ಮನುಷ್ಯನಿಗೆ ನಿದ್ರೆ ಬಹಳ ಮುಖ್ಯ. ಹಾಗಂತ ಇಡೀ ದಿನ ನಿದ್ರೆ ಮಾಡ್ತಿದ್ದರೆ ಅದು ಒಳ್ಳೆಯದಲ್ಲ. ಕೆಲವರು ಅತಿಯಾಗಿ ನಿದ್ರೆ ಮಾಡ್ತಾರೆ. ಮಿತಿಮೀರಿದ ನಿದ್ರೆಯಿಂದ ಅನೇಕ ರೋಗ ನಿಮ್ಮನ್ನು ಕಾಡುತ್ತದೆ.
ವಾರವಿಡೀ ಬೇಗ ಎದ್ದು ಕೆಲಸಕ್ಕೆ ಹೋಗಬೇಕು. ವಾರದ ಕೊನೆಯಲ್ಲಿ ಅಥವಾ ರಜಾದಿನದಲ್ಲಿ ಒಂದು ದಿನವಾದರೂ ಚೆನ್ನಾಗಿ ನಿದ್ದೆ ಮಾಡಿ ನಿಧಾನವಾಗಿ ಏಳ್ತೇನೆ ಅಂತ ಹಲವು ಮಂದಿ ಹೇಳುತ್ತಾರೆ. ಶಾಲೆಗೆ ಹೋಗುವ ಮಕ್ಕಳು ಕೂಡ ಇವತ್ತು ಸಂಡೇ ಅಲ್ವಾ ನಾನು ಲೇಟ್ ಆಗಿ ಏಳ್ತೀನಿ ಅಂತ ಯಾವಾಗಲೂ ಹೇಳ್ತಾರೆ.
ಶರೀರ (Body) ಚೆನ್ನಾಗಿರಲು ಒಳ್ಳೆಯ ನಿದ್ದೆಯ ಅವಶ್ಯಕತೆ ಇರುವುದು ನಿಜ. ನಿದ್ದೆ ಸರಿಯಾಗಿ ಬರದೇ ಇದ್ದರೆ ಕೆಲಸ ಮಾಡುವುದು ಅಸಾಧ್ಯ. ಚೆನ್ನಾಗಿ ನಿದ್ದೆ ಮಾಡಿದಾಗಲೇ ಶರೀರಕ್ಕೆ ಕೆಲಸ ಮಾಡುವ ಹುಮ್ಮಸ್ಸು ಇರುತ್ತದೆ. ಚಿಕ್ಕ ಮಗು ಕೂಡ ಚೆನ್ನಾಗಿ ನಿದ್ದೆ ಮಾಡಿದಾಗ ಲವಲವಿಕೆಯಿಂದ ಇರುತ್ತದೆ. ಅದೇ ಅರ್ಧ ನಿದ್ದೆಯಲ್ಲಿ ಎದ್ದಾಗ ಮಗು ಕೂಡ ಕಿರಿಕಿರಿ ಅನುಭವಿಸುತ್ತದೆ. ಮಕ್ಕಳಿಗೆ ಹೆಚ್ಚಿನ ಸಮಯ ನಿದ್ದೆಯ ಅವಶ್ಯಕತೆಯಿದೆ. 12-14 ಗಂಟೆ ನಿದ್ದೆ ಮಾಡೋದ್ರಿಂದ ಮಗುವಿಗೆ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ. ಆದರೆ ದೊಡ್ಡವರು ಹೆಚ್ಚು ನಿದ್ದೆ ಮಾಡುವುದರಿಂದ ಸಮಸ್ಯೆಗಳು ಹೆಚ್ಚುತ್ತೆ. ಹೌದು.. ಅತೀ ಹೆಚ್ಚು ನಿದ್ದೆ ಮಾಡುವುದು ಕೂಡ ಅಪಾಯ ಎಂಬುದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ. ಪ್ರತಿನಿತ್ಯ 8-9 ಗಂಟೆಗೂ ಹೆಚ್ಚು ನಿದ್ದೆ ಮಾಡುವುದರಿಂದ ಅನೇಕ ರೀತಿಯ ಸಮಸ್ಯೆಗಳು ಆರಂಭವಾಗುತ್ತದೆ.
undefined
ಬೂಸ್ಟರ್ ಡೋಸ್ ಪಡೆದ 12 ತಿಂಗಳ ನಂತ್ರ ಮತ್ತೊಂದು ಡೋಸ್ ಅಗತ್ಯ ಎಂದ WHO
ಹೆಚ್ಚು ನಿದ್ದೆ ಮಾಡೋದ್ರಿಂದ ಈ ಸಮಸ್ಯೆಗಳು ಎದುರಾಗುತ್ತೆ :
ತಲೆ ನೋವು (Headache) : ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಅನ್ನೋ ಹಾಗೆ ಕೆಲವರಿಗೆ ನಿದ್ದೆ ಚೆನ್ನಾಗಿ ಬರುತ್ತೆ. ಇನ್ಕೆಲವರ ನಿದ್ದೆ ಬಹಳ ಸೂಕ್ಷ್ಮವಾಗಿರುತ್ತೆ. ನಿದ್ರೆ ಚೆನ್ನಾಗಿ ಬರುತ್ತೆ ಎಂದು ಹಲವು ಹೊತ್ತು ಮಲಗಿದರೆ ರಾತ್ರಿ ನಿದ್ದೆ ಬರದೇ ಇರಬಹುದು. ಹೀಗಾಗುವುದರಿಂದ ನಿಮ್ಮ ನ್ಯೂರೋಟ್ರಾನ್ಸಮೀಟರ್ ಮೇಲೆ ಕೆಟ್ಟ ಪ್ರಭಾವ ಬೀರಿ ತಲೆನೋವು ಮುಂತಾದ ಸಮಸ್ಯೆಗಳು ಬಾಧಿಸುತ್ತವೆ.
ಬೊಜ್ಜು (Obesity) : ಕೆಲಸದಲ್ಲಿ ಆಸಕ್ತಿ ಇಲ್ಲದ ಹಲವು ಮಂದಿ ಇಡೀ ದಿನ ನಿದ್ದೆ ಮಾಡುತ್ತಲ್ಲೇ ಇರುತ್ತಾರೆ. ಹೀಗೆ ಹೆಚ್ಚು ನಿದ್ದೆ ಮಾಡೋದ್ರಿಂದ ಶರೀರದಲ್ಲಿ ಬೊಜ್ಜು ಹೆಚ್ಚುತ್ತದೆ. ಬೊಜ್ಜಿನ ಸಮಸ್ಯೆಯಿಂದ ಕ್ಯಾನ್ಸರ್, ಡಯಾಬಿಟೀಸ್ ಮುಂತಾದ ಸಮಸ್ಯೆಗಳು ತಲೆದೋರುತ್ತವೆ. ಅತೀ ಕಡಿಮೆ ನಿದ್ದೆ ಮಾಡುವುದರಿಂದಲೂ ಈ ಸಮಸ್ಯೆಗಳು ಎದುರಾಗಬಹುದು.
ಟೈಪ್ 2 ಡಯಾಬಿಟೀಸ್ (Type 2 Diabetes) : ಅವಶ್ಯಕತೆಗಿಂತ ಹೆಚ್ಚಿನ ನಿದ್ದೆ ಮಾಡುವುದರಿಂದ ದೇಹದಲ್ಲಿ ಬೊಜ್ಜು ಬೆಳೆಯುತ್ತೆ. ಈ ಬೊಜ್ಜಿನ ಸಮಸ್ಯೆಯೇ ಮುಂದೆ ಟೈಪ್ 2 ಡಯಾಬಿಟೀಸ್ ಸಮಸ್ಯೆಗೆ ಕಾರಣವಾಗುತ್ತೆ. ಅತಿಯಾದ ತೂಕದಿಂದ ಸ್ನಾಯುಗಳ ನೋವು ಹಾಗೂ ಸೊಂಟನೋವಿನ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತೆ. ಈ ಸಮಸ್ಯೆಗೆ ಮೂಲ ಕಾರಣ ಹೆಚ್ಚಿನ ನಿದ್ದೆಯೇ ಆಗಿರುತ್ತೆ.
Health Tips: ಜಿಮ್‌ಗೆ ಹೋಗೋರಿಗೆ ಬೆಸ್ಟ್ ಆಹಾರ ಸೋಯಾ ಚಂಕ್ಸ್
ಹೃದಯ ಸಂಬಂಧಿ ರೋಗಗಳು (Heart Related Diseases) : ಪ್ರತಿನಿತ್ಯ ಹೆಚ್ಚಿನ ಸಮಯ ಮಲಗುವುದರಿಂದ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳುತ್ತದೆ. 7 ರಿಂದ 8 ಗಂಟೆ ನಿದ್ದೆ ಮಾಡುವ ಜನರಿಗಿಂತ 11 ಗಂಟೆ ಮಲಗುವ ಮಂದಿಯಲ್ಲೇ ಹೆಚ್ಚು ಹೃದ್ರೋಗ ಕಂಡುಬರುವುದು ಸಾಬೀತಾಗಿದೆ. ಕೆಲವು ಅಧ್ಯಯನಗಳು ಇದರ ಕುರಿತು ವರದಿಯನ್ನು ಕೂಡ ಸಲ್ಲಿಸಿವೆ.
ಡಿಪ್ರೆಶನ್ (Depression) : ನಾವು ಒಂದು ದಿನ ಆಲಸಿತನದಿಂದ ಹೆಚ್ಚು ಹೊತ್ತು ಮಲಗಿದರೆ, ಎದ್ದ ತಕ್ಷಣ ಯಾವ ಕೆಲಸದಲ್ಲಿಯೂ ಆಸಕ್ತಿ ಇರುವುದಿಲ್ಲ. ಈ ರೀತಿಯ ಮನೋಭಾವವನ್ನು ನಾವು ಎಷ್ಟೋ ಬಾರಿ ನಿತ್ಯದ ಜೀವನದಲ್ಲಿ ಅನುಭವಿಸಿದ್ದೇವೆ. ಶರೀರಕ್ಕೆ ಅವಶ್ಯಕತೆಗಿಂತ ಹೆಚ್ಚು ನಿದ್ದೆ ಸಿಕ್ಕಾಗ ಈ ರೀತಿಯ ಅನುಭವವಾಗುತ್ತೆ. ಡಿಪ್ರೆಶನ್ ಸಮಸ್ಯೆ ಇರುವವರು ಅತಿಯಾದ ನಿದ್ದೆ ಮಾಡೋದ್ರಿಂದ ಸಮಸ್ಯೆ ಉಲ್ಬಣವಾಗುತ್ತೆ. ಹಾಗಾಗಿ ಒಳ್ಳೆಯ ಆರೋಗ್ಯಕ್ಕೆ ನಿದ್ದೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅತೀ ಅವಶ್ಯವಾಗಿದೆ.