ಮಾಂಸಖಂಡ ಬೆಳೆಸೋಕೆ ನಾಯಿ ಆಹಾರ ತಿನ್ನೋದಾ!!

By Suvarna News  |  First Published Mar 29, 2023, 4:59 PM IST

ಮಾಂಸಖಂಡ ಬೆಳೆಸಲು ನಾಯಿ ಆಹಾರ ಸೇವಿಸುವ ಬಗ್ಗೆ ಇತ್ತೀಚೆಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ, ನಾಯಿ ಆಹಾರ ಎಂದಿಗೂ ಮಾನವ ದೇಹಕ್ಕೆ ಸೂಕ್ತವಲ್ಲ. ಮಾಂಸಖಂಡ ಬೆಳೆಸಲು ಬೇಕಾಬಿಟ್ಟಿ ಆಹಾರ ಸೇವನೆ ಮಾಡುವುದರಿಂದ ದೇಹಕ್ಕೆ ಹಾನಿಯೇ ಹೆಚ್ಚು.  
 


ಯುವಕರಿಗೆ ಸಿಕ್ಸ್ ಪ್ಯಾಕ್ ಮಾಡುವ ಹಂಬಲ ಹೆಚ್ಚು. ಹೀಗಾಗಿ, ಜಿಮ್ ಗೆ ಓಡುವುದು, ಕಸರತ್ತು ಮಾಡುವುದು ಸಾಮಾನ್ಯ. ಜತೆಗೆ, ದಿನಕ್ಕೆ ಇಂತಿಷ್ಟು ಮೊಟ್ಟೆ, ಹಣ್ಣು, ಪ್ರೊಟೀನ್ ಪೌಡರ್ ಎಂದು ಆಹಾರ ಸೇವನೆ ಬಗ್ಗೆ ಗಮನ ನೀಡುವುದು ಇದ್ದೇ ಇರುತ್ತದೆ. ಮಾಂಸಖಂಡಗಳನ್ನು ಬೆಳೆಸಿಕೊಂಡು ಹುಡುಗಿಯರ ಎದುರು ಪೋಸ್ ನೀಡಬೇಕೆಂದು ಆಸೆಪಡುವವರೂ ಇದ್ದಾರೆ. ಜಿಮ್ ಗೆ ಹೋದವರು ವರ್ಷವೊಪ್ಪತ್ತಿನಲ್ಲೇ ಸರಿಸುಮಾರಾದ ಬಾಡಿ ಬಿಲ್ಡ್ ಮಾಡಿಕೊಳ್ಳುವುದು ಕಂಡುಬರುತ್ತದೆ. ಈ ಟ್ರೆಂಡ್ ಗೆ ಮರುಳಾಗಿರುವ ಯುವಮಂದಿ ಯಾರು ಎಷ್ಟೇ ಎಚ್ಚರಿಕೆ ನೀಡಿದರೂ ಬಾಡಿ ಬಿಲ್ಡ್ ಮಾಡುವ ವಿವಿಧ ರೀತಿಯ ಪೌಡರ್ ಹಾಗೂ ಆಹಾರಗಳಿಗೆ ಜನ ಮರುಳಾಗುವುದು ಕಂಡುಬರುತ್ತದೆ. ಅದುವರೆಗೆ ಮಾಂಸಾಹಾರವನ್ನೇ ಸೇವನೆ ಮಾಡದಿರುವವರು ದೇಹಸೌಂದರ್ಯ ಹೆಚ್ಚಿಸಿಕೊಳ್ಳಲು ಮಾಂಸಾಹಾರ ಆರಂಭಿಸುವುದೂ ಇದೆ. 

ದೇಹವನ್ನು ಬೆಳೆಸಲು, ಮಾಂಸಖಂಡಗಳಿಗೆ ಹೆಚ್ಚಿನ ಬಲ ತುಂಬಲು ಅವರು ಏನು ಬೇಕಿದ್ದರೂ ಸೇವನೆ ಮಾಡುತ್ತಾರೆ ಎನ್ನುವುದಕ್ಕೆ ಸಾಕ್ಷಿಯೊಂದು ಇಲ್ಲಿದೆ. ಅದೆಂದರೆ, ಅಮೆರಿಕದಲ್ಲಿ ಒಬ್ಬಾತ ಮಾಂಸಖಂಡಗಳನ್ನು ಬೆಳೆಸಿಕೊಳ್ಳಲು ನಾಯಿಗಳ ಆಹಾರ ಸೇವನೆಯ ಬಗ್ಗೆ ಸಲಹೆ ನೀಡಿದ್ದಾನೆ. ಟಿಕ್ ಟಾಕ್ ನಲ್ಲಿರುವ ಈ ವಿಡಿಯೋವನ್ನು ಸಿಕ್ಕಾಪಟ್ಟೆ ಜನ ನೋಡಿದ್ದಾರೆ ಹಾಗೂ ಜಿಮ್ ಆಸಕ್ತರು ಹಲವು ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲ ಕಾಲ ಈ ವಿಡಿಯೋ ಟಿಕ್ ಟಾಕ್ ನ ಟಾಪ್ ಟೆನ್ ಸ್ಥಾನಗಳಲ್ಲಿ ಒಂದಾಗಿತ್ತು! ಅಷ್ಟೇ ಅಲ್ಲ, ಬಹಳಷ್ಟು ಜನ ನಾಯಿ ಆಹಾರ ಸೇವನೆ ಮಾಡಲು ಪ್ರಯತ್ನಿಸುವುದಕ್ಕೂ ಇದು ಪ್ರೇರಣೆಯಾಗಿತ್ತು. ಈ ಕುರಿತು ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು 20 ಲಕ್ಷಕ್ಕೂ ಅಧಿಕ ಜನ ವೀಕ್ಷಣೆ ಮಾಡಿದ್ದಾರೆ ಎಂದರೆ ಈ ಕುರಿತ ಆಸಕ್ತರ ಸಂಖ್ಯೆಯನ್ನು ಗಮನಿಸಬಹುದು.

Ramadan 2023: ಮಧುಮೇಹಿಗಳು ಉಪವಾಸ ಮಾಡುವಾಗ ಈ ವಿಚಾರ ಗಮನಿಸ್ಕೊಂಡ್ರೆ ಒಳ್ಳೇದು

Tap to resize

Latest Videos

21 ವರ್ಷದ ಹೆನ್ರಿ ಎಂಬಾತ ನಾಯಿ ಆಹಾರವನ್ನು (Dog Food) ತಿನ್ನಲು ಯತ್ನಿಸಿದ್ದಾನೆ. ಬಳಿಕ, ತನ್ನ ನಿರ್ಧಾರಕ್ಕೆ ಪಶ್ಚಾತ್ತಾಪ (Regret) ಪಟ್ಟಿದ್ದಾನೆ! ಭಾರತದಲ್ಲೂ ಹಲವು ನಿಜಕ್ಕೂ ನಾಯಿ ಆಹಾರ ಸೇವನೆಯಿಂದ ಮಾಂಸಖಂಡ ಬೆಳೆಸಲು ಸಾಧ್ಯವೇ ಎನ್ನುವ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಜಿಮ್ ಗಳಲ್ಲಿ ಕೂಡ ಈ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. 

ಆರೋಗ್ಯಕ್ಕೆ ಹಾನಿ?
ಹಾಗಿದ್ದರೆ ನಿಜಕ್ಕೂ ಡಾಗ್ ಫುಡ್ ನಿಂದ ಮನುಷ್ಯನ ಮಾಂಸಖಂಡ (Human Muscles) ಬೆಳೆಯಲ್ಲದೇ ಎನ್ನುವ ಪ್ರಶ್ನೆ ಗರಿಗೆದರುವುದು ಸಾಮಾನ್ಯ. ತಜ್ಞರ ಪ್ರಕಾರ, ಇದು ಸಾಧ್ಯವಿಲ್ಲ. ಏಕೆಂದರೆ, ನಾಯಿಯ ದೇಹದ (Dog Body) ಪೌಷ್ಟಿಕಾಂಶದ ಅಗತ್ಯಗಳನ್ನು ಗಮನದಲ್ಲಿ ಇರಿಸಿ ಈ ಆಹಾರವನ್ನು ಸಿದ್ಧಪಡಿಸಲಾಗುತ್ತದೆ. ಮನುಷ್ಯನ ದೇಹಕ್ಕೆ ಇದು ಸೂಕ್ತವಲ್ಲ ಹಾಗೂ ಇದು ಅಸಹಜ (Abnormal). ಮಾಂಸಖಂಡ ಬೆಳೆಸುವ ನೆಪದಲ್ಲಿ ಆರೋಗ್ಯವನ್ನು (Health) ಕಡೆಗಣಿಸುವುದು ಸಲ್ಲದು ಎನ್ನುವ ಮಾತು ಕೇಳಿಬರುತ್ತಿದೆ. “ನಮ್ಮ ಮನುಷ್ಯರ ಆಹಾರ ಸಂಪೂರ್ಣ ಭಿನ್ನ. ನಾಯಿ ಆಹಾರ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಗ್ಯಾರೆಂಟಿ’ ಎಂದೂ ಹಲವರು ಸಲಹೆ ನೀಡಿದ್ದಾರೆ. 

ಮಾಂಸಖಂಡಗಳ ಬೆಳವಣಿಗೆಗೆ (Development) ಪ್ರೊಟೀನ್ (Protein) ಭರಿತ ಆಹಾರ ಸೇವನೆ ಮಾಡಬೇಕು. ಆದರೂ ವೈದ್ಯರ ಮಾರ್ಗದರ್ಶನವಿಲ್ಲದೆ ಪ್ರೊಟೀನ್ ಪೌಡರ್ ಅದೂ ಇದೂ ಎಂದು ಸೇವನೆ ಮಾಡಬಾರದು. ನಾಯಿ ಆಹಾರ ತಿನ್ನುವುದಂತೂ ಕೆಟ್ಟ ಮಾರ್ಗ. ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು (Effects) ಕಂಡುಬರುವುದು ನಿಶ್ಚಿತ.  

Healthy Food: ಇಷ್ಟ ಅಂತಾ ಬದನೆಕಾಯಿ ಬೇಕಾಬಿಟ್ಟಿ ತಿನ್ಬೇಡಿ

ಡಾಗ್ ಫುಡ್ ನಲ್ಲಿ ಏನಿದೆ?
ನಾಯಿ ಆಹಾರದಲ್ಲಿ ಸಂಸ್ಕರಿತ ಮಾಂಸ (Meat) ಇರುತ್ತದೆ. ಮನುಷ್ಯನ ಕರುಳು ಈ ಆಹಾರಕ್ಕೆ ಹೊಂದಿಕೊಳ್ಳಲಾರದು. ಹಾಗೂ ಇದನ್ನು ಪಚನಗೊಳಿಸಲು ಮಾನವ ದೇಹಕ್ಕೆ ಸರಿಸುಮಾರು 70-74 ಗಂಟೆಗಳ ಸಮಯ ಬೇಕು! ಹೆಚ್ಚು ಸಾಂದ್ರತೆಯುಳ್ಳ ಆಹಾರ ಜೀರ್ಣವಾಗಲು ಹೆಚ್ಚು ಶಕ್ತಿ ವ್ಯಯವಾಗುತ್ತದೆ. ಹೀಗಾಗಿ, ನಮ್ಮ ಜೀರ್ಣಾಂಗ ವ್ಯವಸ್ಥೆಗೆ (Digestive System) ಏನು ಸೂಕ್ತವೋ ಅದನ್ನೇ ಸೇವಿಸಬೇಕು ಎಂದು ವೈದ್ಯರು (Doctors) ಸಲಹೆ ನೀಡುತ್ತಾರೆ. 

click me!