
ಮನೆಯಲ್ಲಿ ನಾವು ಹೆಚ್ಚು ಸಮಯ ಕಳೆಯುವ ಜಾಗಗಳಲ್ಲಿ ಶೌಚಾಲಯವೂ ಒಂದು, ಆದರೆ ಶೌಚಾಲಯಕ್ಕೆ ಸಂಬಂಧಿಸಿದ ಸಣ್ಣ ಅಭ್ಯಾಸಗಳನ್ನು ನಾವು ಹೆಚ್ಚಾಗಿ ನಿರ್ಲಕ್ಷಿಸುತ್ತೇವೆ. ಈ ಸಣ್ಣದು ಎಂದು ತೋರುವ ಅಭ್ಯಾಸಗಳು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಹಾನಿಕಾರಕವಾಗಬಹುದು. ಜನರು ಈ ಬಗ್ಗೆ ತಿಳಿಯದೇ ತಪ್ಪು ಮಾಡುತ್ತಾರೆ. ಹಾಗಿದ್ರೆ ಯಾವುದನ್ನು ಮಾಡಬಾರದು ನೋಡೋಣ.
ಜನರು ಸಾಮಾನ್ಯವಾಗಿ ಮುಚ್ಚಳವನ್ನು ತೆರೆದಿಟ್ಟು ಫ್ಲಶ್ ಮಾಡುವ ಕೆಟ್ಟ ಅಭ್ಯಾಸವನ್ನು ಹೊಂದಿರುತ್ತಾರೆ. ನಿಮ್ಮ ಶೌಚಾಲಯದ ಸೀಟಿನಲ್ಲಿ ಮುಚ್ಚಳವಿದ್ದರೆ, ಫ್ಲಶ್ ಮಾಡುವಾಗ ಅದನ್ನು ಯಾವಾಗಲೂ ಮುಚ್ಚುವ ಅಭ್ಯಾಸ ಇರಲಿ. ಏಕೆಂದರೆ ಫ್ಲಶ್ ಮಾಡುವಾಗ ನೀರು ಸೀಟ್ ಮೇಲೆ ಬಂದು, ಅದು ನಿಮ್ಮನ್ನೂ ತಲುಪಬಹುದು. ಇದು ಬಹಳಷ್ಟು ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರಬಹುದು, ಆದ್ದರಿಂದ ಮುಚ್ಚಳವನ್ನು ಮುಚ್ಚುವುದು ಬಹಳ ಮುಖ್ಯ.
ಶೌಚಾಲಯದಲ್ಲಿ ಒದ್ದೆಯಾದ ಟವೆಲ್ ಇಡಬೇಡಿ
ನಿಮ್ಮ ಟಾಯ್ಲೆಟ್ ಮತ್ತು ಬಾತ್ ರೂಮ್ ಜೊತೆಯಾಗಿದ್ದರೆ,, ಸ್ನಾನ ಮಾಡಿದ ನಂತರ ಅಥವಾ ನಿಮ್ಮ ಕೈ ಮತ್ತು ಮುಖವನ್ನು ತೊಳೆದ ನಂತರ ಟವೆಲ್ ಬಾತ್ರೂಮಲ್ಲಿ ನೇತುಹಾಕಬೇಡಿ. ಇದು ಟವೆಲ್ ಸರಿಯಾಗಿ ಒಣಗುವುದನ್ನು ತಡೆಯುತ್ತದೆ. ಜೊತೆಗೆ ಬ್ಯಾಕ್ಟೀರಿಯಾ ನಿಮ್ಮ ಬಟ್ಟೆಗೆ ಹರಡುವ ಸಾಧ್ಯತೆ ಕೂಡ ಹೆಚ್ಚಾಗುತ್ತದೆ.
ಕಠಿಣ ಕ್ಲೀನರ್ ಬಳಸಬೇಡಿ
ಜನರು ಸಾಮಾನ್ಯವಾಗಿ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಕಠಿಣ ಕೆಮಿಕಲ್ ಬಳಸುತ್ತಾರೆ ಮತ್ತು ಅವರು ಟೈಲ್ಸ್, ನಲ್ಲಿಗಳು, ಕಮೋಡ್‌ಗಳು ಮತ್ತು ಗಾಜನ್ನು ಸ್ವಚ್ಛಗೊಳಿಸಲು ಅದೇ ಕ್ಲೀನರ್‌ಗಳನ್ನು ಬಳಸುತ್ತಾರೆ, ಇದು ಶೌಚಾಲಯದ ಹೊಳಪನ್ನು ಹಾಳು ಮಾಡುತ್ತದೆ. ಆದ್ದರಿಂದ, ಅತಿಯಾದ ಕಠಿಣ ಕ್ಲೀನರ್‌ಗಳನ್ನು ಬಳಸುವುದನ್ನು ತಪ್ಪಿಸಿ.
ಟಾಯ್ಲೆಟ್ ಬ್ರಷ್ ಮುಚ್ಚಿದ ಡಬ್ಬಿಯಲ್ಲಿ ಒದ್ದೆಯಾಗಿ ಬಿಡಬೇಡಿ
ಟಾಯ್ಲೆಟ್ ಕ್ಲೀನ್ ಮಾಡಿದ ನಂತರ, ಬಳಸಿದ ಟಾಯ್ಲೆಟ್ ಬ್ರಷ್ ಅನ್ನು ತಕ್ಷಣ ಮುಚ್ಚಿದ ಡಬ್ಬಿಯಲ್ಲಿ ಒದ್ದೆಯಾಗಿ ಬಿಡಬೇಡಿ, ಏಕೆಂದರೆ ತೇವಾಂಶವು ವಾಸನೆಯನ್ನು ಉಂಟುಮಾಡಬಹುದು. ಬಳಸಿದ ನಂತರ, ಅದನ್ನು ನೀರಿನಿಂದ ತೊಳೆಯಿರಿ, ಗಾಳಿಯಲ್ಲಿ ಒಣಗಲು ಬಿಡಿ, ಮತ್ತು ನಂತರ ಅದನ್ನು ಮತ್ತೆ ಅದರ ಸ್ಥಳದಲ್ಲಿ ಇರಿಸಿ.
ಫೋನ್ ಶೌಚಾಲಯಕ್ಕೆ ತೆಗೆದುಕೊಂಡು ಹೋಗಬೇಡಿ
ನೀವು ಆಗಾಗ್ಗೆ ಶೌಚಾಲಯ ಬಳಸುವವರಾಗಿದ್ದರೆ, ಇಂದೇ ಈ ಅಭ್ಯಾಸ ಬಿಟ್ಟುಬಿಡಿ. ನಿಮ್ಮ ಫೋನ್ ಶೌಚಾಲಯಕ್ಕೆ ತೆಗೆದುಕೊಂಡು ಹೋಗುವುದರಿಂದ ಶೌಚಾಲಯದಿಂದ ಬ್ಯಾಕ್ಟೀರಿಯಾಗಳು ಆಕರ್ಷಿಸಲ್ಪಡುತ್ತವೆ, ನಂತರ ಅದು ನಿಮ್ಮ ಹಾಸಿಗೆ, ಊಟದ ಟೇಬಲ್ ಅಥವಾ ಅಡುಗೆಮನೆಗೂ ಬರುತ್ತೆ.. ಆದ್ದರಿಂದ, ನಿಮ್ಮ ಫೋನ್ ಟಾಯ್ಲೆಟ್ ಗೆ ತೆಗೆದುಕೊಂಡು ಹೋಗಬೇಡಿ.
ಒದ್ದೆಯಾದ ನೆಲವನ್ನು ಗಮನಿಸದೆ ಬಿಡಬೇಡಿ.
ಸ್ನಾನದ ನಂತರ ಬಾತ್ ರೂಮ್ ನೆಲದ ಮೇಲೆ ದೀರ್ಘಕಾಲ ನೀರು ನಿಲ್ಲಲು ಬಿಡಬೇಡಿ, ಏಕೆಂದರೆ ತೇವಾಂಶವು ವಾಸನೆಯನ್ನು ಉಂಟುಮಾಡಬಹುದು. ಸ್ನಾನದ ನಂತರ ಯಾವಾಗಲೂ ನೀರನ್ನು ಒರೆಸಿ ಮತ್ತು ಅದು ಬೇಗನೆ ಒಣಗಲು ಬಾಗಿಲು ತೆರೆದಿಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.