ಅಬ್ಬಾ..ಗಾಡಿನಾ..ಬಾಡಿನಾ ! ಅತಿ ಹೆಚ್ಚು ಬಾರಿ ದೇಹ ಮಾರ್ಪಾಡು ಮಾಡಿ ದಂಪತಿ ದಾಖಲೆ

By Vinutha Perla  |  First Published Nov 24, 2022, 11:56 AM IST

ಗಾಡಿಯನ್ನು ಚೆಂದಗೊಳಿಸಲು ಆಗಾಗ ಮೋಡಿಫಿಕೇಶನ್ ಮಾಡಿರುವುದನ್ನು ನೋಡಿರಬಹುದು. ಆದ್ರೆ ಇಲ್ಲೊಂದೆಡೆ ದಂಪತಿ ಬಾಡಿಗೆ ಸಿಕ್ಕಾಪಟ್ಟೆ ಮಾಡಿಫಿಕೇಶನ್ ಮಾಡಿಸಿಕೊಂಡಿದ್ದಾರೆ. ಅವ್ರು ದೇಹಕ್ಕೆ ಅದೆಷ್ಟು ಬಾರಿ ಮಾರ್ಪಾಡು ಮಾಡಿದ್ದಾರೆಂದ್ರೆ ಅದ್ರಿಂದಾನೇ ವಿಶ್ವ ದಾಖಲೆ ಬರೆದಿದ್ದಾರೆ.


ಗಾಡಿಗಳು ಸ್ಟೈಲಿಶ್ ಆಗಿ ಕಾಣೋಕೆ ಅದರ ಮಾಲೀಕರು ಅದಿಕ್ಕೆ ಆಗಾಗ ಮಾಡಿಫಿಕೇಶನ್‌ ಮಾಡೋದನ್ನು ನೋಡಿರ್ತೀರಾ ? ಹಾಗೆಯೇ ಮನುಷ್ಯರು (Human) ಸಹ ಇನ್ನಷ್ಟು ಚೆಂದ ಕಾಣೋಕೆ ದೇಹ (Body)ದಲ್ಲಿ ಟ್ಯಾಟೂ ಹಾಕಿಸ್‌ಕೊಳ್ತಾರೆ. ಕುತ್ತಿಗೆ, ತೋಳುಗಳ ಮೇಲೆ, ಭುಜದಲ್ಲಿ, ಕಾಲುಗಳಲ್ಲಿ, ಬೆನ್ನಿನ ಹಿಂದೆಯೆಲ್ಲಾ ಟ್ಯಾಟೂ ಹಾಕ್ಕೊಳ್ತಾರೆ. ಆದ್ರೆ ಇಲ್ಲೊಂದು ಜೋಡಿ (Couple) ಅತಿ ಹೆಚ್ಚು ಬಾರಿ ದೇಹದ ಮಾರ್ಪಾಡು ಮಾಡ್ಕೊಂಡಿದ್ದಾರೆ. ಈ ಮೂಲಕ ಗಿನ್ನೆಸ್ ವಿಶ್ವ ದಾಖಲೆ (World record)ಯನ್ನು ಸಹ ಬರೆದಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಅತಿ ಹೆಚ್ಚು ದೇಹದ ಮಾರ್ಪಾಡುಗಳಿಗಾಗಿ ಗಿನ್ನೆಸ್ ವಿಶ್ವ ದಾಖಲೆ ಬರೆದ ದಂಪತಿ
ಅರ್ಜೆಂಟೀನಾದ ದಂಪತಿ, ಗೇಬ್ರಿಯೆಲಾ ಪೆರಾಲ್ಟಾ ಮತ್ತು ವಿಕ್ಟರ್ ಹ್ಯೂಗೋ ಪೆರಾಲ್ಟಾ ಅವರು ಅತಿ ಹೆಚ್ಚು ದೇಹದ ಮಾರ್ಪಾಡುಗಳಿಗಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ವಿವಾಹಿತ ದಂಪತಿಗಳು ಹಚ್ಚೆ (Tattoo) ಮತ್ತು ದೇಹದ ಮಾರ್ಪಾಡುಗಳ ಬಗ್ಗೆ ಉತ್ಸುಕರಾಗಿದ್ದಾರೆ ಮತ್ತು ಇಲ್ಲಿಯವರೆಗೆ ಅವರು ಸುಮಾರು 98 ಬಾರಿ ಬಾಡಿ ಮೋಡಿಫಿಕೇಶನ್ ಮಾಡಿದ್ದಾರೆ. 'ಜೀವನವನ್ನು ಆನಂದಿಸಿ, ಕಲೆಯನ್ನು ಆನಂದಿಸಿ. ಹಚ್ಚೆಗಳು ನಿಮ್ಮನ್ನು ಒಳ್ಳೆಯ ಅಥವಾ ಕೆಟ್ಟ ವ್ಯಕ್ತಿಯನ್ನಾಗಿ ಮಾಡುವುದಿಲ್ಲ - ಇದು ಕೇವಲ ಕಲೆ (Art). ಅದನ್ನು ಮೆಚ್ಚುವವರು ಮತ್ತು ತೆಗಳುವವರೂ ಇರುತ್ತಾರೆ' ಎಂದು ವಿಕ್ಟರ್ ಹ್ಯೂಗೋ ಪೆರಾಲ್ಟಾ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ಗೆ ಹೇಳಿದರು.

Tap to resize

Latest Videos

ಅಯ್ಯೋ ಪಾಪ...ಮುಖ, ಮೈ ಮೇಲೆಲ್ಲಾ ಕೂದಲು, ಇದು ವೆರ್‌ವುಲ್ಫ್ ಸಿಂಡ್ರೋಮ್ !

ದೇಹದ ಮೇಲೆಲ್ಲಾ ಚಿತ್ರವಿಚಿತ್ರ ಟ್ಯಾಟೂ
ದಂಪತಿಗಳ ಕಣ್ಣುಗಳ ಬಿಳಿ ಭಾಗದಲ್ಲಿ ಸಹ ಹಚ್ಚೆ ಹಾಕಲ್ಪಟ್ಟಿದೆ. ಮಾತ್ರವಲ್ಲ ದೇಹದಾದ್ಯಂತ 50 ಚುಚ್ಚುವಿಕೆಗಳು, ಎಂಟು ಮೈಕ್ರೊಡರ್ಮಲ್‌ಗಳು, 14 ದೇಹ ಇಂಪ್ಲಾಂಟ್‌ಗಳು, ಐದು ದಂತ ಕಸಿಗಳು, ನಾಲ್ಕು ಇಯರ್ ಎಕ್ಸ್ಪಾಂಡರ್‌ಗಳು, ಎರಡು ಇಯರ್ ಬೋಲ್ಟ್‌ಗಳು ಮತ್ತು ಒಂದು ಫೋರ್ಕ್ಡ್ ನಾಲಿಗೆ ಮಾಡಿಸಿಕೊಂಡಿದ್ದಾರೆ. ಇಷ್ಟೆಲ್ಲಾ ದೇಹದ ಮಾರ್ಪಾಡು (Body Modifications) ಮಾಡಿರುವ ಕಾರಣ ನೋಡಲು ಇವರು ವಿಚಿತ್ರವಾಗಿಯೇ ಕಾಣುತ್ತಾರೆ. ಗೇಬ್ರಿಯೆಲಾ ಮತ್ತು ವಿಕ್ಟರ್ ಸುಮಾರು 24 ವರ್ಷಗಳ ಹಿಂದೆ ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ಮೋಟಾರ್‌ಸೈಕಲ್ ಈವೆಂಟ್‌ನಲ್ಲಿ ಭೇಟಿ (Meet)ಯಾದರು. ಅಲ್ಲಿಂದ ಇಬ್ಬರೂ ಜೊತೆಯಾಗಿದ್ದು, ಚಿತ್ರವಿಚಿತ್ರ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. 

ಮೊದಲ ನೋಟದ ಪ್ರೀತಿಯದು. ಆ ಬಳಿಕ ಗೇಬ್ರಿಯೆಲಾ ಪೆರಾಲ್ಟಾ ಮತ್ತು ವಿಕ್ಟರ್ ಹ್ಯೂಗೋ ಇಬ್ಬರೂ ಜೊತೆಗೇ ಇದ್ದು, ತಮ್ಮ ಉಳಿದ ಜೀವನವನ್ನು ಇಂಪ್ಲಾಂಟ್‌ಗಳು ಮತ್ತು ದೇಹದ ಮಾರ್ಪಾಡುಗಳಿಗಾಗಿ ಮೀಸಲಿಟ್ಟಿದ್ದಾರೆ.  ಅವುಗಳಲ್ಲಿ ಕೆಲವನ್ನು ಜನರು ಒಪ್ಪಿಕೊಳ್ಳುತ್ತಾರೆ, ಇನ್ನು ಕೆಲವು ಟ್ಯಾಟೂದ ಬಗ್ಗೆ ಹೀಯಾಳಿಸುತ್ತಾರೆ ಎಂದು ದಂಪತಿ ಹೇಳಿದ್ದಾರೆ. ಮಾತ್ರವಲ್ಲ ಕೆಲವು ಟ್ಯಾಟೂ ನೋವಿನಿಂದ ಕೂಡಿರುತ್ತದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ದಂಪತಿಗಳ ಪಾಲಿಗೆ, ದೇಹದ ಮಾರ್ಪಾಡುಗಳು ಕಲಾತ್ಮಕ ಅಭಿವ್ಯಕ್ತಿಯ ಸಂಕೇತವಾಗಿದೆ.

ಈ ಲೇಡಿ ಡಾಕ್ಟರ್ ಮೈಯಲ್ಲಿ ಮತ್ತೆ ಟ್ಯಾಟೂ ಹಾಕಿಸಿ ಕೊಳ್ಳಲು ಇಲ್ಲವೇ ಇಲ್ಲ ಜಾಗ...

ಗೇಬ್ರಿಯೆಲಾಗೆ ಅತ್ಯಂತ ನೋವಿನ ಮಾರ್ಪಾಡುಗಳು ಸ್ಕಾರ್ಫಿಕೇಶನ್‌ಗಳಾಗಿವೆ. ಅವಳು ಇದನ್ನು ಮೂರು ಬಾರಿ ಹೊಂದಿದ್ದಾಳೆ ಮತ್ತು ಸಂವೇದನೆಯು ಬೇರೆ ಯಾವುದೇ ಮಾರ್ಪಾಡಿಗೆ ಹೋಲಿಸಲಾಗದು ಎಂದು ಹೇಳುತ್ತಾರೆ. ವಿಕ್ಟರ್‌ಗೆ, ಅತ್ಯಂತ ನೋವಿನ ಅನುಭವವೆಂದರೆ ಅವನ ನಾಲಿಗೆಯ ಪಿಗ್ಮೆಂಟೇಶನ್ ಆಗಿತ್ತು ಎನ್ನುತ್ತಾರೆ. ಇದರಿಂದ ಗಂಟೆಗಳ ಕಾಲ ಉಸಿರಾಡಲು ಕಷ್ಟವಾಯಿತು. ಇದು ಅವನ ನೆಚ್ಚಿನ ಮಾರ್ಪಾಡುಗಳಲ್ಲಿ ಒಂದಾಗಿದ್ದರೂ ನೋವನ್ನು ಅನುಭವಿಸಬೇಕಾಯಿತು ಎಂದು ತಿಳಿಸಿದ್ದಾರೆ. ಹೀಗಿದ್ದೂ ದೇಹದಲ್ಲಿ ಉಂಟಾಗುವ ಸುಂದರ ಕಲೆಯ ಮೇಲಿನ ಅವರ ಪ್ರೀತಿಯು ಅವರ ದೇಹಕ್ಕೆ ಹೆಚ್ಚಿನ ಮಾರ್ಪಾಡುಗಳನ್ನು ಮಾಡಲು ಅವರನ್ನು ಪ್ರೇರೇಪಿಸುತ್ತದೆ ಎಂದು ತಿಳಿಸಿದ್ದಾರೆ.

click me!