ವೈದ್ಯಲೋಕದ ಅಚ್ಚರಿ: 30 ವರ್ಷದ ಹಿಂದಿನ ಭ್ರೂಣದಿಂದ ಜನಿಸಿದ ಅವಳಿ ಮಕ್ಕಳು

By Vinutha PerlaFirst Published Nov 24, 2022, 3:31 PM IST
Highlights

30 ವರ್ಷದ ಹಿಂದೆ ಘನೀಕರಿಸಲಾಗಿದ್ದ ಭ್ರೂಣಮೂಲದಿಂದ ಅವಳಿ ಮಕ್ಕಳನ್ನು ಪಡೆದ  ಅಮೇರಿಕಾದ ದಂಪತಿ ಹೊಸ ವಿಶ್ವ ದಾಖಲೆ ಮಾಡಿದ್ದಾರೆ. ಇದು ಸಾಧ್ಯವಾಗಿದ್ದಾದರೂ ಹೇಗೆ ? ಇಲ್ಲಿದೆ ಹೆಚ್ಚಿನ ಮಾಹಿತಿ. 

ವಾಷಿಂಗ್ಟನ್‌: ಎರಡು ದಶಕಗಳಿಗೂ ಅಧಿಕ ಕಾಲದಿಂದ ಸಂಗ್ರಹಿಸಲ್ಪಟ್ಟಿದ್ದ ಮಾನವ ಭ್ರೂಣದಿಂದ ಅಮೆರಿಕಾದ ಮಹಿಳೆ (Woman)ಯೊಬ್ಬರು ಮಗುವನ್ನು ಪಡೆದಿದ್ದಾರೆ. ಇವರು ವರ್ಷಗಳ ಹಿಂದೆಯೇ ಭ್ರೂಣವನ್ನು ದಾನ ಪಡೆದಿದ್ದರು. 30 ವರ್ಷದ ಹಿಂದೆ ಶೈತ್ಯೀಕರಿಸಲಾಗಿದ್ದ ಭ್ರೂಣದಿಂದ ಯುಎಸ್ ದಂಪತಿಗಳು (Couple) ಅವಳಿ ಮಕ್ಕಳನ್ನು ಸ್ವಾಗತಿಸಿದ್ದಾರೆ. ಅಮೇರಿಕಾದ ಒರೆಗಾನ್‌ ದಂಪತಿಗೆ ಜನಿಸಿದ ಮಕ್ಕಳು ಈ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಹಿಂದಿನ ದಾಖಲೆ (Record)ಯಲ್ಲಿ ಮೊಲ್ಲಿ ಗಿಬ್ಸನ್ ಎಂಬವರು, ಸುಮಾರು 27 ವರ್ಷಗಳ ಕಾಲ ಹೆಪ್ಪುಗಟ್ಟಿದ ಭ್ರೂಣದಿಂದ 2020 ರಲ್ಲಿ ಅವಳಿ ಮಕ್ಕಳನ್ನು (Twin babies) ಪಡೆದಿದ್ದರು. ಸದ್ಯ ಒರೆಗಾನ ದಂಪತಿಗೆ ಜನಿಸಿದ ಮಕ್ಕಳನ್ನು ವಿಶ್ವದ ಅತ್ಯಂತ ಹಳೆಯ ಮಕ್ಕಳು ಎಂದು ಕರೆಯಲಾಗುತ್ತಿದೆ. ಈ ಮಕ್ಕಳು ಅಕ್ಟೋಬರ್ 31ರಂದು ರಾಚೆಲ್ ರಿಡ್ಜ್‌ವೇ ಮತ್ತು ಫಿಲಿಪ್ ರಿಡ್ಜ್‌ವೇಗೆ ಜನಿಸಿದರು. 

ಶೈತ್ಯೀಕರಿಸಲಾಗಿದ್ದ ಭ್ರೂಣದಿಂದ ಅವಳಿ ಮಕ್ಕಳು
ರಾಷ್ಟ್ರೀಯ ಭ್ರೂಣ ದಾನ ಕೇಂದ್ರವು ಲಿಡಿಯಾ ಮತ್ತು ತಿಮೋತಿ ರಿಡ್ಜ್‌ವೇ ಎಂದು ಹೆಸರಿಸಲಾದ ಅವಳಿಗಳು ನೇರ ಜನನಕ್ಕೆ ಕಾರಣವಾಗುವ ದೀರ್ಘಹೆಪ್ಪುಗಟ್ಟಿದ ಭ್ರೂಣಗಳಾಗಿವೆ (Embryos Frozen) ಎಂದು ಹೇಳುತ್ತದೆ. ಹೆಣ್ಣು ಮಗು ಲಿಡಿಯಾ 5 ಪೌಂಡ್, 11 ಔನ್ಸ್, (2.5 ಕೆಜಿ) ಗಂಡು ಮಗು ತಿಮೋತಿ 6 ಪೌಂಡ್, 7 ಔನ್ಸ್ (2.92 ಕೆಜಿ) ತೂಕದಲ್ಲಿ ಜನಿಸಿದರು. ಈಗಾಗಲೇ 8, 6, 3 ಮತ್ತು ಸುಮಾರು 2 ವರ್ಷ ವಯಸ್ಸಿನ ಇತರ ನಾಲ್ಕು ಮಕ್ಕಳನ್ನು ಹೊಂದಿರುವ ರಿಡ್ಜ್‌ವೇಸ್, ದಾನ ಮಾಡಿದ ಭ್ರೂಣಗಳನ್ನು ಬಳಸಿಕೊಂಡು ಹೆಚ್ಚಿನ ಮಕ್ಕಳನ್ನು ಹೊಂದಲು ನಿರ್ಧರಿಸಿದ್ದಾರೆ.

ತಾಯ್ತನದ ಸುಖ ಅನುಭವಿಸಲಿಲ್ಲ, ಹೆರಿಗೆ ನೋವಿಲ್ಲ, ಕೋಮಾದಲ್ಲೇ ಅಮ್ಮನಾದ ಮಹಿಳೆ!

30 ವರ್ಷದ ಹಿಂದೆ ಘನೀಕರಿಸಲಾಗಿದ್ದ ಭ್ರೂಣಮೂಲ
ಹೆಪ್ಪುಗಟ್ಟಿದ ಭ್ರೂಣ ಕಳೆದ ಮಾರ್ಚ್ ತಿಂಗಳಲ್ಲಿ ಕರಗಲಾರಂಭಿಸಿತು. ನಂತರ ಪ್ರನಾಳೀಯ ಫಲೀಕರಣ ಮೂಲಕ ಟೀನಾಗೆ ವರ್ಗಾಯಿಸಲಾಯಿತು. ಹೆಪ್ಪುಗಟ್ಟಿದ ಭ್ರೂಣದ ವಯಸ್ಸು ಕೇಳಿ ದಂಪತಿಗೆ ಆರಂಭದಲ್ಲಿ ಅಚ್ಚರಿಯಾಯಿತು, ನಂತರ ಒಪ್ಪಿಕೊಂಡು ಮಗುವನ್ನು ಪಡೆದರು.  26 ವರ್ಷದ ಟೀನಾ ಗಿಬ್ಸನ್ ಗೆ ಭ್ರೂಣವನ್ನು ದಾನ ಪಡೆದು ಮಗುವಾದ ಬಗ್ಗೆ ಖುಷಿಯಿದೆ. ನನಗೆ ಮಗುವಾಗಬೇಕೆಂದು ಆಸೆಯಿತ್ತು. ಇದು ವಿಶ್ವ ದಾಖಲೆ ಮಾಡಿದೆಯೋ, ಇಲ್ಲವೊ ಎಂದು ನಾನು ಯೋಚಿಸಲು ಹೋಗುವುದಿಲ್ಲ ಎನ್ನುತ್ತಾರೆ. 

1991ರಲ್ಲಿ ಜನಿಸಿದ ಟೀನಾಗೆ ತನ್ನ ಪತಿ ಬೆಂಜಮಿನ್ ನಿಂದ ಸಹಜವಾಗಿ ಮಕ್ಕಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಆಕೆಯ ಪತಿಗೆ ಸಿಸ್ಟಿಕ್ ಫೈಬ್ರೋಸಿಸ್ ಸಮಸ್ಯೆಯಿದ್ದು, ಅಂತಹ ಸಮಸ್ಯೆಯಿರುವ ಶೇಕಡಾ 98 ಮಂದಿಗೆ ಬಂಜೆತನದ ಸಮಸ್ಯೆಯಿರುತ್ತದೆ. ಈ ಸಮಯದಲ್ಲಿ ದಂಪತಿ ಬಾಳಲ್ಲಿ ಹೆಪ್ಪುಗಟ್ಟಿದ ಭ್ರೂಣ ಆಶಾಕಿರಣವಾಗಿ ಮೂಡಿದೆ. 'ಅದರಲ್ಲಿ ಮನಸ್ಸಿಗೆ ಮುದ ನೀಡುವ ಸಂಗತಿಯಿದೆ. ಒಂದರ್ಥದಲ್ಲಿ , ಅವರು ನಮ್ಮ ಚಿಕ್ಕ ಮಕ್ಕಳಾಗಿದ್ದರೂ ನಮ್ಮ ಹಿರಿಯ ಮಕ್ಕಳು' ಎಂದು ದಂಪತಿ ಖುಷಿಯಿಂದ ಹೇಳಿಕೊಂಡಿದ್ದಾರೆ.

ಬಾಡಿಗೆ ತಾಯ್ತನದ ನಿಯಮವೇನು; ನಯನತಾರಾ-ವಿಘ್ನೇಶ್ ದಂಪತಿಗೆ ಸಂಕಷ್ಟ ಎದುರಾಗಿದ್ದೇಕೆ?

ಭ್ರೂಣಗಳನ್ನು ಏಪ್ರಿಲ್ 22, 1992 ರಂದು ಫ್ರೀಜ್ ಮಾಡಲಾಯಿತು ಮತ್ತು 2007 ರವರೆಗೆ ವೆಸ್ಟ್ ಕೋಸ್ಟ್ ಫರ್ಟಿಲಿಟಿ ಲ್ಯಾಬ್‌ನಲ್ಲಿ ಕೋಲ್ಡ್ ಸ್ಟೋರೇಜ್‌ನಲ್ಲಿ ಇತ್ತು, ದಂಪತಿಗಳು ಅವುಗಳನ್ನು ರಾಷ್ಟ್ರೀಯ ಭ್ರೂಣ ದಾನ ಕೇಂದ್ರಕ್ಕೆ (NEDC) ದಾನ ಮಾಡಿದರು. ಹದಿನೈದು ವರ್ಷಗಳ ನಂತರ, ಹೆಪ್ಪುಗಟ್ಟಿದ ಭ್ರೂಣಗಳು ಲಿಡಿಯಾ ಮತ್ತು ತಿಮೋತಿ ಜನ್ಮಕ್ಕೆ ಕಾರಣವಾಯಿತು. ಅದೇನೆ ಇರ್ಲಿ, ಈ ಘಟನೆ ವೈದ್ಯಲೋಕದಲ್ಲೊಂದು ಅಚ್ಚರಿಯೇ ಸರಿ.

click me!