Ramadan 2023: ಮಧುಮೇಹಿಗಳು ಉಪವಾಸ ಮಾಡುವಾಗ ಈ ವಿಚಾರ ಗಮನಿಸ್ಕೊಂಡ್ರೆ ಒಳ್ಳೇದು

By Vinutha Perla  |  First Published Mar 29, 2023, 3:42 PM IST

ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ವಿಶೇಷ ತಿಂಗಳುಗಳಲ್ಲಿ ಒಂದಾದ ರಂಜಾನ್, ಮುಸ್ಲಿಮರಿಗೆ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಸಮಯದಲ್ಲಿ, ಮುಸ್ಲಿಮರು ಒಂದು ತಿಂಗಳ ಕಾಲ ಉಪವಾಸ ಮಾಡುತ್ತಾರೆ. ಆದರೆ ಡಯಾಬಿಟಿಸ್ ಇರೋರು ಉಪವಾಸ ಮಾಡೋ ಮುನ್ನ ಎಚ್ಚರಿಕೆ ವಹಿಸಬೇಕು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಇಸ್ಲಾಮಿಕ್ ಕ್ಯಾಲೆಂಡರ್ ನ ಒಂಬತ್ತನೇ ತಿಂಗಳನ್ನು ರಂಜಾನ್ (Ramzan)ತಿಂಗಳು ಎಂದು ಆಚರಿಸಲಾಗುತ್ತೆ. ಪವಿತ್ರ ರಂಜಾನ್ ತಿಂಗಳಲ್ಲಿ, ಮುಸ್ಲಿಂ ಸಮುದಾಯದ ಜನರು 30 ದಿನಗಳ ಉಪವಾಸ ಮಾಡುವ ಮೂಲಕ ಅಲ್ಲಾಹನನ್ನು ಪೂಜಿಸುತ್ತಾರೆ. ಈ ಸಮಯದಲ್ಲಿ, ಉಪವಾಸ ಮಾಡುವ ಜನರು ಸಹರಿ ಮತ್ತು ಇಫ್ತಾರ್ ರೂಪದಲ್ಲಿ ಏನನ್ನಾದರೂ ದಿನಕ್ಕೆ ಎರಡು ಬಾರಿ ಮಾತ್ರ ತಿನ್ನುತ್ತಾರೆ. ಆರೋಗ್ಯ ತಜ್ಞರ ಪ್ರಕಾರ, ರಂಜಾನ್ ಸಮಯದಲ್ಲಿ, ಉಪವಾಸ ಮಾಡುವ ಜನರು ತಿನ್ನುವ ಮತ್ತು ಕುಡಿಯುವುದಕ್ಕೆ ಸಂಬಂಧಿಸಿದ ಕೆಲವು ತಪ್ಪುಗಳನ್ನು ಮಾಡಬಾರದು. ಈ ತಪ್ಪುಗಳು ವ್ಯಕ್ತಿಯ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಅದರಲ್ಲೂ ಮಧುಮೇಹ ಇರುವವರು ಹಬ್ಬ ಆಚರಿಸುವಾಗ ಹೆಚ್ಚು ಎಚ್ಚರಿಕೆ ವಹಿಸಬೇಕು. 

ಹಬ್ಬಕ್ಕಾಗಿ ಉಪವಾಸವನ್ನು ನಡೆಸುವುದು ಸಾಮಾನ್ಯವಾಗಿರಬಹುದು. ಆದರೆ ಇದು ವ್ಯಕ್ತಿಯ ದಿನಚರಿ ಮತ್ತು ಜೀವನಶೈಲಿ (Lifestyle)ಯಲ್ಲಿ ತೀವ್ರವಾದ ಬದಲಾವಣೆಯನ್ನು ಮಾಡುತ್ತದೆ. ಮಧುಮೇಹ ಇರುವವರು ಉಪವಾಸ ಮಾಡುವುದರಿಂದ ತಮ್ಮ ಗ್ಲೂಕೋಸ್ ಮಟ್ಟವನ್ನು ದಿನವಿಡೀ ವ್ಯಾಪ್ತಿಯಲ್ಲಿ ಇರಿಸಿಕೊಳ್ಳಲು ಕಷ್ಟವಾಗಬಹುದು. ಹೀಗಾಗಿ ಗ್ಲೂಕೋಸ್ ಮಟ್ಟವನ್ನು ನಿರಂತರವಾಗಿ ಪರಿಶೀಲಿಸುವುದು ಅಗತ್ಯವಾಗಿರುತ್ತದೆ. ಬೆಂಗಳೂರಿನ ಅಪೋಲೋ ಆಸ್ಪತ್ರೆಯ HOD ಮತ್ತು ಅಂತಃಸ್ರಾವಶಾಸ್ತ್ರಜ್ಞ ಸಿ.ಎಸ್‌ ಡಾ.ದ್ವಾರಕಾನಾಥ್ ಈ ಬಗ್ಗೆ ಮಾಹಿತಿ ನೀಡುತ್ತಾರೆ.

Latest Videos

undefined

Ramadan 2023: ತಿಂಗಳ ಕಾಲ ಉಪವಾಸ ಮಾಡುವುದರ ಪ್ರಾಮುಖ್ಯತೆ ಏನು?

ರಂಜಾನ್ ಆಚರಿಸುವಾಗ ಮಧುಮೇಹವನ್ನು ನಿಯಂತ್ರಿಸಲು ಕೆಲವು ಸಲಹೆಗಳು 

1.ಶಕ್ತಿಯನ್ನು ನೀಡುವ ಸೆಹ್ರಿ (ಸೂರ್ಯೋದಯದ ಮುಂಚಿನ) ಊಟವನ್ನು ಸೇವಿಸಿ: ಓಟ್ಸ್, ಮಲ್ಟಿಗ್ರೇನ್ ಬ್ರೆಡ್‌, ಕಂದು ಅಥವಾ ಬಾಸ್ಮತಿ ಅಕ್ಕಿ, ತರಕಾರಿಗಳು, ಮಸೂರ (ದಾಲ್) ಮೊದಲಾದ ಹೆಚ್ಚು ಶಕ್ತಿಯನ್ನು ಬಿಡುಗಡೆ ಮಾಡುವ ನಾರಿನಂಶ-ಭರಿತ ಪಿಷ್ಟದ ಆಹಾರಗಳನ್ನು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳಿ. ಮೀನು (Fish), ಪನ್ನೀರ್‌ ಮತ್ತು ಬೀಜಗಳಂತಹ ಪ್ರೋಟೀನ್‌ಗಳನ್ನು ಸಹ ಸೇವಿಸಬಹುದು. ಸಾಕಷ್ಟು ದ್ರವಾಹಾರಗಳನ್ನು ಸೇವಿಸಿ. ಆದರೆ ಕಾಫಿ, ತಂಪು ಪಾನೀಯಗಳು ಮುಂತಾದ ಸಕ್ಕರೆ ಅಥವಾ ಹೆಚ್ಚು ಕೆಫೀನ್ ಹೊಂದಿರುವ ಪಾನೀಯಗಳನ್ನು ತಪ್ಪಿಸಿ.

2.ಇಫ್ತಾರ್ ಸಮಯದಲ್ಲಿ ಸರಿಯಾಗಿ ಶಕ್ತಿಯನ್ನು ಮರುಭರ್ತಿ (ಉಪವಾಸ ಮುರಿಯುವುದು) ಮಾಡಿಕೊಳ್ಳಿ: ಖರ್ಜೂರ ಮತ್ತು ಹಾಲಿನೊಂದಿಗೆ ಉಪವಾಸವನ್ನು ಸಾಂಪ್ರದಾಯಿಕವಾಗಿ ಮುರಿಯಲಾಗುತ್ತದೆ, ಇದನ್ನು ನೀವು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳೊಂದಿಗೆ ಮುಂದುವರಿಸಬಹುದು. ನಿಮ್ಮನ್ನು ನೀವು ಹೈಡ್ರೇಟ್ ಮಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ. ಸಿಹಿ ಮತ್ತು ಕರಿದ ಅಥವಾ ಎಣ್ಣೆಯುಕ್ತ ಆಹಾರವನ್ನು ಮಿತವಾಗಿ ಸೇವಿಸಿ, ಏಕೆಂದರೆ ಇವುಗಳು ನಿಮ್ಮ ಆರೋಗ್ಯದ (Health) ಮೇಲೆ ಪರಿಣಾಮ ಬೀರಬಹುದು. ಮಲಗುವ ಮುನ್ನ ಹಣ್ಣುಗಳ ಸೇವನೆಯು ಮುಂಜಾನೆಯ ತನಕ ಸಕ್ಕರೆಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ರಂಜಾನ್ ಉಪವಾಸ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ

3. ಹಗುರವಾದ ವ್ಯಾಯಾಮ ಕ್ರಮ ಅನುಸರಿಸಿ: ದೈಹಿಕ ಚಟುವಟಿಕೆಯನ್ನು ಮುಂದುವರಿಸಿ. ಆದರೆ ಹೆಚ್ಚುವರಿ ಶ್ರಮವನ್ನು ತಪ್ಪಿಸಲು ಅದರ ತೀವ್ರತೆಯನ್ನು ಕಡಿಮೆ ಮಾಡಿ. ನೀವು ಸರಳವಾದ ಜೀವನಕ್ರಮಗಳಾದ ವಾಕಿಂಗ್ ಅಥವಾ ಯೋಗವನ್ನು ಪ್ರಯತ್ನಿಸಬಹುದು. ಪ್ರತಿರೋಧ ತರಬೇತಿಯು ಸ್ನಾಯುಗಳ ನಷ್ಟವನ್ನು ತಪ್ಪಿಸಲು ಮತ್ತು ಈ ಸಮಯದಲ್ಲಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

4.ಒಳ್ಳೆಯ ನಿದ್ರೆ  ಮಾಡಿ: ಉತ್ತಮ ಗುಣಮಟ್ಟದ ನಿದ್ರೆಯು (Sleep) ಉತ್ತಮ ಆರೋಗ್ಯ ಮತ್ತು ಕ್ಷೇಮಕ್ಕೆ ಪ್ರಮುಖವಾಗಿದೆ. ವಿಶೇಷವಾಗಿ ರಂಜಾನ್ ಸಮಯದಲ್ಲಿ ಶಕ್ತಿಯನ್ನು ಉಳಿಸಿಕೊಳ್ಳಲು ಮುಂಜಾನೆಯ ಊಟವು ಪ್ರಮುಖವಾಗಿದ್ದರೆ, ಸಾಕಷ್ಟು ನಿದ್ರೆ ಪಡೆಯುವುದು ಸಹ ಮುಖ್ಯವಾಗಿದೆ. ಇದು ನಿದ್ರೆಯ ಅಭಾವವನ್ನು ತಪ್ಪಿಸಲು ಸಹಾಯ ಮಾಡುತ್ತದೆ, ಇದು ನಿಮ್ಮ ಹಸಿವಿನ ಮೇಲೆ ಪರಿಣಾಮ ಬೀರಬಹುದು. ಇದು ಚಯಾಪಚಯವನ್ನು ಉತ್ತೇಜಿಸುತ್ತದೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹವನ್ನು ನಿರ್ವಹಿಸುವಲ್ಲಿ ನಿರ್ಣಾಯಕವಾಗಿದೆ.

click me!