ ತಂದ್ಮೇಲೆ ಪ್ರಾಬ್ಲಂ ಶುರುವಾಗುತ್ತದೆ. ಅನೇಕ ಬಾರಿ ದೂರದ ಪ್ರಯಾಣಕ್ಕೆ ಹೊರಟಾಗ್ಲೇ ಹೊಸ ಚಪ್ಪಲಿ ಕೈ ಕೊಡುತ್ತದೆ. ಆರಂಭದಲ್ಲಿ ಚಕ್ಕದೆನಿಸುವ ಚಪ್ಪಲಿ ಪಾದಕ್ಕೆ ಹಾನಿ ಮಾಡುತ್ತದೆ. ಪಾದಗಳಲ್ಲಿ ಗುಳ್ಳೆಗಳು ಪ್ರಾರಂಭವಾಗುತ್ತವೆ. ಕೆಲವೊಮ್ಮೆ ನೋವು ಸಹಿಸಲಾಗದು. ಗಾಯ ದೊಡ್ಡದಾಗುತ್ತದೆ. ಆ ಚಪ್ಪಲಿಯಲ್ಲಿ ಒಂದು ಹೆಜ್ಜೆ ಇಡಲೂ ಸಾಧ್ಯವಾಗುವುದಿಲ್ಲ. ಹಳೆ ಚಪ್ಪಲಿ ಧರಿಸುವುದೂ ಕಷ್ಟವಾಗುತ್ತದೆ. ನಾಲ್ಕೈದು ದಿನ ಇದ್ರ ನೋವು ಇರುತ್ತದೆ. ಚಪ್ಪಲಿ ಕಚ್ಚಿದಾಗ ಕಾಡುವ ನೋವು ಹಾಗೂ ಗಾಯವನ್ನು ಸುಲಭವಾಗಿ ಮನೆ ಮದ್ದಿನ ಮೂಲಕ ಹೋಗಲಾಡಿಸಬಹುದು.
ಚಪ್ಪಲಿಯಿಂದ ಕಾಲಿಗಾಗುವ ಗಾಯವನ್ನು ಹೀಗೆ ಕಡಿಮೆ ಮಾಡಿ :
ಟೂತ್ಪೇಸ್ಟ್ ಬಳಸಿ : ಟೂತ್ಪೇಸ್ಟ್ ಸುಟ್ಟಗಾಯಗಳ ಮೇಲೆ ಬಳಸಲಾಗುವ ಔಷಧೀಯ ಉತ್ಪನ್ನವಾಗಿದೆ. ಯಾವುದೇ ಗಾಯದ ಮೇಲೆ ಇದನ್ನು ಹಚ್ಚಿದ್ರೆ ಸುಲಭವಾಗಿ ಪರಿಹಾರ ಸಿಗುತ್ತದೆ. ಇದರಲ್ಲಿ ಕಂಡುಬರುವ ಅಡಿಗೆ ಸೋಡಾ, ಮೆಂಥಾಲ್, ಪೆರಾಕ್ಸೈಡ್ ನಿಮ್ಮ ಗಾಯಗಳನ್ನು ಗುಣಪಡಿಸಲು ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಹಾಗಾಗಿ ಚಪ್ಪಲಿ ಕಚ್ಚಿ ಗಾಯವಾಗಿದೆ ಅಂದ್ರೆ ಟೂತ್ಪೇಸ್ಟ್ ಹಚ್ಚಲು ಮರೆಯದಿರಿ.
ಜ್ವರ, ತಲೆನೋವು ಬಂದಾಗಲ್ಲೆಲ್ಲಾ ಪ್ಯಾರಸಿಟಮಾಲ್ ತಿನ್ಬೋದು ಬಿಟ್ಬಿಡಿ, ಇಲ್ಲಾಂದ್ರೆ ಆರೋಗ್ಯಕ್ಕೇ ಅಪಾಯ !
ಅಲೋ ವೆರಾ ಜೆಲ್ : ಪಾದದಲ್ಲಿ ಗಾಯವಾದ ತಕ್ಷಣ ಉರಿ ಹೆಚ್ಚಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಅಲೋವೆರಾವನ್ನು ನೀವು ಬಳಸಬಹುದು. ಅನೇಕ ಸಮಸ್ಯೆಗೆ ಅಲೋವೆರಾ ಮದ್ದು. ನೀವಿದನ್ನು ಪಾದದಲ್ಲಾದ ಗಾಯವನ್ನು ಕಡಿಮೆ ಮಾಡಲು ಬಳಸಬಹುದು. ಚಪ್ಪಲಿ ಕಚ್ಚಿ ಗಾಯವಾದ ಪಾದಕ್ಕೆ ಅಲೋವೆರಾವನ್ನು ಹಚ್ಚಿಕೊಳ್ಳಿ. ಅಲೋವೆರಾ ಜೆಲ್ ಬಳಸುವುದ್ರಿಂದ ಪಾದಗಳಲ್ಲಿನ ಗಾಯಗಳು ಶಮನವಾಗುತ್ತವೆ. ಬೇಗ ನೋವು ಕಡಿಮೆಯಾಗುತ್ತದೆ.
ಜೇನುತುಪ್ಪವನ್ನು ಬಳಸಿ : ದೇಹದ ಯಾವುದೇ ಭಾಗದಲ್ಲಿ ಗಾಯವಾಗಿದ್ದರೂ ಅದಕ್ಕೆ ಜೇನುತುಪ್ಪವನ್ನು ಬಳಸಬಹುದು. ಗಾಯ ಗುಣಪಡಿಸಲು ಜೇನುತುಪ್ಪವು ತುಂಬಾ ಪ್ರಯೋಜನಕಾರಿಯಾಗಿದೆ. ಯಾವುದೇ ನೋವಿನಿಂದ ಮುಕ್ತಿ ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ. ನೀವು ಆಲಿವ್ ಎಣ್ಣೆಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಗಾಯದ ಮೇಲೆ ಹಚ್ಚಬಹುದು. ಚಪ್ಪಲಿ ಕಚ್ಚಿದ ಜಾಗಕ್ಕೂ ನೀವು ಇದನ್ನು ಬಳಸಬಹುದು.
Summer ಬಂತೆಂದರೆ ಸೊಳ್ಳೆ ಕಾಟ, ರಾಸಾಯನಿಕಗಳಿಲ್ಲದೇ ಹೀಗ್ ಓಡಿಸಿ
ಅಕ್ಕಿ ಹಿಟ್ಟು ಬಳಸಿ : ಗಾಯವನ್ನು ಗುಣಪಡಿಸಲು ನೀವು ಅಕ್ಕಿ ಹಿಟ್ಟನ್ನು ಸಹ ಬಳಸಬಹುದು. ನಿಮ್ಮ ಪಾದಗಳ ಸತ್ತ ಚರ್ಮವನ್ನು ಸ್ವಚ್ಛಗೊಳಿಸಲು ಇದು ತುಂಬಾ ಪ್ರಯೋಜನಕಾರಿಯಾಗಿದೆ. ಅಕ್ಕಿ ಹಿಟ್ಟಿಗೆ ಸ್ವಲ್ಪ ನೀರು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ಗಾಯವಾದ ಅಥವಾ ನೋವಾಗುತ್ತಿರುವ ಜಾಗಕ್ಕೆ ಹಚ್ಚಿ. ಸ್ವಲ್ಪ ಸಮಯದವರೆಗೆ ಅದನ್ನು ಹಾಗೆಯೇ ಬಿಡಿ. ಪೇಸ್ಟ್ ಒಣಗಿದಾಗ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದ್ರಿಂದ ಗಾಯ ಹೋಗುವುದಲ್ಲದೆ ನೋವು ಕಡಿಮೆಯಾಗುತ್ತದೆ.
ತೆಂಗಿನ ಎಣ್ಣೆಯನ್ನು ಬಳಸಿ : ಕಾಲುಗಳ ಮೇಲಿನ ಗಾಯಗಳಿಗೆ ನೀವು ತೆಂಗಿನ ಎಣ್ಣೆಯನ್ನು ಸಹ ಬಳಸಬಹುದು. ಚಪ್ಪಲಿ ಕಚ್ಚಿದ ಗಾಯಕ್ಕೆ ಎಣ್ಣೆ ಹೆಚ್ಚುವುದ್ರಿಂದ ನಿಮ್ಮ ಪಾದಗಳ ಮೇಲಿನ ಚರ್ಮವನ್ನು ಎಣ್ಣೆ ತೇವಗೊಳಿಸುವುದರ ಜೊತೆಗೆ, ಇದು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಅನೇಕ ಗಾಯಗಳಿಗೆ ಹಾಗೂ ನೋವುಗಳಿಗೆ ತೆಂಗಿನ ಎಣ್ಣೆಯನ್ನು ಬಳಸಲಾಗುತ್ತದೆ.